Artists Pension Scheme-ಕಲಾವಿದರ ಮಾಸಾಶನ 2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ!

July 8, 2025 | Siddesh
Artists Pension Scheme-ಕಲಾವಿದರ ಮಾಸಾಶನ 2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ!
Share Now:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನೋಂದಣಿಯಾಗಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕಲಾವಿದರಿಗೆ(Artists Pension Scheme) ನೀಡುವ ಪ್ರತಿ ತಿಂಗಳ ಮಾಸಾಶನವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಅಧಿಕೃತ ಆದೇಶವನ್ನು ಪ್ರಕಟಿಸಿದೆ.

ರಾಜ್ಯ ಸರ್ಕಾರವು ಕಳೆದ ಬಜೆಟ್ ನಲ್ಲಿ ಕಲಾವಿದರ(Karnataka Pension Scheme) ಮಾಸಾಶವನ್ನು ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಲಾಗಿತ್ತು ಇದರನ್ವಯ ಪ್ರಸುತ್ತ ಈ ಯೋಜನೆಗೆ ಅಧಿಕೃತವಾಗಿ ಅನುಮೋದನೆಯನ್ನು ನೀಡಿ ಆದೇಶವನ್ನು ಹೊರಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಲಾವಿದರ ಮಾಸಾಶನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ(Karnataka Government) ಆಡಳಿತಾತ್ಮಕ ಅನುಮೋದನೆ ನೀಡಿದೆ.

ಇದನ್ನೂ ಓದಿ: Bele Samikshe- ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್ ಆಗಲಿದೆ!

ಈ ಅಂಕಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಯಾರಿಗೆಲ್ಲ ಮಾಸಾಶನವನ್ನು ನೀಡಲಾಗುತ್ತದೆ? ಇನ್ನಿತರೆ ಅಗತ್ಯ ಮಾಹಿತಿ ಜೊತೆಗೆ ಪ್ರಸ್ತುತ ಇಲಾಖೆಯಿಂದ ಕಾಯಕಲ್ಪ ಯೋಜನೆಯಡಿ ಧನಸಹಾಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಯೋಜನೆಯ ಕುರಿತು ಸಹ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Artists Pension Amount-2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ:

ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಂದಾಯಿತ ಕಲಾವಿದರಿಗೆ 2,000 ರೂ ಮಾಸಾಶನವನ್ನು ನೀಡಲಾಗುತ್ತಿತ್ತು, ಇದಕ್ಕೆ ಹೆಚ್ಚುವರಿಯಾಗಿ ರೂ 500/- ಸೇರಿಸಿ ರೂ 2,500/- ಕ್ಕೆ ಮಾಸಾಶನವನ್ನು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Media Internship-ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್‍ಗೆ ಅರ್ಜಿ! ತಿಂಗಳಿಗೆ ರೂ 20,000/- ಸ್ಟೈಪಂಡ್!

Artists Pension Application-ಈ ಯೋಜನೆಯ ಪ್ರಯೋಜನ ಯಾರಿಗೆಲ್ಲ ಸಿಗಲಿದೆ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಒಟ್ಟು 12 ಸಾವಿರ ಕಲಾವಿದರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.

60 ವರ್ಷ ಮೀರಿದ ಕಲಾವಿದರು ತಮ್ಮ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

Artists Pension Yojana-ಪ್ರತಿ ತಿಂಗಳಿಗೆ ರೂ 2500/- ಮಾಸಾಶನ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಒಟ್ಟು 12 ಸಾವಿರ ಕಲಾವಿದರಿಗೆ ಪ್ರತಿ ತಿಂಗಳಿಗೆ ರೂ 2500/- ಮಾಸಾಶನವನ್ನು ಈ ಯೋಜನೆಯಡಿ ನೀಡಲು ಒಟ್ಟು 32.94 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.

2,000 ರೂ. ಇರುವ ಮಾಸಾಶನವನ್ನು 2,500 ರೂ.ಗೆ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ 2025-26ನೇ ಸಾಲಿಗೆ ಮಾಸಾಶನ ಪಾವತಿಸಲು 32.94 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Artists Pension Scheme

2) ವೃತ್ತಿರಂಗಭೂಮಿ ಕಾಯಕಲ್ಪ ಯೋಜನೆಯಡಿ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ:

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2025-26ನೇ ಸಾಲಿಗೆ ವೃತ್ತಿರಂಗಭೂಮಿ ಕಾಯಕಲ್ಪ ಯೋಜನೆಯಡಿ ಧನಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆಯ ನಿಯಮಾನುಸಾರ ನೋಂದಾಯಿತ ವೃತ್ತಿ ನಾಟಕ ಕಂಪನಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ, 2025 ರ ಜುಲೈ 15 ರೊಳಗೆ ಅರ್ಜಿಯನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು.

ನಿಗದಿತ ಅರ್ಜಿ ನಮೂನೆ ಹಾಗೂ ಮಾರ್ಗಸೂಚಿಯನ್ನು ಇಲಾಖೆಯ ವೆಬ್‍ಸೈಟ್ kannadasiri.karnataka.gov.in ನಲ್ಲಿ ಪಡೆಯಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click Here
ಕಾಯಕಲ್ಪ ಯೋಜನೆಯ ಅರ್ಜಿ ನಮೂನೆ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: