Gruhalakshmi Payment- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ!

January 15, 2024 | Siddesh

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ಪಡೆಯಲು ಅನರ್ಹವಾಗಿರುವ ಮತ್ತು ಎಪ್ರಿಲ್-2024 ತಿಂಗಳಲ್ಲಿ ಇಲಾಖೆಯಿಂದ ರದ್ದುಗೊಳಿಸಲಾದ ರೇಶನ್ ಕಾರ್ಡ(Ration card list) ಗ್ರಾಹಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಗೃಹಲಕ್ಷ್ಮಿ(Gruhalakshmi Payment) ಮತ್ತು ಅನ್ನಭಾಗ್ಯ ಯೋಜನೆಯ ಅರ್ಥಿಕ ನೆರವು ದೊರೆಯುವುದಿಲ್ಲ.

ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಯಾವೆಲ್ಲ ವಿಧಾನ ಅನುಸರಿಸಿ ತಾಲ್ಲೂಕುವಾರು ರದ್ದಾದ ರೇಶನ್ ಕಾರ್ಡ ಗ್ರಾಹಕರ ಪಟ್ಟಿಯನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Company wise bele vime details- ಇಲ್ಲಿಯವರೆಗೆ ಕಂಪನಿವಾರು ಎಷ್ಟು? ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ಹೇಗೆ ತಿಳಿಯುವುದು?

Gruhalakshmi Payment-2024: ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ ಮತ್ತು ಅನ್ನಭಾಗ್ಯ ಯೋಜನೆ ಸೌಲಭ್ಯ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ahara.kar.nic.in ಜಾಲತಾಣ ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ರದ್ದಾದ ತಾಲ್ಲೂಕುವಾರು ಗ್ರಾಹಕರ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ನೋಡಬಹುದಾಗಿದೆ.

Step-1: ಈ ಲಿಂಕ್ click here ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ "e-Ration Card" ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Step-2: "e-Ration Card" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "Show Cancelled / Suspended list" ಎಂದು ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಜಿಲ್ಲೆ/District, ತಾಲ್ಲೂಕು/Taluk, ತಿಂಗಳು/Month, ವರ್ಷ/Year ಆಯ್ಕೆ ಮಾಡಿಕೊಂಡು GO ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ/ತಡೆಯಿಡಿಯಲಾದ ರೇಶನ್ ಕಾರ್ಡ ಗ್ರಾಹಕರ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಏನು ಮಾಡಬೇಕು?

ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ನೋಡಿದಾಗ ಅದರಲ್ಲಿ  ಒಂದೊಮ್ಮೆ ನೀವು ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ ಪಡೆಯಲು ಅರ್ಹರಿದ್ದರು ನಿಮ್ಮ ಹೆಸರು ಅದರಲ್ಲಿ ಕಂಡು ಬಂದರೆ ನೀವು ಏನು ಮಾಡಬೇಕು ಎಂದು ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

ಅಗತ್ಯ ದಾಖಲಾತಿಗಲಾದ ಅರ್ಜಿದಾರರ ಆಧಾರ್ ಕಾರ್ಡ ಪ್ರತಿ ಮತ್ತು ಒಂದು ಲಿಖಿತ ಅರ್ಜಿಯನ್ನು ಬರೆದುಕೊಂಡು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ(FOOD INSPECTOR) ಕಚೇರಿಯನ್ನು ಭೇಟಿ ಮಾಡಿ ನಾವು ಅರ್ಹರಿದರು ನಮ್ಮ ರೇಷನ್ ಕಾರ್ಡ ರದ್ದಾಗಿರುತ್ತದೆ ಇದನ್ನು ಸರಿಪಡಿಸಿಕೊಡುವಂತೆ ಮನವಿ ಸಲ್ಲಿಸಿಬೇಕು.

ಈ ರೀತಿ ಅರ್ಜಿ ಸಲ್ಲಿಸಿದ ಬಳಿಕ ಪುನಃ ಇಲಾಖೆಯಿಂದ ನಿಮ್ಮ ರೇಶನ್ ಕಾರ್ಡ ಅರ್ಜಿಯನ್ನು ಮರುಪರಿಶೀಲಿಸಿ ರದ್ದಾದ ಪಟ್ಟಿಯಿಂದ ನಿಮ್ಮ ಹೆಸರನ್ನು ಕೈ ಬಿಡಲಾಗುತ್ತದೆ.

ಇದಕ್ಕೆ ಸಂಬಂದಪಟ್ಟ ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:

ನಿಮ್ಮ ತಾಲ್ಲೂಕಿನ ಆಹಾರ ಇಲಾಖೆ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಹಸಿರು ಬಣ್ಣದಲ್ಲಿ ಕಾಣುವ ಕೊನೆಯ ಕಾಲಂ ಮೇಲೆ ಕ್ಲಿಕ್ ಮಾಡಿ ತಿಳಿಯಬಹುದು: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: