Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಮುಖ್ಯ ದಾಖಲೆಯಲ್ಲಿ ಒಂದಾದ ಪಹಣಿ/ಊತಾರ್/RTC(Online RTC) ಅನ್ನು ಒಂದೆರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ನೈಜ ಸ್ಥಿತಿಯನ್ನು ಉಚಿತವಾಗಿ ನೋಡಬಹುದು.

ಉಚಿತವಾಗಿ ಪಹಣಿಯನ್ನು ಹೇಗೆ ಮೊಬೈಲ್ ನಲ್ಲಿ ನೋಡುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದ್ದು ರೈತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಕ್ಷಣಾರ್ದಲ್ಲಿ ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಮಾಲೀಕರ ವಿವರ ಮತ್ತು ಅಧಿಕೃತ ಪಹಣಿ/ಊತಾರ್ ಅನ್ನು ನೋಡಬಹುದು.

ಕಂದಾಯ ಇಲಾಖೆಯಿಂದ ಜಮೀನಿನ ಮಾಲೀಕರ ವಿವರವನ್ನು ಮತ್ತು ಆ ಜಮೀನಿನ ವಿಸ್ತೀರ್ಣ ಹಾಗೂ ಆ ಜಮೀನಿನ ಮೇಲೆ ಬ್ಯಾಂಕ್ ಮೂಲಕ ತೆಗೆದಿರುವ ಸಾಲವನ್ನು ಸೂಚಿಸಲು ಪಹಣಿ ದಾಖಲೆಯನ್ನು ನೀಡಲಾಗುತ್ತದೆ. ಈ ದಾಖಲೆಯಲ್ಲಿ ಜಮೀನಿನ ಎಲ್ಲಾ ವಿವರ ಅಡಕವಾಗಿರುತ್ತದೆ ಆದ್ದರಿಂದ ರೈತರಿಗೆ ಈ ದಾಖಲೆಯು ಅತೀ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: Motor repair- ಉಚಿತ 30 ದಿನದ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಟ್ರೈನಿಂಗ್ ಪಡೆಯಲು ಅರ್ಜಿ ಆಹ್ವಾನ!

Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್:

ಕಂದಾಯ ಇಲಾಖೆಯಿಂದ ಜಮೀನಿನ ಪಹಣಿಯನ್ನು ಉಚಿತವಾಗಿ ರೈತರು ತಮ್ಮ ಮೊಬೈಲ್ ಗಳಲ್ಲಿ ವೀಕ್ಷಣೆ ಮಾಡಲು landrecords.karnataka.gov.in ಈ ವೆಬ್ಸೈಟ್ ಚಾಲ್ತಿಯಲ್ಲಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪಹಣಿಯನ್ನು ನೋಡಬಹುದು.

Step-1: ಮೊದಲಿಗೆ ಈ Online RTC ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು, ಹಳ್ಳಿ ಹಾಗೂ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು ಪಹಣಿ ನೋಡಲು ಇಚ್ಚಿಸಿರುವ ವರ್ಷವನ್ನು ಆಯ್ಕೆ ಮಾಡಿ “Fetch Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?

rtc

Step-3: “Fetch Details” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಇಲ್ಲಿ “Owner Details” ಎಂದು ಆ ಜಮೀನಿನ ಮಾಲೀಕರ ಹೆಸರು ಖಾತಾ ಸಂಖ್ಯೆ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ತೋರಿಸುತ್ತದೆ ಇಲ್ಲಿ ಕೆಳಗಡೆ ಬಲ ಬದಿಯಲ್ಲಿ ಕಾಣುವ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ಪಹಣಿ/ಊತಾರ್ ತೋರಿಸುತ್ತದೆ.

Find Land Survey number hissa- ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಮರೆತು ಹೋಗಿದರೆ ಈ ವಿಧಾನವನ್ನು ಅನುಸರಿಸಿ ಸರ್ವೆ ನಂಬರ್ ಪಡೆಯಿರಿ:

ಒಂದೊಮ್ಮೆ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಮರೆತು ಹೋಗಿದ್ದರೆ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಕ್ ನಲ್ಲೇ ಮರೆತು ಹೋದ ಜಮೀನಿನ ಪಹಣಿ/ಊತಾರ್/RTC ಹಿಸ್ಸಾ ನಂಬರ್ ಅನ್ನು ಪಡೆಯಬಹುದು.

Step-1: ಮೊದಲಿಗೆ ಈ Find Survey number hissa ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

rtc

Step-2: ಇಲ್ಲಿ ವರ್ಷ “2024-25” ಎಂದು ಆಯ್ಕೆ ಮಾಡಿಕೊಂಡು “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಇಲ್ಲಿ View PR Uploaded Crop Info ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಯಲ್ಲಿ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಅನ್ನು ಹಾಕಿ “Get Crop Survey Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸರ್ವೆ ನಂಬರ್ ನಲ್ಲಿರುವ ಎಲ್ಲಾ ಹಿಸ್ಸಾ ಸಂಖ್ಯೆ ತೋರಿಸುತ್ತದೆ.