Free Motor Repair-ಉಚಿತ ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

July 9, 2025 | Siddesh
Free Motor Repair-ಉಚಿತ ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಹೆಚ್ ಡಿ ಕೋಟೆ ತರಬೇತಿ ಸಂಸ್ಥೆಯಿಂದ 30 ದಿನಗಳ ಮೋಟರ್ ರಿವೈಂಡಿಂಗ್ ಹಾಗೂ ಮೋಟರ್ ರಿಪೇರಿ(Motor rewinding) ಮತ್ತು ಎಲೆಕ್ಟ್ರಿಷಿಯನ್(Pumpset Repair) ತರಬೇತಿಯನ್ನು ಉಚಿತವಾಗಿ ಆಯೋಜನೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಲೇಖನದಲ್ಲಿ ಉಚಿತ ಎಲೆಕ್ಟ್ರಿಷಿಯನ್(Electrician Training) ಮತ್ತು ಮೋಟರ್ ರಿಪೇರಿ ತರಬೇತಿಯ(Free Motor Repair) ಪ್ರಯೋಜನವನ್ನು ಯಾರೆಲ್ಲ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಹಾಗೂ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Horticulture Schemes-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಪವರ್ ಸ್ಪ್ರೇಯರ್,ದೋಟಿ, ಪವರ್ ವೀಡರ್ ಪಡೆಯಲು ಅರ್ಜಿ!

Free Motor Repair Benefits-2025: ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ಕ್ಷೇತ್ರಕ್ಕಿದೆ ಉತ್ತಮ ಬೇಡಿಕೆ:

ಪ್ರಸ್ತುತ ದಿನಗಳಲ್ಲಿ ಎಲೆಕ್ಟ್ರಿಷಿಯನ್ ಮತ್ತು ಮೋಟಾರ್ ರಿಪೇರಿ ತರಬೇತಿ ಪಡೆಯುವುದರಿಂದ ಹಲವಾರು ಪ್ರಯೋಜನಗಳಿವೆ, ವಿಶೇಷವಾಗಿ ಭಾರತದಂತಹ ದೇಶದಲ್ಲಿ ಎಲ್ಲ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕುರಿತು ಒಂದಿಷ್ಟು ಅಗತ್ಯ ವಿವರಗಳ ಪಟ್ಟಿಯಲ್ಲಿ ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ವಿದ್ಯುತ್ ಬಳಕೆ ಮತ್ತು ಇದಕ್ಕೆ ಪೂರಕ ಯಂತ್ರೋಪಕರಣಗಳ ಬಳಕೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದ್ದು ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಸ್ವಂತ ಉದ್ಯೋಗಕ್ಕೆ ಉತ್ತಮ ಅವಕಾಶಗಳು ಇವೆ.

ತರಬೇತಿಯ ನಂತರ, ನೀವು ನಿಮ್ಮದೇ ಆದ ಸ್ವಂತ ವಿದ್ಯುತ್ ಸೇವೆ ಅಥವಾ ಮೋಟಾರ್ ರಿಪೇರಿ ಅಂಗಡಿಯನ್ನು ಪ್ರಾರಂಭಿಸಬಹುದು.

ಈ ಕ್ಷೇತ್ರಗಳಲ್ಲಿ ಉತ್ತಮ ವೇತನ ಲಭ್ಯವಿದೆ, ವಿಶೇಷವಾಗಿ ಪರಿಣತಿಯನ್ನು ಗಳಿಸಿದವರಿಗೆ ಹಾಗೂ ಕಡಿಮೆ ಹೂಡಿಕೆಯೊಂದಿಗೆ ಸ್ವಂತ ವ್ಯಾಪಾರ ಆರಂಭಿಸಬಹುದು.

ಇದನ್ನೂ ಓದಿ: Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ?

Who Can Apply-ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿದಾರ ಅಭ್ಯರ್ಥಿಯು ಕನಿಷ್ಠ 8ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಯ ವಯಸ್ಸು 18 ರಿಂದ 30 ವರ್ಷದ ಒಳಗಿರಬೇಕು.
  • ಅಭ್ಯರ್ಥಿಗೆ ತರಬೇತಿಯನ್ನು ಪಡೆದ ಬಳಿಕ ಸ್ವಂತ ಉದ್ಯೋಗವನ್ನು ಆರಂಭಿಸುವ ಇಚ್ಚೆಯನ್ನು ಹೊಂದಿರಬೇಕು.
  • ಈ ತರಬೇತಿಯಲ್ಲಿ ಭಾಗವಹಿಸಲು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Free Motor Repair

ಇದನ್ನೂ ಓದಿ: Bele Samikshe- ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್ ಆಗಲಿದೆ!

Pumpset Repair-ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ:

ಈ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ.

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಜುಲೈ 2025 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Media Internship-ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್‍ಗೆ ಅರ್ಜಿ! ತಿಂಗಳಿಗೆ ರೂ 20,000/- ಸ್ಟೈಪಂಡ್!

Training Duration-ತರಬೇತಿ ಅವಧಿ:

ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಯು ಒಟ್ಟು 30 ದಿನ ನಡೆಯಲಿದೆ.

Motor Rewinding Training Details-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ?

  • ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಯ ಮಹತ್ವ.
  • ವಿದ್ಯುತ್ ನ ಸುರಕ್ಷತಾ ವಿಧಾನಗಳು.
  • ಮನೆಗಳು,ಕಚೇರಿಗಳು,ಕಾರ್ಖಾನೆಗಳು ಹಾಗೂ ಇತರೆ ಕಟ್ಟಡಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬಳಸುವ ಸಾಮಾಗ್ರಿಗಳ ಪರಿಚಯ ಮತ್ತು ಅವುಗಳ ಬಳಕೆ ಹಾಗೂ ಉಪಯೋಗಗಳ ಮಾಹಿತಿ.
  • ಮೋಟಾ ರೀ-ವೈಂಡಿಂಗ್ ಮತ್ತು ಬೋರ್ವೆಲ್ ರಿಪೇರಿ ಮಾಡುವ ಕೌಶಲ್ಯಗಳು.
  • ಗೃಹ ಉಪಯೋಗಿ ವಶ್ತುಗಳ ರಿಪೇರಿ ಮಾಡುವ ಕೌಶಲ್ಯಗಳು.

ಇದನ್ನೂ ಓದಿ: Artists Pension Scheme-ಕಲಾವಿದರ ಮಾಸಾಶನ 2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ!

Training center Address-ತರಬೇತಿ ಕೇಂದ್ರದ ವಿಳಾಸ:

ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಕೆಂಚನಹಳ್ಳಿ, ಕಳಸೂರು ಅಂಚೆ, ಹೆಚ್.ಡಿ.ಕೋಟೆ ತಾಲ್ಲೂಕು ಮೊಬೈಲ್ ಸಂಖ್ಯೆ: 9972742947

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ತರಬೇತಿಯನ್ನು ಪಡೆಯಲು ಆಸ್ತಕಯನ್ನು ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಅರ್ಜಿದಾರರು Apply Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮನೆಯಲ್ಲಿ ಕುಳಿತು ಅಗತ್ಯ ವಿವರವನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: