HomeGovt SchemesFID number- FID ನಂಬರ್ ನಲ್ಲಿ ದಾಖಲಿಸಿರುವ ವಿವರ ತಿದ್ದುಪಡಿಗೆ ರೈತರಿಗೆ ಅವಕಾಶ!

FID number- FID ನಂಬರ್ ನಲ್ಲಿ ದಾಖಲಿಸಿರುವ ವಿವರ ತಿದ್ದುಪಡಿಗೆ ರೈತರಿಗೆ ಅವಕಾಶ!

ಕೃಷಿ ಇಲಾಖೆಯಿಂದ ರೈತರ ಜಮೀನು ಮತ್ತು ಬ್ಯಾಂಕ್ ಖಾತೆ, ವೈಯಕ್ತಿಕ ವಿವರವನ್ನು ಡಿಜಿಟಲ್ ತಂತ್ರಾಂಶದಲ್ಲಿ ದಾಖಲಿಸಿ ಸರಕಾರದ ವಿವಿಧ ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ವಿತರಣೆ ಮಾಡಲು ಪ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು.

ಮೊದಲಿಗೆ ಈ ಪ್ರೂಟ್ಸ್ ತಂತ್ರಾಂಶದಲ್ಲಿ ರೈತರ ಆಧಾರ್ ಕಾರ್ಡ ವಿವಿರ, ಬ್ಯಾಂಕ್ ಖಾತೆ ವಿವರ ದಾಖಲಿಸಿ ಕೊನೆಯಲ್ಲಿ ಅನುಮೋದನೆ ನೀಡಿ FID1404000****** ಈ ರೀತಿಯ 16 ಅಂಕಿಯ FID ನಂಬರ್ ನೀಡಲಾಗುತ್ತದೆ. 

ರೈತರ ಮರಳಿ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆಯನ್ನು ಭೇಟಿ ಮಾಡಿದಾಗ ಈ 16 ಅಂಕಿಯ ಸಂಖ್ಯೆನ್ನು ಹಾಕಿ ಆನ್ಲೈನ್ ನಲ್ಲಿ ರೈತರ ವಿವರವನ್ನು ತ್ವರಿತವಾಗಿ ಪಡೆದು ಸಂಬಂಧಪಟ್ಟ ಯೋಜನೆಗೆ ರೈತರನ್ನು ನೊಂದಣಿ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Kaveri koogu-ತೇಗ, ಮಹಾಗಣಿ ಸೇರಿದಂತೆ 12 ಬಗ್ಗೆಯ ಸಸಿಗಳು ಕೇವಲ 3 ರೂ ಗೆ ಮಾರಾಟ! ಇಲ್ಲಿದೆ ಸಂಪೂರ್ಣ ವಿವರ.

FID ನಂಬರ್ ನಲ್ಲಿ ದಾಖಲಿಸಿರುವ ವಿವರ ತಿದ್ದುಪಡಿಗೆ ರೈತರಿಗೆ ಅವಕಾಶ:

ರೈತರು ಯಾವುದೇ ಸರಕಾರಿ ಕಚೇರಿ ಭೇಟಿ ಮಾಡದೇ ತಮ್ಮ ಮೊಬೈಲ್ ನಲ್ಲೇ Fruits ತಂತ್ರಾಂಶ ಭೇಟಿ ಮಾಡಿ ತಪ್ಪಾದ ಈ ಕೆಳಗಿನ ವಿವರವನ್ನು ತಿದ್ದುಪಡಿ ಮಾಡಿಕೊಳ್ಳಬವುದು.

  1. ಮೊಬೈಲ್ ನಂಬರ್.
  2. ಬ್ಯಾಂಕ್ ಖಾತೆ ವಿವರ.
  3. ಜಮೀನಿನ ವಿವರ.
  4. ರೈತರ ವರ್ಗ
  5. ಪೋಟೋ
  6. ಆಧಾರ್ ಕಾರ್ಡನಂತೆ ಹೆಸರು.
  7. ಹುಟ್ಟಿದ ದಿನಾಂಕ.
  8. ಆಧಾರ್ ಕಾರ್ಡನಂತೆ ಕನ್ನಡ ಹೆಸರು ಇತ್ಯಾದಿ ವಿವರವನ್ನು ರೈತರೇ ತಮ್ಮ ಮೊಬೈಲ್ ನಲ್ಲಿ ತಿದ್ದುಪಡಿ ಮಾಡಬವುದು.

ಇದನ್ನೂ ಓದಿ: Krishi Bhagya Scheme 2023-24: 100 ಕೋಟಿ ವೆಚ್ಚ ದಲ್ಲಿ “ಕೃಷಿ ಭಾಗ್ಯ” ಯೋಜನೆ ಮರುಜಾರಿ

ಇದನ್ನೂ ಓದಿ: HSRP number plate: ಫೆಬ್ರವರಿ 2024ರ ಒಳಗಾಗಿ ನಿಮ್ಮ ಬೈಕ್, ವಾಹನಗಳಿಗೆ ಈ ರೀತಿಯ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

FID number link-ಮೊಬೈಲ್ ನಲ್ಲಿ FID ನಂಬರ್ ನಲ್ಲಿ ವಿವರ ತಿದ್ದುಪಡಿ ಮಾಡುವ ವಿಧಾನ:

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ FID details update link ಪ್ರೂಟ್ಸ್ ತಂತ್ರಾಂಶ ಭೇಟಿ ಮಾಡಬೇಕು. ಬಳಿಕ ಈಗಾಗಲೇ ಈ ವೆಬ್ಸೈಟ್ ಲಾಗಿನ್ ಅಗಲು ಬಳಕೆದಾರ ನೋಂದನಿ ಮಾಡಿಕೊಂಡಿರುವವರು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಲಾಗಿನ್ ಮಾಡಲು ನೀವು ರಚನೆ ಮಾಡಿಕೊಂಡಿರುವ ಪಾಸ್ವರ್ಡ್ ಹಾಕಿ ಕ್ಯಾಪ್ಚ ಕೋಡ್ ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಿ.

ಬಳಕೆದಾರ ನೊಂದಣಿ ಮಾಡಿಕೊಳ್ಳದವರು ಹೊಸದಾಗಿ ಬಳಕೆದಾರನನ್ನು ರಚನೆ ಮಾಡಿಕೊಳ್ಳುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: click here

FID ನಂಬರ್ ಕುರಿತು ನಂಬರ್ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here

ಇದನ್ನೂ ಓದಿ: Crop loan-ರಾಜ್ಯ ಸರಕಾರದಿಂದ ರೈತರ ಸಾಲದ ಬಡ್ಡಿ ಮನ್ನಾ! ಈ ಪಟ್ಟಿಯಲ್ಲಿರುವವರಿಗೆ ಪ್ರಯೋಜನ

Step-2: ಲಾಗಿನ್ ಅದ ಬಳಿಕ “MODIFICATION” ಬಟನ್ ಮೇಲೆ ಕ್ಲಿಕ್ ಮಾಡಿ ಮೇಲೆ ತಿಳಿಸಿರುವ ಎಲ್ಲಾ ವಿವರವನ್ನು ತಿದ್ದುಪಡಿ ಮಾಡಬವುದು ಉದಾಹರಣೆಗೆ ನಿಮ್ಮ FID ನಂಬರ್ ನಲ್ಲಿ ಮೊಬೈಲ್ ನಂಬರ್ ತಪ್ಪಾದಿದ್ದರೆ ಅದನ್ನು ತಿದ್ದುಪಡಿ ಮಾಡಲು “Mobile no” ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ನೀವು ಬಳಕೆ ಮಾಡುತ್ತಿರುವ ಮೊಬೈಲ್ ನಂಬರ್ ಹಾಕಿ “Save” ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ತಿದ್ದುಪಡಿ ಮಾಡಿಕೊಳ್ಳಬವುದು.

ತಿದ್ದುಪಡಿ ವಿವರ ಅನುಮೋದನೆ ಬಳಿಕ ತೋರಿಸುತ್ತದೆ:

ರೈತರು ಒಮ್ಮೆ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಸರಿಯಾದ ವಿವರಗಳನ್ನು ಹಾಕಿದ ಬಳಿಕ ಆ ವಿವರವು ಅನುಮೋದನೆಗೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಆಧಿಕಾರಿಗಳ ಲಾಗಿನ್ ಗೆ ಹೋಗುತ್ತದೆ ಬಳಿಕ ಅಧಿಕಾರಿಗಳು ಪರೀಶಿಲಿಸಿ ಅನುಮೋದನೆ ನೀಡಿದ ಬಳಿಕ ತಿದ್ದುಪಡಿ ವಿವರ ತೋರಿಸುತ್ತದೆ.

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

Most Popular

Latest Articles

Related Articles