- Advertisment -
HomeGovt SchemesLand registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

ರಾಜ್ಯ ಸರಕಾರದ ಎಲ್ಲಾ ಬಗ್ಗೆಯ ಆಸ್ತಿಗಳನ್ನು(land registration) ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ(Registration Department) ಉಪನೋಂದಣಿ ಕಚೇರಿ ಕೆಲಸದ ಸಮಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಕಚೇರಿ ಕೆಲಸದ ವೇಳೆ ವಿಸ್ತರಣೆ(Sub registrar office) ಮತ್ತು ನಾಗರಿಕರು ತಮ್ಮ ಆಸ್ತಿಗಳಿಗೆ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಮತ್ತು ಬೆಂಗಳೂರು ವ್ಯಾಪ್ತಿಯಲ್ಲಿ ಇ-ಸ್ವತ್ತು ಮತ್ತು ಇ-ಖಾತಾವನ್ನು ಪಡೆಯುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ ಈ ಮಾಹಿತಿ ಉಪಯುಕ್ತವಾಗಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಉಪನೋಂದಣಿ ಕಚೇರಿ ಕಚೇರಿ ಕೆಲಸದ ವೇಳೆ ವಿಸ್ತರಣೆ ವಿವರ, ಹೊಸದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಪಡೆಯಲು ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು?ಇ-ಖಾತಾ/ಇ-ಸ್ವತ್ತು ಪ್ರಮಾಣ ಪತ್ರದ ಕುರಿತು ಒಂದಿಷ್ಟು ಉಪಯುಕ್ತಯನ್ನು ಸಹ ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

Karnataka Sub registrar office Working Hours-ಕಚೇರಿ ಕೆಲಸದ ವೇಳೆ ವಿಸ್ತರಣೆ:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಉಂಟಾದ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಅರ್ಜಿ ವಿಲೇವಾರಿಯಲ್ಲಿ ತೊಂದರೆಯನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದ ಉಪನೋಂದಣಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 10-00 ರಿಂದ ಸಂಜೆ 6-30ರ ವರೆಗೆ ವಿಸ್ತರಣೆ ಮಾಡಿ ಇಲಾಖೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

Sub registrar office Helpline-ಈ ಇಲಾಖೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ- 080-68265316

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆಸ್ತಿ ನೋಂದಣಿ ಕುರಿತು ಜಾರಿಯಲ್ಲಿರುವ ಕೆಲವು ನಿಯಮಗಳ ಕುರಿತು ಈ ಕೆಳಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

Sub registrar office

ಹೊಸದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಪಡೆಯಲು ದಾಖಲೆಗಳು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಖಾತಾ(ಮ್ಯಾನ್ಯುವಲ್/ಇ-ಖಾತಾ) ಇಲ್ಲದ ಸ್ವತ್ತುಗಳಿಗೆ ಹೊಸದಾಗಿ ಖಾತಾಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳ ವಿವರ ಈ ಕೆಳಗಿನಂತಿವೆ.

Documents For New E-khata-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

1) ಸ್ವತ್ತಿನ ನೋಂದಾಯಿತ ದಸ್ತಾವೇಜು

2) ಸ್ವತ್ತಿನ ಮಾಲೀಕರ ಆಧಾರ್

3) ಋಣಬಾರ ಪ್ರಮಾಣ ಪತ್ರ (ನೋಂದಣಿಗೆ ಒಂದು ದಿನ ಮೊದಲಿನಿಂದ 31-10-2024 ರ ವರೆಗಿನ)

4) ಸ್ವತ್ತಿನ ಫೋಟೋ

ಅರ್ಜಿ ಸಲ್ಲಿಕೆ ಹಾಗೂ ಇನ್ನು ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ಲಿಂಕ್ – CLICK HERE

ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

E-khata information-ಇ-ಖಾತಾ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಹೀಗಿದೆ:

ಆಸ್ತಿಗಳಿಗೆ ಇ-ಖಾತಾ/ಇ-ಸ್ವತ್ತು ಪ್ರಮಾಣ ಪತ್ರವನ್ನು ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಇ-ಖಾತಾ(PID Number)ತಂತ್ರಾಂಶ ಹೊರತು ಇತರೆ ವಿಧಾನದಲ್ಲಿ ಆಸ್ತಿಯನ್ನು ನೋಂದಣಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇ-ಖಾತಾ/ಇ-ಸ್ವತ್ತು ಅನ್ನು ಏಕೆ ಮಾಡಿಸಬೇಕು ಎನ್ನುವ ಪ್ರಶ್ನೆ ಉತ್ತರ ಈ ರೀತಿ ಇದೆ ಆಸ್ತಿ ನೋಂದಣಿಯಲ್ಲಿ ವಂಚನೆಯುಕ್ತ, ಅಕ್ರಮ ನೋಂದಣಿ ಮತ್ತು ನಕಲಿ ಖಾತಾಗಳಿಗೆ ತಡೆ ನೀಡಲು ಹಾಗೂ ಒಂದೇ ಸ್ವತ್ತಿನ/ಆಸ್ತಿಯ ಬಹುನೋಂದಣಿಗೆ ಕಡಿವಾಣ ಹಾಕಲು ಇ-ಖಾತಾ/ಇ-ಸ್ವತ್ತು ಪ್ರಮಾಣ ಪತ್ರ ಪಡೆಯುವುದನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: E-Swathu Application-90 ಲಕ್ಷ ಆಸ್ತಿಗಳ ಇ-ಸ್ವತ್ತು ಬಾಕಿ! ಇ-ಸ್ವತ್ತು ಎಲ್ಲಿ ಮಾಡಿಸಬೇಕು? ಪ್ರಯೋಜನಗಳೇನು?

ಸಾಮಾನ್ಯರ ಸುರಕ್ಷತೆ: ಅಮಾಯಕ ಜನ ಸಾಮಾನ್ಯರು ಮೋಸ ಹೋಗದಂತೆ ತಡೆಯುವುದು ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯಗಳಿಂದ ಸುರಕ್ಷಿತವಾಗುತ್ತಾರೆ.

ಈ ದಾಖಲೆಯನ್ನು ಎಲ್ಲಿ ಪಡೆಯಬೇಕು? ಇ-ಸ್ವತ್ತು ಖಾತಾವನ್ನು ನಾಗರಿಕರು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಡೆಯಬಹುದು ಇ-ಆಸ್ತಿ ಖಾತಾವನ್ನು ನಗರ ಸ್ಥಳಿಯ ಸಂಸ್ಥೆಯ ಕಚೇರಿಗಳಲ್ಲಿ ಪಡೆಯಬಹುದು(ನಗರ ಸಭೆ ಕಚೇರಿ,ಮಹಾನಗರ ಪಾಲಿಕೆ ಇತ್ಯಾದಿ) ಬಿಬಿಎಂಪಿ ಇ-ಆಸ್ತಿ ಖಾತಾ ಮತ್ತು ಯು.ಎಲ್.ಎಂ.ಎಸ್ ದಾಖಲೆಯನ್ನು ಬಿಡಿಎ ವ್ಯಾಪ್ತಿಯ ಬಿಬಿಎಂಪಿ ಕಚೇರಿಯಲ್ಲಿ ಇ-ಖಾತಾವನ್ನು ಪಡೆಯಬಹುದು.

ಪಿಐಡಿ ಸಂಖ್ಯೆಯನ್ನು ನಿಮ್ಮ ಸ್ವತ್ತಿನ ದಾಖಲೆಯಲ್ಲಿ ನಮೂದಿಸಲಾಗಿರುತ್ತದೆ ಸ್ವತಿನ ಪಿಐಡಿ ಸಂಖ್ಯೆಯನ್ನು ಇ-ಖಾತಾ ಪ್ರತಿ ಅಥವಾ ತೆರಿಗೆ ಪಾವತಿ ರಶೀದಿಯ ಪ್ರತಿಯಲ್ಲಿ ನಮೂದಿಸಲಾಗಿರುತ್ತದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -