PM Surya Ghar Scheme-PM ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್! ಕೂಡಲೇ ಅರ್ಜಿ ಸಲ್ಲಿಸಿ!

December 22, 2025 | Siddesh
PM Surya Ghar Scheme-PM ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್! ಕೂಡಲೇ ಅರ್ಜಿ ಸಲ್ಲಿಸಿ!
Share Now:

ಪ್ರಧಾನಮಂತ್ರಿ ಸೂರ್ಯಘರ್ ಮುಫ್ಟ್ ವಿದ್ಯುತ್ ಯೋಜನೆಯು ಹಲವಾರು(PM Surya Ghar Scheme) ಕುಟುಂಬಗಳಿಗೆ ಹಾಗೂ ರೈತ ವರ್ಗದ ಜನರಿಗೆ ವಿದ್ಯುತ್ ವೆಚ್ಚದ ಭಾರವನ್ನು ಅತೀ ಸುಲಭವನ್ನಾಗಿ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಮನೆ ಮೇಲ್ಛಾವಣಿಯಲ್ಲಿ ಸೌರ ಪ್ಯಾನಲ್ ಅಳವಡಿಸುವ ಮೂಲಕ ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯುವ ಅವಕಾಶವನ್ನು ಒದಗಿಸಲಾಗಿದೆ.

ಈ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಸೌರ ಪ್ಯಾನಲ್ ಅಳವಡಿಕೆಗೆ ಸರ್ಕಾರದಿಂದ ₹30,000 ರಿಂದ ₹78,000 ವರೆಗೆ ನೇರ ಸಹಾಯಧನ(Solar Rooftop Yojana) ನೀಡಲಾಗುವುದು. ಈ ಸಹಾಯಧನವನ್ನು ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೂ ಸೌರಶಕ್ತಿ ಬಳಸುವುದು ಸುಲಭವಾಗುತ್ತದೆ.

ಇದನ್ನೂ ಓದಿ: RTC Crop Name-ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?

ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಈ ಯೋಜನೆಯು ಕೃಷಿ ಹಾಗೂ ಗೃಹ ಬಳಕೆಗೆ ಬೇಕಾದ(Solar Subsidy 2025)ವಿದ್ಯುತ್ ವೆಚ್ಚ ಕಡಿಮೆಯಾಗುವುದರಿಂದ ಅವರ ಆದಾಯ ಹೆಚ್ಚಾಗಲು ಸಹಕಾರಿಯಾಗುತ್ತದೆ. ಈ ಮಾಹಿತಿಯು ಉಪಯುಕ್ತವೆನಿಸಿದ್ದಲ್ಲಿ ನಿಮ್ಮ ವಾಟ್ಯಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಈ ಯೋಜನೆಯ ಅಡಿಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಈ ಯೋಜನೆಯ ಪ್ರಯೋಜನಗಳೇನು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?

PM Surya Ghar Muft Bijli Yojana-ಏನಿದು ಪಿಎಂ ಸೂರ್ಯಘರ್ ಯೋಜನೆ?

ಪಿಎಂ ಸೂರ್ಯ ಘರ್ಃ ಮಫ್ಟ್ ಬಿಜ್ಲಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ ಮೋದಿಯವರು 2024ರ ಫೆಬ್ರವರಿ 15 ರಂದು ಜಾರಿಗೆ ತಂದಿದ್ದರು. ಈ ಯೋಜನೆಯಡಿ, ಮನೆಗಳಿಗೆ ತಮ್ಮ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಹಾಯಧನವನ್ನು ನೀಡಲಾಗುವುದು. ಸಬ್ಸಿಡಿಯು ಸೌರ ಫಲಕಗಳ ವೆಚ್ಚದ ಶೇಕಡಾ 40 ರಷ್ಟನ್ನು ಒಳಗೊಂಡಿರುತ್ತದೆ.

ಈ ಯೋಜನೆಯು ಭಾರತದಾದ್ಯಂತ 2026-2027 ರ ವೇಳೆಗೆ 1 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. 24 ಲಕ್ಷಕ್ಕೂ ಅಧಿಕ ಮನೆಗಳು ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆಗಳನ್ನು ಹೊಂದಿದ್ದು, 13,464 ಕೋಟಿ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಯೋಜನೆಯಡಿ ಒದಗುವ ಪ್ರಯೋಜನಗಳು?

ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಸರ್ಕಾರದ ಮೇಲೆ ಬೀಳುವ ವಿದ್ಯುತ್ ವೆಚ್ಚದ ಭಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ.

ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ.

ಇಂಗಾಲದ ಉತ್ಸರ್ಗವನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಸಹಕಾರ ನೀಡಲಾಗಿದೆ.

ಇದನ್ನೂ ಓದಿ: Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!

ಮನೆ ಮೇಲ್ಛಾವಣಿಗೆ ತಕ್ಕ ಸೌರ ಸಾಮರ್ಥ್ಯದ ಘಟಕ:

ಸರಾಸರಿ ಮಾಸಿಕ ವಿದ್ಯುತ್ ಬಳಕೆ (ಘಟಕಗಳು)ಸೂಕ್ತ ಮೇಲ್ಛಾವಣಿ ಸೌರ ಸ್ಥಾವರ ಸಾಮರ್ಥ್ಯಸಹಾಯಧನ
0-1501-2 ಕೆ. ಡಬ್ಲ್ಯೂ₹ 30,000/- ರಿಂದ ₹ 60,000/- ವರೆಗೆ
150-3002-3 ಕೆ. ಡಬ್ಲ್ಯೂ₹ 60,000/- ರಿಂದ ₹ 78,000/- ವರೆಗೆ
>3003 ಕಿಲೋವ್ಯಾಟ್ಗಿಂತ ಹೆಚ್ಚು₹78,000/-

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Eligibility Critiria For This Scheme-ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಹರು?

ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾರತದ ಖಾಯಂ ನಿವಾಸಿ ಆಗಿರಬೇಕು.

ಅರ್ಜಿ ಸಲ್ಲಿಸುವ ಮನೆಗೆ ವಿದ್ಯುತ್ ಸಂಪರ್ಕ ಖಂಡಿತವಾಗಿ ಇರಬೇಕು. ಮತ್ತು ನಿಮ್ಮ ಮನೆಯ ಛಾವಣಿ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಲು ಸ್ವಲ್ಪ ಜಾಗವಿರಬೇಕು.

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಆದಾಯದ ಮಿತಿ ಇಲ್ಲ.

ಎಲ್ಲಾ ಆದಾಯದ ಗುಂಪಿನವರು ಅಥವಾ ಮಾಲೀಕರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿದಾರರಿಗೆ ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ.

ಈ ಯೋಜನೆ ಕೇವಲ ಮನೆಗಳಿಗಷ್ಟೇ ಆಗಿರುತ್ತದೆ. ಮನೆಗಳು ಹೊರತುಪಡಿಸಿ ಯಾವುದೇ ರೀತಿಯ ಹೋಟೆಲ್, ಅಂಗಡಿಗಳು, ಅಥವಾ ವ್ಯಾಪಾರ ನಡೆಸುವಂತಹ ಸ್ಥಳಕ್ಕೆ ಈ ಯೋಜನೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

ಇದನ್ನೂ ಓದಿ: Ganga Kalyana Yojana-ಬೋರ್ವೆಲ್ ಕೊರೆಸಲು ₹4.0 ಲಕ್ಷ ಸಹಾಯಧನ! ಇಲ್ಲಿದೆ ಸಂಪೂರ್ಣ ವಿವರ!

pm suryaghar application

ಇದನ್ನೂ ಓದಿ: Online E-Khata-ಇನ್ಮುಂದೆ ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಬಹುದು!

What are the Documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಪಿಎಂ ಸೂರ್ಯಘರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಲಗತ್ತಿಸಬೇಕು.

  • ಅರ್ಜಿದಾರರ ಆಧಾರ್ ಕಾರ್ಡ್/Aadhar Card.
  • ವೋಟರ್ ಐಡಿ/Voter ID.
  • ಮನೆಯ ಛಾವಣಿಯ ಫೋಟೋ/Home Roof Photo.
  • ಮನೆಯ ಆಸ್ತಿ ದಾಖಲೆಗಳು/Docemnets.
  • ಇತ್ತೀಚಿನ ವಿದ್ಯುತ್ ಬಿಲ್/Electricle Bill.
  • ಬ್ಯಾಂಕ್ ಪಾಸ್ ಪುಸ್ತಕ/Bank Passbook.
  • 4 ಫೋಟೋ/Photocopy.

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ 18,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ವಿವರ!

How To Apply-ಅರ್ಜಿ ಸಲ್ಲಿಸುವ ವಿಧಾನ:

ಪಿಎಂ ಸೂರ್ಯಘರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

Step 1: ಅರ್ಜಿದಾರ‍ ಅಭ್ಯರ್ಥಿಯು ಮೊದಲಿಗೆ ಈ ಲಿಂಕ್ "pm surya ghar application" ಅನ್ನು ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ನಿಮ್ಮ ರಾಜ್ಯ ಮತ್ತು ಜಿಲ್ಲೆ ಆಯ್ಕೆಮಾಡಿ ನೋಂದಣಿ (Register) ಮಾಡಿಕೊಳ್ಳಿ.

Step 2: ನಂತರ ನಿಮ್ಮ ಪ್ರದೇಶದ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆಮಾಡಿ ಮತ್ತು ಬಿಲ್‌ನಲ್ಲಿ ಇರುವ ಗ್ರಾಹಕರ ಖಾತೆ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ, ನಂತರ Next ಮೇಲೆ ಕ್ಲಿಕ್ ಮಾಡಿ.

Step 3: ನೋಂದಣಿ ಯಶಸ್ವಿಯಾದ ನಂತರ ಗ್ರಾಹಕರ ಖಾತೆ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗಿನ್ ಮಾಡಿ.

Step 4: ತದನಂತರ Apply for Rooftop Solar ಆಪ್ಷನ್ ಅನ್ನು ಆಯ್ಕೆ ಮಾಡಿ, ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

Step 5: ಅಪ್ಲೋಡ್ ಮಾಡಿದ ನಂತರ Submit ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ನೀಡಲಾದ Acknowledgement Number ಅನ್ನು ಸುರಕ್ಷಿತವಾಗಿ ದಾಖಲಿಸಿಕೊಳ್ಳಿ, ಇದನ್ನು ನಿಮ್ಮ ಅರ್ಜಿಯ ಸ್ಥಿತಿ ಪರಿಶೀಲಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: BPL Card News-ಬಿ.ಪಿ.ಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ : ಸಚಿವ ಕೆ.ಎಚ್.ಮುನಿಯಪ್ಪ

ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕೆಂದರೆ ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ: Website Link :- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: