Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

October 30, 2025 | Siddesh
Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕೃಷಿ ಮಾರುಕಟ್ಟೆ ಇಲಾಖೆ(Krishi Marata Ilake)ವತಿಯಿಂದ ಸಚಿವರಾದ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಮೆಕ್ಕೆಜೋಳ(Mekkejola) ಮತ್ತು ಈರುಳ್ಳಿ(Onion Price) ಬೆಲೆ ಕುಸಿತಕ್ಕೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳುದರ ಬಗ್ಗೆ ತೆಗೆದುಕೊಂಡ ನಿರ್ಣಯಗಳ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮೆಕ್ಕೆಜೋಳ(Maize Price) ಮತ್ತು ಈರುಳ್ಳಿ ಬೆಲೆಯು ತೀರ್ವ ಕುಸಿತವನ್ನು ಕಂಡಿದ್ದು ಕಷ್ಟಪಟ್ಟು 3-4 ತಿಂಗಳು ಶ್ರಮವಹಿಸಿ ರೈತರು ಬೆಳೆಯನ್ನು ಬೆಳೆದ ಬಳಿಕ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬಂದ ತಕ್ಷಣ ಖರೀದಿದಾರರು ಉತ್ಪನ್ನದ ಮೌಲ್ಯವನ್ನು ಕಡಿಮೆಗೊಳಿಸುದರಿಂದ ರೈತರಿಗೆ ಲಾಭ ದೊರೆಯದಂತಾಗಿದೆ.

ಇದನ್ನೂ ಓದಿ: Pension Scheme-ಕಾರ್ಮಿಕ ಇಲಾಖೆಯ ವತಿಯಿಂದ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ರೈತರು ಬೆಳೆದ ಬೆಳೆಗೆ ಉತ್ತಮ ದರವನ್ನು ನೀಡಲು ಕೃಷಿ ಮಾರುಕಟ್ಟೆ ಇಲಾಖೆಯಿಂದ ಯಾವೆಲ್ಲ ಕ್ರಮಗಳನು ಅನುಸರಿಸಬೇಕು? ಇದಕ್ಕಾಗಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು? ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Agriculture Market-ಮೂರು ತಿಂಗಳು ಮೊದಲೇ ಯೋಜನೆ ರೂಪಿಸಿ: ಸಚಿವ ಶಿವಾನಂದ ಪಾಟೀಲ

ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆವಕವಾಗುವ ಮೂರು ತಿಂಗಳು ಮುಂಚಿತವಾಗಿ ಮಾರುಕಟ್ಟೆ ಕಲ್ಪಿಸಲು ಯೋಜನೆ ರೂಪಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮೆಕ್ಕೆಜೋಳ ಮತ್ತು ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಹಿಂದೆ ಕೊಬ್ಬರಿ ಬೆಲೆ ಕುಸಿತದ ಸಂದರ್ಭದಲ್ಲಿ ತಕ್ಷಣ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿದ ಪರಿಣಾಮ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತ ನಿಯಂತ್ರಿಸಲು ಸಾಧ್ಯವಾಯಿತು. ಹೀಗಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತರಕ್ಷಣೆ ಮಾಡಬಹುದು. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: Scholarship Application-ಸಮಾಜ ಕಲ್ಯಾಣ ಇಲಾಖೆಯಿಂದ 5 ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ!

Maize MSP-2025: ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ:

ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಲೆಯು ಕುಸಿತ ಕಂಡಿದ್ದು ರೈತರಿಗೆ ಬೆಲೆ ಕುಸಿತದಿಂದ ಪಾರಾಗಿ ಉತ್ತಮ ದರದಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಲು ಪ್ರತಿ ವರ್ಷದಂತೆ ಈ ವರ್ಷವು ಕರ್ನಾಟಕ ಹಾಲು ಉತ್ಪಾದಕ ಮಂಡಳಿಯು ರೈತರಿಗೆ ನೇರವಾಗಿ ಮೆಕ್ಕೆಜೋಳವನ್ನು ಖರೀದಿಸುವಂತೆ ಸಭೆಯಲ್ಲಿ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಶಿವಸ್ವಾಮಿ ಅವರಿಗೆ ಮನವಿ ಮಾಡಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಶಿವಸ್ವಾಮಿ ಅವರಿಗೆ ಮನವಿ ಮಾಡಿದರು. ನಾಫೆಡ್ ಅಧಿಕಾರಿಗಳಿಗೂ ಕೂಡ ಕಳೆದ ವರ್ಷದಂತೆ ಖರೀದಿಗೆ ಅನುಮತಿ ಪಡೆಯಲು ಪ್ರಯತ್ನಿಸಿ ಎಂದು ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ: MSP Purchase-ರೈತರಿಗೆ ಸಿಹಿ ಸುದ್ದಿ! ಇಂದಿನಿಂದ ಬೆಂಬಲ ಬೆಲೆಯಲ್ಲಿ ಸೋಯಾಬಿನ್,ಸೂರ್ಯಕಾಂತಿ,ಹೆಸರು ಕಾಳು ಖರೀದಿ ಆರಂಭ!

Mekkejola Bembala Bele-ಮೆಕ್ಕೆಜೋಳದ ಬೆಂಬಲ ಬೆಲೆ ಎಷ್ಟು?

ಕೇಂದ್ರ ಸರಕಾರವು ರೈತರಿಂದ ನೇರವಾಗಿ ಖರೀದಿ ಮಾಡುವ ಮೆಕ್ಕೆಜೋಳಕ್ಕೆ ಪ್ರಸ್ತುತ 2025-26 ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ 2,400/- ನಿಗದಿಪಡಿಸಿದ್ದು ಅದರೆ ಆಹಾರ ಧಾನ್ಯಗಳನ್ನು ಮಾತ್ರ ಸರಕಾರ ಪ್ರಸ್ತುತ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡುತ್ತಿದೆ.

Onion Crop MSP-ಈರುಳ್ಳಿ ಬೆಳೆಗಾರರನ್ನು ಬೆಲೆ ಕುಸಿತದಿಂದ ಪಾರು ಮಾಡಲು ಪಿಡಿಪಿಎಸ್ ಅಡಿಯಲ್ಲಿ ಖರೀದಿ ಅವಶ್ಯಕ:

ಈರುಳ್ಳಿ ಬೆಳೆಗಾರರನ್ನು ಬೆಲೆ ಕುಸಿತದಿಂದ ಪಾರು ಮಾಡಲು ಪಿಡಿಪಿಎಸ್ ಅಡಿಯಲ್ಲಿ ಖರೀದಿ ಮಾಡುವುದೇ ಈಗ ಇರುವ ಏಕೈಕ ಪರಿಹಾರ ಮಾರ್ಗವಾಗಿದ್ದು, ಕೇಂದ್ರದ ಅನುಮತಿ ಪಡೆಯಬೇಕು ಎಂದು ಹೇಳಿದರು.

ಸಭೆಯಲ್ಲಿ ಸಹಕಾರ ಇಲಾಖೆಯ ಕಾರ್ಯದರ್ಶಿಗಳಾದ ಎಸ್.ಬಿ. ಶೆಟ್ಟೆಣ್ಣವರ್, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಾದ ಶಿವಾನಂದ ಕಾಪಸೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆ, ನಾಫೆಡ್, ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: RTO Online Servises-ವಾಹನ ಮಾಲೀಕರಿಗೆ ಸಿಹಿ ಸುದ್ದಿ! ಇನ್ಮುಂದೆ RTO ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್!

Daily Agriculture Market Price-ಪ್ರತಿ ದಿನ ನಿಮ್ಮ ಮೊಬೈಲ್ ನಲ್ಲೇ ಕೃಷಿ ಉತ್ಪನ್ನ ಮಾರುಕಟ್ಟೆಯ ಬೆಲೆ ಚೆಕ್ ಮಾಡಿ:

ರೈತರು ಪ್ರತಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಕೃಷಿ ಮಾರುಕಟ್ಟಯಲ್ಲಿ ಉತ್ಪನ್ನವಾರು ಪ್ರತಿ ಕ್ವಿಂಟಾಲ್ ಗೆ ಎಷ್ಟು ಧಾರಣೆ ಅಗಿದೆ ಎನ್ನುವ ಮಾಹಿತಿಯನ್ನು ಬೆರಳ ತುದಿಯಲ್ಲಿ ಮನೆಯಲ್ಲೇ ಇದ್ದು ನಿಮ್ಮ ಮೊಬೈಲ್ ನಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಪ್ರತಿ ದಿನದ ಧಾರಣೆ ಮಾಹಿತಿಯನ್ನು ಕೆಳಗಿನ ವಿಧಾನವನ್ನು ಅನುಸರಿಸಿ ಪಡೆಯಬಹುದು.

Step-1: ರೈತರು ಮೊದಲಿಗೆ "Check Daily Market Rates" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕೃಷಿ ಮಾರುಕಟ್ಟೆ ಇಲಾಕೆಯ krishimarata vahini ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Kotak Scholarships-ಮಹೀಂದ್ರಾ ಗ್ರೂಪ್ ಕಂಪನಿ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Daily Agriculture Market Price

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣುವ "ಬೆಲೆ ವರದಿಗಳು" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಈ ಪುಟದಲ್ಲಿ ವಿವಿಧ ಆಯ್ಕೆಗಳು ಕಾಣಿಸುತ್ತವೆ ಇಲ್ಲಿ "ಉತ್ಪನ್ನವಾರು ದೈನಂದಿನ ವರದಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕೆಳಗೆ ಕಾಣಿಸುವ "ವರದಿ ನೋಡುವುದು" ಬಟನ್ ಮೇಲೆ ಕ್ಲಿಕ್ ಮಾಡಿ.

ಸೂಚನೆ: ಮೇಲೆ ಕಾಣಿಸುವ ದಿನಾಂಕ ಕಾಲಂ ನಲ್ಲಿ ನಿಮಗೆ ಬೇಕಾಗುವ ದಿನಾಂಕವನ್ನು ನಮೂದಿಸುವ ಅವಕಾಶವಿರುತ್ತದೆ.

Step-3: ತದನಂತರ ಈ ಪೇಜ್ ನಲ್ಲಿ ಉತ್ಪನ್ನದ ಪಟ್ಟಿ ತೋರಿಸುತ್ತದೆ ಇಲ್ಲಿ ನೀವು ಯಾವ ಬೆಳೆಯ ಮಾರುಕಟ್ಟೆ ಧಾರಣೆಯನ್ನು ತಿಳಿಯಬೇಕೋ ಅದರ ಮೇಲೆ ಟಿಕ್ ಮಾಡಿ ಕೆಳಗೆ "ವರದಿ ನೋಡುವುದು" ಬಟನ್ ಮೇಲೆ ಕ್ಲಿಕ್ ಮಾಡಿದರೆ ರಾಜ್ಯದಲ್ಲಿರುವ ಎಲ್ಲಾ APMC ವಾರು ಆ ದಿನದ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: