Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!

May 6, 2025 | Siddesh
Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!
Share Now:

ಅರ್ಹ ಅಭ್ಯರ್ಥಿಗಳಿಗೆ ತೋಟಗಾರಿಕೆ ಇಲಾಖೆಯಿಂದ(Horticulture Department) 10 ತಿಂಗಳ ತರಬೇತಿಯನ್ನು(10 Months Horticulture Training) ಪಡೆಯಲು ಅವಕಾಶವಿದ್ದು ಈ ತರಬೇತಿಯನ್ನು ಪಡೆಯಲು ಪ್ರತಿ ತಿಂಗಳು ರೂ 1,750/- ಶಿಷ್ಯವೇತನವನ್ನು ಸಹ ಅವಕಾಶವಿದ್ದು ಇದರ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ತೋಟಗಾರಿಕೆ ಇಲಾಖೆಯ ತೋಟಗಾರಿಕೆ ವಿಸ್ತರಣೆ ಯೋಜನೆಯಡಿ 2025-26 ನೇ ಸಾಲಿನಲ್ಲಿ ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಗೆ ಹೊಸೂರು ತರಬೇತಿ ಕೇಂದ್ರ- ಸಿದ್ದಾಪುರ (ಉ.ಕ) ಇಲ್ಲಿ 10-ತಿಂಗಳ ಉಚಿತ ವಸತಿ ಸಹಿತ ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Morarji College Admission-ಉಚಿತ ಮೊರಾರ್ಜಿ ಪಿಯು ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ!

ಈ ಲೇಖನದಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಡುವ 10 ತಿಂಗಳ(Horticulture Training) ಉಚಿತ ವಸತಿ ಸಹಿತ ತರಬೇತಿ ಪಡೆಯುವುದರಿಂದ ಅಭ್ಯರ್ಥಿಗಳಿಗೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ? ಮತ್ತು ಈ ತರಬೇತಿ ಮೂಲಕ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಬಹುದು? ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

10 Months Horticulture Training Benefits-ಈ ತರಬೇತಿ ಪಡೆಯುವುದರ ಪ್ರಯೋಜನಗಳು:

1) ತೋಟಗಾರಿಕೆ ಇಲಾಖೆಯ "ಗಾರ್ಡನ್‌ರ" ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆಯಾಗಬಹುದು.

2) ಸ್ವಂತ ಜಮೀನಿನ ಅಭಿವೃದ್ಧಿ ಮಾಡಬಹುದು ಮತ್ತು ಕಸಿ ಕಟ್ಟುವುದು, ಕಟ್ಟಿಂಗ್ಸ್, ಗೂಟಿ ವಿಧಾನಗಳಿಂದ ಸಸ್ಯಾಭಿವೃದ್ಧಿ ನಡೆಸಿ ಖಾಸಗಿ ನರ್ಸರಿ ಮಾಡಬಹುದಾಗಿದೆ.

3) ಬೇರೆ ಬೇರೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಬಹುದು.

4) ಖಾಸಗಿ ನರ್ಸರಿ, ಎಸ್ಟೇಟ್ ಗಳಲ್ಲಿ ಮೇಲ್ವಿಚಾರಕರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಬಹುದು.

ಇದನ್ನೂ ಓದಿ: Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ!

Horticulture Training

Horticulture Training Details-ಏನೆಲ್ಲಾ ಸೌಲಭ್ಯಗಳು?

1) 10-ತಿಂಗಳ ಉಚಿತ ತರಬೇತಿ

2) ತರಬೇತಿ ಪಡೆಯುವವರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ

3) ಪ್ರತಿ ತಿಂಗಳು "ಮಾಸಿಕ ಭತ್ಯೆ'

4) ನುರಿತ ಪರಿಣಿತರಿಂದ ಪ್ರಾಯೋಗಿಕ ತರಬೇತಿ

5) 5 ದಿನಗಳ ಶೈಕ್ಷಣಿಕ ಕರ್ನಾಟಕ ಪ್ರವಾಸ

6) ವಿವಿಧ ಕೆಂದ್ರಗಳಲ್ಲಿ ಪೂರಕ ತರಬೇತಿ

ಇದನ್ನೂ ಓದಿ: Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

Monthly Stipend-ಪ್ರತಿ ತಿಂಗಳು ರೂ 1,750/- ಮಾಸಿಕ ಶಿಷ್ಯವೇತನ:

ಅರ್ಜಿ ಸಲ್ಲಿಸಿ ಆಯ್ಜೆಯಾದ ಅರ್ಹ ಅಭ್ಯರ್ಥಿಗಳಿಗೆ ಈ ತರಭೇತಿ ನಡೆಯುವ 10 ತಿಂಗಳು ಸಹ ಪ್ರತಿ ತಿಂಗಳು ರೂ 1,750/- ಮಾಸಿಕ ಶಿಷ್ಯವೇತನವನ್ನು ಸರ್ಕಾರದಿಂದ ನೇರ ನಗದು ವರ್ಗಾವಣೆ(DBT) ಮೂಲಕ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Who Can Apply For This Horticluture Training-ಅರ್ಹತೆಗಳು:

  • ಅರ್ಜಿದಾರ ಅಭ್ಯರ್ಥಿಯು ರೈತಾಪಿ ಕುಟುಂಬಕ್ಕೆ ಸೇರಿದವರಾಗಿರಬೇಕು.
  • ಅಭ್ಯರ್ಥಿಯು SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಇದನ್ನೂ ಓದಿ: Yuvanidhi Yojane-ನಿರುದ್ಯೋಗಿಗಳು ಪ್ರತಿ ತಿಂಗಳು ರೂ 3,000/- ಪಡೆಯಲು ಸ್ವಯಂ ಘೋಷಣೆ ಸಲ್ಲಿಸಲು ಅವಕಾಶ!

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಪರ್ಕಿಸಿ:

1) ನಿಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ) ಕಛೇರಿಗೆ ಭೇಟಿ ನೀಡಿ.

2) ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾ.ವ) ಹೊಸುರು ಕ್ಷೇತ್ರ ಮತ್ತು ತರಬೇತಿ ಕೇಂದ್ರ.ಸಿದ್ದಾಪುರ ರವರಿಗೆ ಸಂಪರ್ಕಿಸಿ, ಕಛೇರಿ ದೂರವಾಣಿ ಸಂಖ್ಯೆ: 9611227478 / 8971956318
(ವಿ.ಸೂ: 18-30 ವರ್ಷದವರೆಗಿನ ಯಾರೂ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ, ( ಪ.ಜಾ./ಪ.ಪಂ ಅಭ್ಯರ್ಥಿಗಳಿಗೆ 33 ವರ್ಷಗಳತನಕ, ಮಾಜಿ ಸೈನಿಕರಿಗೆ 33-65 ವರ್ಷತನಕ ಸಡಿಲಿಕೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ)

3) ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್/Horticulture Department Website- Click here

ನಮ್ಮ ಸಲಹೆ:

ಪ್ರಸ್ತುತ ಅಥವಾ ಕಳೆದ ವರ್ಷ ಹಾಗೂ ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಮುಖ್ಯವಾಗಿದ್ದು ಈ ತರಬೇತಿಯು ಪ್ರಸ್ತುತ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದೆ ಇರುವವರು ಅಥವಾ 24 ವರ್ಷ ಮೇಲ್ಪಟ್ಟವರ ಆಯ್ಕೆ ಅಗಿದ್ದರೆ ಉತ್ತಮ.

WhatsApp Group Join Now
Telegram Group Join Now
Share Now: