Senior Citizen Card-ನಿಮ್ಮ ವಯಸ್ಸು 60 ವರ್ಷ ದಾಟಿದೆಯೇ? ಹಾಗಾದರೆ ಈ ಸವಲತ್ತುಗಳನ್ನು ಪಡೆಯಿರಿ!

February 23, 2026 | Siddesh
Senior Citizen Card-ನಿಮ್ಮ ವಯಸ್ಸು 60 ವರ್ಷ ದಾಟಿದೆಯೇ? ಹಾಗಾದರೆ ಈ ಸವಲತ್ತುಗಳನ್ನು ಪಡೆಯಿರಿ!
Share Now:

ನಮ್ಮ ಮನೆಯ ಹಿರಿಯರು ಎಂದರೆ ಕೇವಲ ಅವರು ವಯಸ್ಸಾದವರಲ್ಲ ಅವರು ನಮ್ಮ ಮನೆಯ ದಾರಿ ದೀಪವಾಗಿರುತ್ತಾರೆ ಹಾಗೂ ನಮ್ಮ ಮನೆಯ ಆಧಾರ ಸ್ತಂಭಗಳಾಗಿರುತ್ತಾರೆ. ಇವರು ದಿನವಿಡೀ ತಮ್ಮ ಕುಟುಂಬಕ್ಕಾಗಿ ಸಮಾಜಕ್ಕಾಗಿ ದುಡಿತಿರುತ್ತಾರೆ ಹಾಗೆಯೇ ಅವರು ತಮ್ಮ 60 ವರ್ಷಗಳ ನಂತರದ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ ಆದ್ದರಿಂದ ಸರ್ಕಾರವು ಹಿರಿಯ ನಾಗರಿಕರ ಗುರುತಿನ ಚೀಟಿ ಬಸವಲಬ್ಯವನ್ನು ಜಾರಿಗೆ ತಂದಿದ್ದು ಪ್ರಯೋಜನವನ್ನು ಪಡೆದಬೇಕೆಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಬಹಳಷ್ಟು ಜನರು ಇದು ಕೇವಲ ಕಾರ್ಡ್ ವಯಸ್ಸಿನ ಗುರುತಿನ ಚೀಟಿ ಎಂದು ಹೇಳುತ್ತಾರೆ ಆದರೆ ನಿಜಕ್ಕೂ ಇದು ನಮ್ಮ ಹಿರಿಯರಿಗೆ ಹಣವನ್ನು ಉಳಿಸುವ ಹಾಗೆ ಕಷ್ಟದ ಸಮಯದಲ್ಲಿ ಸಹಾಯ ಆಗುವ ಒಂದು ಮ್ಯಾಜಿಕ್ ಕಾರ್ಡ ಎಂದರೆ ತಪ್ಪಾಗಲಾಗದು. ಒಟ್ಟಾರೆಯಾಗಿ ಹೇಳುವುದಾದರೆ ಈ ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಹಕ್ಕಾಗಿರುತ್ತದೆ.

ಇದನ್ನೂ ಓದಿ: Farmer ID-ರೈತರ ಗಮನಕ್ಕೆ: ಕೃಷಿ ಇಲಾಖೆ ಸೌಲಭ್ಯ ಪಡೆಯಲು FID ಅಪ್‌ಡೇಟ್ ಕಡ್ಡಾಯ – ತಪ್ಪಿದರೆ ಸಬ್ಸಿಡಿ ಕಟ್!

ವಯಸ್ಸು ಕೇವಲ ಎರಡು ಅಂಕಿಯ ಸಂಖ್ಯೆ ಅಷ್ಟೇ ಆದರೆ 60 ವರ್ಷ ದಾಟಿದ ಮೇಲಿನ ಬದುಕು ನಿಜಕ್ಕೂ ಎರಡನೆಯ ಇನಿಂಗ್ಸ್ ಎಂದೇ ಹೇಳಬಹುದು ಈ ಹಂತದಲ್ಲಿ ಎಲ್ಲಾ ಹಿರಿಯರಿಗೂ ನೆಮ್ಮದಿ ಗೌರವ ಆರ್ಥಿಕ ರಕ್ಷಣೆ ಬೇಕು ಆದ್ದರಿಂದ ಸರ್ಕಾರವು ಈ ಸೌಲಭ್ಯಗಳನ್ನು ಜಾರಿಗೆ ತಂದಿರುತ್ತದೆ.

ಪ್ರಸ್ತುತ ಈ ಲೇಖನದಲ್ಲಿ ಈ ಕಾರ್ಡನ್ನು ಪಡೆಯುವುದು ಹೇಗೆ? ಹಿರಿಯ ನಾಗರಿಕರ ಚೀಟಿ ಎಂದರೇನು? ಈ ಕಾರ್ಡು ಪಡೆಯಲು ಅರ್ಹತೆಗಳನ್ನು ಹೊಂದಿರಬೇಕು?ಈ ಕಾರ್ಡಿನಿಂದ ಒದಗುವ ಪ್ರಯೋಜನಗಳಾವುವು?ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲೆಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಇದನ್ನೂ ಓದಿ: Krishi Sadhaka-2026 ನೇ ಸಾಲಿನ 'ವಿ-ಸೂಪರ್ ಸ್ಟಾರ್ ರೈತ ಅಭಿಯಾನ’ಕ್ಕೆ ಚಾಲನೆ! ಯಾರೆಲ್ಲ ಭಾಗವಹಿಸಬಹುದು!

Senior Citizen Card-ಹಿರಿಯ ನಾಗರಿಕರ ಚೀಟಿ ಎಂದರೇನು?

ಈ ಕಾರ್ಡ್ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಸರ್ಕಾರವು ಜಾರಿಗೆ ತಂದಿರುವ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡುವ ಅಧಿಕೃತ ಗುರುತಿನ ಚೀಟಿ ಇದು ಕೇವಲ ವಯಸ್ಸಿನ ಪ್ರತಿ ಅಲ್ಲ ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿ ಒದಗುವ ಸೌಲಭ್ಯಗಳನ್ನು ಪಡೆಯುವ ಪುರಾವೆಯಾಗಿದೆ.

Who Can Apply-ಈ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಕಾಯಂ ಪ್ರಜೆಯಾಗಿರಬೇಕು.

ಅರ್ಜಿದಾರ ಅಭ್ಯರ್ಥಿಗೆ 60 ವರ್ಷ ತುಂಬಿರಬೇಕು.

ವಿಕಲಚೇತನರು ಹಿರಿಯರು ಈ ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳಾವುವು?

ಆಧಾರ್ ಕಾರ್ಡ್

ಪಾನ್ ಕಾರ್ಡ್

ಜನನ ಪ್ರಮಾಣ ಪತ್ರ

ವಿಳಾಸದ ಪುರಾವೆ

ರೇಷನ್ ಕಾರ್ಡ್

ಫೋಟೋ

ಇದನ್ನೂ ಓದಿ: Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

Card Benefits-ಈ ಕಾರ್ಡಿನಿಂದ ಒದಗುವ ಪ್ರಮುಖ ಪ್ರಯೋಜನಗಳಾವುವು?

ಪ್ರಯಾಣದಲ್ಲಿ ರಿಯಾಯಿತಿ (Travel Concessions)​ಕೆ.ಎಸ್.ಆರ್.ಟಿ.ಸಿ ಬಸ್‌ಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಸಿಗುತ್ತದೆ. ​

ರೈಲ್ವೆ ಇಲಾಖೆ: ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್‌ಗಳು ಮತ್ತು ಕೆಳಮಟ್ಟದ ಸೀಟುಗಳ (Lower Berth) ಆದ್ಯತೆ ಇರುತ್ತದೆ (ಗಮನಿಸಿ: ಟಿಕೆಟ್ ದರ ರಿಯಾಯಿತಿಯು ಕೇಂದ್ರ ಸರ್ಕಾರದ ನಿಯಮಗಳಿಗೆ ಒಳಪಟ್ಟಿರುತ್ತದೆ).​

ವಿಮಾನಯಾನ: ಕೆಲವು ವಿಮಾನಯಾನ ಸಂಸ್ಥೆಗಳು (ಉದಾಹರಣೆಗೆ ಏರ್ ಇಂಡಿಯಾ) ಹಿರಿಯ ನಾಗರಿಕರಿಗೆ ಮೂಲ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುತ್ತವೆ.

ಆರೋಗ್ಯ ಮತ್ತು ಚಿಕಿತ್ಸೆ (Healthcare Benefits): ​ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ಸಾಲುಗಳಿರುತ್ತವೆ (Priority Queue).  

​ಅನೇಕ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ತಪಾಸಣೆ ಮತ್ತು ಚಿಕಿತ್ಸಾ ವೆಚ್ಚದಲ್ಲಿ ಶೇ. 10 ರಿಂದ 30 ರಷ್ಟು ರಿಯಾಯಿತಿ ನೀಡಲಾಗುತ್ತದೆ.

​ಸರ್ಕಾರಿ ಆರೋಗ್ಯ ಯೋಜನೆಗಳಾದ 'ಆಯುಷ್ಮಾನ್ ಭಾರತ್' ಅಡಿಯಲ್ಲಿ ಆದ್ಯತೆಯ ಮೇಲೆ ಸೌಲಭ್ಯ ದೊರೆಯುತ್ತದೆ.

ಇದನ್ನೂ ಓದಿ: Agri Pumpset-ಕೃಷಿ ಪಂಪ್ ಸೆಟ್ ಗೆ 10HP ವರೆಗೆ ವಿದ್ಯುತ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

ಬ್ಯಾಂಕಿಂಗ್ ಮತ್ತು ಹಣಕಾಸು (Banking & Finance)

​ಹೆಚ್ಚುವರಿ ಬಡ್ಡಿ: ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (Fixed Deposit) ಮೇಲೆ ಸಾಮಾನ್ಯ ಜನರಿಗಿಂತ ಶೇ. 0.50 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.  

​ಆದಾಯ ತೆರಿಗೆ: ಆದಾಯ ತೆರಿಗೆ ಪಾವತಿಸುವ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಿರುತ್ತದೆ.

​ಪಿಂಚಣಿ: ಅರ್ಹ ಬಡತನ ರೇಖೆಗಿಂತ ಕೆಳಗಿರುವ (BPL) ಹಿರಿಯ ನಾಗರಿಕರಿಗೆ 'ಸಂಧ್ಯ ಸುರಕ್ಷಾ' ಅಥವಾ ವೃದ್ಧಾಪ್ಯ ವೇತನದಂತಹ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಈ ಕಾರ್ಡ್ ಪೂರಕವಾಗುತ್ತದೆ.

ಕಾನೂನು ಮತ್ತು ಆಡಳಿತಾತ್ಮಕ ಆದ್ಯತೆ: ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಲು ಅವಕಾಶವಿದೆ.

​ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಿಗಾಗಿ ದೀರ್ಘಕಾಲ ಕಾಯುವ ಅಗತ್ಯವಿಲ್ಲದೆ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!

Apply Online-ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

​ನಿಮ್ಮ ಹತ್ತಿರದ 'ಕರ್ನಾಟಕ ಒನ್', 'ಬೆಂಗಳೂರು ಒನ್' ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬಹುದು. ​ಅಥವಾ ಜಿಲ್ಲಾ ಮಟ್ಟದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಫಾರ್ಮ್ ಪಡೆದು ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ:

Step-1: ಮೊದಲಿಗೆ ಇಲ್ಲಿ ನೀಡಿರುವ Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ಮಾಡಬೇಕು.

Step-2: ನಂತರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಹಿರಿಯ ನಾಗರಿಕರ ಗುರುತಿನ ಚೀಟಿ ಗಾಗಿ ಎಂಬ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

Step-4: ತದನಂತರ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ನಂತರ ನಿಮಗೆ ಒಂದು ಸ್ವೀಕೃತಿ ಸಂಖ್ಯೆ ಬರುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: