3 phase current- ರೈತರಿಗೆ ಗುಡ್ ನ್ಯೂಸ್ ಈ ದಿನದಿಂದ ಕೃಷಿ ಪಂಪ್ ಸೆಟ್ ಗೆ 7 ತಾಸು 3 ಫೇಸ್‌ ಕರೆಂಟ್!

3 phase current: ರಾಜ್ಯ ಸರಕಾರದಿಂದ ರೈತರಿಗೆ ಶುಭ ಸುದ್ದಿ ನೀಡಲಾಗಿದೆ ಇನ್ನು  ಮುಂದೆ ಕೃಷಿ ಪಂಪ್ ಸೆಟ್ ಗೆ ದಿನವೊಂದಕ್ಕೆ 7 ಗಂಟೆ 3 ಫೇಸ್‌ ವಿದ್ಯುತ್ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

3 phase current- ರೈತರಿಗೆ ಗುಡ್ ನ್ಯೂಸ್ ಈ ದಿನದಿಂದ ಕೃಷಿ ಪಂಪ್ ಸೆಟ್ ಗೆ 7 ತಾಸು 3 ಫೇಸ್‌ ಕರೆಂಟ್!
3 phase current

ರಾಜ್ಯ ಸರಕಾರದಿಂದ ರೈತರಿಗೆ ಶುಭ ಸುದ್ದಿ ನೀಡಲಾಗಿದೆ ಇನ್ನು  ಮುಂದೆ ಕೃಷಿ ಪಂಪ್ ಸೆಟ್ ಗೆ ದಿನವೊಂದಕ್ಕೆ 7 ಗಂಟೆ 3 ಫೇಸ್‌ ವಿದ್ಯುತ್ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

ಈ ಹಿಂದೆ ವಿದ್ಯುತ್ ಅಭಾವದಿಂದ ರೈತರಿಗೆ ಬೆಳಗ್ಗಿನ ಸಮಯದಲ್ಲಿ 3 ತಾಸು ಮತ್ತು ರಾತ್ರಿ 2 ತಾಸು ವಿದ್ಯುತ್ ಸೇರಿ ಒಟ್ಟು ಒಂದು ದಿನಕ್ಕೆ 5 ಗಂಟೆ 3 ಫೇಸ್‌ ಕರೆಂಟ್ ನೀಡಲಾಗುತ್ತಿತ್ತು, ಅದರೆ ಇನ್ನು ಮುಂದೆ ದಿನವೊಂದಕ್ಕೆ 7 ಗಂಟೆ 3 ಫೇಸ್‌ ಕರೆಂಟ್ ನೀಡಲು ಸೋಮವಾರ ನಡೆದ ಇಂದನ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ನಿರ್ಣಯ ಕೈಗೊಂಡು ಸಿಎಂ ಸಿದ್ದರಾಮಯ್ಯ ಕ್ರವಹಿಸಲು ಸೂಚಿಸಿದ್ದಾರೆ.

ರೈತರಿಗೆ ವಿದ್ಯುತ್ ಕಡಿತಗೊಳಿಸಿದ  ಕಾರಣದಿಂದಾಗಿ ಸರ್ಕಾರದ ವಿರುದ್ಧ  ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೋರಾಟಗಳು ನಡೆದಿದ್ದವು. ಇದು 'ಗ್ಯಾರಂಟಿ' ಯೋಜನೆಗಳ ಇಮೇಜ್ ಗೂ ಹಾನಿ ಉಂಟು ಮಾಡುತ್ತಿತ್ತು, ಹೀಗಾಗಿ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು, ರೈತ ಸಂಘದ ಮುಖಂಡರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಮಾಣ  ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಲು ಮುಂದಾಗಿದೆ.

ಈ ಕುರಿತು ಇಂದನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನೀರಾವರ ಪಂಪ್‌ಸೆಟ್‌ಗಳಿಗೆ ಏಳು ತಾಸು ವಿದ್ಯುತ್ ನೀಡುವುದಾಗಿ ಈ ಮೊದಲೇ ಘೋಷ‌ಣೆ ಮಾಡಿದ್ದೆವು, ರಾಜ್ಯದಲ್ಲಿ ವಿದ್ಯುತ್‌ ಕೊರತೆಯಿದೆ ಎಂದು ನೀರಾವರಿ ಪಂಪ್‌ಸೆಟ್‌ಗಳಿಗೆ ಅವಧಿ ಕಡಿತ ಮಾಡಲಾಗಿತ್ತು. ಈ ನಡುವೆ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತದ ಬೆಳೆಗೆ 5 ತಾರು ವಿದ್ಯುತ್‌ ಸಾಕಾಗುವುದಿಲ್ಲ, ಏಳು ತಾಸು ಬೇಕೆಂದು ಎಂದು ಮನವಿ ಮಾಡಿದ್ದರು ಎಂದು ವಿವರಿಸಿದರು.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಇದನ್ನೂ ಓದಿ:  Crop insurance status- ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ! ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ.

3 phase current- ಈ ದಿನದಿಂದ ಕೃಷಿ ಪಂಪ್ ಸೆಟ್ ಗೆ 7 ತಾಸು 3 ಪೇಸ್ ಕರೆಂಟ್!

ಈ ನಿರ್ಣಯ ಕೈಗೊಂಡ ಬಳಿಕ ರಾಜ್ಯಾದ್ಯಂತ ಸೋಮವಾರದಿಂದ ಕೃಷಿಕರ ಪಂಪ್ ಸೆಟ್ ಗೆ 7 ತಾಸು 3 ಪೇಸ್ ಕರೆಂಟ್ ನೀಡಲು ಕ್ರಮವಹಿಸುವಂತೆ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸದ್ಯದ ವಿದ್ಯುತ್ ಅಂಕಿ-ಅಂಶ ಚಿತ್ರಣ:

2012ನೇ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ 2023ರಲ್ಲಿ ವಿದ್ಯುತ್‌ ಬೇಡಿಕೆ ಸರಾಸರಿ ಶೇ.3 ರಷ್ಟು ಏರಿಕೆಯಾಗಿದ್ದು ದೆ. ಅಕ್ಟೋಬ‌ನಲ್ಲಿ 15,978

ಉತ್ಪಾದನೆ ಹೆಚ್ಚಳಯನ್ನು ಹೆಚ್ಚಿಳ ಮಾಡಲಾಗಿದೆ ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳು 1,000 ಮೆಗಾ ವಾಟ್ ಉತ್ಪಾದಿಸುತ್ತಿವೆ. ಈ ಘಟಕಗಳ ಮೂಲಕ ಅಂದಾಜು 2,400 ರಿಂದ 3200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲಾಗಿದೆ.

 ಕಬ್ಬು ಅರೆಯುವುದು ಪ್ರಾರಂಭ ಮೂಲಕ 450 ಮೆಗಾ ವಾಟ್ ಉತ್ಪಾದನೆಯಾಗುತ್ತಿದೆ. ಕೊಡಗಿ ಘಟಕದಿಂದ 150 ಮೆ.ವಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಇದಲ್ಲದೆ ಹೊರ ರಾಜ್ಯದಿಂದ 1000 ಯೂನಿಟ್ ಖರೀದಿಯಾಗುತ್ತಿದೆ. ಇದರಿಂದಾಗಿ ಪ್ರಸ್ತುತ ವಿದ್ಯುತ್ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿದೆ.

ಇದನ್ನೂ ಓದಿ: Social Welfare Department: ಕೃಷಿ ಜಮೀನು ಖರೀದಿಸಲು ಭೂ ಒಡೆತನ ಯೋಜನೆಯಡಿ ಶೇ 50 ಸಹಾಯಧನದಲ್ಲಿ 25 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

ಹೊರ ರಾಜ್ಯದಿಂದ ವಿದ್ಯುತ್ ಖರೀದಿ-ಮಾರಾಟ ವ್ಯವಸ್ಥೆ:

ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದ ಜತೆಗೆ ನಮ್ಮ ರಾಜ್ಯವು ವಿದ್ಯುತ್ ವಿನಿಮಯ ವ್ಯವಸ್ಥೆಯನ್ನು ಮಾಡಿಕೊಂಡಿದೆ ಇದರಿಂದ ಈಗ ನಾವು ಅವರಿಂದ ಪಡೆದು, ಜೂನ್‌ನಿಂದ ಹಿಂದಿರುಗಿಸಲಾಗುತ್ತದೆ.