ಕಂದಾಯ ಇಲಾಖೆಯಿಂದ ಈ ವರ್ಷ ಮುಂಗಾರು, ಪೂರ್ವ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಅತೀಯಾದ ಮಳೆಯಿಂದ ಹಾನಿಯಾದ(Bele Parihara Farmer list) ಬೆಳೆ ಹಾನಿಗೆ ಈಗಾಗಲೇ ಅರ್ಹ ಫಲಾನುಭವಿ ರೈತರ ಖಾತೆಗೆ ಬೆಳೆ ಪರಿಹಾರವನ್ನು ಜಮಾ ಮಾಡಲಾಗಿದ್ದು ತಾಂತ್ರಿಕ ಸಮಸ್ಯೆಯಿಂದ ಪರಿಹಾರದ ಹಣ ಜಮಾ ಅಗದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಳೆ ಹಾನಿಯಾಗಿ ಕಂದಾಯ ಇಲಾಖೆಯಿಂದ ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸಿದ(Bele Parihara Status) ರೈತರು ತಮ್ಮ ಅರ್ಜಿಯ ಸ್ಥಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಇಲಾಖೆಯಿಂದ ಅವಕಾಶ ಮಾಡಲಾಗಿರುತ್ತದೆ ಇದಲ್ಲದೇ ಹಳ್ಳಿವಾರು ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಮತ್ತು ತಾಂತ್ರಿಕ ಸಮಸ್ಯೆಯಿಂದ ಪರಿಹಾರ ಜಮಾ ಅಗದ ರೈತರ ಪಟ್ಟಿಯನ್ನು ಅಧಿಕೃತ parihara ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.
ರೈತರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಈ ಪಟ್ಟಿಯನ್ನು ಹೇಗೆ(Bele Parihara Status Check) ಪಡೆಯುವುದು? ಯಾವೆಲ್ಲ ತಾಂತ್ರಿಕ ಸಮಸ್ಯೆಯಿಂದ ರೈತರಿಗೆ ಪರಿಹಾರ ಜಮಾ ಅಗಿರುವುದಿಲ್ಲ? ಇದನ್ನು ಸರಿಪಡಿಸಿಕೊಳ್ಳಲು ಯಾವ ಕ್ರಮವನ್ನು ಅನುಸರಿಸಿಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ಶೇರ್ ಮಾಡಿ ಸಹಕರಿಸಿ.
Bele Parihara Total Amount Received- ಹಂಗಾಮುವಾರು ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿರುವ ಒಟ್ಟು ಬೆಳೆ ಪರಿಹಾರದ ಅಂಕಿ-ಅಂಶ:
ರಾಜ್ಯ ಸರಕಾರದಿಂದ ಕಂದಾಯ ಇಲಾಖೆ ಮೂಲಕ SDRF ಮಾರ್ಗಸೂಚಿ ಪ್ರಕಾರ ಬೆಳೆ ಹಾನಿಯಾದ ರೈತರ ಅರ್ಜಿಗಳನ್ನು ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಅರ್ಹ ಫಲಾನುಭವಿ ರೈತರಿಗೆ ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿದಂತೆ ಹಂಗಾಮುವಾರು ಪರಿಹಾರವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ.
ಹಂಗಾಮು | ಒಟ್ಟು ಹಾನಿ(ಹೆಕ್ಟೇರ್ ಗಳಲ್ಲಿ) | ಪಾವತಿಯಾದ ಮೊತ್ತ(ಲಕ್ಷಗಳಲ್ಲಿ) |
ಪೂರ್ವ ಮುಂಗಾರು- | 2,591 | ₹439.14 |
ಮುಂಗಾರು | 77,339 | ₹9493.57 |
ಹಿಂಗಾರು | 82,449 | ₹9145.94 |
Bele Parihara Farmer List-ರೈತರು ತಮ್ಮ ಮೊಬೈಲ್ ನಲ್ಲೇ ಪರಿಹಾರದ ಹಣ ಜಮಾ ಅಗಿರುವ ಮತ್ತು ಅಗದೇ ಇರುವ ಪಟ್ಟಿಯನ್ನು ನೋಡುವ ವಿಧಾನ:
ಕಂದಾಯ ಇಲಾಖೆಯಿಂದ ನಿರ್ವಹಣೆ ಮಾಡುವ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ಬೆಳೆ ಪರಿಹಾರದ ಅರ್ಜಿಯ ಕುರಿತು ಮತ್ತು ಪರಿಹಾರದ ಹಣ ಜಮಾ ಸ್ಥಿತಿ ಕುರಿತು ಬೆರಳ ತುದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಪಡೆಯಬಹುದಾಗಿದೆ. ಇದಕ್ಕಾಗಿ ಅನುಸರಿಸಬೇಕಾಗದ ಹಂತಗಳನ್ನು ಈ ಕೆಳಗೆ ವಿವರಿಸಲಾಗಿದೆ.
Step-1: ಮೊಟ್ಟ ಮೊದಲಿಗೆ ಈ Bele Parihara Status Check ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಬೆಳೆ ಪರಿಹಾರ ನೀಡಲು ಅಭಿವೃದ್ದಿಪಡಿಸಿರುವ Parihara ಜಾಲತಾಣವನ್ನು ಭೇಟಿ ಮಾಡಬೇಕು.
Step-2: ಇದಾದ ನಂತರದಲ್ಲಿ ಮುಖಪುಟದಲ್ಲಿ ಕೆಳಗೆ ಎಡ ಬದಿಯಲ್ಲಿ ಕಾಣುವ “Parihara Payment Reports” ಕಾಲಂ ನಲ್ಲಿ “Village Wise List” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: “Village Wise List” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ “ಇನ್ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 28-12-2024” ಪರದೆ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ Select year/ವರ್ಷ ಆಯ್ಕೆಯಲ್ಲಿ “2024-25” ಎಂದು ಆಯ್ಕೆ ಮಾಡಿಕೊಂಡು Select season/ಋತು, Calamity Type/ವಿಪತ್ತಿನ ವಿಧ, District/ಜಿಲ್ಲೆ Taluk/ತಾಲ್ಲೂಕು, Hobali/ಹೋಬಳಿ, Village/ಗ್ರಾಮದ ಹೆಸರನ್ನು ಸೆಲೆಕ್ಟ್ ಮಾಡಿಕೊಂದು “Get Report/ವರದಿ ಪಡೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಹಾನಿ ಪರಿಹಾರ ಜಮಾ ಅಗಿದೆ ಮತ್ತು ಯಾರಿಗೆಲ್ಲ ತಾಂತ್ರಿಕ ಸಮಸ್ಯೆಯಿಂದ ಹಣ ಜಮಾ ಅಗಿಲ್ಲ ಎನ್ನುವ ಮಾಹಿತಿಯುಳ್ಳ ರೈತರ ಪಟ್ಟಿ ತೆರೆದುಕೊಳ್ಳುತ್ತದೆ.
Step-4: ತಾಂತ್ರಿಕ ಸಮಸ್ಯೆಯಿಂದ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ನೋಡುವ ವಿಧಾನ- ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಪರಿಹಾರದ ಹಣ ವಿವರದ ರೈತರ ಪಟ್ಟಿಯನ್ನು ಪಡೆದ ಬಳಿಕ ಈ ಪಟ್ಟಿಯ “ಹಣ ಸಂದಾಯದ ಸ್ಥಿತಿ/Payment Status” ಕಾಲಂ ನಲ್ಲಿ “Successful” ಎಂದು ತೋರಿಸಿದರೆ ಆ ರೈತರಿಗೆ ಪರಿಹಾರದ ಹಣ ಜಮಾ ಅಗಿದೆ ಎಂದು ಒಂದೊಮ್ಮೆ “Unsuccessful” ಎಂದು ತೋರಿಸಿದ್ದರೆ ತಾಂತ್ರಿಕ ಸಮಸ್ಯೆಯಿಂದ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಎಂದು ತಿಳಿಯಬೇಕು.
Reason for parihara payment not received- ತಾಂತ್ರಿಕ ಸಮಸ್ಯೆಯಿಂದ ಪರಿಹಾರದ ಹಣ ಜಮಾ ಅಗದಿರಲು ಪ್ರಮುಖ ಕಾರಣಗಳ ಪಟ್ಟಿ:
(1) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇರುವುದು/NPCI Mapping issue.
(2) ಅರ್ಜಿದಾರರ ರೈತರ ಹೆಸರು ಮತ್ತು ಹಾನಿಯಾದ ಜಮೀನಿನ ಪಹಣಿ ವಿವರ ತಾಳೆಯಾಗದೇ ಇರುವುದು/Name mismatch.
(3) ಅರ್ಜಿ ಸಲ್ಲಿಸುವಾಗ ಸಲ್ಲಿಸಿರುವ ಬ್ಯಾಂಕ್ ಖಾತೆ ನಿಷ್ತ್ರಿಯಗೊಂಡಿರುವುದು/Bank account inactive.
ಇದನ್ನೂ ಓದಿ: Sainika School Admission-ಸೈನಿಕ ಶಾಲೆಯಲ್ಲಿ ಓದುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ!
ಸರಿಪಡಿಸಿಕೊಳ್ಳುವ ವಿಧಾನ:
(1) ಬ್ಯಾಂಕ್ ಖಾತೆಗ ಆಧಾರ್ ಕಾರ್ಡ ಲಿಂಕ್ ಮಾಡುದುವು/NPCI Mapping
(2) ಅರ್ಜಿದಾರರ ಹೆಸರಿನಲ್ಲಿರುವ ಸರಿಯಾದ ಪಹಣಿ/ಉತಾರ್ ಅನ್ನು ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಕೊಟ್ಟು ಅರ್ಜಿಯನ್ನು ಸರಿಪಡಿಸಿಕೊಳ್ಳುವುದು.
(3) ನಿಷ್ತ್ರಿಯಗೊಂಡಿರುವ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳುವುದರ ಮೂಲಕ ಪರಿಹಾರದ ಹಣವನ್ನು ಪಡೆಯಬಹುದು.