Diploma Admission-2025: ಸರ್ಕಾರಿ ಕೋಟಾದಡಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

May 8, 2025 | Siddesh
Diploma Admission-2025: ಸರ್ಕಾರಿ ಕೋಟಾದಡಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಸರ್ಕಾರಿ ಕೋಟಾದಡಿ ಡಿಪ್ಲೋಮಾ ಶಿಕ್ಷಣವನ್ನು(Diploma Admission-2025) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ತಾಂತ್ರಿಕ ಶಿಕ್ಷಣ ಇಲಾಖೆಯ(Diploma Seat) 2025-26ನೇ ಸಾಲಿಗೆ ರಾಜ್ಯದ ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿನ ಅನುದಾನಿತ ಕೋರ್ಸುಗಳಿಗೆ ಹಾಗೂ ಖಾಸಗಿ ಪಾಲಿಟೆಕ್ನಿಕ್ಗಳು ಸ್ವ-ಇಚ್ಛೆಯಿಂದ ಆದ್ಯರ್ಪಣೆ ಮಾಡಿರುವ ಸೀಟುಗಳಿಗೆ ಎರಡು ವಿಧಾನದಲ್ಲಿ ಮೆರಿಟ್ ಆಧಾರಿತ ಆನ್ ಲೈನ್ ಮತ್ತು ಮೆರಿಟ್ ಆಧಾರಿತ ಆಫ್ಲೈನ್ ಮೂಲಕ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ / ತತ್ಸಮಾನ ಪರೀಕ್ಷೆಯಲ್ಲಿ ಉತ್ರ್ತೀಣರಾಗಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Free Computer Training-ಉಚಿತ ವಸತಿಸಹಿತ 45 ದಿನಗಳ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಗೆ ಅರ್ಜಿ ಆಹ್ವಾನ!

SSLC ಪೂರ್ಣಗೊಳಿಸಿದ ನಂತರ ಡಿಪ್ಲೋಮಾ ವಿದ್ಯಾಭ್ಯಾಸವನ್ನು ಮಾಡಲು ಆಸ್ತಕಿಯನ್ನು ಹೊಂದಿರುವ ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶವಿದ್ದು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

Diploma Application-ಮೆರಿಟ್ ಆಧಾರಿತ ಆನ್ಲೈನ್ ಪ್ರವೇಶಾತಿ ಪ್ರಕ್ರಿಯೆ:

ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ಗಳ (ಅನುದಾನಿತ ಕೋರ್ಸುಗಳು) ಕೋರ್ಸುಗಳಿಗೆ ಹಾಗೂ ಖಾಸಗಿ ಪಾಲಿಟೆಕ್ನಿಕ್ಗಳು ಸ್ವ-ಇಚ್ಛೆಯಿಂದ ಸರ್ಕಾರಕ್ಕೆ ಆಧ್ಯರ್ಪಣೆ ಮಾಡಿರುವ ಕೋರ್ಸುಗಳಿಗೆ (ಎಸ್.ಎನ್.ಕ್ಯೂ ಸೀಟುಗಳು ಸೇರಿ) ಮಾತ್ರ ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಛಾನುಸಾರ ಆದ್ಯತಾ ಪಟ್ಟಿಯಲ್ಲಿ (Priority Sheet) ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿಬೇಕು.

ಒಂದೇ ಅರ್ಜಿಯನ್ನು ಸಮೀಪ ಇರುವ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರಿಗೆ ಸಲ್ಲಿಸುವುದು. ಅಭ್ಯರ್ಥಿಗಳು ನೀಡುವ ಆಧ್ಯತೆಯನುಸಾರವಾಗಿ ಮೆರಿಟ್ ಹಾಗೂ ರೋಷ್ಟರ್ನುಗುಣವಾಗಿ ಆನ್ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.

ಇದನ್ನೂ ಓದಿ: Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

Last Date For Application- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ www.dtetech.karnataka.gov.in/kartechnical ನಿಂದ ಪಡೆದು, 2025ನೇ 15 ಮೇ 2025 ಒಳಗಾಗಿ ಸಲ್ಲಿಸುವುದು.

Diploma Admission Method-ಮೆರಿಟ್ ಹಾಗೂ ರೋಷ್ಟರ್ಗೆ ಅನುಗುಣವಾಗಿ ಆಫ್ಲೈನ್ ಪ್ರವೇಶಾತಿ ಪ್ರಕ್ರಿಯೆ:

ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ಗಳ (ಅನುದಾನಿತ ಕೋರ್ಸುಗಳು) ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ಮೆರಿಟ್ ಹಾಗೂ ರೋಷ್ಠರ್ಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರ ಹಂತದಲ್ಲಿ ಆಫ್ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.

ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ಗಳಿಂದ ಕಛೇರಿ ವೇಳೆಯಲ್ಲಿ ಪಡೆಯಬಹುದು ಅಥವಾ ತಾಂತ್ರಿಕ ಇಲಾಖೆಯ ಅಧಿಕೃತ ಜಾಲತಾಣ www.dtek.karnataka.gov.in or www.dtetech.karnataka.gov.in/kartechnical ಗೆ ಸಂಪರ್ಕಿಸಬಹುದಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!

Official Website-ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ- Click here
Diploma Admission Guidelines-ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now

Diploma Admission-2025

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ವಿದ್ಯಾರ್ಥಿಯ SSLC ಅಂಕಪಟ್ಟಿ
ಆಧಾರ್ ಕಾರ್ಡ ಪ್ರತಿ
ಪೋಟೋ
ನಿವಾಸಿ ದೃಡೀಕರಣ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಇದನ್ನೂ ಓದಿ: Morarji College Admission-ಉಚಿತ ಮೊರಾರ್ಜಿ ಪಿಯು ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ!

After Diploma Opportunities-ಡಿಪ್ಲೋಮಾ ನಂತರ ಯಾವೆಲ್ಲ ಅವಕಾಶಗಳು ಇವೆ?

ಡಿಪ್ಲೋಮಾ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳು ಲಭ್ಯವಿವೆ. ಇವುಗಳನ್ನು ಕೆಲವು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು.

1) ಉದ್ಯೋಗ ಅವಕಾಶಗಳು:

ತಾಂತ್ರಿಕ ಕ್ಷೇತ್ರಗಳು: ಡಿಪ್ಲೋಮಾ ಇನ್ ಇಂಜಿನಿಯರಿಂಗ್ (ಮೆಕಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಇತ್ಯಾದಿ) ಮಾಡಿದವರಿಗೆ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಸೈಟ್ ಸೂಪರ್‌ವೈಸರ್ ಮುಂತಾದ ಹುದ್ದೆಗಳಿಗೆ ಅವಕಾಶವಿದೆ.

ಕಂಪನಿಗಳು: TCS, Wipro, L&T, BHEL, BEL, ರೈಲ್ವೆ, PWD, ರಾಜ್ಯ ಸರ್ಕಾರದ ಇಲಾಖೆಗಳು, ಇತ್ಯಾದಿ.

ಗುತ್ತಿಗೆ ಆಧಾರಿತ ಕೆಲಸ: ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸೈಟ್ ಕೆಲಸ, ಮೆಕಾನಿಕಲ್‌ನಲ್ಲಿ ಉತ್ಪಾದನಾ ಘಟಕಗಳಲ್ಲಿ ಗುತ್ತಿಗೆ ಕೆಲಸ.

ಸ್ಟಾರ್ಟ್‌ಅಪ್‌ಗಳು: ಟೆಕ್ ಸ್ಟಾರ್ಟ್‌ಅಪ್‌ಗಳಲ್ಲಿ ಡಿಪ್ಲೋಮಾ ಹೊಂದಿರುವವರಿಗೆ ಕಿರಿಯ ರೋಲ್‌ಗಳಿಗೆ ಬೇಡಿಕೆಯಿದೆ.

ಇದನ್ನೂ ಓದಿ: Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ!

2) ಉನ್ನತ ಶಿಕ್ಷಣ:

B.E./B.Tech: ಡಿಪ್ಲೋಮಾ ನಂತರ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್‌ನ ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದು (CET ಅಥವಾ ಇತರ ಪ್ರವೇಶ ಪರೀಕ್ಷೆಗಳ ಮೂಲಕ).

AMIE: Associate Member of the Institution of Engineers, ಇದು ಡಿಪ್ಲೋಮಾ ಹೊಂದಿರುವವರಿಗೆ B.E.ಗೆ ಸಮಾನವಾದ ಅವಕಾಶ.

BBA/BCA: ವಾಣಿಜ್ಯ ಅಥವಾ ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ಈ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.

ಸರ್ಟಿಫಿಕೇಶನ್ ಕೋರ್ಸ್‌ಗಳು: AutoCAD, PLC, CNC, Cloud Computing, Data Science, Ethical Hacking, ಇತ್ಯಾದಿ ಕೋರ್ಸ್‌ಗಳ ಮೂಲಕ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

3) ಸ್ವಂತ ವ್ಯವಹಾರ/ಉದ್ಯಮ:

ಗುತ್ತಿಗೆದಾರಿಕೆ: ಸಿವಿಲ್ ಡಿಪ್ಲೋಮಾದವರು ಸಣ್ಣ ಗುತ್ತಿಗೆ ಕಾಮಗಾರಿಗಳನ್ನು ಪ್ರಾರಂಭಿಸಬಹುದು.

ಸರ್ವಿಸ್ ಸೆಂಟರ್: ಎಲೆಕ್ಟ್ರಾನಿಕ್ಸ್ ಅಥವಾ ಮೆಕಾನಿಕಲ್ ಡಿಪ್ಲೋಮಾದವರು ರಿಪೇರಿ ಸೆಂಟರ್ ತೆರೆಯಬಹುದು.

ತರಬೇತಿ ಕೇಂದ್ರ: ತಮ್ಮ ಕೌಶಲ್ಯವನ್ನು ಬಳಸಿ ಕಿರಿಯ ವಿದ್ಯಾರ್ಥಿಗಳಿಗೆ ತರಬೇತಿ ಕೊಡಬಹುದು.

4) ಸರ್ಕಾರಿ ಉದ್ಯೋಗ:

ಪರೀಕ್ಷೆಗಳು: RRB JE, SSC JE, KPSC, UPSC (ಕಿರಿಯ ಇಂಜಿನಿಯರ್), DRDO, ISRO, HAL, ಇತ್ಯಾದಿಗಳಿಗೆ ತಯಾರಿ.

ಗ್ರಾಮೀಣ ಅವಕಾಶಗಳು: ಗ್ರಾಮ ಪಂಚಾಯತ್, ಜಲ ಸಂರಕ್ಷಣಾ ಇಲಾಖೆ, ವಿದ್ಯುತ್ ಇಲಾಖೆಯಲ್ಲಿ ಕಿರಿಯ ಹುದ್ದೆಗಳು.

5) ವಿದೇಶದಲ್ಲಿ ಅವಕಾಶಗಳು:

ಗಲ್ಫ್ ರಾಷ್ಟ್ರಗಳು, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಡಿಪ್ಲೋಮಾ ಹೊಂದಿರುವ ತಾಂತ್ರಿಕ ವೃತ್ತಿಪರರಿಗೆ ಬೇಡಿಕೆಯಿದೆ (ವಿಶೇಷವಾಗಿ ಎಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್).

IELTS/TOEFL ಪರೀಕ್ಷೆ ಬರೆದು ವಿದೇಶದಲ್ಲಿ ಶಿಕ್ಷಣ ಅಥವಾ ಉದ್ಯೋಗಕ್ಕೆ ತೆರಳಬಹುದು.

ಸಲಹೆ:

ಕೌಶಲ್ಯ ಅಭಿವೃದ್ಧಿ: ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ ಮತ್ತು ಸಾಫ್ಟ್ ಸ್ಕಿಲ್ಸ್ (ಸಂವಹನ, ತಂಡದ ಕೆಲಸ) ಕಲಿಯಿರಿ.

ನೆಟ್‌ವರ್ಕಿಂಗ್: LinkedIn, ಜಾಬ್ ಪೋರ್ಟಲ್‌ಗಳಾದ Naukri.com, Indeed ಮೂಲಕ ಅವಕಾಶಗಳನ್ನು ಶೋಧಿಸಿ.

ಇಂಟರ್ನ್‌ಶಿಪ್: ಕೌಶಲ್ಯ ಮತ್ತು ಅನುಭವ ಪಡೆಯಲು ಇಂಟರ್ನ್‌ಶಿಪ್‌ಗೆ ಸೇರಿಕೊಳ್ಳಿ.

ನಿಮ್ಮ ಡಿಪ್ಲೋಮಾ ವಿಷಯ ಮತ್ತು ಆಸಕ್ತಿಯನ್ನು ಆಧರಿಸಿ, ಈ ಅವಕಾಶಗಳಲ್ಲಿ ಯಾವುದು ಸೂಕ್ತವೆಂದು ಆಯ್ಕೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Share Now: