ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಎಸ್ಕಾಂ ಗಳಲ್ಲಿ ಖಾಲಿಯಿರುವ ಲೈನ್‌ಮೆನ್ ಭರ್ತಿಗೆ(Lineman Job) ಈಗಾಗಲೇ ನೇಮಕಾತಿ ಮಂಡಳಿಯಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಈ ಕುರಿತು ಇಂದನ ಸಚಿವಕೆ ಜೆ ಜಾರ್ಜ್ ಅವರು ಹಂಚಿಕೊಂಡಿರುವ ಪತ್ರಿಕಾ ಪ್ರಕಟಣೆ ವಿವರವನ್ನು ಇಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಮನೆ-ಮನೆಗೆ ವಿದ್ಯುತ್ ಸಂಪರ್ಕವನ್ನು ಸಮರ್ಪಕವಾಗಿ ವಿತರಣೆ ಮಾಡುವ ಕೆಲಸವನ್ನು ಅಸ್ತಿತ್ವದಲ್ಲಿರುವ ಎಸ್ಕಾಂ ಗಳಿಂದ ಮಾಡಲಾಗುತ್ತದೆ ಬೆಸ್ಕಾ(Bescom), ಹೆಸ್ಕಾಂ(Hescom), ಮೆಸ್ಕಾಂ(Mescom) ಸೇರಿದಂತೆ ಇತರೆ ಎಸ್ಕಾಂ ಗಳಲ್ಲಿ ಖಾಲಿಯಿರುವ ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್, ಎಇಇ, ಜೆಇ ಹುದ್ದೆಗಳಿಗೆ ನೇಮಕಾತಿಗೆ ಈಗಾಗಲೇ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ನೇಮಕಾತಿಗೆ ಸಂಬಂದಪಟ್ಟಂತೆ ಒಂದಿಷ್ಟು ಉಪಯುಕ್ತ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!
Lineman Job- ಏಪ್ರಿಲ್ ಅಂತ್ಯಕ್ಕೆ 3 ಸಾವಿರ ಲೈನ್‌ಮೆನ್ ನೇಮಕ: ಕೆ ಜೆ ಜಾರ್ಜ್
ಖಾಲಿ ಇರುವ 3 ಸಾವಿರ ಲೈನ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಬರುವ ಏಪ್ರಿಲ್‌ನೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಬಳಿಕ ಎಇಇ, ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
JLM Recruitment-ಹುದ್ದೆಗಳ ಭರ್ತಿಗೆ ಒಂದೇ ದಿನ ಏಕ ಕಾಲಕ್ಕೆ ದೈಹಿಕ ಪರೀಕ್ಷೆ:
ಮೇಲಿ ತಿಳಿಸಿರುವ ಹುದ್ದೆಗಳ ಭರ್ತಿಗೆ ಇಂದನ ಇಲಾಖೆಯಿಂದ 2024 ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅನ್ಲೈನ್ ಮೂಲಕ ಒಟ್ಟು 2975 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಈ ಹುದ್ದೆಗಳ ಭರ್ತಿಗೆ ಒಂದು ದಿನ ಏಕ ಕಾಲಕ್ಕೆ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಇಂದನ ಸಚಿವಕೆ ಜೆ ಜಾರ್ಜ್ ಅವರು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: Police Department-ಸಂಪುಟ ಸಭೆಯಲ್ಲಿ ಪೋಲಿಸ್ ಇಲಾಖೆಯ ನೇರ ನೇಮಕಾತಿ ಕುರಿತು ಮಹತ್ವದ ನಿರ್ಣಯ!

Hescom jobs-ಇಂಧನ ಇಲಾಖೆ ಯಾವೆಲ್ಲ ಎಸ್ಕಾಂ ನಲ್ಲಿ ನೇಮಕಾತಿ ನಡೆಸಲಾಗುತ್ತಿದೆ:
ಒಟ್ಟು 2975 ಹುದ್ದೆಗಳ ಭರ್ತಿಗೆ ಇಲಾಖೆಯಿಂದ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಇಂಧನ ಇಲಾಖೆಯಡಿ ಬರುವ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ನೇಮಕ ಮಾಡಿಕೊಳ್ಳಲಾಗುತ್ತಿದೆ
JLM Notification-ಹುದ್ದೆವಾರು ಅಂಕಿ-ಅಂಶ ಹೀಗಿದೆ:
1) ಕಿರಿಯ ಸ್ಟೇಷನ್ ಪರಿಚಾರಕ- 433 ಹುದ್ದೆಗಳು
2) ಕಿರಿಯ ಪವರ್‌ಮ್ಯಾನ್- 2542 ಹುದ್ದೆಗಳು
ಇದನ್ನೂ ಓದಿ: Annabhagya Amount- ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!
JLM Monthly Salary-ಮಾಸಿಕ ವೇತನ ವಿವರ:
ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಂದನ ಇಲಾಕೆಯಿಂದ ಈ ಕೆಳಗೆ ತಿಳಿಸಿರುವ ವೇತನವನ್ನು ನಿಗದಿಪಡಿಸಲಾಗಿದೆ.
- 1ನೇ ವರ್ಷ : ₹17,000/- ರೂ
- 2ನೇ ವರ್ಷ: ₹19,000/- ರೂ
- 3ನೇ ವರ್ಷ: ₹21,000/- ರೂ
ಇದನ್ನೂ ಓದಿ: Milk Price-ರೈತರಿಗೆ ಸಿಹಿ ಸುದ್ದಿ! ಹಾಲಿದ ದರ ಹೆಚ್ಚಳ ಮಾಡಿದ ಕೆ ಎಂ ಎಫ್!
AEE and JE Jobs-ಎಇಇ, ಜೆಇ ಹುದ್ದೆಗಳ ಭರ್ತಿಗೆ ಕ್ರಮ:
2975 ಲೈನ್‌ಮೆನ್ ಹುದ್ದೆಗಳ ಭರ್ತಿ ಕಾರ್ಯ ಪೂರ್ಣಗೊಂಡ ಬಳಿಕ ಮುಂದಿನ ಕೆಲವು ದಿನಗಳಲ್ಲಿ ಎಇಇ, ಜೆಇ ಹುದ್ದೆಗಳ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಇಂದನ ಸಚಿವರು ಮಾಹಿತಿ ಹಂಚಿಕೊಂಡಿದ್ದು ಈ ಹುದ್ದೆಗಳಿಗೆ ಹೊಸ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇರುತ್ತದೆ. ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಇಂಜಿನಿಯರಿಂಗ್ ಪದವಿ, ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿರುವವರು ಇಂಧನ ಇಲಾಖೆ ಎಇಇ, ಜೆಇ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳಬಹುದಾಗಿದೆ.