HomeAgricultureBagar hukum-ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್! ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ!

Bagar hukum-ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್! ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ!

ಕಂದಾಯ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ ಅತೀ ಕಡು ಬಡವ ವರ್ಗಕ್ಕೆ ಸೇರಿದವರಿಗೆ ಜಮೀನನ್ನು ಮಂಜೂರು ಮಾಡುವ “ಬಗರ್ ಹುಕುಂ”(Bagar hukum) ಕಾಯ್ದೆಯಡಿ ಜಮೀನನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ ಅರ್ಹ ನಾಗರಿಕರಿಗೆ ಕಂದಾಯ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.

ಇಲ್ಲಿಯವರಿಗೆ ಬಗರ್ ಹುಕುಂ ಕಾಯ್ದೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿ ಒಟ್ಟು 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಂದ ನಡೆಯುತ್ತಿದ್ದು ಈ ಕಾರ್ಯವನ್ನು ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಣೆ ಮಾಡಲು ಕಂದಾಯ ಸಚಿವರು ಅಂತಿಮ ಗಡುವನ್ನು ನೀಡಿದ್ದಾರೆ.

ಇದನ್ನೂ ಓದಿ: Waqf board-ವಕ್ಫ್ ಬೋರ್ಡ ಹೆಸರಿಗೆ ರೈತರ ಖಾತೆ ರಾಜ್ಯ ಸರಕಾರದಿಂದ ಮಹತ್ವದ ಆದೇಶ!

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ವಿಕಾಸಸೌಧದಿಂದ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇವಾರಿ ಮತ್ತು ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿ ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಸಂಬಂಧಪಟ್ಟಂತೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.

Bagar hukum saguvali cheeti-ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ:

ಸಭೆಯಲ್ಲಿ ಕಂದಾಯ ಸಚಿವರು “ಬಗರ್ ಹುಕುಂ” ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಜಮೀನನ್ನು ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ಹಲವು ದಶಕಗಳಿಂದ ಹೋರಾಡುತ್ತ ಬಂದಿವೆ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ” ಎಂದು ತಿಳಿಸಿದರು.

ಇದಲ್ಲದೇ “ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವ್ಯಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯುತ್ತಿದ್ದೆನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ಬೇಸರ ತಂದಿದೆ ಎಂದರು ಈ ಕುರಿತು ತೀವ್ರ ಅಸಾಮಾಧನ ಹೊರಹಾಕಿದ್ದಾರೆ.

ಇದನ್ನೂ ಓದಿ: Waqf board-ಏನಿದು ವಕ್ಫ್ ಕಾಯ್ದೆ? ಇದರಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ? ಇಲ್ಲಿದೆ ಸಂಪೂರ್ಣ ವಿವರ!

ಎಲ್ಲಾ ತಹಶೀಲ್ದಾರರಿಗೆ ಬಗರ್ ಹುಕುಂ ಅರ್ಜಿ ವಿಲೇವಾರು ಕುರಿತು ನವೆಂಬರ್ ತಿಂಗಳ 25 ರ ಒಳಗೆ ಅರ್ಹ ಮತ್ತು ಅನರ್ಹ ಅರ್ಜಿಗಳನ್ನು ವಿಂಗಡಣೆ ಮಾಡಿ ಅಧಿಕೃತ ಪಟ್ಟಿ ಮಾಡಿ ಆಯಾ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ನವೆಂಬರ್ 26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು” ಎಂದು ಸೂಚನೆಯನ್ನು ನೀಡಿದ್ದಾರೆ.

what is Bagar hukum-“ಬಗರ್ ಹುಕುಂ” ಎಂದರೇನು?

ಒಬ್ಬ ವ್ಯಕ್ತಿ ಯಾವುದೇ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಂಡು ಮತ್ತು ಅಂತಹ ವ್ಯಕ್ತಿಯು 108 ಸಿ (1) ಅಡಿಯಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳ ಅಡಿಯಲ್ಲಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದರೆ ಅದನ್ನು ಬಗರ್ ಹುಕುಂ ಭೂಮಿ ಎಂದು ಹೇಳಲಾಗುತ್ತದೆ.

Bagar hukum guidelines-ಬಗರ್ ಹುಕುಂ ಅರ್ಹ ಮತ್ತು ಅನರ್ಹ ಗುರುತಿಸಲು ಮಾರ್ಗಸೂಚಿ ಹೀಗಿದೆ:

ರಾಜ್ಯಾದ್ಯಂತ ಬಗರ್ ಹುಕುಂ ಕಾಯ್ದೆಯಡಿ ಜಮೀನಿನ ಮಂಜೂರಾತಿ ಕೋರಿ ಇಲ್ಲಿಯವರೆಗೆ ಒಟ್ಟು 14ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಕಂದಾಯ ಇಲಾಖೆಯಿಂದ ಸ್ವೀಕರಿಸಲಾಗಿದ್ದು. ಈ ಪೈಕಿ ಅನರ್ಹ ಅರ್ಜಿಗಳ ಸಂಖ್ಯೆಯೇ ಹೆಚ್ಚಿದ್ದು. ಇವುಗಳಲ್ಲಿ ಅನರ್ಹ ಎಂದು ನಿರ್ಧರಿಸಲು ಕೆಲವು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿದಾರರು ಪ್ರಸ್ತುತ ಆ ನಿರ್ದಿಷ್ಟ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿಲ್ಲವೇಂದರೆ ಅಂತಹ ಅರ್ಜಿದಾರರರು ಅನರ್ಹ ಪಟ್ಟಿಗೆ ಸೇರಿಸಬೇಕು. ನಿರ್ದಿಷ್ಟ ಪ್ರದೇಶದಲ್ಲಿ ಗೋಮಾಳ ಭೂಮಿ ಅಧಿಕ ಇಲ್ಲ, ಅರಣ್ಯ ಭೂಮಿಯನ್ನು ಕೋರಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೆ,

ಇದನ್ನೂ ಓದಿ: Bele sala-ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯಲು ವೆಬ್ಸೈಟ್ ಲಿಂಕ್!

ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ 4.38 ಎಕರೆಗೂ ಅಧಿಕ ಜಮೀನು ಇದ್ದರೆ, ಅರ್ಜಿದಾರರು ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ್ರದೇಶದಲ್ಲಿ ವಾಸ ಇಲ್ಲದಿದ್ದರೆ, ಅರ್ಜಿಯೇ ನಕಲು ಆಗಿದ್ದರೆ ಅಥವಾ ಅರ್ಜಿದಾರರು ಅಧಿಕಾರಿಗಳ ಕೈಗೆ ಸಿಗದಿದ್ದರೆ ಅಂತಹ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಸಲು ಸೂಚಿಸಲಾಗಿದೆ.

Bagar hukum application details-ಬಗರ್ ಹುಕುಂ ಅರ್ಜಿಗಳ ಅಂಕಿ-ಸಂಖ್ಯೆ ವಿವರ:

ರೈತರು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಕರಣೆ ಮಾಡಿ ನಿಮ್ಮ ಮೊಬೈಲ್ ನಲ್ಲೇ ಬಗರ್ ಹುಕುಂ ಅರ್ಜಿ ವಿಲೇವಾರಿ ಅಂಕಿ-ಸಂಖ್ಯೆ ಮಾಹಿತಿಯನ್ನು ತಿಳಿಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ Bagar hukum report ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Kisan E-kyc list- ಪಿಎಂ ಕಿಸಾನ್ ಇ-ಕೆವೈಸಿ ಆಗದ 4.7 ಲಕ್ಷ ರೈತರ ಪಟ್ಟಿ ಬಿಡುಗಡೆ!

Bagar hukum news

Step-2: ಇದಾದ ನಂತರ ಇಲ್ಲಿ ಮೂರು ಆಯ್ಕೆಗಳು ಗೋಚರಿಸುತ್ತವೆ 1) Application Pending Report, 2) Rejected Cases Report, 3) Intelligence Report ಇವುಗಳ ಮೇಲೆ ಕ್ಲಿಕ್ ಮಾಡಿದರೆ ಜಿಲ್ಲಾವಾರು ಬಗರ್ ಹುಕುಂ ಅರ್ಜಿ ವಿಲೇವಾರಿಯ ಅಂಕಿ-ಸಂಖ್ಯೆ ತೋರಿಸುತ್ತದೆ.

Most Popular

Latest Articles

Related Articles