ಕಂದಾಯ ಇಲಾಖೆಯಿಂದ ರೈತರು ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು(BHOOMI RTC MUTATION HISTORY) ನೋಡಲು ವೆಬ್ಸೈಟ್ ಲಿಂಕ್ ಮತ್ತು ನಿಮ್ಮ ಮೊಬೈಲ್ ನಲ್ಲಿ ಈ ಮ್ಯುಟೇಶನ್ ವಿವರವನ್ನು ಹೇಗೆ ನೋಡಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.
ಕೃಷಿ ಜಮೀನಿಗೆ ಸಂಭಂದಪಟ್ಟ ಅಗತ್ಯ ದಾಖಲೆಗಳಲ್ಲಿ ಒಂದಾದ ಪಹಣಿಗೆ ಸಂಭದಪಟ್ಟ ಮ್ಯುಟೇಶನ್ ವಿವರವನ್ನು(Land Mutation Website) ರೈತರು ಯಾವುದೇ ಶುಲ್ಕ ಪಾವತಿ ಮಾಡದೆ ತಮ್ಮ ಮೊಬೈಲ್ ನಲ್ಲೇ ಕೆಲವೇ ನಿಮಿಷಗಳಲ್ಲಿ ಒಂದೆರಡು ಕ್ಲಿಕ್ ನಲ್ಲಿ ಈ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.
ಇದನ್ನೂ ಓದಿ: Gruha arogya- ಗೃಹ ಆರೋಗ್ಯ ಮನೆ ಬಾಗಿಲಿಗೆ ಬರಲಿದೆ ಆರೋಗ್ಯ ತಪಾಸಣೆ! ಏನಿದು ನೂತನ ಯೋಜನೆ!
ಮ್ಯುಟೇಶನ್ ಎಂದರೇನು?ವಿಭಜನೆ/ವಿಭಾಗ, ಪೌತಿ, ಕ್ರಯ ಎಂದು ಪಹಣಿಯಲ್ಲಿ ಏಕೆ? ನಮೂದಿಸಿರುತ್ತಾರೆ, ಈ ಪದದ ಅರ್ಥಗಳೇನು? ಇವು ಏನನ್ನು ಸೂಚಿಸುತ್ತವೆ ಈ ಕುರಿತು ಸಂಪೂರ್ಣ ವಿವರಣೆಯನ್ನು ಈ ಕೆಳಗೆ ತಿಳಿಸಲಾಗಿದೆ.
What is Mutation- ಮ್ಯುಟೇಶನ್ ಎಂದರೇನು?
ಮ್ಯುಟೇಶನ್ ಎಂದರೆ ಇದು ನಿಮ್ಮ ಜಮೀನು ಮಾಲೀಕತ್ವ ಬದಲಾವಣೆಯ ವಿವರವನ್ನು ತೋರಿಸುತ್ತದೆ ಅಂದರೆ ನಿಮ್ಮ ಜಮೀನು ಈ ಹಿಂದೆ ಯಾರ ಹೆಸರಿಗೆ ಇತ್ತು ಪ್ರಸ್ತುತ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಎನ್ನುವ ವಿವರ ದಾಖಲೆಗೆ ಮ್ಯುಟೇಶನ್ ವಿವರ ಎಂದು ಕರೆಯುತ್ತಾರೆ.
ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!
Mutation details-ಮ್ಯುಟೇಶನ್ ವಿವರದಲ್ಲಿ ನಮೂದಿಸಿದ ಈ ಪದಗಳ ವಿವರಣೆ:
ಮ್ಯುಟೇಶನ್ ವಿವರವನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿದಾಗ ನಿಮ್ಮ ಹೆಸರಿನ ಮುಂದೆ ಆಸ್ತಿ ವರ್ಗಾವಣೆ ಅಗಿರುವ ವಿಧಾವನ್ನು ಈ ಕೆಳಗೆ ತಿಳಿಸಿರುವ ಪದ ಬಳಕೆ ಮೂಲಕ ಸೂಚಿಸಲಾಗುತ್ತದೆ.
1) ವಿಭಜನೆ/ವಿಭಾಗ(Vibhaga): ಒಂದು ಕುಟುಂಬದಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರಿದರೆ ಅಂದುಕೊಳ್ಳಿ ಆ ನಾಲ್ಕು ಜನ ತಮ್ಮ ತಮ್ಮ ಹೆಸರಿಗೆ ಜಮೀನನ್ನು ಭಾಗ ಮಾಡಿಕೊಂಡು ಸರ್ವೆ ನಂಬರ್ ನಲ್ಲಿ ಹಿಸ್ಸಾ ಸಂಖ್ಯೆಯನ್ನು ಹೊಂದುವುದು.
2) ಪೌತಿ(Pouthi Khate): ತಂದೆಯಿಂದ ಮಗ ತನ್ನ ಹೆಸರಿಗೆ ಕೃಷಿ ಜಮೀನನ್ನು ವರ್ಗಾವಣೆ ಮಾಡಿಕೊಂಡಿದ್ದರೆ ಪಹಣಿ/ಮ್ಯುಟೇಶನ್ ವಿವರದಲ್ಲಿ “ಪೌತಿ” ಎಂದು ಗುರುತಿಸಲಾಗಿರುತ್ತದೆ.
ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!
ತಂದೆಯಿಂದ ಮಗ ಹೆಸರಿಗೆ ಆಸ್ತಿ ವರ್ಗಾವಣೆ ಅಗಿರುವುದಕ್ಕೆ ಮತ್ತು ಗಂಡನಿಂದ ಹೆಂಡತಿ ಹೆಸರಿಗೆ ಆಸ್ತಿ ವರ್ಗಾವಣೆ ಅಗಿರುವುದಕ್ಕೆ “ಪೌತಿ” ಎಂದು ಕರೆಯುತ್ತಾರೆ.
3) ಕ್ರಯ(Kraya): ಕೃಷಿ ಜಮೀನನ್ನು ಹಣ ಕೊಟ್ಟು ಹೊಸದಾಗ ಜಮೀನನ್ನು ಖರೀದಿ ಮಾಡಿ ನಿಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರೆ “ಕ್ರಯ” ಎಂದು ಸೂಚಿಸಿರಲಾಗುತ್ತದೆ.
Mutation Download link- ಎರಡು ವಿಧಾನ ಅನುಸರಿಸಿ ಉಚಿತವಾಗಿ ಮ್ಯುಟೇಶನ್ ವಿವರವನ್ನು ಪಡೆಯಬಹುದು:
ವಿಧಾನ-1:
ಕಂದಾಯ ಇಲಾಖೆಯ Bhoomi ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಮ್ಯುಟೇಶನ್ ವಿವರವನ್ನು ನೋಡಬಹುದು.
Step-1: ಮೊದಲಿಗೆ ಈ Mutation Status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
Step-2: ತದನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ತದನಂತರ ನಿಮ್ಮ ಸರ್ವೆ ನಂಬರ್ ಅನ್ನು ಹಾಕಿ “Fetch Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಬಹುದು.
ಇದನ್ನೂ ಓದಿ: Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!
ವಿಧಾನ-2:
Step-1: ಪ್ರಥಮದಲ್ಲಿ Mutation Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.
Step-2: ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಅನ್ನು ಹಾಕಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಮ್ಯುಟೇಶನ್ ವಿವರ ಡೌನ್ಲೋಡ್ ಅಗುತ್ತದೆ.