HomeNew postsNew ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

New ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಹೊಸದಾಗಿ ಮದುವೆ ಮಾಡಿಕೊಂಡಿರುವ ನವ ದಂಪತಿಗಳು ಹೊಸ ರೇಷನ್ ಕಾರ್ಡ(New ration card application) ಅನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಸ್ತುತ ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿಯ ಪ್ರಕಾರ ಒಂದು ಕುಟುಂಬಕ್ಕೆ ಒಂದು ಪಡಿತರ ಚೀಟಿ ಪಡೆಯಲು ಅವಕಾಶವಿದ್ದು ಮದುವೆಯಾದ ಬಳಿಕ ನವದಂಪತಿಗಳು ಹೊಸ ರೇಷನ್ ಕಾರ್ಡ ಅನ್ನು ಪಡೆಯುವುದು ಹೇಗೆ? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದ್ದು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರ್ಹ ಅರ್ಜಿದಾರರು ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.

New BPL ration card guidelines- ಹೊಸ BPL ರೇಷನ್ ಕಾರ್ಡ ಪಡೆಯಲು ಆಹಾರ ಇಲಾಖೆಯ ಮಾರ್ಗಸೂಚಿ:

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಆದಾಯ ತೆರಿಗೆ ಪಾವತಿ ಮಾಡವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಕುಟುಂಬದ ಸದಸ್ಯರು ಸರಕಾರಿ ನೌಕರಿಯಲ್ಲಿರಬಾರದು.

ಸಹಕಾರಿ ಸಂಘಗಳ ಖಾಯಂ ಸಿಬ್ಬಂದಿಗಳು ಅರ್ಜಿ ಸಲ್ಲಿಸಲು ಬರುವುದಿಲ್ಲ.

7.5 ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಥಿಕವಾಗಿ ಹಿಂದುಳಿದವರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: PM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ!

ration card

Apply Method- ನವದಂಪತಿಗಳು ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು:

ಮದುವೆಗೂ ಮುಂಚೆ ತಂದೆ-ತಾಯಿಯ ಜೊತೆ ರೇಷನ್ ಕಾರ್ಡ ಹೊಂದಿರುವವರು ಮದುವೆಯ ನಂತರ ನವದಂಪತಿಗಳು ಪ್ರತ್ಯೇಕ ರೇಷನ ಕಾರ್ಡ ಅನ್ನು ಪಡೆಯಲು ಈಗಾಗಲೇ ಇರುವ ರೇಶನ್ ಕಾರ್ಡನಿಂದ ತಮ್ಮ ಹೆಸರುಗಳನ್ನು ತೆಗೆದು ಹಾಕಬೇಕು.

ನಂತರ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

BPL ಮತ್ತು EPL ಕಾರ್ಡ ಪಡೆಯಲು ನಿಮ್ಮ ಕುಟುಂಬದ ಆದಾಯದ ಒಂದು ವರ್ಷದ ಆಧಾರದ ಮೇಲೆ ನಿಮಗೆ ಯಾವ ಕಾರ್ಡ ನೀಡಬೇಕು ಎಂದು ಇಲಾಖೆಯಿಂದ ನಿರ್ಧಾರ ಮಾಡಲಾಗುತ್ತದೆ.

ಇದನ್ನೂ ಓದಿ: Drone operator training- ಉಚಿತ ಡ್ರೋನ್ ಆಪರೇಟರ್ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Documents- ಅರ್ಜಿ ಸಲ್ಲಿಸಲು ದಾಖಲೆಗಳು:

ಆಧಾರ್ ಕಾರ್ಡ್/Aadar Card

ವಿಳಾಸ ದೃಡೀಕರಣ ಪುರಾವೆ/Address Proof

ಪಾಸ್ ಪೋರ್ಟ್ ಫೋಟೋ/Photo

ಆದಾಯ ಪ್ರಮಾಣ ಪತ್ರ (Income certificate)

ಮನೆಯ ವಿದ್ಯುತ್ ಬಿಲ್

ಕಾರ್ಡ ನಲ್ಲಿ ಸೇರಿಸಬೇಕಾದ ಸದಸ್ಯರ ಆಧಾರ್ ಕಾರ್ಡ ಪ್ರತಿ

ಅರ್ಜಿದಾರರ ಮೊಬೈಲ್ ಸಂಖ್ಯೆ/Mobile Number

ಇದನ್ನೂ ಓದಿ: APL card cancellation- ರೇಷನ್ ಕಾರ್ಡ್ ರದ್ದತಿ ಕುರಿತು ಆಹಾರ ಇಲಾಖೆಯಿಂದ ಮಹತ್ವದ ಪ್ರಕಟಣೆ!

Ration card application status- ಆನ್ಲೈನ್ ನಲ್ಲಿ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು?

ಅರ್ಹ ಅರ್ಜಿದಾರರು ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಹೊಸ ರೇಷನ್ ಕಾರ್ಡ ಪಡೆಯಲು ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.

Step-1: Ration card application Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ration card Status

Step-2: ಇದಾದ ನಂತರ ಇಲ್ಲಿ “e-Status” ಬಟನ್ ಮೇಲೆ ಕ್ಲಿಕ್ ಮಾಡಿ “New/Existing RC Request Status” ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

Step-3: ತದನಂತರ ಈ ಪೇಜ್ ನಲ್ಲಿ 3 ಆಯ್ಕೆಗಳು ತೋರಿಸುತ್ತವೆ ಇಲ್ಲಿ ನಿಮ್ಮ ಜಿಲ್ಲೆಯ ಹೆಸರು ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಉಪಯುಕ್ತ ಮಾಹಿತಿ:

ಸಹಾಯವಾಣಿ ಸಂಖ್ಯೆ: 18004259339 ಮತ್ತು 1967

ಇಲಾಖೆಯ ಅಧಿಕೃತ ವೆಬ್ಸೈಟ್: Click here

Most Popular

Latest Articles

- Advertisment -

Related Articles