HomeGovt SchemesPM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ...

PM Awas Yojana- ಪಿಎಂ ಆವಾಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ!

ವಸತಿ ರಹಿತರಿಗೆ ಪಿಎಂ ಆವಾಸ್ ಯೋಜನೆಯಡಿ(PM Awas Yojana) ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಈ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್ (PMAY) 2.0 ಯೋಜನೆಯಡಿಯಲ್ಲಿ ಕೇಂದ್ರ ಸರಕಾರದಿಂದ ವಸತಿ ರಹಿತ ನಾಗರಿಕರಿಗೆ 3 ಕೋಟಿ ಹೆಚ್ಚುವರಿ ಮನೆ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹ ಫಲಾನುಭವಿಗಳು ಅನುಸರಿಸಬೇಕಾದ ಕ್ರಮದ ಕುರಿತು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Drone operator training- ಉಚಿತ ಡ್ರೋನ್ ಆಪರೇಟರ್ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಪ್ರಧಾನ ಮಂತ್ರಿ ಆವಾಸ್ (Pradhan Mantri Awas Yojana) 2.0 ಯೋಜನೆಯ ಪ್ರಯೋಜನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅರ್ಹರು ಯಾರು? ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕೆಳಗೆ ತಿಳಿಸಲಾಗಿದೆ.

Pradhan Mantri Awas Yojana- ಪ್ರಧಾನ ಮಂತ್ರಿ ಆವಾಸ್ (PMAY) ಯೋಜನೆ 2.0:

ಪ್ರಧಾನ ಮಂತ್ರಿ ಆವಾಸ್ (PMAY) ಯೋಜನೆಯಡಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದುವ ಕನಸನ್ನ ನನಸಾಗಿಸಲು ಒಂದು ಉತ್ತಮ ಅವಕಾಶ ನೀಡುತ್ತದೆ. ಈ ಯೋಜನೆಯಡಿ ಅರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಜನರಿಗೆ ಮನೆಗಳನ್ನ ಒದಗಿಸುವ ಗುರಿಯನ್ನು ಸರಕಾರ ಹೊಂದಿದೆ.

25 ಜೂನ್ 2015 ರಿಂದ ಈ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದ್ದು ಇಲ್ಲಿಯವರೆಗೆ ಅನೇಕ ಜನರಿಗೆ ತಮ್ಮದೇ ಅದ ಸ್ವಂತ ಮನೆಯನ್ನು ಹೊಂದಲು ಸಹಕಾರಿಯಾಗಿದೆ. ನಮ್ಮ ದೇಶದಲ್ಲಿ ಎಲ್ಲಾ ವರ್ಗದ ಜನರಿಗೆ ಸ್ವಂತ ಮನೆಯನ್ನು(Home) ಕಟ್ಟಿಕೊಳ್ಳಬೇಕು ಎನ್ನುವ ಕನಸು ಹೊಂದಿರುತ್ತಾರೆ ಇಂತಹ ಜನರಿಗೆ ಈ ಯೋಜನೆಯ ತುಂಬಾ ಉಪಕಾರಿಯಾಗಿದೆ ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ, ಈ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ ರೂ ಮೀಸಲಿಡಲಾಗಿದೆ.

ಇದನ್ನೂ ಓದಿ: APL card cancellation- ರೇಷನ್ ಕಾರ್ಡ್ ರದ್ದತಿ ಕುರಿತು ಆಹಾರ ಇಲಾಖೆಯಿಂದ ಮಹತ್ವದ ಪ್ರಕಟಣೆ!

Who can apply for PM Awas Yojana-ಅರ್ಜಿ ಸಲ್ಲಿಸಲು ಅರ್ಹರು:

ಪ್ರಸ್ತುತ ಈ ಯೋಜನೆಯ ಅರ್ಹತಾ ಮಾನದಂಡದಲ್ಲಿ ಜನಸ್ನೇಹಿ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಕ್ರಮದಿಂದ ಹೆಚ್ಚಿನ ಜನರು ಯೋಜನೆಯ ಪ್ರಯೋಜನಗಳನ್ನ ಸಾಧ್ಯವಾಗಲಿದೆ.

ಈ ಮೊದಲು ಮಾಸಿಕ ಆದಾಯ ರೂ 10,000/- ರೂಪಾಯಿ ಇರುವ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿದ್ದರು. ಅದರೆ ಈಗ ಈ ಮಿತಿಯನ್ನು ತಿಂಗಳಿಗೆ ರೂ 15,000/- ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಇನ್ನು ಹೆಚ್ಚಿನ ಜನರು ಸಹ ಈ ಯೋಜನೆಯ ಲಾಭ ಪಡೆಯಬಹುದು.

ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.

ಅರ್ಜಿದಾರರು ವಸತಿ ರಹಿತರಾಗಿದ್ದು ತಮ್ಮ ಹೆಸರಿನಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು.

ಇದನ್ನೂ ಓದಿ: Mini tractor subsidy- ಶೇ 90% ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ!

, PM Awas Yojana

PM Awas Yojana Online application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ PM Awas Yojana Online application ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇಲ್ಲಿ Click to Proceed ಬಟನ್ ಮೇಲೆ ಕ್ಲಿಕ್ ಮಾಡಿ “DocumentS Required” ವಿವರ ತೋರಿಸುತ್ತದೆ ಇಲ್ಲಿ ಕೆಳಗೆ Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Eligibility Check” ಕಾಲಂ ತೆರೆದುಕೊಳ್ಳುತ್ತದೆ ಇಲ್ಲಿ Eligibility Check ಬಟನ್ ಮೇಲೆ ಮುಂದುವರೆಯಬೇಕು.

ಇದನ್ನೂ ಓದಿ: Bele vime amount-ಸರಕಾರದಿಂದ 2100 ಕೋಟಿ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ವರ್ಗಾವಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ!

home

Step-3: ನಂತರ ಈ ಪೇಜ್ ನಲ್ಲಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ “Generate OTP” ಬಟನ್ ಮೇಲೆ ಕ್ಲಿಕ್ ಮಾಡಿ OTP ಪಡೆದು ಇಲ್ಲಿ ನಮೂದಿಸಿ ನಂತರ ಪೇಜ್ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

PM Awas Yojana documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1)ಆಧಾರ್ ಕಾರ್ಡ ಪ್ರತಿ/Applicant’s Aadhaar details (Aadhaar number, name as per Aadhaar, date of birth).
2) ಕುಟುಂಬ ಸದಸ್ಯರ ಆಧಾರ್ ವಿವರ/Aadhaar details of family members (Aadhaar number, name as per Aadhaar, date of birth).
3) ಬ್ಯಾಂಕ್ ಪಾಸ್ ಬುಕ್ ಪ್ರತಿ/Active bank account details of the applicant (account number, bank name, branch, IFSC code) linked with Aadhaar.
4) ಆದಾಯ ಪ್ರಮಾಣ ಪತ್ರ/Income proof certificate
5) ಜಾತಿ ಪ್ರಮಾಣ ಪತ್ರ/Caste certificate (In case of SC, ST or OBC).
6) ಜಾಗದ ದಾಖಲೆ/Land document (In case of BLC vertical).

ಇದನ್ನೂ ಓದಿ: Uchita holige yantra-ಕೇಂದ್ರದಿಂದ ಮಹಿಳೆಯರಿಗೆ ಸಿಹಿ ಸುದ್ದಿ! ಉಚಿತ ಹೊಲಿಗೆ ಯಂತ್ರ ಪಡೆಯಲು ಅವಕಾಶ!

PM Awas Yojana guidelines-ಈ ಯೋಜನೆಯ ಅಧಿಕೃತ ಮಾರ್ಗಸೂಚಿ: Download Now

Most Popular

Latest Articles

Related Articles