HomeGovt SchemesBele vime amount-ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ:...

Bele vime amount-ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ!

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ(GKVK) ಮೈದಾನದಲ್ಲಿ 2024 ನೇ ವರ್ಷದ ಕೃಷಿ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಬೆಳೆ ವಿಮೆ ಹಣ ಬಿಡುಗಡೆ(Bele vime amount) ಕುರಿತು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಳಾಗಿದೆ.

ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ತಾವು ಬೆಳೆದ ಕೃಷಿ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ತಮ್ಮ ತಮ್ಮ ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಪಡೆಯುತ್ತಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಬೆಳೆ ಹಾನಿಯಾದರಿ ಸರಕಾರದಿಂದ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಸಾಧ್ಯವಾಗುತದೆ.

ಇದನ್ನೂ ಓದಿ: Bagar hukum-ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್! ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ!

ಕೃಷಿ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಪಾವತಿ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ನೇರ ನಗದು ವರ್ಗಾವಣೆ ಮೂಲಕ ರೈತರು ಬೆಳೆ ವಿಮೆ ಯೋಜನೆಯಡಿ ಪರಿಹಾರವನ್ನು ಪಾವತಿ ಮಾಡಲಾಗಿರುವ ಬಗ್ಗೆ ತಿಳಿಸಿದ್ದಾರೆ.

Bele vime DBT amount- ರಾಜ್ಯ ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ:

ಬೆಳೆ ವಿಮೆ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರಿಗೆ ಪಾರದರ್ಶಕತೆಯನ್ನು ಒದಗಿಸಲು ರಾಜ್ಯ ಸರಕಾರದಿಂದ ಸಂರಕ್ಷಣೆ ಪೋರ್ಟಲ್ ಅನ್ನು ಜಾರಿಗೆ ತರಲಾಗಿದ್ದು ರೈತರು ಬೆಳೆ ವಿಮೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಲು ಮತ್ತು ಸರಕಾರದಿಂದ ಬೆಳೆ ಪರಿಹಾರವನ್ನು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲು ಈ ತಂತ್ರಾಂಶ ನೆರವಾಗುತ್ತದೆ.

ಒಮ್ಮೆ ರೈತರು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯಲು ಬೀಜವನ್ನು ಬಿತ್ತನೆ ಮಾಡಿದ ನಂತರ ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತಾರೆ ಈ ಅರ್ಜಿಯನ್ನು ವಿಮಾ ಕಂಪನಿಯವರು ಪರಿಶೀಲನೆ ಮಾಡಿ ಅರ್ಜಿಯನ್ನು ದಾಖಲೀಕರಣ ಮಾಡಲಾಗುತ್ತದೆ.

ಇದನ್ನೂ ಓದಿ: Waqf board-ವಕ್ಫ್ ಬೋರ್ಡ ಹೆಸರಿಗೆ ರೈತರ ಖಾತೆ ರಾಜ್ಯ ಸರಕಾರದಿಂದ ಮಹತ್ವದ ಆದೇಶ!

ಕೃಷಿ ಬೆಳೆಗಳ ನಷ್ಟಕ್ಕೆ ಪರಿಹಾರವನ್ನು ಒದಗಿಸಲು ಬೆಳೆ ಅಂದಾಜು ಸಮೀಕ್ಷೆಯ ಮಾಹಿತಿಯನ್ನು ಆಧಾರಿಸಿ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ನೀಡಲಾಗುತ್ತದೆ ಅದೇ ರೀತಿ ತೋಟಗಾರಿಕೆ ಬೆಳೆಗಳಿಗೆ ವಿಮಾ ಪರಿಹಾರವನ್ನು ಒದಗಿಸಲು ಮಳೆ ಪ್ರಮಾಣವನ್ನು ಅಧಾರಿಸಿ ಬೆಳೆ ವಿಮೆಯನ್ನು ನೀಡಲಾಗುತ್ತದೆ.

2023-24 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅರ್ಜಿ ಸಲ್ಲಿಸಿದ ಒಟ್ಟು ಅರ್ಹ ರೈತರಿಗೆ ಇಲ್ಲಿಯವರೆಗೆ 2100 ಕೋಟಿ ಬೆಳೆ ವಿಮೆ(Crop Insurance) ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದು ಕೃಷಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: PM Kisan E-kyc list- ಪಿಎಂ ಕಿಸಾನ್ ಇ-ಕೆವೈಸಿ ಆಗದ 4.7 ಲಕ್ಷ ರೈತರ ಪಟ್ಟಿ ಬಿಡುಗಡೆ!

Agriculture machinery subsidy- 1000 ಕೋಟಿ ಕೃಷಿ ಯಂತ್ರಗಳಿಗೆ ಸರಕಾರದಿಂದ ಸಬ್ಸಿಡಿ: ಕೃಷಿ ಸಚಿವ ಚೆಲುವರಾಯಸ್ವಾಮಿ

ಕೃಷಿ ಮೇಳದ ಕಾರ್ಯಕ್ರಮದಲ್ಲಿ ಬೆಳೆ ವಿಮೆ ಮತ್ತು ಇತರ ವಿಷಯಗಳ ಕುರಿತು ಮಾಹಿತಿ ತಿಳಿಸಿದ ಅವರು ಆಹಾರ ಉತ್ಪಾದನೆ ಏರಿಕೆಗೆ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳ ಪಾತ್ರ ಅಟೀ ಮುಖ್ಯವಾಗಿದ್ದು. ವಿಶ್ವವಿದ್ಯಾನಿಲಯಗಳು ಸತತವಾಗಿ ಹೊಸ ತಳಿಗಳನ್ನು ಸಂಶೋಧಿಸಿ ಬಿಡುಗಡೆ ಮಾಡುತ್ತಿವೆ ಎಂದರು.

Bele vime status-ಬೆಳೆ ವಿಮೆ ಹಣ ಪಾವತಿ ಮತ್ತು ಅರ್ಜಿಯ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ:

ರೈತರು ಹಿಂದಿನ ವರ್ಷಗಳ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಮತ್ತು ಈ ವರ್ಷದ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಮನೆಯಲ್ಲೇ ಕುಳಿತು ಕೆಲವ ಒಂದೆರಡು ಕ್ಲಿಕ್ ನಲ್ಲಿ ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸಸಿ.

Step-1: ಮೊದಲಿಗೆ ಇಲ್ಲಿ ಕ್ಲಿಕ್ Bele vime status check ಮಾಡಿ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಇಲ್ಲಿ 2016 ರಿಂದ 2024 ರ ವರೆಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು ಇದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಕಾಣುವ ಋತು ಆಯ್ಕೆಯಲ್ಲಿ ಮುಂಗಾರು ಹಂಗಾಮು ಬೆಳೆ ವಿಮೆ ಅರ್ಜಿ ಅಗಿದ್ದರೆ Kharif ಎಂದು ಹಿಂಗಾರು-rabi ಬೇಸಿಗೆ- summer ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele sala-ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯಲು ವೆಬ್ಸೈಟ್ ಲಿಂಕ್!

bele vime

Step-3: ಇಲ್ಲಿ “Farmers” ಕಾಲಂ ನಲ್ಲಿ “Check Status” ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಹಾಕಿ Captcha ಕೋಡ್ ಅನ್ನು ನಮೂದಿಸಿ “Search” ಕ್ಲಿಕ್ ಮಾಡಿದರೆ ಆ ವರ್ಷದ ಬೆಳೆ ವಿಮೆ ಅರ್ಜಿ ವಿವರ ತೋರಿಸುತ್ತದೆ.

Step-4: ಇಲ್ಲಿ ಕಾಣಿಸುವ ಅರ್ಜಿಯ ವಿವರದ ಕೊನೆಯ ಕಾಲಂ ನಲ್ಲಿ ಕಾಣಿಸುವ “Select” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿದ್ದರೆ “UTR Details” ನಲ್ಲಿ ಆ ವರ್ಷ ಎಷ್ಟು ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.

Most Popular

Latest Articles

Related Articles