Farmers Helpline-ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ವಂಚನೆಯಾದರೆ ತಕ್ಷಣ ಇಲ್ಲಿ ದೂರು ನೀಡಿ!

May 4, 2026 | Siddesh
Farmers Helpline-ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ವಂಚನೆಯಾದರೆ ತಕ್ಷಣ ಇಲ್ಲಿ ದೂರು ನೀಡಿ!
Share Now:

ಬೆಂಗಳೂರು: ರಾಜ್ಯದ ಅನ್ನದಾತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸರ್ಕಾರ ಮತ್ತು ಕೃಷಿ ಇಲಾಖೆ ಕಟ್ಟುನಿಟ್ಟಿನ(Purchasing Seeds, Fertilizers, And Pesticides) ಕ್ರಮ ಕೈಗೊಂಡಿದೆ. ರೈತರು ತಮ್ಮ ಕಷ್ಟದ ಹಣವನ್ನು ವ್ಯರ್ಥ ಮಾಡಬಾರದು ಮತ್ತು ನಕಲಿ ಉತ್ಪನ್ನಗಳ ಜಾಲಕ್ಕೆ ಬೀಳಬಾರದು ಎಂಬ ಉದ್ದೇಶದಿಂದ ಈಗ ವಿಶೇಷ ಸಹಾಯವಾಣಿಯನ್ನು ಬಿಡುಗಡೆ ಮಾಡಲಾಗಿದ್ದು, ರೈತರ ಹಿತರಕ್ಷಣೆಗೆ ಸರ್ಕಾರ ಮುಂದಾಗಿದೆ.

ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ ಕೆಲವು ಕಡೆಗಳಲ್ಲಿ(Seeds and fertilizers suspicious sales) ಅಧಿಕ ಬೆಲೆಗೆ ಗೊಬ್ಬರ ಮಾರಾಟ ಮಾಡುವುದು ಅಥವಾ ಕಳಪೆ ಗುಣಮಟ್ಟದ ಬೀಜಗಳನ್ನು ರೈತರಿಗೆ ಅಂಟಿಸುವ ದೂರುಗಳು ಕೇಳಿಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು, ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಖರೀದಿಯಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಲ್ಲಿ ತಕ್ಷಣವೇ ದೂರು ಸಲ್ಲಿಸಲು ರೈತರಿಗೆ ಕರೆ ನೀಡಿದೆ.

ಇದನ್ನೂ ಓದಿ: Fertilizer Price-ರಸಗೊಬ್ಬರ ಪರಿಷ್ಕೃತ ದರಪಟ್ಟಿ ಬಿಡುಗಡೆ! ಪೋಟ್ಯಾಶ್ ಸೇರಿ ಇನ್ನಿತರೆ ಗೊಬ್ಬರ ದರ ಏರಿಕೆ!

ಈ ನಿಟ್ಟಿನಲ್ಲಿ ರೈತರಿಗಾಗಿ 'ಕಿಸಾನ್ ಸಹಾಯವಾಣಿ/Kisan Helpline' ಕೇಂದ್ರವು ಸಕ್ರಿಯವಾಗಿದ್ದು, ರೈತರು ಯಾವುದೇ ಆತಂಕವಿಲ್ಲದೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ. ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಸಹಾಯವಾಣಿ ಲಭ್ಯವಿರಲಿದ್ದು, ರೈತರು ಮನೆಯಲ್ಲಿ ಕುಳಿತೇ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. ಜಾಗೃತ ರೈತರೇ ದೇಶದ ಶಕ್ತಿ, ಹಾಗಾಗಿ ಖರೀದಿಸುವ ಮುನ್ನ ಎಚ್ಚರ ವಹಿಸಿ ಮತ್ತು ವಂಚನೆಯ ವಿರುದ್ಧ ಧ್ವನಿ ಎತ್ತಿ.

Farmers Helpline Number-ದೂರು ಸಲ್ಲಿಸಲು ಸಂಪರ್ಕಿಸಿ:

ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ವಂಚನೆಯನ್ನು ಸಮರ್ಪಕವಾಗಿ ತಡೆಕಟ್ಟಲು ರೈತರಿಗಾಗಿ ಕೇಂದ್ರ ಕೃಷಿ ಮಂತ್ರಾಲಯವು 'ಕಿಸಾನ್ ಸಹಾಯವಾಣಿ/Kisan Helpline' ಕೇಂದ್ರವನ್ನು ಸ್ಥಾಪನೆ ಮಾಡಲಾಗಿದ್ದು ರೈತರು ಯಾವುದೇ ಆತಂಕವಿಲ್ಲದೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ. ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಸಹಾಯವಾಣಿ ಲಭ್ಯವಿರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಸಹಾಯವಾಣಿ ಸಂಖ್ಯೆ: 1800-180-1551
  • ಸಮಯ: ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ

ಇದನ್ನೂ ಓದಿ: Labour Department-ಸಚಿವ ಸಂಪುಟದಲ್ಲಿ ಮಹ್ವತದ ನಿರ್ಣಯ 115.8 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆಗೆ ತೀರ್ಮಾನ!

Farmers Helpline

ಇದನ್ನೂ ಓದಿ: LIC Policy-ಮಕ್ಕಳ ಶಿಕ್ಷಣಕ್ಕೆ LIC ಯಿಂದ ಮೂರು ಯೋಜನೆಗಳು: ನಿಮ್ಮ ಮಗುವಿನ ಭವಿಷ್ಯಕ್ಕೆ ಯಾವುದು ಬೆಸ್ಟ್?

ಬೀಜ, ಗೊಬ್ಬರ ಲಭ್ಯವಿದ್ದೂ ಇಲ್ಲವೆಂದು ಹೇಳುವುದು, ಕೃತಕ ಅಭಾವ ಸೃಷ್ಟಿಸುವುದು ಅಥವಾ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಈ ಕೂಡಲೇ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ನಿಮ್ಮ ವ್ಯಾಪ್ತಿಯ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ.-ಲೋಕೇಶ್ ಕೃಷಿ ಅಧಿಕಾರಿಗಳು,ರೈತ ಸಂಪರ್ಕ ಕೇಂದ್ರ, ಬೆಂಗಳೂರು

ಕೃಷಿ ಪರಿಕರಗಳ ಖರೀದಿ ಕುರಿತು ರೈತರ ಗಮನಕ್ಕೆ ಕೆಲವು ಮುಖ್ಯ ಸೂಚನೆಗಳು:

ಕೃಷಿಕರು ಸ್ಥಳೀಯ ಆಗ್ರೋ ಶಾಪ್(Agro Shop)ಗಳಲ್ಲಿ ತಮಗೆ ಅವಶ್ಯಕವಿರುವ ಬೀಜ,ಗೊಬ್ಬರ,ಕೀಟನಾಶಕವನ್ನು ಖರೀದಿ ಮಾಡುವ ಸಮಯದಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಲು ಸೂಚನೆ ನೀಡಲಾಗಿದೆ.

1) ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ:

ರೈತರು ಕಡ್ಡಾಯವಾಗಿ ರೈತ ಸಂಪರ್ಕ ಕೇಂದ್ರ ಅಥವಾ ಇಲಾಖೆಯಿಂದ ಪರವಾನಗಿ ಪಡೆದ ಅಧಿಕೃತ ಡೀಲರ್‌ಗಳ ಬಳಿಯೇ ಕೃಷಿ ಪರಿಕರಗಳನ್ನು ಖರೀದಿಸಬೇಕು. ಬೀದಿಬದಿಯಲ್ಲಿ ಅಥವಾ ಪರವಾನಗಿ ಇಲ್ಲದ ವ್ಯಕ್ತಿಗಳಿಂದ ಬೀಜಗಳನ್ನು ಖರೀದಿಸಬೇಡಿ.

ಇದನ್ನೂ ಓದಿ: LPG Price Hike-ವಾಣಿಜ್ಯ ಸಿಲಿಂಡರ್ ಬೆಲೆ 993 ರೂ. ದಿಢೀರ್ ಏರಿಕೆ: ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆಯ ಬಿಸಿ!

2) ಕಡ್ಡಾಯವಾಗಿ ರಸೀದಿ (Bill) ಪಡೆಯಿರಿ:

ನೀವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ಮಾರಾಟಗಾರರಿಂದ ಅಧಿಕೃತ ರಸೀದಿಯನ್ನು ಪಡೆಯಿರಿ. ರಸೀದಿಯಲ್ಲಿ ಕಂಪನಿಯ ಹೆಸರು, ಬ್ಯಾಚ್ ಸಂಖ್ಯೆ ಮತ್ತು ಅವಧಿ ಮುಗಿಯುವ ದಿನಾಂಕ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಬೆಳೆ ವಿಫಲವಾದರೆ ಅಥವಾ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಈ ರಸೀದಿಯೇ ನಿಮಗೆ ಮುಖ್ಯ ದಾಖಲೆಯಾಗಿರುತ್ತದೆ.

3) ಹೆಚ್ಚಿನ ದರ ಪಾವತಿಸಬೇಡಿ:

ಯಾವುದೇ ಗೊಬ್ಬರ ಅಥವಾ ಬೀಜದ ಪ್ಯಾಕೆಟ್ ಮೇಲೆ ನಮೂದಿಸಲಾದ ಗರಿಷ್ಠ ಮಾರಾಟ ಬೆಲೆಗಿಂತ (MRP) ಹೆಚ್ಚಿನ ಹಣವನ್ನು ಮಾರಾಟಗಾರರು ಬೇಡಿಕೆ ಇಟ್ಟಲ್ಲಿ ಅದು ಕಾನೂನುಬಾಹಿರ. ಅಂತಹ ಸಂದರ್ಭದಲ್ಲಿ ತಕ್ಷಣ ಇಲಾಖೆಗೆ ದೂರು ನೀಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: