SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

February 28, 2026 | Siddesh
SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
Share Now:

ಶಿಕ್ಷಣ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನ ಬೆಳಕು. ಆದರೆ ಆರ್ಥಿಕ ಸಂಕಷ್ಟಗಳು ಹಲವು ಬಾರಿ ಈ ಬೆಳಕನ್ನು ಮಸುಕಾಗಿಸುತ್ತವೆ. ಇಂತಹ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ(SSP Scholarship Application) ಬೆನ್ನೆಲುಬಾಗಿ ನಿಲ್ಲುವುದು ಸರ್ಕಾರದ ವಿವಿಧ ವಿದ್ಯಾರ್ಥಿವೇತನ ಯೋಜನೆಗಳು. ಪ್ರಸ್ತುತ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು 2025-26ನೇ ಸಾಲಿನ ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎಸ್‌ಎಸ್‌ಪಿ (SSP) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.

ಈ ಯೋಜನೆಯು ಕೇವಲ ಒಂದು ಆರ್ಥಿಕ ನೆರವಲ್ಲ, ಬದಲಿಗೆ ಸಮಾನ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯುವ ಮಹತ್ವದ ಹೆಜ್ಜೆಯಾಗಿದೆ. ಅರ್ಹ ವಿದ್ಯಾರ್ಥಿಗಳು ತಾಂತ್ರಿಕ ಕಾರಣಗಳಿಂದ ಅಥವಾ ಮಾಹಿತಿ ಕೊರತೆಯಿಂದ ಅರ್ಜಿಯನ್ನು(Scholarship Application) ಸಲ್ಲಿಸಲು ಬಾಕಿ ಉಳಿದಿದ್ದರೆ, ಈಗ ಅವರಿಗೆ ಮತ್ತೊಂದು ಸುವರ್ಣ ಅವಕಾಶ ಲಭಿಸಿದೆ. ಶಿಕ್ಷಣದ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, "ಶೈಕ್ಷಣಿಕ ಸವಲತ್ತು ಬಳಸಿ, ಸಾಧನೆಯ ಶಿಖರ ಏರಿ" ಎಂಬ ಘೋಷವಾಕ್ಯದೊಂದಿಗೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: Sugarcane Incentive-ಕಬ್ಬು ಬೆಳೆಗಾರರಿಗೆ 300 ಕೋಟಿ ಆರ್ಥಿಕ ನೆರವು ಬಿಡುಗಡೆ: ಸಚಿವ ಶಿವಾನಂದ ಪಾಟೀಲ್!

ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 15 ಮಾರ್ಚ್ 2026 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ವಿದ್ಯಾರ್ಥಿಗಳು ಆನ್‌ಲೈನ್(SSP Scholarship Last Date) ಮೂಲಕ ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಕೊನೆಯ ಕ್ಷಣದ ತಾಂತ್ರಿಕ ದೋಷಗಳನ್ನು ತಪ್ಪಿಸಲು ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಸೂಕ್ತ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Scholarship Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ವಿದ್ಯಾರ್ಥಿವೇತನ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರುವ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಮತ್ತು ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದವರಾಗಿರಬೇಕು.

ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಶಾಲೆ/ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು್ ಅರ್ಜಿ ಸಲ್ಲಿಸಬಹುದು.

ಮೆಟ್ರಿಕ್ ಪೂರ್ವ: 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು.

ಮೆಟ್ರಿಕ್ ನಂತರ: ಎಸ್‌ಎಸ್‌ಎಲ್‌ಸಿ ನಂತರದ ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವವರು.

ಕುಟುಂಬದ ವಾರ್ಷಿಕ ಆದಾಯವು ಸರ್ಕಾರದ ನಿಗದಿತ ಮಿತಿಯ ಒಳಗಿರಬೇಕು.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!

Last Date For Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮಾರ್ಚ್ 2026

Scholarship Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ SSP ಪೋರ್ಟಲ್ ಅನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ SSP ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Online Land Documents-'ಇ-ಚಾವಡಿ' ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಅನ್ನು ಹಾಕಿ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಳ್ಳಿ.

Step-3: ಬಳಕೆದಾರ ಐಡಿಯನ್ನು ರಚನೆ ಮಾಡಿಕೊಂಡ ಬಳಿಕ ಅಗತ್ಯ ವಿವರವನ್ನು ಭರ್ತಿ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲೆಯನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Mutation-ಕಂದಾಯ ಇಲಾಖೆ ಇನ್ಮುಂದೆ ಮ್ಯುಟೇಶನ್ ಪ್ರಕ್ರಿಯೆ ಸರಳ ಮತ್ತು ಸುಲಭ!

SSP Scholarship

ಇದನ್ನೂ ಓದಿ: Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

Required Documents For Scholarship-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

ಆಧಾರ್ ಕಾರ್ಡ್: ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು).

ಜಾತಿ ಮತ್ತು ಆದಾಯ ಪ್ರಮಾಣ ಪತ್ರ: ಆರ್‌ಡಿ (RD) ಸಂಖ್ಯೆಯನ್ನು ಹೊಂದಿರುವ ಇತ್ತೀಚಿನ ಪ್ರಮಾಣ ಪತ್ರ.

ಶೈಕ್ಷಣಿಕ ದಾಖಲೆಗಳು: ಅಂಕಪಟ್ಟಿಗಳು (Marks Card) ಮತ್ತು ಪ್ರಸ್ತುತ ಸಾಲಿನ ವ್ಯಾಸಂಗ ದೃಢೀಕರಣ ಪತ್ರ.

ಶುಲ್ಕದ ರಸೀದಿ: ಕಾಲೇಜಿಗೆ ಪಾವತಿಸಿದ ಶುಲ್ಕದ ವಿವರಗಳು.

ಬ್ಯಾಂಕ್ ಖಾತೆ: ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಸಕ್ರಿಯ ಬ್ಯಾಂಕ್ ಖಾತೆ (NPCI Mapping ಆಗಿರಬೇಕು).

ವಿದ್ಯಾರ್ಥಿ ಐಡಿ (SATS ID): ಶಾಲಾ ವಿದ್ಯಾರ್ಥಿಗಳಿಗೆ ಸ್ಯಾಟ್ಸ್ ಐಡಿ ಕಡ್ಡಾಯ.

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

Bank Acconut Adhar Link-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ:

ವಿದ್ಯಾರ್ಥಿವೇತನವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ, ನಿಮ್ಮ ಬ್ಯಾಂಕ್ ಖಾತೆಯು ಕೆವೈಸಿ (KYC) ಅಪ್‌ಡೇಟ್ ಆಗಿದೆಯೇ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

Helpline Number-ಇನ್ನು ಹೆಚ್ಚಿನ ಮಾಹಿತಿಗಾಗಿ:

ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳು ಎದುರಾದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ 24X7 ಸಹಾಯವಾಣಿ ಸಂಖ್ಯೆ: 94823 00400 ಗೆ ಕರೆ ಮಾಡಬಹುದು. ಅಲ್ಲದೆ, ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣಗಳಾದ @SWDGok (X/Twitter) ಮತ್ತು Social Welfare Department (Facebook) ಮೂಲಕವೂ ಅಪ್‌ಡೇಟ್‌ಗಳನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: