HomeAgricultureMini tractor subsidy- ಶೇ 90% ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ!

Mini tractor subsidy- ಶೇ 90% ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ!

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ಮಿನಿ ಟ್ರ್ಯಾಕ್ಟರ್(Mini tractor subsidy) ಸೇರಿದಂತೆ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಇಂದಿನ ದಿನಮಾನದಲ್ಲಿ ಕೃಷಿಯಲ್ಲಿ ಕೂಲಿ-ಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಲು ಕೃಷಿಯಲ್ಲಿ ಯಂತ್ರೋಪಕರಣಗಳ(Agriculture machineries) ಬಳಕೆ ಅನಿವಾರ್ಯವಾಗಿದ್ದು, ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಬೇಕಾಗುವ ಅಗತ್ಯ ಯಂತ್ರಗಳನ್ನು ಖರೀದಿ ಮಾಡಲು ಅರ್ಥಿಕವಾಗಿ ನೆರವಾಗಲು ಕೃಷಿ ಇಲಾಖೆಯಿಂದ ಪ್ರತಿ ವರ್ಷ ರೈತರಿಗೆ ಕೃಷಿ ಯಂತ್ರಗಳನ್ನು ಖರೀದಿ ಮಾಡಲು ಸಬ್ಸಿಡಿ ನೀಡಲಾಗುತ್ತದೆ.

ಇದನ್ನೂ ಓದಿ: Uchita holige yantra-ಕೇಂದ್ರದಿಂದ ಮಹಿಳೆಯರಿಗೆ ಸಿಹಿ ಸುದ್ದಿ! ಉಚಿತ ಹೊಲಿಗೆ ಯಂತ್ರ ಪಡೆಯಲು ಅವಕಾಶ!

ಮಿನಿ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಯಾವೆಲ್ಲ ಯಂತ್ರಗಳಿಗೆ ಸಹಾಯಧನ ಪಡೆಯಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ದಾಖಲೆಗಳು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Agriculture equipment list- ಸಬ್ಸಿಡಿಯಲ್ಲಿ ಯಾವೆಲ್ಲ ಯಂತ್ರಗಳನ್ನು ಪಡೆಯಬಹುದು?

ಮಿನಿ ಟ್ರ್ಯಾಕ್ಟರ್
ಪವರ್ ಟಿಲ್ಲರ್
ರೋಟೋವೇಟರ್
ಕಳೆ ಕೊಚ್ಚುವ ಯಂತ್ರಗಳು
ಪವರ್ ವೀಡರ್
ಪವರ್ ಸ್ಪ್ರೇಯರ್ಸ್
ಡೀಸೆಲ್ ಪಂಪ್‍ಸೆಟ್
ಪ್ಲೋರ್‍ಮಿಲ್
ಯಂತ್ರ ಚಾಲಿತ ಮೋಟೋಕಾರ್ಟ್
ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು
ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕ(sprinkler set subsidy)ವನ್ನು ಪಡೆಯಬಹುದು.

ಇದನ್ನೂ ಓದಿ: Bele vime amount-ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ!

Mini tractor

How to apply for Agriculture equipment subsidy- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಆಸಕ್ತ ರೈತರು ಈ ಯೋಜನೆಯಡಿ ಸಬ್ಸಿಡಿಯಲ್ಲಿ ಯಂತ್ರಗಳನ್ನು ಪಡೆಯಲು ನಿಮ್ಮ ಹತ್ತಿರದ/ಹೋಬಳಿ ಮಟ್ಟದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಬೇಕು.

Agriculture equipment subsidy application document- ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿ ನಮೂನೆ(ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತದೆ)
2) ಅರ್ಜಿದಾರರ ಆಧಾರ್ ಕಾರ್ಡ
3) ಪೋಟೋ
4) ಬ್ಯಾಂಕ್ ಪಾಸ್ ಬುಕ್
5) ಜಮೀನಿನ ಪಹಣಿ/ಊತಾರ್/RTC
6) ಜಂಟಿ ಮಾಲೀಕರಿದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ
7) ಹಿಡುವಳಿ ಪ್ರಮಾಣ ಪತ್ರ
8) ರೇಶನ್ ಕಾರ್ಡ
9) 20 ರೂ/ 100 ರೂ ಬಾಂಡ್ ಪೇಪರ್

ಇದನ್ನೂ ಓದಿ: Bagar hukum-ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್! ಸಾಗುವಳಿ ಚೀಟಿ ವಿತರಣೆಗೆ ದಿನಾಂಕ ನಿಗದಿ!

ಸ್ವಂತ ರೈತರೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ರೈತರು ಕೃಷಿ ಇಲಾಖೆಯ ಅಧಿಕೃತ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಸಲ್ಲಿಸಿ ಸ್ವಂತ ತಾವೇ ಅರ್ಜಿಯನ್ನು ಸಲ್ಲಿಸಬಹುದು.

Online Application link-ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್- Apply Now

Agriculture machineries Subsidy- ಸಹಾಯಧನ ಎಷ್ಟು ನೀಡಲಾಗುತ್ತದೆ?

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದ(GN/OBC) ರೈತರಿಗೆ ಶೇ.50 ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ(SC/ST) ಮತ್ತು ವರ್ಗದ ರೈತರಿಗೆ ಶೇ.90 ರ ಸಬ್ಸಿಡಿ ನೀಡಲಾಗುತ್ತದೆ.

ಇದನ್ನೂ ಓದಿ: Waqf board-ವಕ್ಫ್ ಬೋರ್ಡ ಹೆಸರಿಗೆ ರೈತರ ಖಾತೆ ರಾಜ್ಯ ಸರಕಾರದಿಂದ ಮಹತ್ವದ ಆದೇಶ!

Eligibility criteria- ಅರ್ಜಿ ಸಲ್ಲಿಸಲು ಅರ್ಹರ ರೈತರು:

ಅರ್ಜಿದಾರರು ತಮ್ಮ ಹೆಸರಿನಲ್ಲಿ ಕೃಷಿ ಜಮೀನಿನ್ನ ಹೊಂದಿರುವ ರೈತರು ಅರ್ಜಿ ಸಲ್ಲಿಸಲು ಅರ್ಹರು.
ಕಳೆದ 5 ವರ್ಷದಲ್ಲಿ ಒಮ್ಮೆ ಪಡೆದ ಯಂತ್ರವನ್ನು ಮತ್ತೆಈಗ ಪುನಃ ಅರ್ಜಿ ಸಲ್ಲಿಸಿ ಪಡೆಯಲು ಸಾಧ್ಯವಿಲ್ಲ.
ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

Application process- ಅರ್ಜಿ ವಿಲೇವಾರಿ ಪ್ರಕ್ರಿಯೆ:

ಒಮ್ಮೆ ರೈತರು ಅರ್ಜಿ ಸಲ್ಲಿಸಿದ ಬಳಿಕ ಕೃಷಿ ಇಲಾಖೆ ಸಿಬ್ಬಂದಿಗಳು ಈ ಅರ್ಜಿಯನ್ನು ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ ಅನುದಾನ ಲಭ್ಯತೆ ಆಧಾರದ ಮೇಲೆ ಅರ್ಜಿ ಸಲ್ಲಿಸಿದ ರೈತರಿಗೆ ಕರೆ ಮಾಡಿ ಯಂತ್ರ ಖರೀದಿ ಮಾಡಲು ಸಬ್ಸಿಡಿ ಬಿಟ್ಟು ಉಳಿದ ರೈತ ವಂತಿಕೆ ಹಣವನ್ನು ಯಂತ್ರ ನೀಡುವ ಕಂಪನಿಗೆ NEFT ಮಾಡಲು ಹೇಳುತ್ತಾರೆ ಇದಾದ ಬಳಿಕ ರೈತರಿಗೆ ಯಂತ್ರವನ್ನು ನೀಡಲಾಗುತ್ತದೆ.

Most Popular

Latest Articles

Related Articles