ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ(PM-Kisan 19th installment Release date) ಮಾಡಲು ಕೇಂದ್ರದಿಂದ ಈಗಾಗಲೇ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು ಈ ಕುರಿತು ಹೊರಡಿಸಿರುವ ನೂತನ ಪ್ರಕಟಣೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಭಾರತ ಸರಕಾರದಿಂದ ಅನುಷ್ಠಾನ ಮಾಡುತ್ತಿರುವ ಜನಪ್ರಿಯ ಕೃಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Kisan samman nidhi) ಯೋಜನೆಯ 19ನೇ ಕಂತಿನ ಆರ್ಥಿಕ ನೆರವನ್ನು(Kisan samman19th installment) ರೈತರ ಖಾತೆಗೆ ನೇರವಾಗಿ ವರ್ಗಾವಣೆ(DBT) ಮಾಡಲು ಕೇಂದ್ರದಿಂದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು ದಿನಾಂಕ 24 ಫೆಬ್ರವರಿ 2025 ರಂದು ಬಿಹಾರ ರಾಜ್ಯದ ಭಾಗಲ್ಪುರ್ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ ರೂ 2,000 ಹಣ ವರ್ಗಾವಣೆ ಮಾಡಲಿದ್ದಾರೆ.
ಇಲ್ಲಿಯವರಿಗೆ ಈ ಯೋಜನೆಯ(PM-Kisan)ಮೂಲಕ 2 ಸಾವಿರದಂತೆ ಒಟ್ಟು 18 ಕಂತುಗಳ ಹಣವನ್ನು ವರ್ಗಾವಣೆ ಮಾಡಲಾಗಿದ್ದು ಈ ಅಂಕಣದಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಿಡುಗಡೆಯ ಅಧಿಕೃತ ಮಾಹಿತಿಯನ್ನು ಪಡೆಯುವುದು ಹೇಗೆ ಮತ್ತು ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ಪರಿಷ್ಕೃತ ಹಳ್ಳಿವಾರು ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳ ವಿಧಾನದ ಮಾಹಿತಿಯನ್ನು ಸಹ ತಿಳಿಸಲಾಗಿದೆ.
ಇದನ್ನೂ ಓದಿ: Karnataka Budget-2025: ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿಎಂ ಸಿದ್ದರಾಮಯ್ಯ!
PM-Kisan 19th installment Release date-24 ಫೆಬ್ರವರಿ 2025 ರಂದು ರೈತರ ಖಾತೆಗೆ ಪಿ ಎಂ ಕಿಸಾನ್ ಹಣ:
ಕೇಂದ್ರ ಸರಕಾರದಿಂದ ಇದೆ ತಿಂಗಳ 24 ಫೆಬ್ರವರಿ 2025 ರಂದು ಬಿಹಾರ ರಾಜ್ಯದ ಭಾಗಲ್ಪುರ್ ದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಖಾತೆಗೆ 19ನೇ ಕಂತಿನ ಹಣ ವರ್ಗಾವಣೆಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಿದ್ದಾರೆ.
PM-Kisan Yojana-9.7 ಕೋಟಿ ರೈತರ ಖಾತೆಗೆ ₹ 21,000 ಸಾವಿರ ಕೋಟಿ ಹಣ ವರ್ಗಾವಣೆ:
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ಒಟ್ಟು 9.7 ಕೋಟಿ ರೈತರ ಖಾತೆಗೆ ₹ 21,000 ಸಾವಿರ ಕೋಟಿ ಆರ್ಥಿಕ ನೆರವನ್ನು ಈ ಯೋಜನೆಯಡಿ ವರ್ಗಾವಣೆ ಮಾಡಲಾಗುತ್ತಿದ್ದು ದೇಶ ಅತೀ ದೊಡ್ಡ ನೇರ ನಗದು ವರ್ಗಾವಣೆ ಹಣ ವರ್ಗಾವಣೆ ಯೋಜನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Ujjwala Yojane Subsidy-ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಬಿಡುಗಡೆ!

ಇದನ್ನೂ ಓದಿ: Birth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!
PM-Kisan Farmers List-ಪರಿಷ್ಕೃತ ಹಳ್ಳಿವಾರು ರೈತರ ಪಟ್ಟಿಯನ್ನು ಪಡೆಯುವುದು ಹೇಗೆ?
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಖಚಿತಪಡಿಸಿಕೊಳ್ಳಲು ಈ PM-Kisan Farmers List ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ತಂತ್ರಾಂಶವನ್ನು ಪ್ರವೇಶ ಮಾಡಿ ರಾಜ್ಯ ಮತ್ತು ನಿಮ್ಮ ಜಿಲ್ಲೆ,ತಾಲ್ಲೂಕು, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಹಳ್ಳಿಯಲ್ಲಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೆರೆದುಕೊಳ್ಳುತ್ತದೆ.
PM kisan E kyc-ಹಣ ಪಡೆಯಲು ತಪ್ಪದೇ ಇ-ಕೆವೈಸಿ ಮಾಡಿಸಿ:
ಈಗಾಗಲೇ ಇ-ಕೆವೈಸಿಯನ್ನು ಮಾಡಿಸಿರುವವರು ಹೊರತುಪಡಿಸಿ ಇಲ್ಲಿಯವರೆಗೆ ಸಹ ಕೃಷಿ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿಯನ್ನು ಮಾಡಸದವರು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಸಿಕೊಳ್ಳಲಿ.
ಇದನ್ನೂ ಓದಿ: FASTag New Rules- ಇಂದಿನಿಂದ FASTag ಬಳಕೆಗೆ ಹೊಸ ನಿಯಮ ಜಾರಿ!
ನಿಮ್ಮ ಇ-ಕೆವೈಸಿ ಅಗಿದಿಯೋ ಇಲ್ಲವೋ? ಎಂದು ಚೆಕ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ-PM kisan E kyc Status

PM-Kisan 19th installment Date-2025: ನಿಮ್ಮ ಮೊಬೈಲ್ ನಲ್ಲೇ ಅಧಿಕೃತ ಹಣ ಬಿಡುಗಡೆ ದಿನಾಂಕವನ್ನು ಚೆಕ್ ಮಾಡಿಕೊಳ್ಳುವ ವಿಧಾನ:
ರೈತರು ತಮ್ಮ ಮೊಬೈಲ್ ನಲ್ಲೇ ಈ ಕೆಳಗೆ ತಿಳಿಸಿರುವ ವಿಧಾನ ಅಧಿಕೃತ ಪಿ ಎಂ ಕಿಸಾನ್ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ 19ನೇ ಕಂತಿನ ಹಣ ಬಿಡುಗಡೆ ದಿನಾಂಕವನ್ನು ತಿಳಿಯಬಹುದಾಗಿದೆ.
Step-1: ರೈತರು ಮೊದಲಿಗೆ ಈ PM-Kisan 19th installment date ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ pmkisan.gov.in ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಿದ ಬಳಿಕ ಇದೇ ಪೇಜ್ ನ ಮುಖಪುಟದಲ್ಲಿ “The Hon’ble Prime Minister will release the 19th installment of the PM Kisan Yojana on 24 February 2025” ಎಂದು ಪ್ರತಿ ಬಾರಿಯು 1-2 ವಾರ ಮುಂಚಿತವಾಗಿ ಕಂತಿನವಾರು ಹಣ ಬಿಡುಗಡೆ ದಿನಾಂಕವನ್ನು ಮುಖಪುಟದಲೇ ಪ್ರಕಟಿಸಲಾಗುತ್ತದೆ.
ಅಥವಾ ಈ ಯೋಜನೆಯ ಕುರಿತು ಕಾಲ ಕಾಲಕ್ಕೆ ನಿರಂತರ ಅಧಿಕೃತ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಎಕ್ಸ್ ಖಾತೆಯನ್ನು ಪಾಲೋ ಮಾಡುವುದರ ಮೂಲಕ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ.
ಇದನ್ನೂ ಓದಿ: Sprinkler pipes Subsidy- ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
PM Kisan Events Registration- ನೇರ ಪ್ರಸಾರದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳುವ ವಿಧಾನ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡುವ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಆನ್ಲೈನ್ ಮೂಲಕ ಭಾಗವಹಿಸಲು ನೋಂದಣಿಯನ್ನು ಮಾಡಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.
Step-1: ಪಿ ಎಂ ಕಿಸಾನ್ ಫಲಾನುಭವಿಗಳು ಪ್ರಥಮದಲ್ಲಿ “Register Now“ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ pmevents.mygov.in ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು ಈ ಕಾರ್ಯಕ್ರಮದ ನೇರ ಪ್ರಸಾರದ ಸಭೆಯಲ್ಲಿ ಮನೆಯಲ್ಲೇ ಕುಳಿತು ಭಾಗವಹಿಸಬಹುದಾಗಿದೆ.