HomeAgricultureWHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

ನಮ್ಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಬಹು ಮುಖ್ಯ ಬೆಳೆಯಾದ ಅಡಿಕೆ(Arecanut) ಕುರಿತು ವಿಶ್ವ ಆರೋಗ್ಯ ಸಂಸ್ಥೆಯ(WHO) ಅಂಗ ಸಂಸ್ಥೆಯಾದ ಕ್ಯಾನ್ಸರ್ ಸಂಶೋಧನ ಸಂಸ್ಥೆಯು ಅಡಿಕೆಯು ಕ್ಯಾನ್ಸರ್‌ಕಾರಕ ಎಂದು ಮತ್ತೆ ವರದಿ ಮಾಡಿದ್ದು ಈ ಬೆಳೆಯನ್ನು ನಿಯಂತ್ರಣ ಮಾಡಲು ಶಿಪಾರಸ್ಸು ಮಾಡಿದೆ.

ಈ ವರದಿಯು ಅಡಿಕೆ ಬೆಳೆಯುವ ಪ್ರದೇಶದ ರೈತರಲ್ಲಿ ಅತಂಕ ಮೂಡಿಸಿದೆ ಅಡಿಕೆ ಬೆಳೆಯು ರೈತಾಪಿ ವರ್ಗದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ಕೊಡಬಲ್ಲ ಬೆಳೆಯಾಗಿದ್ದು ವರ್ಷದಿಂದ ವರ್ಷಕ್ಕೆ ಬೆಳೆಯ ಪ್ರದೇಶವು ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗುತ್ತಿದೆ.

ಇದನ್ನೂ ಓದಿ: PM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ!

ವಿಶ್ವ ಆರೋಗ್ಯ ಸಂಸ್ಥೆಯ(WHO) ಅಂಗ ಸಂಸ್ಥೆಯು ಅಡಿಕೆ ಕುರಿತು ಯಾವ ರೀತಿಯ ವರದಿಯನ್ನು ನೀಡಿದೆ? ಅಡಿಕೆ ಬೆಳೆಯ ಸಂಬಂಧಪಟ್ಟ ನಮ್ಮ ರಾಜ್ಯದ ಸಂಸ್ಥೆಗಳು ಈ ಕುರಿತು ಯಾವ ಕ್ರಮವನ್ನು ಕೈಗೊಂಡಿರುತ್ತವೆ ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ(WHO) ಅಂಗ ಸಂಸ್ಥೆ ವರದಿ ವಿವರ ಹೀಗಿದೆ:

ವಿಶ್ವ ಆರೋಗ್ಯ ಸಂಸ್ಥೆಯ ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆಯಂಡ್‌ ಕ್ಯಾನ್ಸರ್‌(IARC) ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಅಡಿಕೆ ಕುರಿತು ಅತಂಕದ ವರದಿಯನ್ನು ಪ್ರಕಟಿಸಿದ್ದು ಇದು ಅಡಿಕೆ ಬೆಳೆಗಾರರ ನಿದ್ದೆಗೆಡಿಸುವಂತೆ ಮಾಡಿದೆ. ಅಡಿಕೆ ಭವಿಷ್ಯವನ್ನು ಪ್ರಶ್ನಿಸುವಂತೆ ಮಾಡಿದೆ.

ವರದಿಯಲ್ಲಿ ಅಡಿಕೆಯು(adike) ಕ್ಯಾನ್ಸರ್ ಕಾರಕ ಎಂದು ತಿಳಿಸಿದ್ದು ಈ ಬೆಳೆಯನ್ನು ನಿಯಂತ್ರಣ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.

ಪ್ರಸ್ತುತ ಬಳಕೆಯಾಗುತ್ತಿರುವ ಅಡಿಕೆಯನ್ನು ನಿಯಂತ್ರಣ ಮಾಡಿದರೆ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Drone operator training- ಉಚಿತ ಡ್ರೋನ್ ಆಪರೇಟರ್ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

adike

ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆಯಂಡ್‌ ಕ್ಯಾನ್ಸರ್‌(IARC) ವರದಿ : CLICK HERE

ಅಡಿಕೆ ಆರೋಗ್ಯಕರ ಎಂದು ಸುಪ್ರೀಂಕೋರ್ಟ ನಲ್ಲಿ ಪ್ರಕರಣ ನಡೆಯುತ್ತಿದೆ:

ಅಡಿಕೆ ಬೆಳೆಗಾರರು ಮತ್ತು ಇದಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಅಡಿಕೆ ಬಳಕೆಯಿಂದ ಯಾವುದೇ ಕ್ಯಾನ್ಸರ್ ಬರುವುದಿಲ್ಲ ಅಡಿಕೆಯನ್ನು ಸೇವನೆ ಮಾಡುವುದರಿಂದ ಯಾವುದೇ ಬಗ್ಗೆಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಸಾಬೀತುಪಡಿಸುವ ಕುರಿತಂತೆ ಈಗಾಗಲೇ ನಮ್ಮ ದೇಶದ ಸುಪ್ರೀಂಕೋರ್ಟ ನಲ್ಲಿ ಪ್ರಕರಣ ನಡೆಯುತ್ತಿದೆ.

ಅಡಕೆ ಬೆಳೆಗೆ ಕಡಿವಾಣ ಹಾಕುವಂತೆ ಶಿಫಾರಸು:

ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆಯಂಡ್‌ ಕ್ಯಾನ್ಸರ್‌(IARC) ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನೇ ನಿಯಂತ್ರಿಸುವಂತೆ ಸೂಚಿಸಿದ್ದು. ಹೊಗೆ ರಹಿತ ತಂಬಾಕು(ತಿಂದು ಉಗುಳುವ) ಮತ್ತು ಅಡಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್‌ ತಡೆಗಟ್ಟಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: APL card cancellation- ರೇಷನ್ ಕಾರ್ಡ್ ರದ್ದತಿ ಕುರಿತು ಆಹಾರ ಇಲಾಖೆಯಿಂದ ಮಹತ್ವದ ಪ್ರಕಟಣೆ!

ಬಾಯಿ ಕ್ಯಾನ್ಸರ್‌ ಪ್ರಕರಣ ಅಂಕಿ-ಅಂಶ:

ತಂಬಾಕು, ಗುಟ್ಕಾ ಹಾಗೂ ಅಡಕೆ ಉತ್ಪನ್ನಗಳ ರೀತಿಯ ಹೊಗೆರಹಿತ ತಂಬಾಕು ಉತ್ಪನ್ನಗಳ ಅಧಿಕವಾಗಿ ಬಳಕೆ ಮಾಡುವುದರಿಂದ ಏಷ್ಯಾ ಖಂಡದ ದೇಶಗಳಲ್ಲಿ ಭಾರತದಲ್ಲೇ ಅತ್ಯಧಿಕ ಬಾಯಿ ಕ್ಯಾನ್ಸರ್‌ ಪ್ರಕರಣ ದಾಖಲಾಗಿವೆ ಎಂದು ಕ್ಯಾನ್ಸರ್‌ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್‌ ರುಮ್ಗೇ ಅವರು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಹೊಗೆರಹಿತ ತಂಬಾಕು ಮತ್ತು ಅಡಕೆ ಬಳಕೆಯಿಂದ ಉಲ್ಬಣವಾಗುವ ಎಲ್ಲ ಬಾಯಿ ಕ್ಯಾನ್ಸರ್‌ ಪ್ರಕರಣಗಳಲ್ಲಿ ಭಾರತದಲ್ಲಿ 83,400, ಬಾಂಗ್ಲಾದೇಶ 9,700, ಪಾಕಿಸ್ತಾನ 8,900, ಚೀನಾ 3,200, ಮ್ಯಾನ್ಮಾರ್‌ 1,600, ಶ್ರೀಲಂಕಾ 1,300, ಇಂಡೋನೇಷ್ಯಾ 990 ಹಾಗೂ ಥಾಯ್‌ಲ್ಯಾಂಡ್‌ನಲ್ಲಿ 785 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದೆ.

Most Popular

Latest Articles

Related Articles