Krishi Sadhaka-2026 ನೇ ಸಾಲಿನ ‘ವಿ-ಸೂಪರ್ ಸ್ಟಾರ್ ರೈತ ಅಭಿಯಾನ’ಕ್ಕೆ ಚಾಲನೆ! ಯಾರೆಲ್ಲ ಭಾಗವಹಿಸಬಹುದು!

February 21, 2026 | Siddesh
Krishi Sadhaka-2026 ನೇ ಸಾಲಿನ ‘ವಿ-ಸೂಪರ್ ಸ್ಟಾರ್ ರೈತ ಅಭಿಯಾನ’ಕ್ಕೆ ಚಾಲನೆ! ಯಾರೆಲ್ಲ ಭಾಗವಹಿಸಬಹುದು!
Share Now:

ನಮ್ಮ ಕರ್ನಾಟಕದ ನಂಬರ್ 1 ದಿನಪತ್ರಿಕೆಗಳಲ್ಲಿ ಒಂದಾದ "ವಿಜಯ ಕರ್ನಾಟಕ" ಸತತ 8 ವರ್ಷಗಳಿಂದ(Krishi Sadhaka 2026) ಸಾಧಕ ರೈತರಿಗಾಗಿ ಪ್ರಶಸ್ತಿಗಳನ್ನು ನೀಡುತ್ತಿದ್ದು ಈ ವರ್ಷವೂ ಸಹ 'ವಿ-ಸೂಪರ್ ಸ್ಟಾರ್ ರೈತ 2025-26' ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಫೆಬ್ರವರಿ 28 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

"ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ" ಎಂಬ ವ್ಯಾಕ್ಯೆಯಂತೆ ಇದನ್ನು ಕುವೆಂಪು ಅವರು(Innovative Farming Winners) ಹಾಡಿದ್ದು ಇದು ಕೇವಲ ಸಾಲುಗಳಲ್ಲ, ಇದು ನಮ್ಮ ದೇಶದ ಅನ್ನದಾತನ ಬದುಕಿನ ಸಾರವಾಗಿದೆ. ಬಿಸಿಲು-ಮಳೆ ಎನ್ನದೆ ಮಣ್ಣಿನೊಂದಿಗೆ ಮಲ್ಲಯುದ್ಧ ಮಾಡಿ, ಜಗತ್ತಿಗೆ ಅನ್ನ ನೀಡುವ ರೈತ ನಿಜವಾದ 'ಸೂಪರ್ ಸ್ಟಾರ್’ ಎಂದರೆ ತಪ್ಪಾಗಲಾಗದು.

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

ಪ್ರಸ್ತುತ ಇಂದಿನ ದಿನಮಾನಗಳಲ್ಲಿ ಕೃಷಿ ಎಂದರೆ ಕೇವಲ ಹಳೆಯ ಪದ್ದತಿಯಲ್ಲ, ಇದು ಹೊಸ ಆವಿಷ್ಕಾರಗಳ(Horticulture Growth Stories) ಕಣಜವಾಗಿದೆ. ಎಲ್ಲೊ ಮನೆಯಿಂದ ಹೊರಗಿದ್ದು ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಮಣ್ಣಿನ ಮಡಿಲಿಗೆ ಮರಳಿ ಬರುತ್ತಿರುವ ಸಂಗತಿಗಳನ್ನು ನಾವೀಗ ನೋಡುತ್ತಿದ್ದೇವೆ. ಈ ಯುವಜನರಿಗೆ ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ಕಾಣುತ್ತಿದೆ.

ಅಭಿಯಾನದಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಫೆಬ್ರವರಿ 2026 ದಿನಾಂಕವಾಗಿದೆ.

ಇದನ್ನೂ ಓದಿ: Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ಈ ಅಭಿಯಾನದ ಉದ್ದೇಶ ಹಾಗೂ ಗುರಿ ಏನು?

ಸಾಮಾನ್ಯವಾಗಿ ಸಾಧನೆ ಎಂದರೆ ಅದು ಕೇವಲ ಕಲೆ, ಸಾಹಿತ್ಯ ಅಥವಾ ಕ್ರೀಡೆಗೆ ಸೀಮಿತ ಎಂಬ ಭಾವನೆ ಎಲ್ಲರ ಮನಸ್ಸಲ್ಲಿದೆ, ಆದರೆ, ಬಿಸಿಲು-ಮಳೆ ಎನ್ನದೆ ಮಣ್ಣಿನಲ್ಲಿ ಚಿನ್ನ ಬೆಳೆಯುವ ರೈತನ ಸಾಧನೆ ಎಲ್ಲಕ್ಕಿಂತ ಮಿಗಿಲಾದದ್ದು ಎಂದರೆ ತಪ್ಪಾಗಲಾರದು. ಈ 'ವಿ-ಸೂಪರ್ ಸ್ಟಾರ್ ರೈತ' ಪ್ರಶಸ್ತಿಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿದೆ:

ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯನ್ನು ಗಳಿಸಿದ ರೈತರಿಗೆ ವಿಜಯ ಕರ್ನಾಟಕದ ವತಿಯಿಂದ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಜ್ಯ ಮಟ್ಟದ ವೇದಿಕೆಯನ್ನು ನೋಡುವುದು ಇದರ ಉದ್ದೇಶವಾಗಿದೆ.

ಯುವ ಪೀಳಿಗೆಯು ತಿಳಿದಂತೆ ಕೃಷಿ ಎಂದರೆ ಕೇವಲ ಕಷ್ಟದ ಕೆಲಸವಲ್ಲ ಇದನ್ನು ಒಂದ್ಯ್ ಉದ್ಯಮ ಎಂದು ಪರಿಗಣಿಸಿ ಬೆಳೆಸಬಹುದು ಎಂಬುದನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವುದು.

ಒಬ್ಬ ರೈತನು ಸಾಧನೆ ಮಾಡಿ ಪಡೆದ ಪ್ರಶಸ್ತಿಯನ್ನು ಯಶಸ್ವಿ ಸೂತ್ರಗಳನ್ನು ಹಲವಾರು ಉಳಿದ ಜನರಿಗೆ ದಾರಿದೀಪವಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Agri Pumpset-ಕೃಷಿ ಪಂಪ್ ಸೆಟ್ ಗೆ 10HP ವರೆಗೆ ವಿದ್ಯುತ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

ಈ ಅಭಿಯಾನದಲ್ಲಿ ಯಾರೆಲ್ಲ ಭಾಗವಹಿಸಬಹುದು?

ಎಲ್ಲಾ ವರ್ಷದಂತೆ ಈ ವರ್ಷವೂ ಸಹ ಈ ಅಭಿಯಾನವು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗಿಲ್ಲ. ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 200 ಕ್ಕೂ ಹೆಚ್ಚು ರೈತರನ್ನು ಪುರಸ್ಕರಿಸುವ ಗುರಿ ಹೊಂದಿದ್ದು ಯಾರೆಲ್ಲ ಈ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಈ ಕೆಳಗೆ ತಿಳಿಸಲಾಗಿದೆ.

ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಅಥವಾ ವಿಭಿನ್ನ ಪ್ರಯೋಗಗಳ ಮೂಲಕ ಯಶಸ್ಸು ಕಂಡ ಪ್ರಗತಿಪರ ರೈತರು.

ಕೇವಲ ಒಂದು ಬೆಳೆಯ ಮೇಲೆ ಅವಲಂಬಿತವಾಗದೆ, ಮಿಶ್ರ ಬೆಳೆ, ಸಮಗ್ರ ಕೃಷಿ ಮತ್ತು ಸುಸ್ಥಿರ ಕೃಷಿ ಮಾಡುತ್ತಿರುವವರು.

ಇದನ್ನೂ ಓದಿ: Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!

ಹಣ್ಣು, ತರಕಾರಿ ಹಾಗೂ ಹೂವಿನ ಕೃಷಿಯಲ್ಲಿ ಸಾಧನೆ ಮಾಡಿದ ರೈತರು.

ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಕೋಳಿ ಸಾಕಣೆ, ಜೇನು ಕೃಷಿ, ಮೊಲ ಸಾಕಣೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು.

ರೇಷ್ಮೆ ಮತ್ತು ಹತ್ತಿ ಬೆಳೆಯಲ್ಲಿ ಉತ್ತಮ ಲಾಭ ಗಳಿಸಿರುವ ರೈತರು ಭಾಗವಹಿಸಬಹುದು.

ಕೃಷಿ ಕೆಲಸಗಳನ್ನು ಸುಲಭಗೊಳಿಸಲು ಹೊಸ ಯಂತ್ರೋಪಕರಣಗಳನ್ನು ಅಥವಾ ಪದ್ಧತಿಗಳನ್ನು ಕಂಡುಹಿಡಿದವರು.

ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರ ಮೂಲಕ ಲಾಭ ಪಡೆಯುತ್ತಿರುವ ರೈತರು ಅಥವಾ ರೈತ ಉತ್ಪಾದಕ ಸಂಘಗಳು (FPO).

ದೇಸಿ ಬೀಜಗಳ ಸಂರಕ್ಷಣೆ ಮತ್ತು ಅಪರೂಪದ ತಳಿಗಳನ್ನು ಉಳಿಸುವ ಕೆಲಸ ಮಾಡುತ್ತಿರುವವರು.

ಇದನ್ನೂ ಓದಿ: SSLC ಮತ್ತು PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ!

vijaya karnataka award

ಇದನ್ನೂ ಓದಿ: Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!

ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು? ಹಾಗೂ ಅರ್ಜಿ ಸಲ್ಲಿಸುವ ವಿಧಾನ?

ಈ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿ ಇರುವ ರೈತರು ಮೊದಲಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅರ್ಜಿ ಪ್ರತಿಯನ್ನು ಭರ್ತಿ ಮಾಡಬೇಕು.

ನಂತರ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕೃಷಿ ವಿಭಾಗ ಮತ್ತು ನಿಮ್ಮ ಸಾಧನೆಯ ಕಿರು ಪರಿಚಯವನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ನಿಮ್ಮ ಕೃಷಿ ಸಾಧನೆಯನ್ನು ಬಿಂಬಿಸುವ ಕಿರು ವಿಡಿಯೋ ಮತ್ತು ಫೋಟೋಗಳನ್ನು ಅರ್ಜಿಯೊಂದಿಗೆ ಒದಗಿಸಬೇಕು. ಇದು ನಿಮ್ಮ ಸಾಧನೆಯನ್ನು ಮೌಲ್ಯಮಾಪನ ಮಾಡಲು ಉಪಯೋಗವಾಗುತ್ತದೆ.

ಗಮನಿಸಿ: ಈಗಾಗಲೇ ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ 'ವಿ-ಸೂಪರ್ ಸ್ಟಾರ್ ರೈತ' ಪ್ರಶಸ್ತಿ ಪಡೆದವರು ಈ ಸ್ಪರ್ಧೆಯಲ್ಲಿ ಮತ್ತೊಮ್ಮೆ ಭಾಗವಹಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

ಈ ಅಭಿಯಾನದಿಂದ ರೈತರಿಗಾಗುವ ಪ್ರಯೋಜನಗಳೇನು?

ಈ ಅಭಿಯಾನದಲ್ಲಿ ನೀಡುವುದು ಕೇವಲ ಪುರಸ್ಕಾರವು ಕೇವಲ ಒಂದು ಪ್ರಶಸ್ತಿ ಪತ್ರ ಅಥವಾ ಸ್ಮರಣಿಕೆಗೆ ಸೀಮಿತವಾಗಿಲ್ಲ. ಇದರಿಂದ ರೈತರಿಗೆ ಸಿಗುವ ಪ್ರಯೋಜನಗಳು ಅಪಾರವಾಗಿದೆ.

ವಿಜಯ ಕರ್ನಾಟಕದಂತಹ ಬೃಹತ್ ಮಾಧ್ಯಮ ಸಂಸ್ಥೆಯಿಂದ ಗುರುತಿಸಲ್ಪಡುವುದು ಈ ಒಬ್ಬ ರೈತನು ನಮ್ಮ ಸಮಾಜದಲ್ಲಿ ಈ ರೈತರಿಗೆ ಹೆಚ್ಚಿನ ಗೌರವವನ್ನು ತಂದುಕೊಡುತ್ತದೆ.

ರಾಜ್ಯದ ವಿವಿಧ ಮೂಲೆಗಳ ಸಾಧಕ ರೈತರ ಪರಿಚಯವಾಗಿ, ಜ್ಞಾನ ವಿನಿಮಯಕ್ಕೆ ಇದೊಂದು ಅತಿ ದೊಡ್ಡ ವೇದಿಕೆಯಾಗಿದೆ.

ನಿಮ್ಮ ಸಾಧನೆ ಪತ್ರಿಕೆಯಲ್ಲಿ ಪ್ರಕಟವಾಗುವುದರಿಂದ ಸಾವಿರಾರು ಜನರಿಗೆ ನೀವು ಮಾದರಿ ರೈತವಾಗಿರುತ್ತೀರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: