ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ರಾಜ್ಯ ಸರಕಾರದಿಂದ ಮತ್ತೊಂದು ಕಹಿ ಸುದ್ದಿ ಹೊರ ಬಿದ್ದಿದ್ದು, ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಸೇರಿ ಎಲ್ಲಾ ಸಾರಿಗೆ ನಿಗಮಗಳ ಬಸ್‌ಗಳ ದರ ಹೆಚ್ಚಳ ಮಾಡಲು ನಿಗಮಗಳ ಮೂಲಕ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ರಾಜ್ಯ ಸರಕಾರವು ಅಧಿಕೃತವಾಗಿ ಅನುಮೋದನೆ ನೀಡಿದೆ.
ರಾಜ್ಯ ಸರಕಾರದ ಹೊಸ ಆದೇಶದ ಪ್ರಕಾರ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ನಿಗಮಗಳ ಬಸ್ ದರದಲ್ಲಿ ಶೇ 15% ರಷ್ಟು ಏರಿಕೆ ಮಾಡಲಾಗಿದೆ(Bus Ticket Price news), ಈ ಕ್ರಮದಿಂದ ಪುರುಷರಿಗೆ ಇನ್ನು ಮುಂದೆ ಸಾರಿಗೆ ಬಸ್ ಗಳಲ್ಲಿ ಸಂಚಾರ ಮಾಡಲು ಅಧಿಕ ವೆಚ್ಚ ವ್ಯಯಿಸುವುದು ಅನಿವಾರ್ಯವಾದ ಪರಿಸ್ಥಿತಿ ಉಂಟಾಗಿದೆ.
ಇದನ್ನೂ ಓದಿ: Togari bembala bele-ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ! ದರ ಎಷ್ಟು?
ಬಸ್ ದರ ಏರಿಕೆ ಮಾಡಲು ಕಾರಣಗಳೇನು? ಸ್ಥಳವಾರು ಬಸ್ ಗಳಲ್ಲಿ ಟಿಕೆಟ್ ದರದಲ್ಲಿ ಎಷ್ಟು ಏರಿಕೆ ಮಾಡಲಾಗಿದೆ? ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಬಸ್ ದರ ವಿವರ ಸೇರಿದಂತೆ ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.
KSRTC Bus Ticket Price-ಬಸ್ ದರ ಏರಿಕೆ ಮಾಡಲು ಕಾರಣಗಳೇನು?
ದುಬಾರಿ ಇಂದಿನ ವೆಚ್ಚ, ನೌಕರರ ವೇತನ, ಬಸ್ ದುರಸ್ತಿ ನಿರ್ವಹಣೆ ಸೇರಿದಂತೆ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಾರಿಗೆ ನಿಗಮಗಳಲ್ಲಿ ದೈನಂದಿನ ವೆಚ್ಚವು ಗಣನೀಯವಾಗಿ ಏರಿಕೆಯಾಗಿರುವುದರಿಂದ ನಿಗಮಗಳಿಂದ ತಮ್ಮ ಖರ್ಚು-ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟಕರವಾಗಿದ್ದು,
ಇದಲ್ಲದೇ ಕಳೆದ ನಾಲ್ಕು ವರ್ಷಗಳಲ್ಲಿ ಟಿಕೆಟ್ ದರದಲ್ಲಿ ಪರಿಷ್ಕರಣೆ ಮಾಡಿರುವುದಿಲ್ಲ ಈ ಕಾರಣದಿಂದಲು ಈ ದರ ಏರಿಕೆಗೆ ಎಲ್ಲಾ ನಿಗಮಗಳಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಸರಕಾರವು ಟಿಕೆಟ್ ದರ ಏರಿಕೆಗೆ ಅಧಿಕೃತ ಅನುಮೋದನೆ ನೀಡಿದೆ.
ಇದನ್ನೂ ಓದಿ: Ration Card Application-ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!
KSRTC bus booking- ಸ್ಥಳವಾರು ಬಸ್ ಗಳಲ್ಲಿ ಟಿಕೆಟ್ ದರದಲ್ಲಿ ಎಷ್ಟು ಏರಿಕೆ ಮಾಡಲಾಗಿದೆ?
ಬಹುತೇಕ ರಾಜ್ಯದ ಎಲ್ಲಾ ಭಾಗಗಳ ಸಂಚಾರಕ್ಕೆ ಶೇ 15% ರಷ್ಟು ಪ್ರಸ್ತುತ ದರಕ್ಕೆ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಲಾಗಿದ್ದು ಕೇಲವು ಸ್ಥಳಗಳಿಗೆ ಟಿಕೆಟ್ ದರ ಎಷ್ಟಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
1) ಬೆಂಗಳೂರು ನಿಂದ ಚಿಕ್ಕಮಗಳೂರುಗೆ ಹಿಂದಿನ ದರ ₹285 ರೂ ಪರಿಷ್ಕೃತ ದರ ₹328 ರೂ
2) ಬೆಂಗಳೂರು ನಿಂದ ಹಾಸನಗೆ ಹಿಂದಿನ ದರ ₹246 ರೂ ಪರಿಷ್ಕೃತ ದರ ₹282 ರೂ
3) ಬೆಂಗಳೂರು ನಿಂದ ಮಂಗಳೂರುಗೆ ಹಿಂದಿನ ದರ ₹424 ಪರಿಷ್ಕೃತ ದರ ₹477 ರೂ
4) ಬೆಂಗಳೂರು ನಿಂದ ರಾಯಚೂರುಗೆ ಹಿಂದಿನ ದರ ₹556 ರೂ ಪರಿಷ್ಕೃತ ದರ ₹639 ರೂ
ಇದನ್ನೂ ಓದಿ: Ration Card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!
5) ಬೆಂಗಳೂರು ನಿಂದ ಬಳ್ಳಾರಿಗೆ ಹಿಂದಿನ ದರ ₹376 ರೂ ಪರಿಷ್ಕೃತ ದರ ₹432 ರೂ
6) ಬೆಂಗಳೂರು ನಿಂದ ಹುಬ್ಬಳ್ಳಿಗೆ ಸಂಚರಿಸಲು ಹಿಂದಿನ ದರ ₹501 ರೂ ಪರಿಷ್ಕೃತ ದರ ₹576 ರೂ
7) ಬೆಂಗಳೂರು ನಿಂದ ಬೆಳಗಾವಿಗೆ ಸಂಚರಿಸಲು ಹಿಂದಿನ ದರ ₹631 ಪರಿಷ್ಕೃತ ದರ ₹725 ರೂ
8) ಬೆಂಗಳೂರು ನಿಂದ ಕಲಬುರಗಿಗೆ ಹಿಂದಿನ ದರ ₹706 ರೂಪಾಯಿ, ಪರಿಷ್ಕೃತ ದರ ₹811 ರೂ
9) ಬೆಂಗಳೂರು ನಿಂದ ಮೈಸೂರುಗೆ ಹಿಂದಿನ ದರ ₹185 ರುಪಾಯಿ ಪರಿಷ್ಕೃತ ದರ ₹213 ರೂ
10) ಬೆಂಗಳೂರು ನಿಂದ ಮಡಿಕೇರಿಗೆ ಹಿಂದಿನ ದರ ₹358 ಪರಿಷ್ಕೃತ ದರ ₹411 ರೂ
ಇದನ್ನೂ ಓದಿ: Land ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?
ನಾಲ್ಕು ವರ್ಷದ ಬಳಿಕ ದರದಲ್ಲಿ ಪರಿಷ್ಕರಣೆ:
ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ, ವಾಯುವ್ಯ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ , ಕಲ್ಯಾಣ ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2020 ರ ಬಳಿಕ ನಾಲ್ಕು ವರ್ಷ ಕಳೆದ ಮೇಲೆ ಈಗ ನಿಗಮದಿಂದ ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಪರಿಷ್ಕೃತ ದರ ಯಾವಾಗಿನಿಂದ ಜಾರಿಗೆ ಬರಲಿದೆ:
ರಾಜ್ಯದ ಎಲ್ಲಾ ನಿಗಮಗಳಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಪರಿಷ್ಕೃತ ದರದಲ್ಲಿ ಬಸ್ ಟಿಕೆಟ್ ಅನ್ನು 05 ಜನವರಿ 2025 ರಿಂದ ವಿತರಣೆ ಮಾಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: PM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!
KSRTC Expenditure-ಅಂಕಿ-ಅಂಶ ವಿವರ:
ಕಳೆದ 3 ತಿಂಗಳಲ್ಲಿ ಸಾರಿಗೆ ನಿಗಮಗಳಿಗೆ ಡಿಸೇಲ್ ಬೆಲೆ ಏರಿಕೆ, ಬಸ್ ನಿರ್ವಹಣೆ ವೆಚ್ಚ ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸಂಚಾರ ನೀಡಿರುವುದರ ಪರಿಣಾಮದಿಂದ ಕೋಟಿ ₹295 ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.
BMTC ಸಂಸ್ಥೆಯಲ್ಲಿ ಎಲ್ಲಾ ಬಗ್ಗೆಗೆ ಖರ್ಚಿಗೆ ₹40 ಕೋಟಿ ಹಣ ವ್ಯಯಿಸಲಾಗಿದ್ದು ಆದಾಯ ಒಟ್ಟು ₹34 ಕೋಟಿ ಬಂದಿರುತ್ತದೆ. ₹7.84 ಕೋಟಿ ನಷ್ಟ ಅನುಭವಿಸಿದೆ.