Birth And Death Certificate-ಜನನ-ಮರಣ ಪ್ರಮಾಣಪತ್ರಕ್ಕಾಗಿ ಅಲೆದಾಟಕ್ಕೆ ಬಿತ್ತು ಬ್ರೇಕ್: ಈಗ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿ!

February 7, 2026 | Siddesh
Birth And Death Certificate-ಜನನ-ಮರಣ ಪ್ರಮಾಣಪತ್ರಕ್ಕಾಗಿ ಅಲೆದಾಟಕ್ಕೆ ಬಿತ್ತು ಬ್ರೇಕ್: ಈಗ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿ!
Share Now:

ನಾಗರಿಕ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ತರವಾದ ಹೆಜ್ಜೆ ಇಟ್ಟಿದೆ. ಒಂದಾನೊಂದು ಕಾಲದಲ್ಲಿ ಜನನ ಅಥವಾ ಮರಣ ಪ್ರಮಾಣಪತ್ರ(Birth And Death Certificate) ಪಡೆಯಬೇಕೆಂದರೆ ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆಯಬೇಕಿತ್ತು. ಆದರೆ ಈಗ ಆ ಚಿಂತೆ ಬೇಡ. 'ಬಾಪೂಜಿ ಸೇವಾ ಕೇಂದ್ರ' (Bapuji Seva Kendra) ಮೂಲಕ ಗ್ರಾಮ ಪಂಚಾಯತಿ ಮಟ್ಟದಲ್ಲೇ ಈ ಸೇವೆಗಳು ಲಭ್ಯವಿದ್ದು, ಡಿಜಿಟಲ್ ರೂಪದಲ್ಲಿಯೂ ನೀವು ಇದನ್ನು ಸುಲಭವಾಗಿ ಪಡೆಯಬಹುದು.

ಇಂದಿನ ಈ ಅಂಕಣದಲ್ಲಿ ನಾಗರಿಕರು ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯಲು ಎಲ್ಲಿ ಅರ್ಜಿ(Birth And Death Certificate Application) ಸಲ್ಲಿಸಬೇಕು? ಜನನ ಮತ್ತು ಮರಣ ಪ್ರಮಾಣಪತ್ರ ಏಕೆ ಅಗತ್ಯ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇನ್ನಿತರೆ ಅವಶ್ಯಕ ವಿವರವನ್ನು ಒದಗಿಸಲಾಗಿದ್ದು ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Diploma Scholarship-ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ 10,000 ವಿದ್ಯಾರ್ಥಿವೇತನ! ಇನ್ನು 4 ದಿನ ಬಾಕಿ!

ದೈನಂದಿನ ಜೀವನದಲ್ಲಿ ಜನನ-ಮರಣ ಪ್ರಮಾಣ ಪತ್ರಗಳು ಅನೇಕ ಸರಕಾರಿ(Grama Panchayat) ಮತ್ತು ಇನ್ನಿತರೆ ಯೋಜನೆಯ ಪ್ರಯೋಜನವನ್ನು ಪಡೆಯಲು ಪೂರಕ ದಾಖಲೆಗಳಿಗಾಗಿ ಅವಶ್ಯವಿದ್ದು ಇದಕ್ಕಾಗಿ ನಾಗರಿಕರು ಈ ಪ್ರಮಾಣ ಪತ್ರವನ್ನು ಪಡೆಯಲು ಪ್ರಸ್ತುತ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.

Birth And Death Certificate Importance-ಜನನ ಮತ್ತು ಮರಣ ಪ್ರಮಾಣಪತ್ರ ಏಕೆ ಅಗತ್ಯ?

ಅನೇಕರು ಈ ದಾಖಲೆಗಳನ್ನು ಕೇವಲ ಒಂದು ಕಾಗದದ ತುಂಡು ಎಂದು ಭಾವಿಸುತ್ತಾರೆ, ಆದರೆ ಇವು ವ್ಯಕ್ತಿಯ ಕಾನೂನುಬದ್ಧ ಅಸ್ತಿತ್ವದ ಮತ್ತು ಹಕ್ಕುಗಳ ರಕ್ಷಣೆಗೆ ಅತ್ಯಗತ್ಯ.

ಜನನ ಪ್ರಮಾಣಪತ್ರದ ಪ್ರಾಮುಖ್ಯತೆ: ಇದು ಮಗುವಿನ ಮೊದಲ ಅಧಿಕೃತ ಗುರುತಿನ ಚೀಟಿ. ಶಾಲೆಗೆ ದಾಖಲಾತಿ ಪಡೆಯಲು, ಆಧಾರ್ ಕಾರ್ಡ್ ಮಾಡಿಸಲು, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಪಾಸ್‌ಪೋರ್ಟ್ ಪಡೆಯಲು ಮತ್ತು ವಯಸ್ಸಿನ ಅಧಿಕೃತ ಪುರಾವೆಯಾಗಿ ಇದು ಬೇಕೇ ಬೇಕು.

ಮರಣ ಪ್ರಮಾಣಪತ್ರದ ಪ್ರಾಮುಖ್ಯತೆ: ಕುಟುಂಬದ ವ್ಯಕ್ತಿ ಮರಣ ಹೊಂದಿದಾಗ ಅವರ ಆಸ್ತಿ ಹಕ್ಕುಗಳ ವರ್ಗಾವಣೆ (ವಾರಸುದಾರಿಕೆ), ವಿಮಾ ಹಣ (Insurance) ಪಡೆಯಲು, ಬ್ಯಾಂಕ್ ಖಾತೆಗಳ ಕ್ಲೋಸಿಂಗ್ ಮತ್ತು ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಲಾಭ ಪಡೆಯಲು ಇದು ಕಡ್ಡಾಯ.

ಇದನ್ನೂ ಓದಿ: Bele Vime Status-ರೈತರ ಖಾತೆಗೆ ಬೆಳೆ ವಿಮೆ ಪರಿಹಾರ!ಮೊಬೈಲ್ ನಲ್ಲೇ ಹಣ ಜಮಾ ವಿವರ ತಿಳಿಯಿರಿ!

Required Documents For Birth And Death Certificate-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ನಮ್ಮ ರಾಜ್ಯದಲ್ಲಿ ನಾಗರಿಕರು ಪ್ರಸ್ತುತ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯಲು ಒದಗಿಸಬೇಕಾದ ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿಯನ್ನು ಈ ಕೆಳಗೆ ತಿಳಿಸಿದೆ.

Birth Certificate-ಜನನ ಪ್ರಮಾಣಪತ್ರಕ್ಕಾಗಿ ದಾಖಲೆಗಳು:

ಆಸ್ಪತ್ರೆಯಲ್ಲಿ ಜನನವಾಗಿದ್ದರೆ, ಆಸ್ಪತ್ರೆ ನೀಡುವ ಫಾರ್ಮ್ (Birth Notification).

ಪೋಷಕರ ಆಧಾರ್ ಕಾರ್ಡ್ ಪ್ರತಿ.

ಮನೆಯಲ್ಲಿ ಜನನವಾಗಿದ್ದರೆ, ಆರೋಗ್ಯ ಕೇಂದ್ರದಿಂದ ದೃಢೀಕರಣ.

ಇದನ್ನೂ ಓದಿ: Free Notebook Scheme-1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: ಪೋಷಕರ ಜೇಬಿಗೆ ಇನ್ನು ಹೊರೆಯಿಲ್ಲ!

Birth And Death Certificate

Death Certificate-ಮರಣ ಪ್ರಮಾಣಪತ್ರಕ್ಕಾಗಿ ದಾಖಲೆಗಳು:

ಆಸ್ಪತ್ರೆಯ ಮರಣ ವರದಿ ಅಥವಾ ವೈದ್ಯಕೀಯ ಪ್ರಮಾಣಪತ್ರ.

ಮೃತರ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ.

ಗಮನಿಸಿ: ಜನನ ಅಥವಾ ಮರಣ ಸಂಭವಿಸಿದ 21 ದಿನಗಳ ಒಳಗಾಗಿ ನೋಂದಣಿ ಮಾಡಿಸುವುದು ಅತ್ಯಂತ ಸುಲಭ ಮತ್ತು ಉಚಿತವಾಗಿರುತ್ತದೆ. ವಿಳಂಬವಾದಲ್ಲಿ ದಂಡ ಮತ್ತು ಹೆಚ್ಚಿನ ಪ್ರಕ್ರಿಯೆಗಳ ಅಗತ್ಯವಿರುತ್ತದೆ.

How To Apply For Birth And Death Certificate-ಅರ್ಜಿ ಸಲ್ಲಿಸುವುದು ಹೇಗೆ?

ನಾಗರಿಕರು ಜನನ-ಮರಣ ಪ್ರಮಾಣಪತ್ರಕ್ಕಾಗಿ ಎರಡು ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ವಿಧಾನದ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ:

ವಿಧಾನ-1: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

Step-1: ನಾಗರಿಕರು ಮೊದಲಿಗೆ ಈ Appy Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬಾಪೂಜಿ ಸೇವಾ ಕೇಂದ್ರದ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Free Driving Training-ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ: ಕೆಎಸ್‌ಆರ್‌ಟಿಸಿಯಿಂದ ಉಚಿತ ಭಾರೀ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಮೇಲೆ ಕಾಣಿಸುವ "ನೋಂದಾಯಿಸಿ/ಲಾಗ್ ಇನ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ "OTP ಕಳುಹಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಿ.

Step-3: ನಂತರ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಅಧಿಕೃತ ಅರ್ಜಿ ನಮೂನೆ ಪೇಜ್ ಪ್ರವೇಶ ಪಡೆದು
'ಜನನ/ಮರಣ ಪ್ರಮಾಣಪತ್ರ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ೪್ಕೇಳಲಾದ ವಿವರಗಳನ್ನು (ದಿನಾಂಕ, ಸ್ಥಳ, ತಂದೆ/ತಾಯಿಯ ಹೆಸರು) ನಿಖರವಾಗಿ ಭರ್ತಿ ಮಾಡಿ.

Step-4: ತದನಂತರ ಅವಶ್ಯವಿರುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ, ನಿಗದಿಪಡಿಸಿದ ಅಲ್ಪ ಮೊತ್ತದ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

ವಿಧಾನ-2: ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರದ ಮೂಲಕ:

ನಿಮ್ಮ ಗ್ರಾಮ ಪಂಚಾಯತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿನ ಆಪರೇಟರ್‌ಗೆ ಜನನ/ಮರಣದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ. ಅವರು ನಿಮ್ಮ ಪರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಿದ ನಂತರ ನಿಮಗೆ ಸ್ವೀಕೃತಿ ಪತ್ರ (Acknowledgement) ನೀಡಲಾಗುತ್ತದೆ.

ಡಿಜಿಟಲ್ ಕ್ರಾಂತಿ: ಹಲವು ಸೇವೆಗಳು, ಒಂದೇ ಸೂರಿನಡಿ

ಬಾಪೂಜಿ ಸೇವಾ ಕೇಂದ್ರ ಕೇವಲ ಪ್ರಮಾಣಪತ್ರಗಳಿಗಷ್ಟೇ ಸೀಮಿತವಾಗಿಲ್ಲ. ಆಸ್ತಿ ತೆರಿಗೆ ಪಾವತಿ, ಉದ್ಯೋಗ ಖಾತರಿ ಮಾಹಿತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಸೇವೆಗಳನ್ನು ಪಂಚಾಯತಿ ಮಟ್ಟದಲ್ಲೇ ಒದಗಿಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ.

ಇದನ್ನೂ ಓದಿ: SSP Scholarship-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಅರ್ಜಿ ಸಲ್ಲಿಸುವ ಗಡುವು ವಿಸ್ತರಣೆ!

Grama Panchayat Helpline Number-ಸಹಾಯವಾಣಿ ಮತ್ತು ದೂರು ನಿರ್ವಹಣೆ:

ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ ನಂತರ ನಿಗದಿತ ಅವಧಿಯಲ್ಲಿ ಸೇವೆ ದೊರೆಯದಿದ್ದರೆ ಅಥವಾ ತಾಂತ್ರಿಕ ತೊಂದರೆ ಎದುರಾದರೆ ಗಾಬರಿಪಡುವ ಅಗತ್ಯವಿಲ್ಲ. ಸರ್ಕಾರದ 'ಪಂಚಮಿತ್ರ' ಸಹಾಯವಾಣಿ ಸಂಖ್ಯೆ: 8277506000 ಗೆ ಕರೆ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು.

"ಇಂದು.. ನಾಳೆ.. ಎನ್ನುವ ನೆಪ ಇನ್ನಿಲ್ಲ…" ಎಂಬಂತೆ ಆಡಳಿತ ವ್ಯವಸ್ಥೆ ಚುರುಕಾಗಿದೆ. ಹಾಗಾಗಿ, ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಬಾಪೂಜಿ ಸೇವಾ ಕೇಂದ್ರ ಅಥವಾ ಆನ್‌ಲೈನ್ ಪೋರ್ಟಲ್ ಬಳಸಿ ನಿಮ್ಮ ಹಕ್ಕಿನ ದಾಖಲೆಗಳನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: