HomeGovt Schemese-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲು ರಾಜ್ಯ ಸರಕಾರದಿಂದ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು ಈ ನಿಯಮದನ್ವ ಎಲ್ಲಾ ಆಸ್ತಿಗಳಿಗೆ ಇ- ಖಾತಾ(eKhata) ಮಾಡಿಸುವುದನ್ನು ಕಡ್ಡಾಯಗೊಳಿಸಲು ಸರಕಾರದಿಂದ ಕ್ರಮ ಕೈಗೊಳಲಾಗುತ್ತಿದೆ.

ಏನಿದು ಇ- ಖಾತಾ ? ನಿಮ್ಮ ಆಸ್ತಿಗೆ ಇ- ಖಾತಾ ಮಾಡಿಸಿಕೊಳ್ಳುವುದರಿಂದ ಅಗುವ ಪ್ರಯೋಜನಗಳೇನು? ಇದನ್ನು ಎಲ್ಲಿ ಮಾಡಿಸಬೇಕು? ಅಗತ್ಯ ದಾಖಲಾತಿಗಳೇನು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: New ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಪ್ರಸ್ತುತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ(BBMP) ಈಗಾಗಲೇ ಇ- ಖಾತಾ ನೋಂದಣಿ ವ್ಯವಸ್ಥೆ ಆರಂಭವಾಗಿದ್ದು ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ನಿಯಮವನ್ನು ಜಾರಿಗೆ ತರವು ಯೋಜನೆಯನ್ನು ಸರಕಾರದಿಂದ ಹಾಕಿಕೊಳ್ಳಲಾಗಿದೆ.

What is eKhata-ಏನಿದು ಇ- ಖಾತಾ?

ಸಾರ್ವಜನಿಕರ ಆಸ್ತಿ ಮಾಲೀಕತ್ವವನ್ನು ಡಿಜಿಟಲ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಪ್ರಮಾಣ ಪತ್ರ ನೀಡುವುದಾಗಿದ್ದು ಇದರಲ್ಲಿ ಆ ಆಸ್ತಿಯ ಸ್ಥಳದ GPS ಅಂಕಿ-ಅಂಶ ಮತ್ತು ಮಾಲೀಕರ ಪೋಟೋ ಸ್ಥಳದ ಪೋಟೊ ಸೇರಿದಂತೆ ಪ್ರಮುಖ ಮಾಹಿತಿ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿರಲಾಗುತ್ತದೆ.

Final E-Khatha- ಬೆಂಗಳೂರು ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್: Final E-Khatha website

ಇದನ್ನೂ ಓದಿ: WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

E-Khata

BBMP ಯಿಂದ ಇ-ಖಾತಾ ಕುರಿತು ತೆಗೆದುಕೊಂಡು ಪ್ರಸ್ತುತ ಅಗತ್ಯ ಕ್ರಮಗಳ ಮಾಹಿತಿ ಹೀಗಿದೆ:

1) ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗಿದೆ.

2) ಇ ಖಾತಾ ಅಗತ್ಯವಿರುವವರಿಗೆ ಸಹಾಯ ಮಾಡಲು ಬಿಬಿಎಂಪಿಯ 11 ಸಮರ್ಪಿತ ಸಿಬ್ಬಂದಿಗಳನ್ನು ತಕ್ಷಣದ ವಹಿವಾಟು/ನೋಂದಣಿಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ.

3) ಇ-ಖಾತಾ ಪಡೆಯುವ ಸುಲಭ ಮಾಹಿತಿ ನೀಡಲು ಕನ್ನಡ ಮತ್ತು ಇಂಗ್ಲಿಷ್ ವೀಡಿಯೋಗಳು ಲಭ್ಯವಿವೆ. English video – View Now , Kannada video – View Now

4) ಕರಡು ಇ- ಖಾತಾದಲ್ಲಿನ ದೋಷಗಳಿಗಾಗಿ ತಿದ್ದುಪಡಿಗಳನ್ನು ಅನುಮತಿಸಲಾಗಿದೆ.

5) ಮೊದಲ ಬಾರಿಗೆ ಖಾತಾ ಪಡೆಯುತ್ತಿರುವ ಅಪಾರ್ಟ್‌ಮೆಂಟ್‌ಗಳು, ಪಾರ್ಕ್‌ಗಳು, ಸಿಎ ಸೈಟ್‌ಗಳು, ಹೊಸ ಲೇಔಟ್‌ಗಳಲ್ಲಿನ ರಸ್ತೆಗಳು ಇತ್ಯಾದಿಗಳಿಗೆ ಪರಿಹಾರಗಳನ್ನು ಒದಗಿಸಬೇಕು.

ಇದನ್ನೂ ಓದಿ: PM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ!

e-Khata Benefits- ಇ- ಖಾತಾ ಪ್ರಯೋಜನಗಳೇನು?

ಆಸ್ತಿ ಮಾರಾಟಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮೋಸ ಮಾಡುವವರಿಗೆ ಕಡಿವಾಣ ಹಾಕಿದಂತಾಗುತ್ತದೆ.

ಆಸ್ತಿ ನೋಂದಣಿ ಸಮಯವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ.

ಆಸ್ತಿಯ ಮಾಲೀಕರ ವಿವರ ಮತ್ತು ಅವರ ಆಸ್ತಿಯ ಜಾಗದ ನೈಜ ಮಾಹಿತಿಯನ್ನು ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಿರುವುದರಿಂದ ಸುಲಭವಾಗಿ ವಿವರವನ್ನು ಯಾವುದೇ ಸಮಯದಲ್ಲಿ ಪಡೆಯಲು ಸಾಧ್ಯವಾಗುತ್ತದೆ.

Documents for eKhata- ಇ- ಖಾತಾ ಮಾಡಿಸಲು ಬೇಕಾಗುವ ದಾಖಲೆಗಳೇನು ?

ಇ – ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳ ಮಾಹಿತಿ ಈ ಕೆಳಗಿನಂತಿದೆ.

ನಿಮ್ಮ ಆಸ್ತಿ ತೆರಿಗೆ ಪಾವತಿ ಮಾಡಿರುವ ರಶೀದಿ(Tax bill)

ನಿಮ್ಮ ಆಸ್ತಿ ಮಾರಾಟ ಅಥವಾ ನೋಂದಾಯಿತ ಪತ್ರ(Registered Deed)

ಅಸ್ತಿಗೆ ಸಂಬಂಧಪಟ್ಟ ಎಲ್ಲಾ ಮಾಲೀಕರ ಆಧಾರ್ ಕಾರ್ಡ್‌ ಪ್ರತಿ(eKYC based on Aadhar)

ಜಾಗದ ಪೋಟೋ(Property Photo)

ವಿದ್ಯುತ್ ಬಿಲ್ (ವಿದ್ಯುತ್‌ ಬಿಲ್‌)

ಇದನ್ನೂ ಓದಿ: Drone operator training- ಉಚಿತ ಡ್ರೋನ್ ಆಪರೇಟರ್ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಅನ್ವಯಿಸಿದಲ್ಲಿ ಮಾತ್ರ)

ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ (ಅನ್ವಯಿಸಿದಲ್ಲಿ ಮಾತ್ರ)

ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಅನ್ವಯ:

ಮೇಲಿ ತಿಳಿಸಿರುವ ದಾಖಲೆಗಳು ಪ್ರಸ್ತುತ ಬೆಂಗಳೂರು BBMP ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲು ಮಾತ್ರ ಅನ್ವಯವಾಗುತ್ತದೆ ಇತರೆ ಜಿಲ್ಲೆಗಳಲ್ಲಿ ಇನ್ನು ಸಹ ಈ ಯೋಜನೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಬಂದ ಬಳಿಕ ಆ ಸಮಯದಲ್ಲಿ ಒದಗಿಸಬೇಕಾದ ದಾಖಲೆಗಳ ಮಾಹಿತಿಯನ್ನು ನಮ್ಮ ಪುಟದಿಂದ ಪ್ರಕಟಿಸಲಾಗುತ್ತದೆ.

e-Khata helpline- ಇ – ಖಾತಾ ಕುರಿತು ಇನ್ನು ಹೆಚ್ಚಿನ ಅಗತ್ಯ ಮಾಹಿತಿ ಪಡೆಯಲು BBMP ವ್ಯಾಪ್ತಿಯ ಸಹಾಯವಾಣಿ ಸಂಖ್ಯೆಗಳು: 1533 or email: [email protected]

Most Popular

Latest Articles

- Advertisment -

Related Articles