- Advertisment -
HomeGovt SchemesEducation Assistance-ವಿದ್ಯಾರ್ಥಿಗಳಿಗೆ ₹20 ಸಾವಿರದ ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ!

Education Assistance-ವಿದ್ಯಾರ್ಥಿಗಳಿಗೆ ₹20 ಸಾವಿರದ ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ!

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ(Karnataka Labour Board) ಕಾರ್ಮಿಕರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಪಡೆಯಲು ಅರ್ಥಿಕವಾಗಿ(Education Assistance) ನೆರವು ನೀಡಲು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರತಿ ವರ್ಷವು ಸಹ ಈ ಮಂಡಳಿಯಿಂದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು(Education Assistance Amount) ನೀಡಲಾಗುತ್ತದೆ ಇದರಂತೆ ಈ ವರ್ಷವು ಸಹ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Free Bus Pass-ಈ ವರ್ಗದರಿಗೆ ಉಚಿತ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ(Labour Board) ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳೇನು? ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿ(Education Loan) ಸಲ್ಲಿಸುವುದು ಹೇಗೆ? ಅಗತ್ಯ ದಾಖಲಾತಿ ಮಾಹಿತಿ ಸೇರಿದಂತೆ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Education Assistance Amount-ಮಂಡಳಿಯಿಂದ ಎಷ್ಟು ಪ್ರೋತ್ಸಾಹಧನ ಪಡೆಯಬಹುದು?

ವಿದ್ಯಾರ್ಥಿಯ ಶಿಕ್ಷಣ ಆಧರಿಸಿ ವಾರ್ಷಿಕವಾಗಿ 6,000 ದಿಂದ 20,000 ರೂ.ವರೆಗೂ ಪ್ರೋತ್ಸಾಹ ಧನ ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ.

ಇದನ್ನೂ ಓದಿ: VA Selection List- 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ!

Labour Department Scheme-ಅರ್ಜಿ ಸಲ್ಲಿಸಲು ಆಸ್ತಕಿ ಹೊಂದಿರುವ ಅರ್ಹ ವಿದ್ಯಾರ್ಥಿಗಳಿಗೆ ಮಂಡಳಿಯ ಸೂಚನೆಗಳು:

1) ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗುವುದು.

2) ಪಾಸ್‌ಬುಕ್ ಜೆರಾಕ್ಸ್ ಪ್ರತಿ ಲಗತ್ತಿಸುವಾಗ Account Number ಮತ್ತು IFSC Code ಸ್ಪಷ್ಟವಾಗಿ ಕಾಣುವಂತಿರಬೇಕು. ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3) SSLC ಮತ್ತು PUC ಅಂಕಪಟ್ಟಿಯಲ್ಲಿನ ವಿವರಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

Education Loan

4) ಪದವಿ, ಸ್ನಾತಕೋತ್ತರ ಮತ್ತು ಇಂಜೀನಿಯರಿಂಗ್ & ಮೆಡಿಕಲ್ ವಿದ್ಯಾರ್ಥಿಗಳ ಅಂಕಪಟ್ಟಿಗಳ ವಿವರಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಮತ್ತು ಹಿಂದಿನ ಎರಡು ಸೆಮಿಸ್ಟರ್‌ಗಳ ಅಂಕಪಟ್ಟಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5) ವಿದ್ಯಾರ್ಥಿ, ತಂದೆ, ತಾಯಿ ಈ ಮೂರು ಜನರ ಆಧಾರ್ ಕಾರ್ಡ್ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದಲ್ಲಿ ಅಥವಾ ತಪ್ಪಾಗಿ ಪಿ.ಡಿ.ಎಫ್. ಅಪ್‌ ಲೋಡ್ ಮಾಡಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.

6) ತಂದೆ ಅಥವಾ ತಾಯಿ ಮರಣ ಹೊಂದಿದ್ದಲ್ಲಿ, ಅವರ ಮರಣ ಪ್ರಮಾಣ ಪತ್ರ ಅಪ್‌ಲೋಡ್ ಮಾಡಬೇಕು. ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

Online Application For Education Assistance-ಆನ್ಲೈನ್ ಮೂಲಕ ಅರ್ಜಿ ಸಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಕಾರ್ಮಿಕ ಮಂಡಳಿಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾರ್ಮಿಕ ಮಂಡಳಿಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Ration-ಇಲಾಖೆಯ ನಿಯಮದನ್ವಯ ಈ ಕೆಲಸ ಮಾಡದಿದ್ದಲ್ಲಿ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು!

Education Assistance Amount

Step-2: ಇದಾದ ಬಳಿಕ “Registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ “Email ID” ಮತ್ತು Mobile No ಹಾಗೇ ಇಲ್ಲಿ ಕೆಳಗೆ ಕಾಣುವ ಕಾಲಂ “Verification Method” ನಲ್ಲಿ “Mobile Verification” ಎಂದು ಆಯ್ಕೆ ಮಾಡಿಕೊಂಡು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಬಳಕೆದಾರ ಐಡಿಯನ್ನು ರಚನೆ ಮಾಡಿಕೊಳ್ಳಬೇಕು.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ “Mobile No” ಮತ್ತು “Password” ಅನ್ನು ಹಾಕಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ Login ಆಗಬೇಕು.

Step-4: ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದರ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಬಳಕೆದಾರ ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now

ಇದನ್ನೂ ಓದಿ: Microfinance-ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿ!

Documents For Education Assistance-ಅರ್ಜಿ ಸಲ್ಲಿಸಲು ದಾಖಲೆಗಳು:

1) ವಿದ್ಯಾರ್ಥಿಯ ಪೋಟೋ
2) ಆಧಾರ್ ಕಾರ್ಡ ಪ್ರತಿ
3) ಶೈಕ್ಷಣಿಕ ಪ್ರಮಾಣ ಪತ್ರ
4) ಪೋಷಕರ ಕಾರ್ಮಿಕ ಕಾರ್ಡ
5) ಬ್ಯಾಂಕ್ ಪಾಸ್ ಬುಕ್
6) ಮೊಬೈಲ್ ನಂಬರ್

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ಜಾಲತಾಣ- CLICK HERE

ಕಚೇರಿ ವಿಳಾಸ- ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 1ನೇ & 2ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022

ದೂರವಾಣಿ ಸಂಖ್ಯೆಗಳು- 080-23475188, 8277291175, 8277120505, 9141585402, 9141602562

- Advertisment -
LATEST ARTICLES

Related Articles

- Advertisment -

Most Popular

- Advertisment -