Agriculture loan limit-ರೈತರಿಗೆ ಸಿಹಿ ಸುದ್ದಿ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ! ಎಲ್ಲಿ ಅರ್ಜಿ ಸಲ್ಲಿಸಬೇಕು?

December 15, 2024 | Siddesh
Agriculture loan limit-ರೈತರಿಗೆ ಸಿಹಿ ಸುದ್ದಿ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ! ಎಲ್ಲಿ ಅರ್ಜಿ ಸಲ್ಲಿಸಬೇಕು?
Share Now:

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ(RBI) ರೈತರಿಗೆ ಕೃಷಿ ಸಾಲ ವಿತರಣೆಗೆ ಸಂಬಂಧಿಸಿದಂತೆ ಸಿಹಿ ಸುದ್ದಿ(Agriculture Loan RBI News) ನೀಡಿದ್ದು ಈ ಹಿಂದೆ ಇದ್ದ ಕೃಷಿ ಸಾಲದ ಮಿತಿಯನ್ನು ಹೆಚ್ಚಳ ಮಾಡಿ ನೂತನ ಆದೇಶವನ್ನು ಹೊರಡಿಸಿದೆ.

ಕೃಷಿ ಭೂಮಿಯಲ್ಲಿ ಹೊಸ ಬೆಳೆಯನ್ನು ಬೆಳೆಯಲು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅರ್ಥಿಕವಾಗಿ ನೆರವು ನೀಡಲು ರಾಷ್ಟ್ರ‍ಿಕೃತ ಬ್ಯಾಂಕ್(National bank)ಗಳ ಮೂಲಕ ಕೃಷಿ ಸಾಲವನ್ನು ರೈತರು ಪಡೆಯಲು ಅವಕಾಶವಿದ್ದು ಯಾವುದೇ ಅಡಮಾನವಿಲ್ಲದೇ ಬ್ಯಾಂಕ್ ಮೂಲಕ ನೀಡುವ ಸಾಲದ ಮಿತಿಯನ್ನು(Agriculture loan limit increase) RBI ನಿಂದ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: Gruhalakshmi News- ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿ! ಈ ವರ್ಗದವರಿಗೂ ಗೃಹಲಕ್ಷ್ಮಿ ನೆರವು!

RBI ನಿಂದ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ:

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ(RBI) ರಾಷ್ಟ್ರ‍ಿಕೃತ ಬ್ಯಾಂಕ್ ಮೂಲಕ ರೈತರು ಪಡೆಯಬಹುದಾದ ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ದಿಂದ ₹2 ಲಕ್ಷಕ್ಕೆ ಹೆಚ್ಚಳ ಮಾಡಿ ನೂತನ ಆದೇಶವನ್ನು ಪ್ರಕಟಿಸಲಾಗಿದೆ.

Agriculture loan limit increase- ಯಾವಾಗಿನಿಂದ ಈ ಸಾಲದ ಮಿತಿ ಜಾರಿಗೆ ಬರಲಿದೆ:

ಪರಿಷ್ಕೃತ ಆದಾರ ರಹಿತ ಕೃಷಿ ಸಾಲ ಮಿತಿ 01 ಜನವರಿ 2025 ರ ನಂತರದಲ್ಲಿ ಜಾರಿಗೆ ಬರಲಿದ್ದು ಈ ಕ್ರಮದಿಂದ ದೇಶದ ಲಕ್ಷಾಂತರ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ರೈತರು ಪರಿಷ್ಕೃತ ಅಡಮಾನ ರಹಿತ ಸಾಲದ ಮಿತಿ ಹೆಚ್ಚಳದ ಪ್ರಯೋಜನವನ್ನು 01 ಜನವರಿ 2025 ರ ನಂತರ ಪಡೆಯಬಹುದಾಗಿದೆ.

ಇದನ್ನೂ ಓದಿ: Food cart vehicle subsidy- 4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ವಾಹನ ಖರೀದಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

Agriculture Loan

ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಧಾರ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಸಾಲದ ಮಿತಿ 01 ಜನವರಿ 2025 ರಿಂದ ಜಾರಿಗೆ ಬರಲಿದ್ದು, ದೇಶಾದ್ಯಂತ ರೈತರಿಗೆ ಪ್ರಯೋಜನ ಆಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ(RBI) ಸಾಲದ ಮಿತಿ ಹೆಚ್ಚಳ ಮಾಡಿರುವ ಕ್ರಮದಿಂದಾಗಿ ಕೃಷಿ ವಲಯವನ್ನು ಬಲಪಡಿಸುವುದಲ್ಲದೆ ಗ್ರಾಮೀಣ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯದಿಂದ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Labour department scholarship- ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನ ಸಹಾಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Agriculture loan Intrest subsidy-ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದರೆ ಬಡ್ಡಿದರಕ್ಕೆ ಸಬ್ಸಿಡಿ:

ರೈತರು ತಾವು ತೆಗೆದುಕೊಂಡಿರುವ ಕೃಷಿ ಸಾಲವನ್ನು ಬ್ಯಾಂಕ್ ಶಾಖೆಯಲ್ಲಿ ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿದರೆ ಒಟ್ಟು ಬಡ್ಡಿದರಕ್ಕೆ ಶೇ 3-4% ಬಡ್ಡಿ ಸಹಾಯಧನವನ್ನು ಪಡೆಯಬಹುದಾಗಿದೆ.

Agriculture loan Application-ಕೃಷಿ ಸಾಲವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಕೃಷಿ ಸಾಲವನ್ನು ಪಡೆಯಲು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರಾಷ್ಟ್ರ‍ಿಕೃತ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಕೃಷಿ ಸಾಲವನ್ನು ಪಡೆಯಬಹುದು.

ಇದನ್ನೂ ಓದಿ: Sheep farming loan-ಶೇ 50% ಸಬ್ಸಿಡಿ ಪಡೆದು ಕುರಿ ಸಾಕಾಣಿಕೆ ಆರಂಭಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Agriculture loan- ಅನೇಕ ರೈತರು ನಮಗೆ ಬ್ಯಾಂಕ್ ಗಳಲ್ಲಿ ಕೃಷಿ ಸಾಲ ನೀಡುವುದಿಲ್ಲ ಎಂದು ದೂರುತ್ತಾರೆ ಇದಕ್ಕೆ ಕೆಲವು ಸೂಕ್ತ ಸಲಹೆಗಳು ಹೀಗಿವೆ:

ಜಮೀನಿನ ಪಹಣಿಯ ಋಣಗಳು ಕಾಲಂ ನಲ್ಲಿ ಆ ಜಮೀನಿನ ಮೇಲೆ ಯಾವೆಲ್ಲ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆಯಲಾಗಿದೆ? ಎಷ್ಟು ಸಾಲ ಪಡೆಯಲಾಗಿದೆ ಎಂದು ನಮೂದಿಸಿರುತ್ತಾರೆ ಇದೆ ಪಹಣಿಯನ್ನು ತೆಗೆದುಕೊಂಡು ಬೇರೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಬರುವುದಿಲ್ಲ ಅದ್ದರಿಂದ ಬೇರೆ ಪಹಣಿಯನ್ನು ಸಲ್ಲಿಸಬೇಕು ಅಥವಾ ಇತರೆ ಬ್ಯಾಂಕ್ ನಲ್ಲಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರು ಪಾವತಿ ಮಾಡಿರಬೇಕು.

ರೈತರು ಕೃಷಿ ಸಾಲವನ್ನು ಪಡೆಯಲು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡುವ ಮುನ್ನ ನಿಮ್ಮ ಜಮೀನಿನ ಪಹಣಿ/RTC ಅಲ್ಲಿ "ಋಣಗಳು" ಕಾಲಂ ನಲ್ಲಿರುವ ಸಾಲದ ವಿವರಗಳನ್ನು ಪರೀಶಿಲಿಸಿ ನಂತರ ಆ ದಾಖಲೆಯನ್ನು ಸಲ್ಲಿಸಬೇಕು ಕೆಲವೊಂದು ಪ್ರಕರಣಗಳಲ್ಲಿ ಸಾಲ ಮರು ಪಾವತಿ ಮಾಡಿದ್ದರು ಪಹಣಿಯ "ಋಣಗಳು" ಕಾಲಂ ನಲ್ಲಿ ಸಾಲದ ಮೊತ್ತ ಹಾಗೆಯೇ ಇರುತ್ತದೆ ಇಂತಹ ಸಮಯದಲ್ಲಿ ನೀವು ಸಾಲ ತೆಗೆದುಕೊಂಡಿರುವ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ "NOC" ಪ್ರಮಾಣ ಪತ್ರವನ್ನು ಪಡೆದು ನಿಮ್ಮ ಹೋಬಳಿಯ ನಾಡಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಸಾಲದ ಮೊತ್ತವನ್ನು ವಜಾ ಮಾಡಿಸಿಕೊಳ್ಳಬೇಕು.

WhatsApp Group Join Now
Telegram Group Join Now
Share Now: