LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!

February 2, 2026 | Siddesh
LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!
Share Now:

ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಮನೆಯಲ್ಲಿಯು ಸಹ ಒಂದ ಅಥವಾ ಎರಡು ಎಲ್ಐಸಿ ಪಾಲಿಸಿ(LIC Policy Status Check) ಮಾಡಿಯೇ ಇರುತ್ತಾರೆ ಅದರೆ ನಾಗರಿಕರು ತಮ್ಮ ಮೊಬೈಲ್ ನಲ್ಲಿ ಈ ಪಾಲಿಸಿಯ ಕುರಿತು ಅಗತ್ಯ ಮಾಹಿತಿಯನ್ನು ತಿಳಿಯಲು ಭಾರತೀಯ ಜೀವ ವಿಮಾ ನಿಗಮವು ವಿವಿಧ ಡಿಜಿಟಲ್ ವೇದಿಕೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು ಇವುಗಳ ಬಳಕೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ವಿವರಿಸಲಾಗಿದೆ.

ಭಾರತೀಯ ಜೀವ ವಿಮಾ ನಿಗಮ (LIC) ದೇಶದ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆಯಾಗಿದೆ. ಇಂದು ತಂತ್ರಜ್ಞಾನ ಬೆಳೆದಂತೆ, ನಿಮ್ಮ ಪಾಲಿಸಿ ವಿವರಗಳನ್ನು ತಿಳಿಯಲು ಎಲ್ಐಸಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಬಳಸಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಹೆಸರಿನಲ್ಲಿರುವ ಪಾಲಿಸಿಗಳ ಸಂಖ್ಯೆ, ಪ್ರೀಮಿಯಂ ಮೊತ್ತ ಮತ್ತು ಸ್ಟೇಟಸ್ ಅನ್ನು ಪರಿಶೀಲಿಸಬಹುದು.

ಇದನ್ನೂ ಓದಿ: Budget 2026-27: ಕೇಂದ್ರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಲೇಖನದಲ್ಲಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್(LIC Website) ಮೂಲಕ ಯಾವೆಲ್ಲ ವಿಧಾನವನ್ನು ಅನುಸರಿಸಿ ತಮ್ಮ ಹೆಸರಿನಲ್ಲಿ ಎಷ್ಟು ಪಾಲಿಸಿಗಳಿವೆ? ಪಾಲಿಸಿಗಳ ಸಂಖ್ಯೆ, ಪ್ರೀಮಿಯಂ ಮೊತ್ತ ಮತ್ತು ಸ್ಟೇಟಸ್ ಇನ್ನಿತರೆ ಸಂಪೂರ್ಣ ವಿವರವನ್ನು ಹೇಗೆ ತಿಳಿಯುವುದು ಎನ್ನುವ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

LIC Policy Details-ನಿಮ್ಮ ಹೆಸರಿನಲ್ಲಿ ಎಷ್ಟು ಪಾಲಿಸಿಗಳಿವೆ ಎಂದು ತಿಳಿಯುವುದು ಹೇಗೆ?

ಹಲವು ಬಾರಿ ನಾವು ವಿವಿಧ ಏಜೆಂಟರ ಮೂಲಕ ಪಾಲಿಸಿಗಳನ್ನು ಮಾಡಿಸಿರುತ್ತೇವೆ, ಕಾಲಾನಂತರದಲ್ಲಿ ಅವುಗಳ ಪಟ್ಟಿಯನ್ನು ಮರೆತಿರಬಹುದು. ನಿಮ್ಮ ಹೆಸರಿನಲ್ಲಿರುವ ಪಾಲಿಸಿಗಳನ್ನು ಪತ್ತೆಹಚ್ಚಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಇದು ಅತ್ಯಂತ ಅಧಿಕೃತ ಮಾರ್ಗವಾಗಿದ್ದು ನೀವು ಎಲ್ಐಸಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದರೆ, ನಿಮ್ಮ ಲಾಗಿನ್ ಐಡಿ ಬಳಸಿ ಲಾಗಿನ್ ಆಗುವ ಮೂಲಕ ನಿಮ್ಮ ಎಲ್ಲಾ ಪಾಲಿಸಿಗಳನ್ನು ಒಂದೇ ಕಡೆ ನೋಡಬಹುದು.

ಜೊತೆಗೆ ನಿಮ್ಮ ಬಳಿ ಇರುವ ಭೌತಿಕ ಪಾಲಿಸಿ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿ. ಅದರಲ್ಲಿರುವ 'ಪಾಲಿಸಿ ಸಂಖ್ಯೆ'ಯನ್ನು ನೋಟ್ ಮಾಡಿಕೊಳ್ಳಿ. ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಲ್ಐಸಿಗೆ ಸಂದೇಶ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

Step-1: ಗ್ರಾಹಕರು ಮೊದಲಿಗೆ ಇಲ್ಲಿ ಕ್ಲಿಕ್ LIC Policy Status ಮಾಡಿ ಅಧಿಕೃತ ಭಾರತೀಯ ಜೀವ ವಿಮಾ ನಿಗಮ (LIC)ದ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡಿತ್ತಿರುವ ಗ್ರಾಹಕರು ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಈ ಪೇಜ್ ನಲ್ಲಿ ನಿಗದಿಪಡಿಸಿದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ LIC ಪಾಲಿಸಿ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

LIC Policy Status Check On Mobile-ಮೊಬೈಲ್ ಮೂಲಕ ಪಾಲಿಸಿ ಸ್ಟೇಟಸ್ ಚೆಕ್ ಮಾಡುವ ವಿಧಾನಗಳು:

ನಿಮ್ಮ ಪಾಲಿಸಿ ಈಗ ಚಾಲ್ತಿಯಲ್ಲಿದೆಯೇ (Inforce) ಅಥವಾ ಲ್ಯಾಪ್ಸ್ (Lapsed) ಆಗಿದೆಯೇ ಎಂದು ತಿಳಿಯಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.

ಗ್ರಾಹಕರು ತಮ್ಮ ಮೂಬೈಲ್ ನಲ್ಲಿ ಈ Download LIC App ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್‌ನಿಂದ 'LIC Digital' ಆಪ್ ಡೌನ್‌ಲೋಡ್ ಮಾಡಿ, ನೀವು ಹೊಸಬರಾಗಿದ್ದರೆ 'New User' ಮೇಲೆ ಕ್ಲಿಕ್ ಮಾಡಿ ನೋಂದಾಯಿಸಿ. ಬಳಿಕ ಲಾಗಿನ್ ಆದ ನಂತರ 'Policy Status' ವಿಭಾಗಕ್ಕೆ ಹೋಗಿ ನಿಮ್ಮ ಪಾಲಿಸಿ ಸಂಖ್ಯೆಯನ್ನು ನಮೂದಿಸಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಇದಲ್ಲದೇ ನೀವು ಲಾಗಿನ್ ಆಗದೆ ನೇರವಾಗಿ ಸ್ಟೇಟಸ್ ತಿಳಿಯಬೇಕೆಂದರೆ ಎಲ್ಐಸಿ ವೆಬ್‌ಸೈಟ್‌ನ 'Customer Services' ವಿಭಾಗದಲ್ಲಿ ಲಭ್ಯವಿರುವ ಚಾಟ್ ಬಾಟ್ (LIC Mitra) ಅನ್ನು ಬಳಸಬಹುದು.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

LIC Policy Online Premium Pay Method-ಆನ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿಸುವ ವಿಧಾನಗಳು:

ಇಂದಿನ ಡಿಜಿಟಲ್ ಯುಗದಲ್ಲಿ LIC ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅನೇಕ ಮಾರ್ಗಗಳಿದ್ದು ಇವುಗಳಲ್ಲಿ ಕೇಲವು ಸುಲಭ ಆಯ್ಕೆಗಳ ಪಟ್ಟಿ ಇಲ್ಲಿದೆ:

ವಿಧಾನವಿವರಣೆ
LIC Websiteಎಲ್ಐಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ಲಾಗಿನ್ ಇಲ್ಲದೆ ನೇರವಾಗಿ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.
UPI ಆಪ್‌ಗಳುPhonePe, Google Pay, ಮತ್ತು Paytm ಆಪ್‌ಗಳಲ್ಲಿ 'Insurance' ವಿಭಾಗಕ್ಕೆ ಹೋಗಿ LIC ಆಯ್ಕೆ ಮಾಡುವ ಮೂಲಕ ಪಾವತಿಸಬಹುದು.
Net Bankingನಿಮ್ಮ ಬ್ಯಾಂಕ್‌ನ ಅಧಿಕೃತ ಆಪ್ ಅಥವಾ ವೆಬ್‌ಸೈಟ್ ಮೂಲಕ 'Bill Pay' ವಿಭಾಗದಲ್ಲಿ ಎಲ್ಐಸಿ ಸೇರಿಸಬಹುದು.
LIC Digital Appಎಲ್ಐಸಿಯ ಸ್ವಂತ ಆಪ್ ಮೂಲಕ ಸುರಕ್ಷಿತವಾಗಿ ಹಣ ಪಾವತಿಸಬಹುದು.

ಇದನ್ನೂ ಓದಿ: Adarsha Vidyalaya Admission-ಆದರ್ಶ ವಿದ್ಯಾನಿಯಲಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

LIC Policy Status

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

ಪ್ರಮುಖ ಸೂಚನೆಗಳು ಮತ್ತು ಮುನ್ನೆಚ್ಚರಿಕೆಗಳು:

ನೋಂದಾಯಿತ ಮೊಬೈಲ್ ಸಂಖ್ಯೆ: ನಿಮ್ಮ ಎಲ್ಲಾ ಆನ್‌ಲೈನ್ ಸೇವೆಗಳು ಸುಗಮವಾಗಿ ನಡೆಯಲು ನಿಮ್ಮ ಪಾಲಿಸಿಗೆ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಲಿಂಕ್ ಆಗಿರುವುದು ಅತ್ಯಗತ್ಯ.

ವಂಚನೆಗಳಿಂದ ಎಚ್ಚರ: ಎಲ್ಐಸಿ ಅಧಿಕಾರಿಗಳು ಎಂದಿಗೂ ಫೋನ್ ಕರೆ ಮಾಡಿ ನಿಮ್ಮ ಓಟಿಪಿ (OTP) ಅಥವಾ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ. ಅಂತಹ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.

ಅಧಿಕೃತ ಲಿಂಕ್ ಮಾತ್ರ ಬಳಸಿ: ಯಾವಾಗಲೂ www.licindia.in ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ.

ಡಿಜಿಟಲೀಕರಣದಿಂದಾಗಿ ಇಂದು ವಿಮೆಯ ಹೂಡಿಕೆ ಮತ್ತು ಅದರ ನಿರ್ವಹಣೆ ಅತ್ಯಂತ ಸರಳವಾಗಿದೆ. ನಿಮ್ಮ ಭವಿಷ್ಯದ ಭದ್ರತೆಗಾಗಿ ಮಾಡಿರುವ ಪಾಲಿಸಿಯನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಮತ್ತು ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಬಹಳ ಮುಖ್ಯ. ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಎಲ್ಲವನ್ನೂ ನಿರ್ವಹಿಸಿ.

ಇದನ್ನೂ ಓದಿ: Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!

LIC Helpline Number-ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ಸಹಾಯವಾಣಿಗೆ ಸಂಪರ್ಕಿಸಿ: +91-02268276827
LIC Website Link-ಎಲ್ಐಸಿ ವೆಬ್ಸೈಟ್ ಲಿಂಕ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: