HomeGovt SchemesUchita holige yantra-ಕೇಂದ್ರದಿಂದ ಮಹಿಳೆಯರಿಗೆ ಸಿಹಿ ಸುದ್ದಿ! ಉಚಿತ ಹೊಲಿಗೆ ಯಂತ್ರ ಪಡೆಯಲು ಅವಕಾಶ!

Uchita holige yantra-ಕೇಂದ್ರದಿಂದ ಮಹಿಳೆಯರಿಗೆ ಸಿಹಿ ಸುದ್ದಿ! ಉಚಿತ ಹೊಲಿಗೆ ಯಂತ್ರ ಪಡೆಯಲು ಅವಕಾಶ!

ಮಹಿಳೆಯರು ಕೇಂದ್ರ ಸರಕಾರದ ಯೋಜನೆಯಡಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಅವಕಾಶವಿದ್ದು ಈ ಯೋಜನೆಯ(free sewing machine scheme) ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಬಹುತೇಕ ಗೃಹಿಣಿಯರು ಹೊಲಿಗೆ ತರಬೇತಿಯನ್ನು ಪಡೆದು ತಮ್ಮ ಮನೆಯಲ್ಲೇ ಬಿಡುವಿನ ಸಮಯದಲ್ಲಿ ಟೈಲರಿಂಗ್ ಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಆಸಕ್ತಿ ಹೊಂದಿರುತ್ತಾರೆ ಇಂತಹ ಮಹಿಳೆಯರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Bele vime amount-ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ!

ಏನಿದು ಪ್ರಧಾನ ಮಂತ್ರಿ ವಿಶ್ವಕರ್ಮ(PM vishwakarma ) ಯೋಜನೆ? ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಈ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

Tailoring business- ಟೈಲರಿಂಗ್ ನಲ್ಲಿ ಉತ್ತಮ ಆದಾಯ:

ಗೃಹಿಣಿಯರು ತಮ್ಮ ಮನೆಯಲ್ಲಿ ಬಿಡುವಿನ ಸಮಯದಲ್ಲಿ ಟೈಲರಿಂಗ್ ಕೆಲಸವನ್ನು ಮಾಡಿ ಉತ್ತಮ ಆದಾಯವನ್ನು ಪಡೆಯಲು ಸಾಧ್ಯವಿದ್ದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿಯನ್ನು ಸಹ ಪಡೆಯಬಹುದಾಗಿದೆ ಇದಲ್ಲದೇ ಹೊಲಿಗೆ ಯಂತದ ಕಿಟ್ ಅನ್ನು ಸಹ ಪಡೆಯಬಹುದು.

ಇದನ್ನೂ ಓದಿ: Bagar hukum-ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್! ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ!

sewing machine

50,000ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ:

ಪ್ರಸ್ತುತ ಈ ಯೋಜನೆಯಡಿ ನಮ್ಮ ರಾಜ್ಯದಲ್ಲಿ 50,000ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡುವ ಗುರಿಯನ್ನು ಈ ಯೋಜನೆಯಡಿ ಹಾಕಿಕೊಳ್ಳಲಾಗಿದೆ. ಆಸಕ್ತ ಮಹಿಳೆಯರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Who can apply for PM-vishwakarma scheme-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರ ಮಹಿಳೆಯ ವಯಸ್ಸು 18 ವರ್ಷ ತುಂಬಿರಬೇಕು.
ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಬಿಪಿಎಲ್ ರೇಶನ್ ಕಾರ್ಡ ಹೊಂದಿರಬೇಕು.
ತರಬೇತಿ ಪಡೆದ ಬಳಿಕ ಟೈಲರಿಂಗ್ ಮಾಡಲು ಆಸಕ್ತಿ ಹೊಂದಿರಬೇಕು.
ಸರಕಾರಿ ಉದ್ಯೋಗದಲ್ಲಿರುವ ಕುಟುಂಬದವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇದನ್ನೂ ಓದಿ: Waqf board-ವಕ್ಫ್ ಬೋರ್ಡ ಹೆಸರಿಗೆ ರೈತರ ಖಾತೆ ರಾಜ್ಯ ಸರಕಾರದಿಂದ ಮಹತ್ವದ ಆದೇಶ!

PM-vishwakarma application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಮಹಿಳೆಯರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅಥವಾ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

Documents-ಅಗತ್ಯ ದಾಖಲೆಗಳು:

1) ಅರ್ಜಿದಾರರ ಪೋಟೋ
2) ಅರ್ಜಿದಾರರ ಆಧಾರ್ ಕಾರ್ಡ
3) ರೇಶನ್ ಕಾರ್ಡ
4) ಬ್ಯಾಂಕ್ ಪಾಸ್ ಬುಕ್
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
6) ಗ್ರಾಮ ಪಂಚಾಯತಿಯಿಂದ ದೃಡೀಕರಣ ಪ್ರಮಾಣ ಪತ್ರ
7) ಮೊಬೈಲ್ ನಂಬರ್

ಇದನ್ನೂ ಓದಿ: PM Kisan E-kyc list- ಪಿಎಂ ಕಿಸಾನ್ ಇ-ಕೆವೈಸಿ ಆಗದ 4.7 ಲಕ್ಷ ರೈತರ ಪಟ್ಟಿ ಬಿಡುಗಡೆ!

PM-vishwakarma application link-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್: Apply Now

Sewing machine subsidy-ಎಷ್ಟು ಸಹಾಯಧನ ನೀಡಲಾಗುತ್ತದೆ?

ಈ ಯೋಜನೆಯಡಿ ಹೊಲಿಗೆ ಯಂತ್ರ ಪಡೆಯಲು ರೂ 15000/- ಅರ್ಥಿಕ ನೆರವು ನೀಡಲಾಗುತ್ತದೆ.

PM-vishwakarma guidelines-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮಾರ್ಗಸೂಚಿ ಪ್ರತಿ: Download Now
PM-vishwakarma helpline-ಸಹಾಯವಾಣಿ: 080-22386794

Most Popular

Latest Articles

- Advertisment -

Related Articles