- Advertisment -
HomeAgricultureSvavalambi App- ಸಾರ್ವಜನಿಕರಿಗೆ ಭರ್ಜರಿ ಸಿಹಿ ಸುದ್ದಿ ತಮ್ಮ ಮೊಬೈನಲ್ಲೇ ಜಮೀನಿನ ಸರ್ವೆ ಮಾಡಿ ಪೋಡಿ...

Svavalambi App- ಸಾರ್ವಜನಿಕರಿಗೆ ಭರ್ಜರಿ ಸಿಹಿ ಸುದ್ದಿ ತಮ್ಮ ಮೊಬೈನಲ್ಲೇ ಜಮೀನಿನ ಸರ್ವೆ ಮಾಡಿ ಪೋಡಿ ಮಾಡಿಕೊಳ್ಳಲು ಅವಕಾಶ! ಇಲ್ಲಿದೆ ವೆಬ್ಸೈಟ್ ಲಿಂಕ್!

ಸಾರ್ವಜನಿಕರಿಗೆ ಕಂದಾಯ ಇಲಾಖೆಯಿಂದ(Karnataka Revenue Department) ಜನ ಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಜನರಿಗೆ ಇದರ ಕುರಿತು ಮಾಹಿತಿ ಇಲ್ಲದ ಕಾರಣ ಇಂದು ಈ ಲೇಖನದಲ್ಲಿ ಇದರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ತಮ್ಮ ಮೊಬೈಲ್ ನಲ್ಲಿ ಇಲಾಖೆಯ ಸ್ವಾವಲಂಭಿ ಅಪ್ಲಿಕೇಶನ್(Svavalambi App) ಮೂಲಕ ಜಮೀನಿನ ಸರ್ವೆ ಮಾಡಿ ಪೋಡಿಯನ್ನು(Tatkal phodi) ಸ್ವಂತ ತಾವೇ ಸಿದ್ದಡಿಸಿಕೊಳ್ಳಬಹುದು ಜೊತೆಗೆ ಭೂ ಪರಿವರ್ತನೆ, 11 ಇ ಸ್ಕೆಚ್ ಪಡೆಯಲು ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿರುವ ಸ್ವಾವಲಂಭಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ ಪೋಡಿ, ಭೂ ಪರಿವರ್ತನೆ(Land Conversion), 11 ಇ ಸ್ಕೆಚ್(11 E sketch )ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: School Holiday in Karnataka: ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ! ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ!

ಬಹಳಷ್ಟು ಜನರಿಗೆ ಮಾಹಿತಿ ಕೊರತೆಯಿಂದ ಈ ಅಪ್ಲಿಕೇಶನ್ ಇರುವುದರ ಕುರಿತು ಹಾಗೂ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ ಈ ಅಂಕಣವನ್ನು ಓದಿದವರು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಈ ಯೋಜನೆಯ ಪ್ರಯೋಜನ ಪಡೆಯಲು ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಸಹಕರಿಸಿ.

How to Apply Online For Tatkal phodi, Land Conversion, 11 E sketch -ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಕಂದಾಯ ಇಲಾಖೆಯ ಮೋಜಿನ/ಸ್ವಾವಲಂಭಿ ಅಪ್ಲಿಕೇಶನ್ ವೆಬ್ಸೈಟ್ ಅನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ನೇರವಾಗಿ ಭೇಟಿ ಮಾಡಿ ಅಗತ್ಯ ಹಂತಗಳನ್ನು ಅನುಸರಿಸಿ ಇಲ್ಲಿ ಕೇಳುವ ವಿವರವನ್ನು ಭರ್ತಿ ಮಾಡಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತ ಮೊಬೈಲ್ ಮೂಲಕ ಜಮೀನಿನ ಸರ್ವೆ/Land Survey, ಪೋಡಿ/Tatkal phodi, ಭೂ ಪರಿವರ್ತನೆ/Land Conversion, 11 ಇ ಸ್ಕೆಚ್/11 E sketch ಗಾಗಿ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

Step-1: ಸಾರ್ವಜನಿಕರು ಮೊದಲು ಇಲ್ಲಿ ಕ್ಲಿಕ್ Phodi Online Application ಮಾಡಿ ಕಂದಾಯ ಇಲಾಕೆಯ ಅಧಿಕೃತ ಮೋಜಿನಿ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: State Government Total Vacancy- ರಾಜ್ಯ ಸರಕಾರದಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ವಿವರ ಬಿಡುಗಡೆ! ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ!

Tatkal phodi

ಇದನ್ನೂ ಓದಿ: Sainika School Admission-ಸೈನಿಕ ಶಾಲೆಯಲ್ಲಿ ಓದುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ!

Step-2: ಬಳಿಕ ಇಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಕೆಳಗೆ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Send OTP” ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಪಡೆದು OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.

Step-3: OTP ಹಾಕಿ ಲಾಗಿನ್ ಅದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “ಹೊಸ ಅರ್ಜಿ/New Application” ಬಟನ್ ಮೇಲೆ ಕ್ಲಿಕ್ ಮಾಡಬೇಕು.

RTC

ಇದನ್ನೂ ಓದಿ: Matru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!

Step-4: ನಂತರ ಇಲ್ಲಿ ಈ ರೀತಿಯ A) ನಾನೇ ಸ್ಕೆಚ್ ಸಿದ್ಧಪಡಿಸಿ ಅಪ್ಲೋಡ್ ಮಾಡುತ್ತೇನೆ./ I will prepare the sketch and upload on my own. B) ಭೂಮಾಪನ ಇಲಾಖೆಯಿಂದ ಸ್ಕೆಚ್ ಸಿದ್ಧಪಡಿಸಲು ನಾನು ಬಯಸುತ್ತೇನೆ./ I wish to get the sketch prepared by the Survey department. ಎರಡು ಆಯ್ಕೆಗಳು ಗೋಚರಿಸುತ್ತವೆ ಇದರಲ್ಲಿ ನಿಮ್ಮ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ಅರ್ಜಿಯ ವಿಧ/Type of Application ” ಕಾಲಂ ನಲ್ಲಿ 1) ತತ್ಕಾಲ್ ಪೋಡಿ/tatkal phodi, 2) ಭೂ ಪರಿವರ್ತನೆ/Land Conversion, 3) 11 ಇ ಸ್ಕೆಚ್ / 11 E sketch ಈ ಮೂರರಲ್ಲಿ ನಿಮ್ಮ ಅಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

Phodi Online application

ಇದನ್ನೂ ಓದಿ: Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!

Step-5: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲೇ ಆಧಾರ್ ಪರೀಶಿಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಬಟನ್ ಮೇಲೆ ಒತ್ತಿ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು OTP ಅನ್ನು ನಮೂದಿಸಿ ಅರ್ಜಿದಾರರ ವಿವರವನ್ನು ಭರ್ತಿ ಮಾಡಬೇಕು.

Step-6: ಬಳಿಕ ಇದೆ ಪೇಜ್ ನಲ್ಲಿ ಕೆಳಗೆ ಕಾಣುವ “Next Step” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಅರ್ಜಿದಾರರ ಜಮೀನಿನ ವಿವರವನ್ನು ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

Step-7: ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ತತ್ಕಾಲ್ ಪೋಡಿ/tatkal phodi, ಭೂ ಪರಿವರ್ತನೆ/Land Conversion, 11 ಇ ಸ್ಕೆಚ್ / 11 E sketch ಪಡೆಯಲು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಸಲ್ಲಿಸಲು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಬಳಕೆದಾರ ಕೈಪಿಡಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್- Download Now

Revenue Department- ಬಳಕೆದಾರರಿಗೆ ಇಲಾಖೆಯ ಪ್ರಮುಖ ಸೂಚನೆಗಳು:

revenue department (5)

Helpline Number-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ:

☎ +91 82 7786 4065{Mysore Division}
☎ +91 82 7786 4067{Banglore Division}
☎ +91 82 7786 4068{Kalaburagi Division}
☎ +91 82 7786 4086{Belagavi Division}
(Time : 10:00AM to 6:00 PM)

- Advertisment -
LATEST ARTICLES

Related Articles

- Advertisment -

Most Popular

- Advertisment -