- Advertisment -
HomeAgricultureTogari bembala bele-ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ! ದರ ಎಷ್ಟು?

Togari bembala bele-ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ! ದರ ಎಷ್ಟು?

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಖರೀದಿ(Togari bembala bele) ಮಾಡಲು ಸಕಲ ಸಿದ್ದತೆಗಳನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿವತಿಯಿಂದ ಶೀಘ್ರದಲ್ಲೇ ಮಾಡಿಕೊಳ್ಳಲಾಗುವುದು ಎಂದು ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

2024-25 ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಖರೀದಿ(Togari Msp Price) ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ರಾಜ್ಯದ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ತೊಗರಿಯನ್ನು ಖರೀದಿ ಮಾಡಲಾಗುವುದು ಎಂದು ಕೃಷಿ ಮಾರಾಟ ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Ration Card Application-ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ರೈತರು ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ(Togari Msp Price-2025) ಮಾಡಲು ಯಾವೆಲ್ಲಾ ಕ್ರಮವನ್ನು ಅನುಸರಿಸಬೇಕು? ಕೇಂದ್ರ ಸರಕಾರದಿಂದ ತೊಗರಿಗೆ ಎಷ್ಟು? ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Togari Msp Price-2025: ತೊಗರಿಗೆ ಕೇಂದ್ರದಿಂದ ನಿಗದಿಪಡಿಸಿರುವ ಬೆಂಬಲ ಬೆಲೆ:

ಕೇಂದ್ರ ಸರಕಾರದಿಂದ ರೈತರಿಂದ ನೇರವಾಗಿ ತೊಗರಿಯನ್ನು ಖರೀದಿ ಮಾಡಲು ಪ್ರತಿ ಕ್ವಿಂಟಾಲ್ ಗೆ ರೂ 7,550/- ನಿಗದಿಪಡಿಸಲಾಗಿದ್ದು ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಗರಿಷ್ಥ 40 ಕ್ವಿಂಟಾಲ್ ವರಗೆ ಖರೀದಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Ration Card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!

Krishi marata mandali-ಕೃಷಿ ಮಾರಾಟ ಮಂಡಳಿಯ ಪ್ರಮುಖ ಸೂಚನೆಗಳು:

A) ಪ್ರತಿ ಎಕರೆಗೆ 04 ಕ್ವಿಂಟಲ್ ರಂತೆ – ಗರಿಷ್ಠ 40 ಕ್ವಿಂಟಲ್ ವರೆಗೆ ಪ್ರತಿ ರೈತರಿಂದ ಖರೀದಿಸಲಾಗುತ್ತದೆ ಎಂದು ತಿಳಿಸಲಾಗಿದೆ.

B) ರೈತ ಬಾಂಧವರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ ಪ್ರೂಟ್ಸ್ ಐ ಡಿ ಸಂಖ್ಯೆ ನೀಡಿ ನೊಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ತಿಳಿಸಲಾಗಿದೆ.

Togari bembala bele

How to Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ತಮ್ಮ ಹತ್ತಿರದ ತೊಗರಿ ಖರೀದಿ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Land ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?

Documents For Togari Msp-ನೊಂದಣಿ ಮಾಡಿಕೊಳ್ಳಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/Adhar card
2) ಬ್ಯಾಂಕ್ ಪಾಸ್ ಬುಕ್/Bank Pass book
3) ಪ್ರೂಟ್ಸ್ ಐಡಿ/FID Number
4) ಮೊಬೈಲ್ ನಂಬರ್/Mobile Number
5) ಜಮೀನಿನ ಪಹಣಿ/RTC

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲ್ಲೂಕಿನ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಚೇರಿಯನ್ನು ಭೇಟಿ ಮಾಡಿ.

- Advertisment -
LATEST ARTICLES

Related Articles

- Advertisment -

Most Popular

- Advertisment -