- Advertisment -
HomeNew postsJob Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

ರಾಜ್ಯ ಎರಡು ಜಿಲ್ಲೆಯಲ್ಲಿ ಬೃಹತ ಉದ್ಯೋಗ ಮೇಳವನ್ನು(Udyoga Mela-2025) ಆಯೋಜನೆ ಮಾಡಲಾಗಿದ್ದು ನಿರುದ್ಯೋಗಿ ಯುವಕ/ಯುವತಿಯರು ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಉದ್ಯೋಗ ಮೇಳವನ್ನು ಯಾವೆಲ್ಲ ಜಿಲ್ಲೆಗಳನ್ನು ಆಯೋಜನೆ ಮಾಡಲಾಗಿದೆ? ದಿನಾಂಕ ಇನ್ನಿತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ರಾಜ್ಯದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ(Jobs In Karnataka)ಕಾಲಕಾಲಕ್ಕೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗುತ್ತದೆ ಮಾಹಿತಿ ಕೊರತೆಯಿಂದ ಅನೇಕ ಜನರಿಗೆ ಮೇಳದ ಕುರಿತು ಮಾಹಿತಿ ಸಿಗುವುದೇ ಇಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಪ್ರಸ್ತುತ ನಡೆಯುತ್ತಿರುವ ಮೇಳದ ಮಾಹಿತಿಯನ್ನು ತಿಳಿಸಲು ಈ ಲೇಖನವನ್ನು ಪ್ರಕಟಿಸಲಾಗಿದ್ದು ಈ ಜಿಲ್ಲೆಯ ಅಭ್ಯರ್ಥಿಗಳಿಗೆ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

ದಾವಣಗೆರೆ(Davanagere Job Fair) ಮತ್ತು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಸ್ತುತ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು ಉದ್ಯೋಗ ಆಕಾಂಕ್ಷಿಗಳು ಈ ಮೇಳದ ಪ್ರಯೋಜವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Davanagere Udyoga Mela-ದಾವಣಗೆರೆ ಉದ್ಯೋಗ ಮೇಳದ ವಿವರ ಹೀಗಿದೆ:

ದಾವಣಗೆರೆಯಲ್ಲಿ ದಿನಾಂಕ- 15 ಮಾರ್ಚ 2025 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆ ಸಹಯೋಗದಲ್ಲಿ ಬೃಹತ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದ್ದು 5 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Udyoga Mela Date-ಉದ್ಯೋಗ ಮೇಳ ನಡೆಯುವ್ ಸ್ಥಳ:

ಉದ್ಯೋಗ ಮೇಳವು ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಈ ಎರಡು ಕಡೆ ನಡೆಯಲಿದೆ. ಬಿಐಟಿಯಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಏರ್ಪಡಿಸಲಾಗಿರುತ್ತದೆ.

ITI ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿದವರಿಗೆ ನೇರ ಸಂದರ್ಶನ ನಡೆಸಲು ಆಯೋಜನೆಯನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Bagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Job Fair Companies-50 ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಲಿವೆ:

ಉದ್ಯೋಗ ಮೇಳದಲ್ಲಿ 50 ಕ್ಕೂ ಹೆಚ್ಚಿನ ಕಂಪನಿಗಳು ಆಗಮಿಸಲಿದ್ದು ಈಗಾಗಲೇ ಗೂಗಲ್ ಪಾರ್ಮ್ ಭರ್ತಿ ಮಾಡಿ 1000 ಕ್ಕೂ ಹೆಚ್ಚಿನ ಯುವಕ, ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್ಲೈನ್ ನಲ್ಲಿ ನೊಂದಣಿಯನ್ನು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ಮಾಹಿತಿ ತಿಳಿಸಿದ್ದಾರೆ.

Udyoga Mela Registration link-rಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾವಹಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದ್ದು ಇಲ್ಲಿ ಕ್ಲಿಕ್ Register Now ಮಾಡಿ ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಿ ನಿಮ್ಮ ಹೆಸರು ಇನ್ನಿತರೆ ಅಗತ್ಯ ವಿವರವನ್ನು ಭರ್ತಿ ಮಾಡಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: Business loan-ಸ್ವಂತ ಉದ್ದಿಮೆಯನ್ನು ಮಾಡಲು 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Sirsi Udyoga Mela-2025: ಶಿರಸಿ ಉದ್ಯೋಗ ಮೇಳದ ವಿವರ ಹೀಗಿದೆ:

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ರೋಟರಿ ಕ್ಲಬ್ ಹಾಗೂ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಮತ್ತು ಲೋಕದ್ವನಿ ದಿನಪತ್ರಿಕೆ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದ್ದು ಇದರ ವಿವರವನ್ನು ಈ ಕೆಳಗೆ ತಿಳಿಸಳಾಗಿದೆ.

Sirsi Udyoga Mela Date-ಉದ್ಯೋಗ ಮೇಳ ನಡೆಯುವ ದಿನಾಂಕ ಮತ್ತು ಸ್ಥಳ:

ದಿನಾಂಕ 13 ಎಪ್ರಿಲ್ 2025 ರಂದು ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿರುತ್ತದೆ.

Job Fair Companies List-ಯಾವೆಲ್ಲ ಕಂಪನಿಗಳು ಭಾಗವಹಿಸಲಿವೆ?

SBI Life Insurance, TATA Motors, titan company, HDFC Life, Muthoot group, Justdail, Axis Bank, Joyalukkas ಸೇರಿದಂತೆ ಒಟ್ಟು 25ಕ್ಕೂ ಹೆಚ್ಚಿನ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

ಯಾರೆಲ್ಲ ಭಾಗವಹಿಸಬಹುದು?

  • 18 ರಿಂದ 28 ವರ್ಷದೊಳಗಿನ ವಯಸ್ಸಿನವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
  • SSLC, PUC,ITI,DIPLOMA, PHARAMEDICLA,PHARMACY,GRADUATES, POST GRADUATES ಪದವಿಯನ್ನು ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬದಾಗಿದೆ.

For More Information-ಮೇಳದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು: ಡಾ. ದಿನೇಶ ಹೆಗಡೆ- 9448153406, 9448042120, 8867699477

- Advertisment -
LATEST ARTICLES

Related Articles

- Advertisment -

Most Popular

- Advertisment -