Free SSLC Class- ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

April 19, 2025 | Siddesh
Free SSLC Class- ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!
Share Now:

2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಯಿಂದ ಉತ್ತಿರ್ಣರಾಗಿ 10ನೇ ತರಗತಿಗೆ(Free SSLC Class) ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು ಉಚಿತವಾಗಿ ಮನೆಯಲ್ಲಿ ಕುಳಿತು ಬೇಸಿಗೆ ಸಮಯದಲ್ಲಿ ತರಗತಿಯಲ್ಲಿ ಭಾಗವಹಿಸಬಹುದು.

ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಈ ತರಬೇತಿಯಲ್ಲಿ ತಮ್ಮ ಮೊಬೈಲ್ ಮೂಲಕ ಭಾಗವಹಿಸುವ ವಿಧಾನ ಹೇಗೆ? ಯಾವೆಲ್ಲ ವಿಷಯಗಳ ಕುರಿತು ಈ ತರಬೇತಿಯಲ್ಲಿ(SSLC free online tuition) ಕಳಿಸಿಕೊಡಲಾಗುತ್ತದೆ? ಇನ್ನಿತರೆ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!

2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಯಿಂದ ಉತ್ತಿರ್ಣರಾಗಿ 10ನೇ ತರಗತಿಗೆ(10th classes) ದಾಖಲಾಗುತ್ತಿರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಾಗೂ ಸಂಕಲ್ಪ್ ಲರ್ನಿಂಗ್ ಸಂಸ್ಥೆಯವರ ಸಹಯೋಗದೊಂದಿಗೆ ಏಪ್ರಿಲ್ 11 ರಿಂದ ಮೇ 2025ರ ಅಂತ್ಯದವರೆಗೆ ಬೇಸಿಗೆ ರಜೆಯಲ್ಲಿ ಎಸ್.ಎಸ್.ಎಲ್.ಸಿ “ತಯಾರಿ” ಪೂರ್ವ ಸಿದ್ದತೆ ಶೀರ್ಷಿಕೆಯಡಿ  ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳಿಗೆ ಉಚಿತ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಸಂಕಲ್ಪ್ ಲರ್ನಿಂಗ್ ಸಂಸ್ಥೆಯವರ ಯೂಟೂಬ್ ಲೈವ್ www.youtube.com@sankalplearningsolutions ಮೂಲಕ ಭಾನುವಾರವೂ ಸೇರಿದಂತೆ ಪ್ರತಿ ದಿನ ಸಂಜೆ 6.30 ರಿಂದ 8.30ರ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ನೇರ ಪ್ರಸಾರದಲ್ಲಿ ತರಗತಿಗಳು ನಡೆಯಲಿದ್ದು ಬೆಂಗಳೂರು ಉತ್ತರ ಜಿಲ್ಲೆಯ 59 ಸರ್ಕಾರಿ ಪ್ರೌಢಶಾಲೆಗಳ 5,839 ವಿದ್ಯಾರ್ಥಿಗಳು ಹಾಗೂ 124 ಅನುದಾನಿತ ಪೌಢಶಾಲೆಗಳ 6,706 ವಿದ್ಯಾರ್ಥಿಗಳು ಒಟ್ಟು 12,545 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.

ಇದನ್ನೂ ಓದಿ: 1st standard admission age-ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾತಿಗೆ ವಯೋಮಿತಿ ಸಡಿಲಿಕೆ

ಈ ಕಾರ್ಯಕ್ರಮದ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಳ್ಳಲು ಹಾಗೂ ತರಗತಿಗಳಿಗೆ ವಿದ್ಯಾರ್ಥಿಗಳು ನಿರಂತರವಾಗಿ ಹಾಜರಾಗುತ್ತಿರುವ ಬಗ್ಗೆ ಅನುಪಾಲನೆ ಹಾಗೂ ಸಮನ್ವಯ ಮಾಡಲು ಸಂಬಂಧಪಟ್ಟ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು,

ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಬಿ.ಆರ್.ಪಿ ಮತ್ತು ಸಿ.ಆರ್.ಪಿ ರವರು ಅಗತ್ಯ ಕ್ರಮವಹಿಸುವುದು ಮತ್ತು ಪೋಷಕರು ವಿದ್ಯಾರ್ಥಿಗಳ ಮನವೊಲಿಸಿ ತರಗತಿಗಳ ಪ್ರಯೋಜನ ಪಡೆದುಕೊಳ್ಳುವಂತೆ ಬೆಂಗಳೂರು ಉತ್ತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: SSLC Result-2025: ಎಸ್ಸೆಸ್ಸೆಲ್ಸಿ ಫಲಿತಾಂಶ-2025: ಈ ದಿನ ಪ್ರಕಟಣೆ ಸಾಧ್ಯತೆ!

Free SSLC Class Youtube Channel- ಮನೆಯಲ್ಲೇ ಕುಳಿತು ಉಚಿತ ತರಗತಿಯಲ್ಲಿ ಭಾಗವಹಿಸಿ:

ವಿದ್ಯಾರ್ಥಿಗಳು ಬೇಸಿಗೆ ಸಮಯದಲ್ಲಿ ಮನೆಯಲ್ಲೇ ಕುಳಿತು ಈ ಕೆಳಗಿನ ವಿಧಾನವನ್ನು ಅನುಸರಿಸಿ ಉಚಿತವಾಗಿ ತರಗತಿಯಲ್ಲಿ ಭಾಗವಹಿಸಬಹುದು.

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಯೂಟ್ಯೂಬ್ ಚಾನಲ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ವಿದ್ಯಾರ್ಥಿಗಳು ಇಲ್ಲಿ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ತಮಗೆ ಅವಶ್ಯವಿರುವ ವಿಷಯದ ಕುರಿತಾದ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

ಇದನ್ನೂ ಓದಿ: Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

SSLC Subject-ಯಾವೆಲ್ಲ ವಿಷಯಗಳ ಕುರಿತು ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ?

ಒಟ್ಟು ಮೂರು ವಿಷಯಗಳ ಕುರಿತು ಉಚಿತ ತರಬೇತಿಯನ್ನು ಆರಂಭಿಸಲಾಗಿದ್ದು ವಿದ್ಯಾರ್ಥಿಗಳು ಈ ಲೈವ್ ತರಬೇತಿಯಲ್ಲಿ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೊಳ್ಳುವುದರ ಜೊತೆಗೆ ಉಚಿತವಾಗಿ ತರಗತಿಗಳನ್ನು ಪಡೆದುಕೊಳ್ಳಬಹುದು.

1) ಗಣಿತ/Mathematics 

2) ವಿಜ್ಞಾನ/Science 

3) ಇಂಗ್ಲೀಷ್/English

WhatsApp Group Join Now
Telegram Group Join Now
Share Now: