Property Registration Fee-ರಾಜ್ಯ ಸರಕಾರದಿಂದ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ!

September 4, 2025 | Siddesh
Property Registration Fee-ರಾಜ್ಯ ಸರಕಾರದಿಂದ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ!
Share Now:

ರಾಜ್ಯ ಸರಕಾರವು ಸೆಪ್ಟೆಂಬರ್ 2025 ನಿಂದ ರಾಜ್ಯದ್ಯಂತ ಸ್ಥಿರಾಸ್ಥಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ(Property Registration) ಮತ್ತು ಮುದ್ರಾಂಕ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು ಇದರ ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಈ ಲೇಖನದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ(Sub Register Office)ರಾಜ್ಯದಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳನ್ನು ನೋಂದಣಿಯನ್ನು ಮಾಡಿಕೊಳ್ಳಲು ಎಷ್ಟು ಪ್ರಮಾಣದ ನೋಂದಣಿ ಮತ್ತು ಮುಂದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು? ಇದಕ್ಕಾಗಿ ಅವಶ್ಯವಿರುವ ಅಧಿಕೃತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: LIC Scholarship- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ!ಎಲ್ಐಸಿಯಿಂದ ₹ 40,000 ವಿದ್ಯಾರ್ಥಿವೇತನ!

ಪ್ರಸ್ತುತ ದಿನಗಳಲ್ಲಿ ರಾಜ್ಯ ಸರಕಾರವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ(Registration and Stamps Department) ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು ಇದಕ್ಕೆ ಪೂರಕವಾಗಿ ಆಸ್ತಿ ನೋಂದಣಿ ಶುಲ್ಕವನ್ನು ಏರಿಕೆ ಮಾಡಲಾಗಿದ್ದು ಇದರ ವಿವರ ಹೀಗಿದೆ.

Property Registration Fee In Karnataka-ಆಸ್ತಿ ನೋಂದಣಿ ಶುಲ್ಕವನ್ನು ಶೇ 1 % ರಿಂದ ಶೇ 2% ಕ್ಕೆ ಪರಿಷ್ಕರಿಸಲಾಗಿದೆ:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ದಿನಾಂಕ: 31 ಆಗಸ್ಟ್ 2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇ 1 % ರಿಂದ ಶೇ 2% ಕ್ಕೆ ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: Godown Subsidy-ಹಳ್ಳಿಯಲ್ಲಿ ಗೋಡೌನ್ ನಿರ್ಮಾಣಕ್ಕೆ ಶೇ 33% ಸಬ್ಸಿಡಿ ಪಡೆಯಲು ಅವಕಾಶ!

Property Registration In Karnataka-ಸಾರ್ವಜನಿಕರು ವಹಿಸಬೇಕಾದ ಕ್ರಮಗಳೇನು?

1) ಸಮಯ ನಿಗದಿಪಡಿಸಿದ/ಶುಲ್ಕ ಪಾವತಿಸಿದ ಅರ್ಜಿದಾರರು:

ಶೇ 1% ರ ದರದಲ್ಲಿ ನೋಂದಣಿ ಶುಲ್ಕ ಪಾವತಿಸಿ ಸಮಯ ನಿಗದಿ ಮಾಡಿಕೊಂಡಿರುವ ಅರ್ಜಿದಾರರು ಕಾವೇರಿ 2.0 ತಂತ್ರಾಂಶದ ಮೂಲಕ ವ್ಯತ್ಯಾಸದ ಶುಲ್ಕದ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ.

2) ಪರಿಶೀಲನೆಯಲ್ಲಿರುವ/ಶುಲ್ಕ ಪಾವತಿಸಬೇಕಿರುವ ಅರ್ಜಿಗಳು:

ಈಗಾಗಲೇ ಸಲ್ಲಿಸಿದ ಮತ್ತು ಪರಿಶೀಲನೆಯಲ್ಲಿರುವ ಶುಲ್ಕ ಪಾವತಿಸಬೇಕಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಶೇ 2% ರ ದರದಲ್ಲಿ ನವೀಕರಿಸಿ ಪರಿಷ್ಕ್ರತ ಶುಲ್ಕದ ಪಾವತಿಗೆ ಕಾವೇರಿ 2.0 ತಂತ್ರಾಂಶದ ಮೂಲಕ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

Property Registration

Property Registration Fee Payment- -ಅರ್ಜಿದಾರರ ಸಹಾಯಕ್ಕಾಗಿ:

ನೋಂದಣಿ ಈಗಾಗಲೇ ಅರ್ಜಿ ಸಲ್ಲಿಸಿರುವ ನಾಗರಿಕರಿಗೆ ಅಗತ್ಯ ಸೂಚನೆಗಳೊಂದಿಗೆ SMS ಮೂಲಕ ಸಂದೇಶವನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳುಹಿಸಲಾಗುತ್ತದೆ.

State Wise Property Registration Fee-ರಾಜ್ಯವಾರು ಆಸ್ತಿ ನೋಂದಣಿ ಶುಲ್ಕದ ವಿವರ ಹೀಗಿದೆ:

ರಾಜ್ಯಮುಂದ್ರಾಂಕ ಶುಲ್ಕನೋಂದಣಿ ಶುಲ್ಕಸೆಸ್ಒಟ್ಟು
ಕರ್ನಾಟಕ5%1%0.6%6.6%
ತಮಿಳುನಾಡು
5%2%2%9%
ಕೇರಳ8%2%NILL10%
ಅಂಧ್ರಪದೇಶ
5%1%1.5%7.5%
ತೆಲಂಗಾಣ
ಗ್ರಾಮೀಣ
5.5%2%NILL7.5%
ತೆಲಂಗಾಣ
ನಗರ
5.5%0.5%1.5%7.5%

ಇದನ್ನೂ ಓದಿ: Computer Training-ಕೆನರಾ ಬ್ಯಾಂಕ್ ವತಿಯಿಂದ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ!

Property Registration Fee Online Payment-ಆನ್ಲೈನ್ ಮೂಲಕ ಆಸ್ತಿ ನೋಂದಣಿ ಮತ್ತು ಮುಂದ್ರಾಂಕ ಶುಲ್ಕವನ್ನು ಪಾವತಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು:

1) ದಯವಿಟ್ಟು ಕಂಪ್ಯೂಟರ್‌ನಲ್ಲಿ ಸ್ಥಿರ ಇಂಟರ್‌ನೆಟ್ ಸಂಪರ್ಕವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

2) ಪಾವತಿಗೆ ಬಳಸಲಾಗುವ ಖಾತೆಯಲ್ಲಿ ಸಾಕಷ್ಟು ಹಣ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

3) ಪಾವತಿ ಪೂರ್ಣಗೊಳ್ಳುವವರೆಗೆ ಬ್ರೌಸರ್‌ನ ಬ್ಯಾಕ್ ಬಟನ್ ಅಥವಾ ರಿಫ್ರೆಶ್ ಬಟನ್ ಒತ್ತಬೇಡಿ.

4) ಪಾವತಿಯ ಸಮಯದಲ್ಲಿ ನೆಟ್‌ ಬ್ಯಾಂಕಿಂಗ್ ಬಳಸಿ ಪಾವತಿ ಮಾಡುತ್ತಿದ್ದರೆ ಸರಿಯಾದ ಬಳಕೆದಾರಹೆಸರು ಮತ್ತು ಪಾಸ್ವರ್ಡ್ ನಮೂದಿಸಿ. ಕಾರ್ಡ್ ಪಾವತಿಯ ವೇಳೆ ಕಾರ್ಡ್ ಸಂಖ್ಯೆ, ಮಾನ್ಯತೆ ಅವಧಿ, ಸಿವಿವಿ ನಮೂದಿಸಿ. ಯುಪಿಐ ಪಾವತಿ ಮಾಡುತ್ತಿದ್ದರೆ ಪಿನ್ ನಮೂದಿಸಿ.

ಇದನ್ನೂ ಓದಿ: CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

5) ಬ್ಯಾಂಕ್‌ನಿಂದ ಬಂದ ಸರಿಯಾದ ಓಟಿಪಿಯನ್ನು ನಿಗದಿತ ಸಮಯದೊಳಗೆ ನಮೂದಿಸಿ.

6) ಪಾವತಿ ಯಶಸ್ವಿಯಾದ ನಂತರ ಕಾವೇರಿ-2.0 ಅಪ್ಲಿಕೇಶನ್‌ಗೆ ಮರಳಿ ಸಂಪರ್ಕ ಸಾಧಿಸುವವರೆಗೆ ಕಾಯಿರಿ ಮತ್ತು ಈ ಸಮಯದಲ್ಲಿ ಬ್ರೌಸರ್‌ನ ಬ್ಯಾಕ್ ಅಥವಾ ರಿಫ್ರೆಶ್ ಬಟನ್ ಒತ್ತಬೇಡಿ.

7) ವ್ಯವಹಾರ ಪೂರ್ಣಗೊಳ್ಳುವವರೆಗೆ ಖಜಾನೆ ಪುಟ ಮತ್ತು ಬ್ಯಾಂಕ್ ಪುಟದಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿ.

8) ಯುಪಿಐ ಮೂಲಕ ಪಾವತಿ ಮಾಡುತ್ತಿರುವಾಗ ಫೋನ್ ಕರೆಗಳನ್ನು ತಗೊಳ್ಳುವುದನ್ನು ತಪ್ಪಿಸಿ.

9) ಖಜಾನೆ ದೈನಂದಿನ ನಿರ್ವಹಣೆಯ ವೇಳೆಯಾಗಿರುವುದರಿಂದ ಬೆಳಿಗ್ಗೆ 7:30 ರಿಂದ 9:00 ರವರೆಗೆ ಮತ್ತು ಸಂಜೆ 8:00 ರಿಂದ ರಾತ್ರಿ 10:30 ರವರೆಗೆ ಪಾವತಿ ಮಾಡುವುದನ್ನು ತಪ್ಪಿಸಿ.

Register Office Helpline-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯವಾಣಿ ಸಂಖ್ಯೆ:- 080 6826 5361

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: