- Advertisment -
HomeGovt SchemesKhata Details-ನಿಮ್ಮ ಆಸ್ತಿಗೆ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Khata Details-ನಿಮ್ಮ ಆಸ್ತಿಗೆ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

ನಗರ ಮತ್ತು ಗ್ರಾಮೀನ ಪ್ರದೇಶದಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಖಾತಾವನ್ನು(Khata) ಪಡೆಯಲು ಯಾವೆಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಮ್ಯಾನ್ಯುವಲ್/ಇ-ಖಾತಾ(e-Khata) ಹೊಂದಿಲ್ಲದಿದ್ದರೆ ಹೊಸದಾಗಿ ಖಾತಾ ಪಡೆಯಲು ಯಾವ ಕ್ರಮ ಅನುಸರಿಸಬೇಕು? ಇತ್ಯಾದಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದ್ದು ಈ ಮಾಹಿತಿಯನ್ನು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಖಾತಾವನ್ನು ಹೊಂದುವುದನ್ನು ಕಡ್ಡಾಯ ಮಾಡಲಾಗಿದ್ದು, ಆಸ್ತಿಗಳಿಗೆ ಖಾತಾವನ್ನು ಪಡೆಯಲು ಒದಗಿಸಬೇಕಾದ ದಾಖಲೆಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಹಾಗೂ ಖಾತಾ ಪಡೆಯುವುದರಿಂದ ಅನೇಕ ಪ್ರಯೋಜನಗಳನ್ನು ಮಾಲೀಕರು ಹೊಂದಬಹುದಾಗಿದೆ.

ಇದನ್ನೂ ಓದಿ: Togari Kharidi-ರಾಜ್ಯ ಸರ್ಕಾರದಿಂದ ತೊಗರಿ ಖರೀದಿಗೆ ₹140 ರೂ ಕೋಟಿ!

ಬಿಬಿಎಂಪಿ ಖಾತಾ ಸಂಬಂಧಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಖಾತಾ(ಮ್ಯಾನ್ಯುವಲ್/ಇ-ಖಾತಾ) ಇಲ್ಲದ ಸ್ವತ್ತುಗಳಿಗೆ ಹೊಸದಾಗಿ ಖಾತಾಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Documents For Khata-ಅವಶ್ಯಕ ದಾಖಲೆಗಳು:

1) ಸ್ವತ್ತಿನ ನೋಂದಾಯಿತ ದಸ್ತಾವೇಜು

2) ಸ್ವತ್ತಿನ ಮಾಲೀಕರ ಆಧಾರ್

3) ಋಣಬಾರ ಪ್ರಮಾಣ ಪತ್ರ (ನೋಂದಣಿಗೆ ಒಂದು ದಿನ ಮೊದಲಿನಿಂದ 31.10.2024ರ ವರೆಗಿನ)

4) ಸ್ವತ್ತಿನ/ಜಾಗದ ಫೋಟೋ

ಇದನ್ನೂ ಓದಿ: Best Savings Scheme-ಅಂಚೆ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಗಿಪ್ಟ್! ಎರಡು ವರ್ಷದಲ್ಲಿ ₹30 ಸಾವಿರ ಪಡೆಯಲು ಅವಕಾಶ!

Khata

Online Application Link-ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್- CLICK HERE

ವಿಡಿಯೋ- Watch here

Grama Panchayat e-swathu-ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:

ಖಾಲಿ ಜಾಗಕ್ಕೆ ಮತ್ತು ಮನೆ ನಿರ್ಮಾಣವಾಗಿರುವ ಜಾಗಕ್ಕೆ ಇ-ಸ್ವತ್ತನ್ನು ಪಡೆಯಲು ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಅರ್ಜಿದಾರರೊಂದಿಗೆ ಜಾಗದ ಪೋಟೋ
3) ಮನೆಯ ವಿದ್ಯುತ್ ಬಿಲ್
4) ವಂಶವೃಕ್ಷ
5) ಮೊಬೈಲ್ ನಂಬರ್
6) ಕೈಬರಹದ ಅರ್ಜಿ

ಇದನ್ನೂ ಓದಿ: APAAR ID Card-ವಿದ್ಯಾರ್ಥಿಗಳಿಗೆ APAAR ID ಕಾರ್ಡ್‌! ಎಲ್ಲಿ ಪಡೆಯಬೇಕು? ಇಲ್ಲಿದೆ ಸಂಪೂರ್ಣ ವಿವರ!

Kaveri 2.0-ದಸ್ತಾವೇಜುಗಳನ್ನು ಪರೀಶಿಲನೆಯಲ್ಲಿ ಗಮನಿಸಿದಬೇಕಾದ ಮಾಹಿತಿ ವಿವರ:

ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜುಗಳ ನೋಂದಣಿಗೆ ಅರ್ಜಿ ಸಲ್ಲಿಸಲು ಮಾಹಿತಿ ನಮೂದಿಸಿದ ನಂತರ, ಅಂತಿಮ ಅರ್ಜಿಯನ್ನು ಉಪ ನೋಂದಣಾಧಿಕಾರಿ ಅವರಿಗೆ ಸಲ್ಲಿಸುವ ಮುನ್ನ ಅರ್ಜಿದಾರರು ಅಥವಾ ಪಕ್ಷಕಾರರು ಕಡ್ಡಾಯವಾಗಿ ದಸ್ತಾವೇಜು ಸಾರಾಂಶವನ್ನು ಪರಿಶೀಲಿಸಬೇಕು.

1) ಸ್ವತ್ತಿನ ಮಾಲೀಕರ ಹೆಸರು ಹಾಗೂ ಸ್ವತ್ತಿನ ಪಿಐಡಿ ಸಂಖ್ಯೆ.

2) ದಸ್ತಾವೇಜು ಮಾದರಿ, ಆರ್ಟಿಕಲ್ ಮತ್ತು ಸಬ್ ಆರ್ಟಿಕಲ್.

3) ಪಕ್ಷಕಾರರ ಹೆಸರುಗಳು ಗುರುತಿನ ದಾಖಲೆ(ಆಧಾರ್/ ಪಾಸ್‌ಪೋರ್ಟ್/ಪಾನ್)ಗಳಲ್ಲಿ ಇರುವಂತೆ.

4) ಸ್ವತ್ತಿನ ವಿಸ್ತೀರ್ಣ ಮಾಹಿತಿ, ಚಕ್ಕುಬಂದಿ ವಿವರ.

5) ಮಾರುಕಟ್ಟೆ ಮೌಲ್ಯ, ನೋಂದಣಿ ಶುಲ್ಕ ಮತ್ತು ಮುದ್ರಾಂಕ

e Khata

ಇದನ್ನೂ ಓದಿ: Bima Sakhi-LIC ಯಿಂದ ಬಿಮಾ ಸಖಿ ಹೊಸ ಯೋಜನೆ! ಮಾಸಿಕ ₹7,000 ಸ್ಟೈಪೆಂಡ್!

ವಿಶೇಷ ಸೂಚನೆ:

ಮಾಹಿತಿಯಲ್ಲಿ ಏನಾದರು ಲೋಪದೋಷಗಳು ಕಂಡುಬಂದಲ್ಲಿ ಅರ್ಜಿಯನ್ನು ಪರಿಷ್ಕರಿಸಿ, ಸರಿಯಾದ ಮಾಹಿತಿಯೊಂದಿಗೆ ಅಂತಿಮ ಅರ್ಜಿಯನ್ನು ಉಪನೋಂದಣಾಧಿಕಾರಿಗೆ ಸಲ್ಲಿಸಬೇಕು.

For More Details-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

HELPLINE/ಸಹಾಯವಾಣಿ- 080-68265316
Email id: helpdsr@karnataka.gov.in

- Advertisment -
LATEST ARTICLES

Related Articles

- Advertisment -

Most Popular

- Advertisment -