Agriculture University-ವಿಶ್ವವಿದ್ಯಾಲಯದಲ್ಲಿ ಕೃಷಿ ಕೋಟಾದಡಿ ಪ್ರವೇಶಾತಿ ಸೀಟು ಪಡೆಯಲು ಅವಕಾಶ!

April 18, 2025 | Siddesh
Agriculture University-ವಿಶ್ವವಿದ್ಯಾಲಯದಲ್ಲಿ ಕೃಷಿ ಕೋಟಾದಡಿ ಪ್ರವೇಶಾತಿ ಸೀಟು ಪಡೆಯಲು ಅವಕಾಶ!
Share Now:

2025-26ನೇ ಸಾಲಿನ ಕೆಸಿಇಟಿ ಪ್ರವೇಶಾತಿಗೆ ಕೃಷಿ ಕೋಟಾದಡಿ ಪ್ರವೇಶಾತಿ ಪ್ರಕ್ರಿಯೆಗೆ(Agriculture University Admission-2025) ಪರಿಷ್ಕೃತ ದಿನಾಂಕವನ್ನು ಕೃಷಿ ವಿಶ್ವವಿದ್ಯಾನಿಲಯಗಳಿಂದ ಅಧಿಕೃತವಾಗಿ ಪ್ರಕಟಿಸಲಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ(agriculture practical exam) 4 ವರ್ಷದ ಕೃಷಿ/ತೋಟಗಾರಿಕೆ/ಅರಣ್ಯ/ಪಶುಸಂಗೋಪನೆ ಪದವಿಯನ್ನು(Karnataka Agriculture University Admission ) ವ್ಯಾಸಂಗ ಮಾಡಲು ರೈತರ ಮಕ್ಕಳಿಗೆ ವಿಶೇಷ ಮೀಸಲಾತಿ ಲಭ್ಯವಿದ್ದು ಅರ್ಹ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಪ್ರಾಯೋಗಿಕ ಪರೀಕ್ಷೆಯನ್ನು ವಿಶ್ವವಿದ್ಯಾಲಯ ಮೂಲಕ ನಡೆಸಲಾಗುತ್ತದೆ ಇದರ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!

ಈ ಕೋಟಾದಡಿಯಲ್ಲಿ ವಿದ್ಯಾರ್ಥಿಗಳು ಸೀಟನ್ನು(KCET 2025 Agriculture Quota) ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು?ಕೃಷಿ ಕೋಟಾದಡಿ ಸೀಟ್ ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು?
ಇದಕ್ಕಾಗಿ ನಿಗದಿಪಡಿಸಿರುವ ಪ್ರಮುಖ ದಿನಾಂಕಗಳು? ಪ್ರಯೋಗಿಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Documents for Agriculture Quota-ಕೃಷಿ ಕೋಟಾದಡಿ ಸೀಟ್ ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ವಿದ್ಯಾರ್ಥಿಯ ಆಧಾರ್ ಕಾರ್ಡ.
  • ವ್ಯವಸಾಯಗಾರ ದೃಡೀಕರಣ ಪ್ರಮಾಣ ಪತ್ರ.
  • ದ್ವಿತೀಯ ಪಿಯುಸಿ ಅಂಕಪಟ್ಟಿ.
  • ವೇತನ ದೃಡೀಕರಣ ಪತ್ರ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ವಿದ್ಯಾರ್ಥಿಯ ಪೋಟೋ.
  • ಕೆಸಿಇಟಿ ಪರೀಕ್ಷೆಯ ಪೂರಕ ದಾಖಲೆಗಳು.

ಇದನ್ನೂ ಓದಿ: 1st standard admission age-ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾತಿಗೆ ವಯೋಮಿತಿ ಸಡಿಲಿಕೆ!

ವ್ಯವಸಾಯಗಾರ ದೃಡೀಕರಣ ಪ್ರಮಾಣ ಪತ್ರದ ನಮೂನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download NOw

Agriculture practical exam Dates-ನಿಗದಿಪಡಿಸಿರುವ ಪ್ರಮುಖ ದಿನಾಂಕಗಳು:

ವಿದ್ಯಾರ್ಥಿಗಳು ಕೃಷಿ ಕೋಟಾದಡಿ ಸೀಟ್ ಪಡೆಯಲು ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಲು ಕೊನೆಯ ದಿನಾಂಕ- 21/04/2025

ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ- 21/04/2025 11:59:59PM

ಪ್ರಯೋಗಿಕ ಪರೀಕ್ಷೆ ನಡೆಯುವ ದಿನಾಂಕ- 09 ಮೇ 2025 ರಂದು ಬೆಳಗ್ಗೆ 9.00 ಗಂಟೆಗೆ

ಇದನ್ನೂ ಓದಿ: SSLC Result-2025: ಎಸ್ಸೆಸ್ಸೆಲ್ಸಿ ಫಲಿತಾಂಶ-2025: ಈ ದಿನ ಪ್ರಕಟಣೆ ಸಾಧ್ಯತೆ!

How to Upload Documents-ಆನ್ಲೈನ್ ಮೂಲಕ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಆನ್ಲೈನ್ ಮೂಲಕ ದಾಖಲಾತಿಗಳನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಪ್ಲೋಡ್ ಮಾಡಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Upload Now ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

Agriculture Quota Admission

Step-2: ತದನಂತರ ಈ ಪೇಜ್ ನಲ್ಲಿ ವಿದ್ಯಾರ್ಥಿಗಳು "Enter Application Number" ವಿಭಾಗದಲ್ಲಿ ಅರ್ಜಿ ಸಂಖ್ಯೆಯನ್ನು ಹಾಕಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಅವಶ್ಯವಾಗಿ ಕೇಳಿರುವ ಎಲ್ಲಾ ದಾಖಲಾತಿಗಳ ಸ್ಕಾನ್ ಮಾಡಿ ಅಪ್ಲೋಡ್ ಮಾಡಬೇಕು.

Agriculture practical exam-ಪ್ರಯೋಗಿಕ ಪರೀಕ್ಷೆಯ ಬಗ್ಗೆ ಮಾಹಿತಿ:

ಕೃಷಿ ಕೋಟಾದಡಿ ಪ್ರವೇಶ ಪಡೆಯಲು ಕೆಇಎಎ (KEA) ಒಂದು ಪ್ರಯೋಗಿಕ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆ ಗಿಡಪತ್ತೆ ಗುರುತಿಸುವಿಕೆ, ಕೃಷಿ ಉಪಕರಣಗಳ ಅರಿವು, ಮಣ್ಣು ಪರಿಚಯ ಮತ್ತು ಕೃಷಿ ಸಂಬಂಧಿತ ಪ್ರಾಥಮಿಕ ಜ್ಞಾನವನ್ನು ಪರೀಕ್ಷಿಸುತ್ತದೆ.

ಇದನ್ನೂ ಓದಿ: Scholarship-SSLC ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ 15,000/- ಪ್ರೋತ್ಸಾಹ ಧನ!

ಪರೀಕ್ಷೆಯ ತಯಾರಿ ಸಲಹೆಗಳು:

  • ಹೈಸ್ಕೂಲ್ ಮಟ್ಟದ ಕೃಷಿ ಜ್ಞಾನವನ್ನು ಪುನರಾವರ್ತಿ ಮಾಡಿಕೊಳ್ಳಿ.
  • ಕೃಷಿ ಉಪಕರಣಗಳ ಹೆಸರುಗಳು, ಉಪಯೋಗಗಳು ಕಲಿಯಿರಿ.
  • ಮಣ್ಣು, ಬೆಳೆಗಳು, ಹವಾಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಹೊಂದಿರಿ.
  • ಗೂಗಲ್ ನಲ್ಲಿ ಸರ್ಚ್ ಮಾಡಿ ಕೃಷಿ ಪೂರಕ ಪ್ರಯೋಗಿಕ ಮಾಹಿತಿಯನ್ನು ಅಭ್ಯಾಸ ಮಾಡಿ. ಮತ್ತು ಈಗಾಗಲೇ ಈ ಪ್ರಯೋಗಿಕ ಪರೀಕ್ಷೆಯನ್ನು ಪಾಸಾದ ಹಳೆಯ ವಿದ್ಯಾರ್ಥಿಗಳ ಸಲಹೆಯನ್ನು ಪಡೆಯಿರಿ.

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

ತಂದೆ/ತಾಯಿ ಅಥವಾ ಪೋಷಕರು ಕೃಷಿಕರಾಗಿರಬೇಕು ಮತ್ತು ಕೃಷಿ ಭೂಮಿ ಹೊಂದಿರುವ ಬಗ್ಗೆ ಅಧಿಕೃತ ದಾಖಲೆಯನ್ನು ಹೊಂದಿರಬೇಕು.

1ನೇ ಪಿಯುಸಿ ಮತ್ತು 2ನೇ ಪಿಯುಸಿಯಲ್ಲಿ ವಿಜ್ಞಾನ ವಿಭಾಗದೊಂದಿಗೆ ಜೈವಿಕಶಾಸ್ತ್ರ/ಗಣಿತ/ರಸಾಯನಶಾಸ್ತ್ರ ವ್ಯಾಸಂಗ ಮಾಡಿರಬೇಕು.

For More Information-ಹೆಚ್ಚಿನ ಮಾಹಿತಿಗಾಗಿ ಜಾಲತಾಣ: www.uasbangalore.edu.in, www.uasd.edu.in/, uhsbagalkot.karnataka.gov.in, www.uahs.edu.in, www.uasraichur.edu.in/ ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Share Now: