Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!

February 17, 2026 | Siddesh
Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!
Share Now:

ಇಂದಿನ ಡಿಜಿಟಲ್ ಯುಗದಲ್ಲಿ ಕಂದಾಯ ಇಲಾಖೆಯು ರೈತರಿಗೆ ಹಲವಾರು ಸೌಲಭ್ಯಗಳನ್ನು ಬೆರಳ ತುದಿಯಲ್ಲಿ ನೀಡುತ್ತಿದೆ. ಒಂದು ಕಾಲದಲ್ಲಿ ಜಮೀನಿನ ದಾಖಲೆಗಳಿಗಾಗಿ(Sketch), ಅದರಲ್ಲೂ ಮುಖ್ಯವಾಗಿ ಜಮೀನಿನ ನಕ್ಷೆ ಅಥವಾ ಸ್ಕೆಚ್ ಪ್ರತಿಗಾಗಿ ರೈತರು ತಾಲ್ಲೂಕು ಕಚೇರಿ ಅಥವಾ ಸರ್ವೆ ಇಲಾಖೆಯ ಮುಂದೆ ದಿನಗಟ್ಟಲೆ ಅಲೆಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು 'ಭೂಮಿ' ಪೋರ್ಟಲ್ ಮೂಲಕ ರೈತರು ತಮ್ಮ ಜಮೀನಿನ ಇ-ಸ್ಕೆಚ್ (E-Sketch) ಪ್ರತಿಯನ್ನು ತಮ್ಮ ಮೊಬೈಲ್ ಮೂಲಕವೇ ಡೌನ್‌ಲೋಡ್ ಮಾಡಿಕೊಳ್ಳುವ ಸುಲಭ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಪ್ರತಿಯು ಕೇವಲ ವಿಕ್ಷಣೆ ಮಾಡುವುದಕ್ಕಾಗಿ ಮಾತ್ರ ಲಭ್ಯವಿದ್ದು ಅಧಿಕೃತ ಪ್ರತಿಯನ್ನು ಪಡೆಯಲು ನಿಮ್ಮ ಹೋಳಿಯ ನಾಡಕಚೇರಿಯನ್ನು ಭೇಟಿ ಮಾಡಬೇಕು.

ಜಮೀನಿನ ಸರ್ವೆ ನಂಬರ್(Survey Number) ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಆಕಾರ, ವಿಸ್ತೀರ್ಣ ಮತ್ತು ಗಡಿ ಗುರುತುಗಳನ್ನು ಒಳಗೊಂಡ ಇ-ಸ್ಕೆಚ್ ಅನ್ನು ನೀವು ಪಡೆಯಬಹುದು. ಈ ತಾಂತ್ರಿಕ ಅಭಿವೃದ್ಧಿಯಿಂದಾಗಿ ರೈತರಿಗೆ ಸಮಯದ ಉಳಿತಾಯವಾಗುವುದಲ್ಲದೆ, ದಲ್ಲಾಳಿಗಳ ಹಾವಳಿಯೂ ತಪ್ಪಿದಂತಾಗಿದೆ. ನಿಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು, ನೀವೇ ನಿಮ್ಮ ಜಮೀನಿನ 'ಡಿಜಿಟಲ್ ನಕ್ಷೆ'ಯನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ: Toilet Room Subsidy-ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

ಈ ಆನ್ಲೈನ್ ವ್ಯವಸ್ಥೆಯು ಕೇವಲ ಸ್ಕೆಚ್(Agriculture Land Sketch Download) ನೋಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಜಮೀನಿನ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ಒದಗಿಸುತ್ತದೆ. ಸರ್ವೆ ನಂಬರ್, ಹಿಸ್ಸಾ ನಂಬರ್ ಮತ್ತು ನಿಮ್ಮ ಗ್ರಾಮದ ನಕ್ಷೆಯಲ್ಲಿ ನಿಮ್ಮ ಜಮೀನು ಎಲ್ಲಿ ಬರುತ್ತದೆ ಎಂಬ ಭೂ-ಪಟವನ್ನೂ ಸಹ ಇದು ಸ್ಪಷ್ಟವಾಗಿ ತೋರಿಸುತ್ತದೆ. ಈ ಪ್ರಕ್ರಿಯೆಯು ಸರಳವಾಗಿದ್ದು, ರೈತರು ಯಾವುದೇ ತಾಂತ್ರಿಕ ತಜ್ಞರ ಸಹಾಯವಿಲ್ಲದೆ ಮನೆಯಲ್ಲೇ ಕುಳಿತು ಇದನ್ನು ಮಾಡಬಹುದಾಗಿದೆ. ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

Sketch Copy Importance-ಜಮೀನಿನ ಸ್ಕೆಚ್ ದಾಖಲೆ ಏಕೆ ಮುಖ್ಯ?

ರೈತರಿಗೆ ಪಹಣಿ (RTC) ಎಷ್ಟು ಮುಖ್ಯವೋ, ಸ್ಕೆಚ್ ಪ್ರತಿ ದಾಖಲೆಯು ಸಹ ಅಷ್ಟೇ ಮುಖ್ಯವಾಗಿದೆ. ಈ ದಾಖಲೆಯ ಅಗತ್ಯತೆಯ ಪ್ರಮುಖ ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

ರೈತರು ತಮ್ಮ ಜಮೀನಿನ ಗಡಿ ಎಲ್ಲಿಗೆ ಮುಕ್ತಾಯವಾಗುತ್ತದೆ ಎಂಬುದನ್ನು ಈ ದಾಖಲೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿರುತ್ತದೆ.

ಜಮೀನಿನ ಮಾಲೀಕತ್ವದ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲು ಈ ದಾಖಲೆಯು ಅತ್ಯಗತ್ಯವಾಗಿದೆ.

ಇದನ್ನೂ ಓದಿ: Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

ಜಮೀನಿನ ನಕ್ಷೆ ನಿಮ್ಮ ಬಳಿ ಇದ್ದರೆ ಗಡಿ ವಿವಾದಗಳು ಉಂಟಾಗದಂತೆ ತಡೆಯಬಹುದು. ಮತ್ತು ವಿವಾದ ಉಂಟಾದ ಸಮಯದಲ್ಲಿ ಈ ದಾಖಲೆಯು ಅಗತ್ಯ ಮಾಹಿತಿಯನ್ನು ತಿಳಿಯಲು ಸಹಕಾರಿಯಾಗಿದೆ.

ಕೃಷಿ ಜಮೀನನ್ನು ಮಾರಾಟ ಮಾಡುವಾಗ ಅಥವಾ ಹೊಸದಾಗಿ ಖರೀದಿ ಮಾಡುವಾಗ ಈ ದಾಖಲೆ ಇದ್ದರೆ ಮಾತ್ರ ಮುಂದಿನ ಪಕ್ರಿಯೆಯನ್ನು ಮಾಡಲು ಬರುತ್ತದೆ. ಜಮೀನಿನ ಮಾರಾಟ ಮತ್ತು ಖರೀದಿಗೆ ಈ ದಾಖಲೆಯನ್ನು ಕಡ್ಡಾಯವಾಗಿ ಬೇಕಾಗುತ್ತದೆ.

Sketch Copy-ಜಮೀನಿನ ಸ್ಕೆಚ್ ಪ್ರತಿ ಯಾವೆಲ್ಲ ಸಮಯದಲ್ಲಿ ಬೇಕಾಗುತ್ತದೆ?

ಕೃಷಿಕರಿಗೆ ಜಮೀನಿನ ಸ್ಕೆಚ್ ಕಾಪಿ ಯಾವೆಲ್ಲ ಸಮಯದಲ್ಲಿ ಬೇಕಾಗುತ್ತದೆ ಎನ್ನುವ ವಿವರ ಹೀಗಿದೆ:

ಕೃಷಿ ಸಾಲ ಅಥವಾ ಜಮೀನಿನ ಮೇಲೆ ಸಾಲ ಪಡೆಯುವಾಗ ಬ್ಯಾಂಕುಗಳು ಜಮೀನಿನ ನಕ್ಷೆಯನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಜಮೀನಿನನ್ನು ಪಾಲು ವಿಭಾಗ ಅಥವಾ ಹಿಸ್ಸಾ ಪೋಡಿ ಮಾಡುವಾಗ ಈ ಸ್ಕೆಚ್ ಮೂಲ ದಾಖಲೆಯಾಗಿ ಬೇಕಾಗುತ್ತದೆ.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

ಸರ್ವೇಯರ್ ಬಂದು ಜಮೀನು ಅಳತೆ ಮಾಡುವಾಗ ಈ ನಕ್ಷೆಯ ಆಧಾರದ ಮೇಲೆ ಗಡಿ ಗುರುತಿಸುತ್ತಾರೆ.

ಜಮೀನಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳು ಅಥವಾ ಕೋರ್ಟ್ ಪ್ರಕರಣಗಳಿದ್ದರೆ ಸ್ಕೆಚ್ ಪ್ರತಿ ಸಲ್ಲಿಕೆ ಮಾಡುವುದು ಅನಿವಾರ್ಯ.

ಜಮೀನಿನಲ್ಲಿ ಮನೆ ಕಟ್ಟಲು ಅಥವಾ ಅಧಿಕೃತವಾಗಿ ಬೋರ್‌ವೆಲ್ ಕೊರೆಯಿಸಲು ಅನುಮತಿ ಪಡೆಯುವಾಗ ಈ ದಾಖಲೆ ಬೇಕಾಗುತ್ತದೆ.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಜಮಾ ವಿವರವನ್ನು ತಿಳಿಯುವುದು ಹೇಗೆ?

Sketch Copy Download Link-ಜಮೀನಿನ ಇ-ಸ್ಕೆಚ್ ಅನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವ ವಿಧಾನ:

ಕೃಷಿಕರು ಕಂದಾಯ ಇಲಾಖೆಯ ಅಧಿಕೃತ "ಭೂಮಿ" ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಡಿಜಿಟಲ್ ಸ್ಕೆಚ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಪ್ರಥಮ ಹಂತದಲ್ಲಿ ಈ "Sketch Copy Download" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Free Skill Training-31 ದಿನದ ಉಚಿತ ಎಂಬ್ರಾಯಡರಿ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Agriculture Land Sketch

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/ತಾಲ್ಲೂಕು/ಹೋಬಳಿ/ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿ ಬಳಿಕ ಸರ್ನಾಕ್ ಹಾಗೂ ಹಿಸ್ಸಾ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಹುಡುಕು/Search ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಇ-ಸ್ಕೆಚ್ ಕಾಣಿಸುತ್ತದೆ
"Print" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಇ-ಸ್ಕೆಚ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಗಮನಿಸಿ: ಇ-ಸ್ಕೆಚ್ ಕಾಪಿಯು ಸಾರ್ವಜನಿಕರಿಗೆ ವೀಕ್ಷಣೆಗಾಗಿ ಮಾತ್ರ ಲಭ್ಯವಿರುತ್ತದೆ.

ಇದನ್ನೂ ಓದಿ: Shakti Yojane Smart Card-ಇನ್ಮುಂದೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಬದಲು ಸ್ಮಾರ್ಟ್ ಕಾರ್ಡ್!

What information is included in the e-sketch of the land-ಜಮೀನಿನ ಇ-ಸ್ಕೆಚ್ ನಲ್ಲಿ ಯಾವೆಲ್ಲ ಮಾಹಿತಿ ಇರುತ್ತದೆ?

ಒಂದು ಅಧಿಕೃತ ಇ-ಸ್ಕೆಚ್‌ನಲ್ಲಿ ಈ ಕೆಳಗಿನ ಪ್ರಮುಖ ಮಾಹಿತಿಗಳನ್ನು ಸೂಚಿಸಲಾಗಿರುತ್ತದೆ:

ಜಮೀನಿನ ಆಕಾರ: ಜಮೀನು ಯಾವ ದಿಕ್ಕಿನಲ್ಲಿ ಎಷ್ಟಿದೆ ಎಂಬ ಆಕಾರದ ರೇಖಾಚಿತ್ರ ಇರುತ್ತದೆ.

ಸರ್ವೆ ಮತ್ತು ಹಿಸ್ಸಾ ನಂಬರ್: ಜಮೀನಿನ ನಿಖರವಾದ ಗುರುತಿನ ಸಂಖ್ಯೆ.

ಗಡಿ ಗುರುತುಗಳು: ಜಮೀನಿನ ನಾಲ್ಕು ದಿಕ್ಕುಗಳ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿರುತ್ತದೆ.

ಜಮೀನಿನ ಅಳತೆ: ಜಮೀನಿನ ಒಟ್ಟು ಅಳತೆಯನ್ನು ಮೀಟರ್ ನಲ್ಲಿ ಗುರುತಿಸಲಾಗಿರುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: