Safety precautions-ಕೀಟನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ಒಂದೇ ಕುಟುಂಬದ 3 ಸಾವು!

July 23, 2025 | Siddesh
Safety precautions-ಕೀಟನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ಒಂದೇ ಕುಟುಂಬದ 3 ಸಾವು!
Share Now:

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ಕೀಟನಾಶಕ(Insecticides) ಸಿಂಪರಣೆ ಮಾಡಿದ ತರಕಾರಿಯಿಂದ ಸಿದ್ದಪಡಿಸಿದ ಆಹಾರವನ್ನು ಸೇವೆನೆ ಮಾಡಿ ಒಂದೇ ಕುಟುಂಬದ 3 ಜನ ಸಾವಿಗೀಡಾಗಿದ್ದು ರೈತರಲ್ಲಿ ಕೀಟನಾಶಕ ಸಿಂಪರಣೆ ಮಾಡುವಾಗ ತಪ್ಪದೇ ಅನುಸರಿಸಬೇಕಾದ ಕ್ರಮಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕೃಷಿಕರು ಯಾವುದೇ ರಾಸಾಯನಿಕ ಔಷದಿಯನ್ನು(Agriculture) ಸಿಂಪರಣೆ ಮಾಡುವಾಗ ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿ ತಪ್ಪಿದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: PM Kisan-ಪಿಎಂ ಕಿಸಾನ್ ಅಪ್ಲಿಕೇಶನ್ ಸ್ಕಾಮ್! ನಿಮ್ಮ ಹಣಕ್ಕೆ ಕನ್ನ!

ಇಂದಿನ ಈ ಅಂಕಣದಲ್ಲಿ ರೈತರು(Farmer) ಕೀಟನಾಶಕ ಸಿಂಪರಣೆ ಮಾಡುವಾಗ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳು ಯಾವುವು?ಪ್ರಥಮ ಚಿಕಿತ್ಸಾ ವಿಧಾನಗಳ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ:

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದ ನಿವಾಸಿಯಾದ ರಮೇಶ ನಾಯ್ಕ ರೈತರು ತಮ್ಮ ಎರಡು ಎಕರೆ ಹತ್ತಿ ಹೊಲದ ಬದುವಿನಲ್ಲಿ ಮನೆ ಬಳಕೆಗೆ ಕೆಲವು ತರಕಾರಿಗಳನ್ನು ಬೆಳೆಸಿದ್ದರು ತರಕಾರಿ ಬೆಳೆಗಳಿಗೆ ಕೀಟ ನಿರ್ಹವಣೆ ಸಲುವಾಗಿ ಶನಿವಾರದಂದು ಕೀಟನಾಶಕವನ್ನು ಸಿಂಪರಣೆ ಮಾಡಿದ್ದಾರೆ.

ಇದರ ಜೊತೆಗೆ ಗಿಡದ ಬುಡದಲ್ಲಿ ಗುಳಿಗೆ ರೂಪದ ಔಷದಿಯನ್ನು ಸಹ ಇಟ್ಟಿದ್ದರು ಬಳಿಕ ಸೋಮವಾರ ಮನೆಗೆ ಹೊಲದಿಂದ ಚವಳೆಕಾಯಿಯನ್ನು ತೆಗೆದುಕೊಂಡು ಬಂದು ಆ ದಿನ ರಾತ್ರಿ ಅಡುಗೆಗೆ ಈ ತರಕಾರಿಯನ್ನು ಬಳಸಿದ್ದು ಈ ಆಹಾರವನ್ನು ಸೇವನೆ ಮಾಡಿದ ಮನೆಯ ಎಲ್ಲಾ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಅಗಿದ್ದು ರಮೇಶ ನಾಯ್ಕ(36) ಅವರ ಪತ್ನಿ ಪದ್ಮಾ(35), ಪುತ್ರಿ ನಾಗರತ್ನ(7),ದೀಪಾ(6),ಚೈತ್ರಾ(10),ಮಗ ಕೃಷ್ಣ(12) ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ರಮೇಶ ನಾಯ್ಕ,ನಾಗರತ್ನ,ದೀಪಾ ಇವರು ಮರಣ ಹೊಂದಿದ್ದಾರೆ.

ಇದನ್ನೂ ಓದಿ: Nano DAP-ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ!

Safety Precautions For Spraying Insecticides-ಕೀಟನಾಶಕಗಳ ಸಿಂಪರಣೆ ಕ್ರಮಗಳು :

  • ಕೀಟನಾಶಕಗಳ ಸಿಂಪರಣೆಯನ್ನು ಮುಂಜಾನೆ(11 ಗಂಟೆಯ ತನಕ) ಮತ್ತು ಸಂಜೆ ಸಮಯದಲ್ಲಿ(3 ಗಂಟೆಯ ನಂತರ) ಮಾತ್ರ ಮಾಡಬೇಕು.
  • ಸಿಂಪರಣಾ ಯಂತ್ರದ ನಾಜಲ್ ( nozzle ) ಗೆ ಏನಾದರೂ ಸಿಕ್ಕಿ ಹಾಕಿಕೊಂಡು ತೊಂದರೆಯಾದಲ್ಲಿ ಬಾಯಿಂದ ಸರಿಪಡಿಸಲು ಪ್ರಯತ್ನಿಸಬಾರದು.
  • ತರಕಾರಿ, ಹಣ್ಣು ಬೆಳೆಗಳ ಮೇಲೆ ಸಿಂಪರಣೆ ಮಾಡುವಾಗ ಮಾಗಿರುವ ಅಥವಾ ಕೊಯ್ಲಿಗೆ ಬಂದಿರುವ ಹಣ್ಣು-ತರಕಾರಿಗಳನ್ನು ಕಟಾವು ಮಾಡಿದ ನಂತರ ಸಿಂಪರಣಾ ಕಾರ್ಯ ಕೈಗೆತ್ತಿಕೊಳ್ಳಬೇಕು. ನಿರ್ದಿಷ್ಟ ಸಿಂಪರಣೆಯ ನಂತರ ಗಡುವು ಮಾಡಿದ ನಿರೀಕ್ಷಣಾ ಸಮಯ( Waiting period )ಮುಗಿದ ಮೇಲೆಯೇ ಸಿಂಪರಣೆಗೆ ಒಳಪಟ್ಟ ಗಿಡಗಳಿಂದ ಆಹಾರಪದಾರ್ಥಗಳನ್ನು ಉಪಯೋಗಿಸಬೇಕು.

ಇದನ್ನೂ ಓದಿ: E-swathu Status-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ!

  • ಜೇನುನೊಣ, ದನಕರುಗಳು ಬೆಳೆಯ ಸಮೀಪಕ್ಕೆ ಬರುವ ಸಮಯದಲ್ಲಿ ಸಿಂಪರಣೆ ಮಾಡಬಾರದು.
  • ಒಂದೇ ತರಹದ ಕೀಟನಾಶಕಗಳನ್ನು ಅಥವಾ ಒಂದೇ ಪಂಗಡಕ್ಕೆ ಸೇರಿದ ಕೀಟನಾಶಕಗಳನ್ನು ಪದೇಪದೇ ಬಳಸುವುದರಿಂದ ಕೀಟ ಅಥವಾ ರೋಗಾಣುಗಳು ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಬೇರೆ ಬೇರೆ ಪಂಗಡದ ಮತ್ತು ಬೇರೆ ಬೇರೆ ವಿಧದ ಕೀಟನಾಶಕಗಳನ್ನು ಬಳಸುವುದು ಒಳ್ಳೆಯದು.
  • ಸಾಧ್ಯವಾದಷ್ಟು ಮಟ್ಟಿಗೆ ಎರಡು ಕೀಟನಾಶಕಗಳನ್ನು ಮಿಶ್ರಣ ಮಾಡಬಾರದು.
  • ಕಳೆನಾಶಕಗಳನ್ನು ಬಳಸಿದ ಮೇಲೆ ಅಂತಹ ಸಿಂಪರಣಾ ಯಂತ್ರಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿದ ನಂತರವೇ ಕೀಟನಾಶಕಗಳ ಬಳಕೆಗೆ ಆ ಯಂತ್ರವನ್ನು ಉಪಯೋಗಿಸಬೇಕು.
  • ಸಿಂಪರಣಾ ಯಂತ್ರವನ್ನು ಕಾಲುವೆ, ಕೆರೆಗಳಲ್ಲಿ ತೊಳೆಯಬಾರದು.ಆ ನೀರನ್ನು ಬಳಸುವ ಮನುಷ್ಯ ಪ್ರಾಣಿ-ಪಕ್ಷಿಗಳಿಗೆ ತೊಂದರೆ ತಪ್ಪಿಸಲು ಬೇರೆ ಕಡೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಯಂತ್ರಗಳನ್ನು ತೊಳೆಯಬೇಕು.

Safety Precautions For Spraying Pesticides-ಕೀಟನಾಶಕಗಳ ಬಳಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು:

ಕೀಟನಾಶಕಗಳು ಮೂಲತಃ ವಿಷಕಾರಿ ವಸ್ತುಗಳು, ಅವುಗಳ ಶಿಸ್ತುಬದ್ಧ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವುದರ ಜೊತೆಯಲ್ಲಿ ತನ್ನ ಬೆಳೆಯನ್ನು ಬಾಧಿಸುವ ಕೀಟ ರೋಗಗಳನ್ನು ಯಶಸ್ವಿಯಾಗಿ ದೂರವಿಡಬಹುದು. ಈ ನಿಟ್ಟಿನಲ್ಲಿ ಬಳಕೆದಾರ ಅಥವಾ ರೈತ ಈ ಕೆಳಕಂಡ ಕ್ರಮಗಳ ಬಗ್ಗೆ ಗಮನಹರಿಸುವುದು ಅನಿವಾರ್ಯ.

ಇದನ್ನೂ ಓದಿ: Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!

ಬಳಕೆದಾರ(ಸಿಂಪರಣೆ ಮಾಡುವ ವ್ಯಕ್ತಿ):

ಮಕ್ಕಳು, ಬುದ್ಧಿಮಾಂದ್ಯರು, ರೋಗಿಗಳು, ಮಾನಸಿಕವಾಗಿ ಅಸ್ವಸ್ಥಗೊಂಡಿರುವವರು, ಗಾಯಾಳುಗಳು ಹಾಗೂ ವೃದ್ಧರನ್ನು ಹೊರತುಪಡಿಸಿ ಉಳಿದವರು ಕೀಟನಾಶಕಗಳನ್ನು ಸಿಂಪರಣೆ ಮಾಡಬಹುದು.

ಕೀಟನಾಶಕಗಳ ಶೇಖರಣೆ:

ಕೀಟನಾಶಕಗಳ ವಿಷ ಪ್ರಮಾಣ ಅಥವಾ ಶಕ್ತಿ ಹಲವಾರು ಹವಾಮಾನ ಅಥವಾ ವಾತಾವರಣದ ವೈಪರೀತ್ಯಗಳಿಂದ ಬದಲಾಗುವ ಸಾಧ್ಯತೆಗಳಿವೆ. ಉದಾಹರಣೆಗೆ ಉಷ್ಣಾಂಶ, ತೇವಾಂಶ ನೇರವಾಗಿ ಬೀಳುವ ಸೂರ್ಯನ ಕಿರಣಗಳು ಮುಂತಾದವುಗಳು ಕೀಟನಾಶಕಗಳ ಶಕ್ತಿಯನ್ನು ಕಡಿಮೆ ಮಾಡಬಹುದಾದ ಸಾಧ್ಯತೆಗಳಿವೆ. ಆದ್ದರಿಂದ ಕೀಟನಾಶಕಗಳನ್ನು ತಂಪಾದ ಸ್ಥಳಗಳಲ್ಲಿ ಹಾಗೂ ನೇರವಾಗಿ ಸೂರ್ಯನ ಕಿರಣಗಳು ಬೀಳದಂತಹ ಪ್ರದೇಶಗಳಲ್ಲಿ ಇಡಬೇಕು.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

ಕೀಟನಾಶಕಗಳ ಆಯ್ಕೆ:

ರೈತ ಬಾಂಧವರು ಸಂಬಂಧಪಟ್ಟ ಇಲಾಖೆಯಿಂದ ಶಿಫಾರಿಸಲ್ಪಟ್ಟ ನಿರ್ದಿಷ್ಟ ಕೀಟನಾಶಕಗಳನ್ನು ಮಾತ್ರ ಬಳಸಬೇಕು. ಕೀಟನಾಶಕಗಳ ವಿಷಯುಕ್ತ ಪ್ರಮಾಣ, ಬಳಕೆದಾರನ ಮೇಲೆ ಆಗಬಹುದಾದ ಪರಿಣಾಮ ಅಥವಾ ಅಪಾಯಗಳನ್ನು ಆಧಾರವಾಗಿಟ್ಟುಕೊಂಡು ಅವುಗಳನ್ನು 4 ವಿಭಾಗಗಳಾಗಿ ಕೆಳಕಂಡಂತೆ ವಿಂಗಡಿಸಲಾಗಿದೆ.

Agriculture

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

ಕೆಳಗಿನ ತ್ರಿಕೋನದ ಬಣ್ಣಗಳ ಆಧಾರದ ಮೇಲೆ ಕೀಟನಾಶಕಗಳ ವಿಷ ಪ್ರಮಾಣ ಮತ್ತು ಅಪಾಯವನ್ನು ಅನಕ್ಷರಸ್ಥರು ಕೂಡ ತಿಳುವಳಿಕೆ ಪಡೆಯಬಹುದಾಗಿದ್ದು, ಕೀಟನಾಶಕಗಳ ಆಯ್ಕೆಯ ಸಮಯದಲ್ಲಿ ಈ ಮೇಲಿನ ಸೂಚನೆಗಳತ್ತ ಗಮನ ನೀಡಬೇಕು.

ಕೆಲವೊಂದು ಕೀಟನಾಶಕಗಳು ಬೆಂಕಿ ತಗುಲಿದಾಗ ಹೊತ್ತಿಕೊಳ್ಳುವ ಸಾಧ್ಯತೆ ಇದ್ದು, ಅಂತಹ ಕೀಟನಾಶಕಗಳ ಶೀಷೆಗಳ ಮೇಲೆ ಅದಕ್ಕೆ ಸಂಬಂಧಪಟ್ಟ ಮಾಹಿತಿ ನೀಡಲಾಗುತ್ತದೆ. ಅಂತಹ ಕೀಟನಾಶಕಗಳನ್ನು ಶೇಖರಿಸಿಡುವಾಗ ಬೆಂಕಿ ಮುಂತಾದವುಗಳಿಂದ ದೂರವಿಡಬೇಕು.

ಕೀಟನಾಶಕಗಳು ಮಾನವನ ದೇಹ ಸೇರಿದಲ್ಲಿ ಸಾಮಾನ್ಯವಾಗಿ ಕಂಡುಬರುವ ಬಾಹ್ಯ ಲಕ್ಷಣಗಳು:

ತಲೆನೋವು, ತಲೆಸುತ್ತು, ವಾಂತಿ ಮತ್ತು ವಾಕರಿಕೆ, ನಡುಕ, ಭೇದಿ, ಬೆವರುವಿಕೆ, ದೃಷ್ಟಿ ಮಾಂದ್ಯತೆ, ಜೊಲ್ಲು ಸುರಿತ, ಕುಗ್ಗಿದ ಕಣ್ಣು ರೆಪ್ಪೆ, ಒದ್ದಾಟ, ಭಯಭೀತಿ, ಆತಂಕ ಅಲರ್ಜಿ, ಕಣ್ಣು ಉರಿ, ಚರ್ಮ ಕೆರೆತ, ಹೊಟ್ಟೆ ನೋವು, ನರದೌರ್ಬಲ್ಯ, ಮಾತಿನಲ್ಲಿ ಬಿಕ್ಕಳಿಕೆ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

ಪ್ರಥಮ ಚಿಕಿತ್ಸಾ ವಿಧಾನಗಳು:

ಆಕಸ್ಮಿಕವಾಗಿ ಕೀಟನಾಶಕ ಬಳಕೆದಾರನ ದೇಹದೊಳಗೆ ಸೇರಿದಲ್ಲಿ ವಿಷಪೂರಿತ ವ್ಯಕ್ತಿಯನ್ನು ವೈದ್ಯರ ಬಳಿಗೆ ಕೊಂಡೊಯ್ಯುವ ಮೊದಲು ತುರ್ತಾಗಿ ಪಾಲಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನಗಳು.

  • ವಿಷ ಹೊಟ್ಟೆಯೊಳಗೆ ಸೇರಿದಲ್ಲಿ ರೋಗಿಯನ್ನು ವಾಂತಿ ಮಾಡಿಸಬೇಕು.
  • ಒಂದು ಲೋಟದಲ್ಲಿ ಬಿಸಿ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ರೋಗಿಗೆ ಕುಡಿಸಿ ವಾಂತಿ ಮಾಡಿಸಬೇಕು. ಈ ಪ್ರಕ್ರಿಯೆಯನ್ನು ಆಗಾಗ ಮಾಡುತ್ತಲೇ ಇದ್ದು ಆರೋಗ್ಯ ಸ್ವಚ್ಛ ಬಣ್ಣದ( ಬಣ್ಣರಹಿತ) ವಾಂತಿ ದ್ರವವನ್ನು ವಾಂತಿ ಮಾಡುವ ತನಕ ಮುಂದುವರಿಸಬೇಕು.
  • ರೋಗಿ ಆಗಲೇ ವಾಂತಿ ಮಾಡುತ್ತಿದ್ದಲ್ಲಿ, ಒದ್ದಾಡುತ್ತಿದ್ದಲ್ಲಿ ಅಥವಾ ಮೂರ್ಛೆ ಹೋಗಿದ್ದಲ್ಲಿ ವಾಂತಿ ಮಾಡಿಸುವ ಪ್ರಯತ್ನ ಮಾಡಬಾರದು.
  • ಉಸಿರಾಟದ ಮುಖಾಂತರ(ಮೂಗಿನ ಮುಖಾಂತರ) ವಿಷ ದೇಹದೊಳಗೆ ಸೇರಿದ್ದಲ್ಲಿ ರೋಗಿಯನ್ನು ಶುದ್ದ ಗಾಳಿಯಾಡುವ ಪ್ರದೇಶಕ್ಕೆ ಕೊಂಡೊಯ್ದು, ಮೇಲ್ಮುಖವಾಗಿ ಮಲಗಿಸಿ ಅಂಗಿಗಳನ್ನು ಸಡಿಲಿಸಿ, ನಿರಂತರವಾದ ಉಸಿರಾಟಕ್ಕೆ ಅವಕಾಶ ಮಾಡಿಕೊಡಬೇಕು, ಉಸಿರಾಟಕ್ಕೆ ವ್ಯವಸ್ಥೆ ಮಾಡಬೇಕು.
  • ರೋಗಿಯು ಚಳಿಯಿಂದ ನಡುಗುತ್ತಿದ್ದ ಕಂಬಳಿ ಹೊಡಿಸಬೇಕು.
  • ವಿಷ ದೇಹದ ಮೇಲ್ಭಾಗ ಗಳಿಗೆ ಸೋಕಿದ್ದಲ್ಲಿ ಸಾಬೂನು ಬಳಸಿ ಚೆನ್ನಾಗಿ ನೀರಿನಿಂದ ತೊಳೆಯಬೇಕು ಮತ್ತು
  • ಆಕಸ್ಮಿಕವಾಗಿ ವಿಷ ಕಣ್ಣಿನೊಳಗೆ ಸೇರಿದಲ್ಲಿ ಕಣ್ಣಿನ ಮೇಲೆ ನೀರು ಹಾಯಿಸಿ ವಿಷ ಹೊರ ಹೋಗುವಂತೆ ತೊಳೆಯಬೇಕು.

WhatsApp Group Join Now
Telegram Group Join Now
Share Now: