BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!

May 24, 2025 | Siddesh
BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!
Share Now:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ(Heath Department) ಬಿಪಿಎಲ್ ಕಾರ್ಡದಾರರಿಗೆ(BPL Card)ಸಿಹಿ ಸುದ್ದಿಯನ್ನು ನೀಡಿದ್ದು ಇನ್ನುಂದೆ ಈ ಕೆಳಗೆ ತಿಳಿಸಿರುವ ಜಿಲ್ಲೆಯಲ್ಲಿನ ರೋಗಿಗಳು ಉಚಿತವಾಗಿ ಜಿಲ್ಲಾಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಉಚಿವಾಗಿ ಪಡೆಯಬಹುದು ಎಂದು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ವೆಚ್ಚಕ್ಕೆ(free health checkup) ಅತೀ ಹೆಚ್ಚು ಹಣವನ್ನು ಪಾವತಿ ಮಾಡುವ ಸನ್ನಿವೇಶ ನಿರ್ಮಾಣವಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನಗರಿಗೆ ಕಡಿಮೆ ಮೊತ್ತದಲ್ಲಿ ಮತ್ತು ಉಚಿತವಾಗಿ ಕೆಲವು ಆರೋಗ್ಯ ಸೇವೆಯನ್ನು ನೀಡಲು ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಈ ಕುರಿತು ನೂತನವಾಗಿ ಜಾರಿಗೆ ತಂದಿರುವ ಯೋಜನೆಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!

ಬಿಪಿಎಲ್‌ ಕಾರ್ಡ್‌ದಾರರಿಗೆ(BPL Card Use) ರಾಜ್ಯ ಸರ್ಕಾರದಡಿ ಕಾರ್ಯನಿವರ್ಹಿಸುವ ಆರೋಗ್ಯ ಇಲಾಖೆಯಿಂದ ಪ್ರಸ್ತುತ ಯಾವ ಚಿಕಿತ್ಸೆಯನ್ನು(Cancer health scheme) ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ? ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ

BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ:

ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ(District hospitals) ಬಿಪಿಎಲ್ ಕಾರ್ಡ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಡೇ ಕೇರ್ ಕೀಮೋಥೆರಿಪಿ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಕ್ಯಾನ್ಸರ್‌ʼ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ(Cancer health scheme in karnataka) ನೀಡುವ ಮೂಲಕ ಇಂತಹ ಮಾರಕ ರೋಗವನ್ನು ಬುಡಸಮೇತ ಕಿತ್ತೆಸೆಯಲು ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: Agriculture Department-ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಮಾಹಿತಿ ಪ್ರಕಟ!

ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್‌ ಕೀಮೋಥೆರಪಿ(Quimioterapia) ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದರಿಂದ ಕ್ಯಾನ್ಸರ್‌ ಚಿಕಿತ್ಸೆಯಿಂದ ವಂಚಿತರಾಗುವವರ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಅಲ್ಲದೇ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Quimioterapia Available District List-ಯಾವೆಲ್ಲ ಜಿಲ್ಲೆಯಲ್ಲಿ ಈ ಸೌಲಭ್ಯ ಲಭ್ಯ?

  • ವಿಜಯಪುರ
  • ಉಡುಪಿ
  • ಬಳ್ಳಾರಿ
  • ಧಾರವಾಡ
  • ಚಿತ್ರದುರ್ಗ
  • ವಿಜಯನಗರ
  • ಹಾವೇರಿ
  • ಬೆಂಗಳೂರು ಗ್ರಾಮಾಂತರ

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

  • ರಾಮನಗರ
  • ಬೆಂಗಳೂರು ನಗರ-ಸಿ.ವಿ ರಾಮನ್ ಆಸ್ಪತ್ರೆ
  • ದಕ್ಷಿಣ ಕನ್ನಡ
  • ಮೈಸೂರು
  • ದಾವಣಗೆರೆ
  • ತುಮಕೂರು
  • ಕೋಲಾರ
  • ಬಾಗಲಕೋಟೆ

Quimioterapia Details-ಯಾವೆಲ್ಲ ಸೇವೆಗಳನ್ನು ನೀಡಲಾಗುತ್ತದೆ?

ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಡೇ ಕೇರ್ ಕೀಮೋಥೆರಿಪಿ ಸೇವೆಯೊಂದಿಗೆ ಈ ಕೆಳಗಿನ ಸೇವೆಗಳನ್ನು ಸಹ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆ ಮುಂದುವರಿಕೆ.
  • ನೋವು ನಿರ್ವಹಣೆ ಚಿಕಿತ್ಸೆ.
  • ಸಮಾಲೋಚನಾ ಸೇವೆಗಳು.
  • ಜಿಲ್ಲಾ ಆಸ್ಪತ್ರೆಗಳಿಂದ ತೃತೀಯ ಹಂತದ ಆಸ್ಪತ್ರೆಗಳ ಮೂಲಕ ಟೆಲಿಮೆಡಿಸಿನ್ ಸೇವೆ.
  • ಅಗತ್ಯ ತಜ್ಞರ ಸೇವೆಗಳು.

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

BPL Card Benefits

Free Quimioterapia Benefits-ಇದರಿಂದ ಜನರಿಗಾಗುವ ಉಪಯೋಗಗಳೇನು?

ರಾಜ್ಯ ಸರ್ಕಾರದ ಈ ನೂತನ ಯೋಜನೆಯ ಜಾರಿಯಿಂದ ರೋಗಿಗಳಿಗೆ ಯಾವೆಲ್ಲ ಪ್ರಯೋಜನಗಳು ದೊರೆಯಲಿವೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

  • ಆಸ್ಪತ್ರೆ ಮತ್ತು ಪ್ರಯಾಣ ವೆಚ್ಚದ ಉಳಿಕೆ.
  • ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳ ಇಳಿಕೆ.
  • ತಪಾಸಣೆ ಹಾಗೂ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ.

ಇದನ್ನೂ ಓದಿ: Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!

Health insurance importance-ನಾಗರಿಕರು ತಪ್ಪದೇ ಆರೋಗ್ಯ ವಿಮೆ ಮಾಡಿಸಿ!

ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬ ನಾಗರಿಕರು ತಮಗೆ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಆರೋಗ್ಯ ವಿಮೆಯನ್ನು ಹೊಂದಿರಲೇ ಬೇಕಾಗುತ್ತದೆ ಏಕೆಂದರೆ ಈ ವಿಮೆ ಪಾಲಿಸಿಗಳು ಈ ಕೆಳಗಿನ ಪ್ರಯೋಜನಗಳನ್ನು ನಾಗರಿಕರಿಗೆ ಒದಗಿಸುವ ಕಾರಣದಿಂದ.

ವೈದ್ಯಕೀಯ ವೆಚ್ಚಗಳ ರಕ್ಷಣೆ: ಆರೋಗ್ಯ ವಿಮೆಯು ಆಸ್ಪತ್ರೆ ಖರ್ಚು, ಶಸ್ತ್ರಚಿಕಿತ್ಸೆ, ಔಷಧಗಳು ಮತ್ತು ತಪಾಸಣೆಗಳ ವೆಚ್ಚವನ್ನು ಭರಿಸುತ್ತದೆ. ಇದರಿಂದ ದೊಡ್ಡ ಆರ್ಥಿಕ ಹೊರೆ ತಪ್ಪುತ್ತದೆ.

ತುರ್ತು ಸಂದರ್ಭಗಳಲ್ಲಿ ನೆಮ್ಮದಿ: ಆಕಸ್ಮಿಕ ಆರೋಗ್ಯ ಸಮಸ್ಯೆಗಳು (ಹೃದಯಾಘಾತ, ಅಪಘಾತ, ಗಂಭೀರ ರೋಗಗಳು) ಉಂಟಾದಾಗ, ವಿಮೆಯಿಂದ ತಕ್ಷಣದ ಚಿಕಿತ್ಸೆಗೆ ಸಹಾಯವಾಗುತ್ತದೆ.

ನಿಯಮಿತ ಆರೋಗ್ಯ ತಪಾಸಣೆ: ಕೆಲವು ವಿಮಾ ಯೋಜನೆಗಳು ಉಚಿತ ಆರೋಗ್ಯ ತಪಾಸಣೆ, ರೋಗನಿರ್ಣಯ, ಮತ್ತು ಲಸಿಕೆಗಳನ್ನು ಒದಗಿಸುತ್ತವೆ, ಇದರಿಂದ ರೋಗವನ್ನು ಮೊದಲೇ ಗುರುತಿಸಿ ತಡೆಗಟ್ಟಬಹುದು.

ತೆರಿಗೆ ವಿನಾಯಿತಿ: ಭಾರತದಲ್ಲಿ, ಆರೋಗ್ಯ ವಿಮೆಯ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ (ವಾರ್ಷಿಕ ₹25,000 ರಿಂದ ₹1,00,000 ವರೆಗೆ, ಆಧಾರವಾಗಿ).

ಕುಟುಂಬದ ರಕ್ಷಣೆ: ಒಂದೇ ಪಾಲಿಸಿಯಡಿ ಕುಟುಂಬದ ಎಲ್ಲ ಸದಸ್ಯರಿಗೆ ರಕ್ಷಣೆ ಒದಗಿಸಬಹುದು, ಇದರಿಂದ ಎಲ್ಲರ ಆರೋಗ್ಯ ಭದ್ರವಾಗಿರುತ್ತದೆ.

ನಗದು ರಹಿತ ಚಿಕಿತ್ಸೆ: ವಿಮಾ ಕಂಪನಿಗಳ ಜಾಲದ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಲಭ್ಯವಿದೆ, ಇದರಿಂದ ತಕ್ಷಣದ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Health Insurance Plans-ನಾಗರಿಕರಿಗೆ ಕೆಲವು ಪ್ರಮುಖ ಸಲಹೆಗಳು:

ಸರಿಯಾದ ಪಾಲಿಸಿ ಆಯ್ಕೆ: ವಯಸ್ಸು, ಆರೋಗ್ಯ ಸ್ಥಿತಿ, ಕುಟುಂಬದ ಅಗತ್ಯಗಳಿಗೆ ತಕ್ಕಂತೆ ಪಾಲಿಸಿಯನ್ನು ಆಯ್ಕೆ ಮಾಡಿ.

ಕವರೇಜ್ ವಿವರಗಳನ್ನು ಓದಿ: ಯಾವ ರೋಗಗಳು, ಚಿಕಿತ್ಸೆಗಳು, ಮತ್ತು ಆಸ್ಪತ್ರೆಗಳು ಕವರ್ ಆಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪ್ರೀಮಿಯಂ ಮತ್ತು ಕವರೇಜ್ ಹೋಲಿಕೆ: ವಿವಿಧ ವಿಮಾ ಕಂಪನಿಗಳ ಯೋಜನೆಗಳನ್ನು ಹೋಲಿಕೆ ಮಾಡಿ, ಕಡಿಮೆ ವೆಚ್ಚದಲ್ಲಿ ಉತ್ತಮ ಕವರೇಜ್ ಆಯ್ಕೆ ಮಾಡಿ.

ಆರಂಭಿಕ ಆರೋಗ್ಯ ವಿಮೆ: ಆರೋಗ್ಯವಾಗಿರುವಾಗಲೇ ವಿಮೆ ತೆಗೆದುಕೊಂಡರೆ ಕಡಿಮೆ ಪ್ರೀಮಿಯಂ ಮತ್ತು ಹೆಚ್ಚಿನ ಕವರೇಜ್ ಸಿಗುತ್ತದೆ.

ಆರೋಗ್ಯ ವಿಮೆಯಿಲ್ಲದೆ ಆಕಸ್ಮಿಕ ವೈದ್ಯಕೀಯ ವೆಚ್ಚಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಹೀಗಾಗಿ, ಎಲ್ಲರೂ ತಮ್ಮ ಮತ್ತು ಕುಟುಂಬದ ಆರೋಗ್ಯಕ್ಕಾಗಿ ಸೂಕ್ತ ಆರೋಗ್ಯ ವಿಮೆಯನ್ನು ತಪ್ಪದೇ ತೆಗೆದುಕೊಳ್ಳಬೇಕು.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

Best Health Insurance Companies-ಉತ್ತಮ ಆರೋಗ್ಯ ವಿಮೆ ಪಾಲಿಸಿಗಾರಿ ಕಂಪನಿಗಳು:

  • TATA AIG General Insurance
  • Bajaj allianz life insurance
  • Star Health Insurance
  • HDFC Health Insurance
  • Niva Bupa Health Insurance
  • Aditya Birla Health Insurance
  • Manipal Health Insurance

ಹೆಚ್ಚಿನ ಮಾಹಿತಿಗಾಗಿ ವಿಮಾ ಸಲಹೆಗಾರರನ್ನು ಸಂಪರ್ಕಿಸಬಹುದು ಮೊಬೈಲ್ ನಂಬರ್- 8904844740

WhatsApp Group Join Now
Telegram Group Join Now
Share Now: