HomeGovt SchemesBPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ

BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ರೇಷನ್ ಕಾರ್ಡ ರದ್ದು ಮಾಡುತ್ತಿರುವ ಪ್ರಕರಣ ರಾಜಕೀಯ ತೀರುವ ಪಡೆದುಕೊಳ್ಳುತಿದ್ದು ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೇಷನ್ ಕಾರ್ಡ(BPL Card news) ರದ್ದತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ ಅನರ್ಹರಿರುವ 11 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡಗಳಾಗಿ ಬದಲಾವಣೆ ಮಾಡುವ ಕಾರ್ಯಕ್ಕೆ ಅನೇಕ ಪರ-ವಿರ‍ೋದಗಳು ರಾಜ್ಯದಲ್ಲಿ ಕಂಡುಬಂದಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಸ್ಪಷ್ಟನೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

ನಕಲಿ ದಾಖಲೆಗಳನ್ನು ಸಲ್ಲಿಸಿ ವಾರ್ಷಿಕ ಅದಾಯ ಹೆಚ್ಚು ಇರುವವರು ಸಹ ಬಿಪಿಎಲ್ ಕಾರ್ಡ ಪಡೆದಿದ್ದಾರೆ ಇದಲ್ಲದೇ ಅರ್ಥಿಕವಾಗಿ ಸಬಲರಾಗಿರುವವರು ಸಹ ಇನ್ನು ಬಿಪಿಎಲ್ ಕಾರ್ಡ ಅನ್ನೇ ಹೊಂದಿದ್ದು ಇಂತಹ ಕಾರ್ಡದಾರರನ್ನು ಗುರುತಿಸಿ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ ಹೊಂದಿದವರನ್ನು ಎಪಿಎಲ್ ಆಗಿ ಬದಲಾವಣೆ ಮಾಡಲಾಗುತ್ತಿದೆ.

BPL Card cancelation news- ಯಾವುದೇ ರೇಷನ್ ಕಾರ್ಡ ರದ್ದಾಗುವುದಿಲ್ಲ:

ಆಹಾರ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡ ಹೊಂದಲು ಅರ್ಹರಿಲ್ಲದ ಕಾರ್ಡದಾರರನ್ನು ಎಪಿಎಲ್ ಕಾರ್ಡಗೆ ಸೇರ್ಪಡೆ ಮಾಡಲಾಗುತ್ತದೆ ವಿನಃ ಯಾವುದೇ ಕಾರಣಕ್ಕೂ ಸಂಪೂರ್ಣ ರೇಷನ್ ಕಾರ್ಡ ಅನ್ನೇ ರದ್ದು ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

BPL Card-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರದ ಅನರ್ಹರಿಗೆ ಬಿಪಿಎಲ್ ಕಾರ್ಡ ನೀಡುವುದಿಲ್ಲ ಇದರ ಜೊತೆಗೆ ಮಾರ್ಗಸೂಚಿ ಪ್ರಕಾರ ಅರ್ಹರಿರುವ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ ಕೊಡುವುದನ್ನು ತಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ವಾಪಾಸ್‌ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅರ್ಹರ ಯಾವ ಕಾರ್ಡ್‌ಗಳೂ ರದ್ದಾಗುವುದಿಲ್ಲ. ಬಿಪಿಎಲ್‌ ಕಾರ್ಡ್‌ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: New ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಬಿಪಿಎಲ್ ಕಾರ್ಡ ಅನ್ನು ಎಪಿಎಲ್‌ಗೆ ಬದಲಾಯಿಸಲಾಗುತ್ತಿದೆ: ಆಹಾರ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ

ರಾಜ್ಯದಲ್ಲಿ ಯಾವುದೇ ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಬಿಪಿಎಲ್‌ಗೆ ಅರ್ಹರಲ್ಲದವರು, ತೆರಿಗೆದಾರರು, ಅನುಕೂಲಸ್ಥರನ್ನು ಎಪಿಎಲ್‌ಗೆ ಬದಲಾಯಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

BPL Card news

ಇದನ್ನೂ ಓದಿ: PM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ!

BPL Card Guidelines- ಬಿಪಿಎಲ್ ಕಾರ್ಡ ಪಡೆಯಲು ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿಗಳು ಹೀಗಿದೆ:

ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡ ಅನ್ನು ಪಡೆಯಲು ಈ ಕೆಳಗಿನ ನಿಯಮಗಳನ್ನು ಪಾಲನೆ ಮಾಡಿರಬೇಕಾಗುತ್ತದೆ.

ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಕುಟುಂಬಕ್ಕೆ ಬಿಪಿಎಲ್ ಕಾರ್ಡ ಪಡೆಯಲು ಬರುವುದಿಲ್ಲ.

ಸರಕಾರಿ ನೌಕರಿಯಲ್ಲಿರುವವರು ಅನರ್ಹರು.

7.5 ಎಕರೆಗಿಂತ ಹೆಚ್ಚಿಗೆ ಜಮೀನನ್ನು ಹೊಂದಿರುವವರು ಬಿಪಿಎಲ್ ರೇಶನ್ ಕಾರ್ಡ ಪಡೆಯಲು ಅನರ್ಹರು.

ಮನೆ/ಮಳಿಗೆ/ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುವವರು ಅನರ್ಹರು,

ಬಹುರಾಷ್ಟ್ರೀಯ ಕಂಪನಿ, ಉದ್ದಿಮೆ/ಕೈಗಾರಿಕೆಗಳ ನೌಕರರು ಅನರ್ಹರು.

ವೃತ್ತಿಪರ ವರ್ಗಗಳಾದ ವೈದ್ಯರು, ವಕೀಲರುಗಳು, ಲೆಕ್ಕ ಪರಿಶೋಧಕರು ಬಿಪಿಎಲ್ ಕಾರ್ಡ ಪಡೆಯಲು ಅರ್ಹರು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click here

Most Popular

Latest Articles

Related Articles