Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!

April 18, 2025 | Siddesh
Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!
Share Now:

ಹವಾಮಾನ ಇಲಾಖೆಯಿಂದ(IMD) ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನ ಮಳೆ ಮುನ್ಸೂಚನೆಯ(Monsoon rainfall percentage India) ಕುರಿತು ಅಧಿಕೃತ ಮಾಹಿತಿಯನ್ನು ಪತ್ರಿಕಾ ಮಾಧ್ಯಮದ ಮೂಲಕ ಹಂಚಿಕೊಂಡಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ಲೇಖನದಲ್ಲಿ ರಾಜ್ಯದ ಮಳೆ ಮಾಹಿತಿ ಮತ್ತು ನಾಳೆ ಬೆಳಗ್ಗೆ ವರೆಗಿನ ಹವಾಮಾನ ಮುನ್ಸೂಚನೆ ವಿವರ ಸೇರಿದಂತೆ ಮಳೆ ಮುನ್ಸೂಚನೆಯ ಕುರಿತು ಇನ್ನಿತರೆ ಉಪಯುಕ್ತ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: 1st standard admission age-ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾತಿಗೆ ವಯೋಮಿತಿ ಸಡಿಲಿಕೆ!

ಭಾರತೀಯ ಹವಾಮಾನ ಇಲಾಖೆ (IMD) ರೈತರು ಸೇರಿದಂತೆ ಕೃಷಿ ಅವಲಂಬಿತ ಸಮುದಾಯಕ್ಕೆ ಈ ಬಾರಿಯ ಮುಂಗಾರು ಹಂಗಾಮು(monsoon news) ಶುಭವೇಳೆಯನ್ನು ತರಲಿದೆಯೆಂಬ ಮುನ್ಸೂಚನೆ ನೀಡಿದೆ. 2025ರ ಜೂನ್‌ ತಿಂಗಳಿಂದ ಸೆಪ್ಟೆಂಬರ್‌ವರೆಗೆ ನಡೆಯುವ ನೈರುತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

Male Munsuchane-ಸರಾಸರಿ ಮಳೆಯ ಮಟ್ಟಕ್ಕಿಂತ ಹೆಚ್ಚಾಗುವ ನಿರೀಕ್ಷೆ:

ಹವಾಮಾನ ಇಲಾಖೆ ಪ್ರಕಾರ, ಈ ಬಾರಿ ದೇಶದ ಬಹುತೇಕ ಭಾಗಗಳಲ್ಲಿ ಸರಾಸರಿ ಮಳೆಯ ಪ್ರಮಾಣಕ್ಕಿಂತ ಶೇ 105ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 87 ಸೆಂಟಿಮೀಟರ್‌ ಮಳೆಯಾಗುವುದು ರೂಢಿ. ಆದರೆ ಈ ಬಾರಿ ಪ್ರಾಕೃತಿಕವಾಗಿ ಮುಂಗಾರು ಸಮೃದ್ಧವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಇದನ್ನೂ ಓದಿ: SSLC Result-2025: ಎಸ್ಸೆಸ್ಸೆಲ್ಸಿ ಫಲಿತಾಂಶ-2025: ಈ ದಿನ ಪ್ರಕಟಣೆ ಸಾಧ್ಯತೆ!

Rain Forecast-ರೈತರಿಗೆ ನಿರೀಕ್ಷೆಯ ಬೆಳಕು:

ಈ ಮುನ್ಸೂಚನೆ ರೈತ ಸಮುದಾಯಕ್ಕೆ ಖಂಡಿತ ಧೈರ್ಯ ನೀಡುವಂತಹದು. ಈ ಹಂಗಾಮು ಉತ್ತಮ ಮಳೆಯ ಕಾರಣದಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಬಿತ್ತನೆ, ಬೆಳೆ ಬೆಳವಣಿಗೆ, ನೀರಿನ ಲಭ್ಯತೆ ಮತ್ತು ಇತ್ಯಾದಿಗಳಲ್ಲಿ ಸಹಕಾರ ಸಿಗಲಿದೆ.

Karnataka Rain Forecast-ಉತ್ತಮ ಮುಂಗಾರು ಮುನ್ಸೂಚನೆ ನೀಡಲು ಅಧಿಕೃತ ಕಾರಣಗಳು:

ಹವಾಮಾಣ ಇಲಾಕೆಯಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ಮಾಹಿತಿಯ ಪ್ರಕಾರ ಹವಾಮಾನ ಇಲಾಖೆಯು ಈ ಮುನ್ಸೂಚನೆ ನೀಡಿರುವುದಕ್ಕೆ ಪೆಸಿಫಿಕ್ ಮಹಾಸಾಗರ ತಾಪಮಾನ, ವಾಯುಮಂಡಲದ ಚಲನೆಗಳು, ಇಳಿಜಾರಿನ ದಬ್ಬಾಳಿಕೆ ಹಾಗೂ ಇತರ ವಿಜ್ಞಾನ ಆಧಾರಿಸಿ ಉತ್ತಮ ಮುಂಗಾರು ಮಳೆ ಮುನ್ಸೂಚನೆಯನ್ನು ನೀಡಲಾಘಿದೆ ಸೂಚನೆಗಳನ್ನು ಪರಿಗಣಿಸಿದೆ.

ಇದನ್ನೂ ಓದಿ: Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

Monsoon Forecast

ಇದನ್ನೂ ಓದಿ: Scholarship-SSLC ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ 15,000/- ಪ್ರೋತ್ಸಾಹ ಧನ!

Monsoon Forecast-2025: ಸಿದ್ಧತೆಯ ಸಮಯ:

ಹವಾಮಾನ ವರದಿಯ ಬೆಳವಣಿಗೆ ಬೆಳೆಗೊಳ್ಳುತ್ತಿರುವಾಗ ರೈತರು ತಮ್ಮ ಕೃಷಿ ಯೋಜನೆಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳುವುದು ಶ್ರೇಯಸ್ಕರ. ಬೀಜಗಳ ಆಯ್ಕೆ, ಬೆಳೆ ವಿಮಾ ಯೋಜನೆಗಳಲ್ಲಿ ನೋಂದಣಿ ಹಾಗೂ ನೀರಿನ ಮೂಲಗಳ ಸಜ್ಜುಗೊಳಿಸುವಂತೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವುದು ಉಪಯುಕ್ತವಾಗುತ್ತದೆ.

KSNDMC Twitter-ರಾಜ್ಯದ ಮಳೆ ಮುನ್ಸೂಚನೆಯ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ:

ರೈತರು ತಮ್ಮ ಮೊಬೈಲ್ ನಲ್ಲಿ ಎಕ್ಸ್(Twitter) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ Weather Updates ಲಿಂಕ್ ಮೇಲೆ ಕ್ಲಿಕ್ ಮಾಡಿ KSNDMC ಯ ಅಧಿಕೃತ ಖಾತೆಯನ್ನು ಪಾಲೋ ಮಾಡುವುದರ ಮೂಲಕ ಪ್ರತಿ ನಿತ್ಯ ರಾಜ್ಯ ಮಳೆ ವಿವರ ಮತ್ತು ಮುನ್ಸೂಚನೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Agniveer recruitment-8ನೇ ತರಗತಿ ಪಾಸಾದವರಿಗೆ ಅಗ್ನಿವೀರ್ ನೇಮಕಾತಿಗಾಗಿ ಅರ್ಜಿ ಆಹ್ವಾನ!

Male mahiti-ಮಳೆ ಮಾಹಿತಿ:

ನಿನ್ನೆ ಅಂದರೆ 17th ಏಪ್ರಿಲ್ 8.30AM ರಿಂದ 17th ಏಪ್ರಿಲ್ 2025 ರ 4.30PM ರವರೆಗೆ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲ್ಲೂಕಿನ ಆಣೂರು ವ್ಯಾಪ್ತಿಯಲ್ಲಿ ಅತ್ಯಧಿಕ 43.5 ಮಿಮೀ ಮಳೆ ದಾಖಲಾಗಿರುತ್ತದೆ ಉಳಿದಂತೆ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಬಂದಿರುತ್ತದೆ.

Karnataka Weather Forecast-ರಾಜ್ಯದ ಮಳೆ ಮುನ್ಸೂಚನೆ:

ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆಯಲ್ಲಿ ಗುರುತಿಸಿದ ಹಾಗೆ ರಾಜ್ಯದ ಕರಾವಳಿ ಜಿಲ್ಲೆ ಮತ್ತು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಜೊತೆಗೆ ರಾಯಚೂರು, ಯಾದಗಿರಿ,ಕೊಪ್ಪಳ, ಬಳ್ಳಾರಿ, ದಾರವಾಡ, ಹಾವೇರಿ ಬೆಳಗಾವಿ,ಕಲಬುರ್ಗಿ,ಗದಗ ಜಿಲ್ಲೆಯ ಅಲ್ಲಲ್ಲಿ ಸಹ ಮಳೆ ಮುನ್ಸೂಚನೆ ನೀಡಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: