MPS Price-2026: ರೈತರಿಗೆ ಕೇಂದ್ರದ ಬಂಪರ್ ಕೊಡುಗೆ: ರಾಗಿ ಸೇರಿದಂತೆ 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಭಾರಿ ಹೆಚ್ಚಳ!

May 21, 2026 | Siddesh
MPS Price-2026: ರೈತರಿಗೆ ಕೇಂದ್ರದ ಬಂಪರ್ ಕೊಡುಗೆ: ರಾಗಿ ಸೇರಿದಂತೆ 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಭಾರಿ ಹೆಚ್ಚಳ!
Share Now:

ನವದೆಹಲಿ: ನೈಋತ್ಯ ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ(PM Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (CCEA) 2026-27ರ ಮಾರುಕಟ್ಟೆ ಋತುವಿಗಾಗಿ(MPS Price List 2026) ರಾಗಿ, ಭತ್ತ, ಜೋಳ, ಹತ್ತಿ ಸೇರಿದಂತೆ ಒಟ್ಟು 14 ಪ್ರಮುಖ ಮುಂಗಾರು (ಖಾರಿಫ್) ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಮಹತ್ವದ ಅನುಮೋದನೆ ನೀಡಿದೆ. ಸರ್ಕಾರದ ಈ ನಿರ್ಧಾರವು ರೈತರಿಗೆ ಅವರ ಶ್ರಮಕ್ಕೆ ತಕ್ಕ ಲಾಭದಾಯಕ ಬೆಲೆಯನ್ನು ಖಾತರಿಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಕೇಂದ್ರ ಸರ್ಕಾರದ ಈ ಕನಿಷ್ಠ ಬೆಂಬಲ ಬೆಲೆ(Bembala Bele) ಹೆಚ್ಚಳವು, 2018-19ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂಎಸ್‌ಪಿಯನ್ನು ನಿಗದಿಪಡಿಸುವ ನೀತಿಗೆ ಸಂಪೂರ್ಣ ಅನುಗುಣವಾಗಿದೆ. ಈ ಬಾರಿ ಮುಂಗಾರು ಬೆಳೆಗಳ ಬೆಲೆ ಏರಿಕೆಯಿಂದಾಗಿ ರೈತರಿಗೆ ಅವರ ಉತ್ಪಾದನಾ ವೆಚ್ಚದ ಮೇಲಿನ ನಿರೀಕ್ಷಿತ ಲಾಭಾಂಶವು ಹೆಸರು ಕಾಳಿನಲ್ಲಿ ಅತಿ ಹೆಚ್ಚು ಅಂದರೆ ಶೇ. 61 ರಷ್ಟು ಸಿಗಲಿದ್ದು, ಸಜ್ಜೆಯಲ್ಲಿ ಶೇ. 56, ಮೆಕ್ಕೆಜೋಳದಲ್ಲಿ ಶೇ. 56 ಮತ್ತು ತೊಗರಿ ಬೆಳೆಯಲ್ಲಿ ಶೇ. 54 ರಷ್ಟು ಲಾಭಾಂಶ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Prize Money Scholarship-ಸಮಾಜ ಕಲ್ಯಾಣ ಇಲಾಖೆ ಬಿಗ್ ಅಪ್ಡೇಟ್: ವಿವಿಧ ತರಗತಿಗಳಲ್ಲಿ ಪಾಸಾದ SC/ST ವಿದ್ಯಾರ್ಥಿಗಳಿಗೆ ₹35,000 ವರೆಗೆ ಸಿಗಲಿದೆ ಪ್ರೋತ್ಸಾಹಧನ!

ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವ ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಹತ್ತಿಗೆ ಈ ಬಾರಿ ಗಣನೀಯ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಈ ಪೈಕಿ ಸೂರ್ಯಕಾಂತಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ಅತಿ ಹೆಚ್ಚು ಅಂದರೆ 622 ರೂಪಾಯಿ ಹಾಗೂ ಹತ್ತಿಗೆ 557 ರೂಪಾಯಿ ಹೆಚ್ಚಿಸಲಾಗಿದೆ. ಕರ್ನಾಟಕದ ಪ್ರಮುಖ ಆಹಾರ ಬೆಳೆಯಾದ ರಾಗಿಯ(Ragi Bembala Bele) ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 319 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದ್ದು, ಒಟ್ಟು ದರ 5,205 ರೂಪಾಯಿಗಳಿಗೆ ತಲುಪಿದೆ. ಇದು ಒಣಭೂಮಿ ಹಾಗೂ ಮಳೆಯಾಶ್ರಿತ ಪ್ರದೇಶದ ರೈತರಿಗೆ ಆರ್ಥಿಕವಾಗಿ ದೊಡ್ಡ ಬಲ ತುಂಬಲಿದೆ.

MSP Price List-2026: ಬೆಳೆವಾರು ಕನಿಷ್ಠ ಬೆಂಬಲ ಬೆಲೆ (MSP) ವಿವರ:

ಬೆಳೆಗಳುಬೆಲೆ ಹೆಚ್ಚಳ (ರೂ. ಪ್ರತಿ ಕ್ವಿಂಟಲ್‌ಗೆ)ಪರಿಷ್ಕೃತ ಒಟ್ಟು ದರ (ರೂ. ಪ್ರತಿ ಕ್ವಿಂಟಲ್‌ಗೆ)
ಭತ್ತ (ಸಾಮಾನ್ಯ)ರೂ. 72ರೂ. 2,441
ಭತ್ತ (ಗ್ರೇಡ್-ಎ)ರೂ. 72ರೂ. 2,461
ರಾಗಿರೂ. 319ರೂ. 5,205
ಹತ್ತಿ (ಮಧ್ಯಮ ನೂಲು)ರೂ. 557ರೂ. 8,267
ಸೂರ್ಯಕಾಂತಿರೂ. 622ರೂ. 8,343
ತೊಗರಿರೂ. 450ರೂ. 8,450
ಉದ್ದಿನಬೇಳೆರೂ. 400ರೂ. 8,200
ಹೆಸರುಬೇಳೆರೂ. 12ರೂ. 8,780
ನೆಲಗಡಲೆರೂ. 254ರೂ. 7,517
ಸೋಯಾಬೀನ್ರೂ. 380ರೂ. 5,708
ಎಳ್ಳುರೂ. 500ರೂ. 10,346
ಗುರೆಳ್ಳುರೂ. 515ರೂ. 10,052
ಜೋಳ (ಹೈಬ್ರಿಡ್)ರೂ. 324ರೂ. 4,023
ಸಜ್ಜೆರೂ. 125ರೂ. 2,900
ಮೆಕ್ಕೆಜೋಳರೂ. 10ರೂ. 2,410

ಇದನ್ನೂ ಓದಿ: Life Insurance-₹456 ಇದ್ದರೆ ಸಾಕು ಕುಟುಂಬಕ್ಕೆ ₹4 ಲಕ್ಷದ ಭದ್ರತೆ! ಈ ವಿಮಾ ಯೋಜನೆಯ ಬಗ್ಗೆ ತಪ್ಪದೇ ತಿಳಿಯಿರಿ!

MPS Price List 2026

MSP Scheme In Karnataka-ಬೆಂಬಲ ಬೆಲೆಯಲ್ಲಿ ಉತ್ಪನ್ನ ಮಾರಾಟ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಮುಂಚಿತವಾಗಿ ಖರೀದಿ ಕೇಂದ್ರವನ್ನು ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಂಡು ತಮ್ಮ ಉತ್ಪನ್ನವನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು ಇದಕ್ಕಾಗಿ ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಆನ್ಲೈನ್ ನಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಲು ನಿಮ್ಮ ಹತ್ತಿರದ ಖರೀದಿ ಕೇಂದ್ರದಲ್ಲಿ ಅವಕಾಶ ನೀಡಲಾಗಿತ್ತದೆ.

ಇದನ್ನೂ ಓದಿ: Free Hostel Admission-2026: ಉಚಿತ ಹಾಸ್ಟೇಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Crop Survey-2026: ಬೆಳೆ ಸಮೀಕ್ಷೆ ಮಾಹಿತಿ ಸರಿಯಾಗಿರುವುದು ಕಡ್ಡಾಯ:

ರೈತರು ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಇಚ್ಚೆಯನ್ನು ಹೊಂದಿದ್ದರೆ ಕೃಷಿ ಇಲಾಖೆಯಿಂದ ಪ್ರತಿ ವರ್ಶ ಜೂನ್-ಆಗಸ್ಟ್ ತಿಂಗಳ ಮಧ್ಯದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡುವ ಬೆಳೆ ಸಮೀಕ್ಷೆಯಲ್ಲಿ ರಾಗಿ ಎಂದು ಜಿಪಿಎಸ್ ಪೋಟೋ ಆಧಾರಿತ ಮಾಹಿತಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವುದು ಕಡ್ಡಾಯ ಒಂದೊಮ್ಮೆ ನೀವು ರಾಗಿ ಬೆಳೆಯನ್ನು ಬೆಳೆದಿದ್ದು ಬೆಳೆ ಸಮೀಕ್ಷೆಯಲ್ಲಿ ಮೆಕ್ಕೆಜೋಳ ಎಂದು ದಾಖಲಾದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಅದ ಕಾರಣ ಬೆಳೆ ಸಮೀಕ್ಷೆಯನ್ನು ಮಾಡಲು ನಿಮ್ಮ ಹಳ್ಳಿಗೆ ಬರುವ ಖಾಸಗಿ ನಿವಾಸಿ(PR) ಅವರ ಬಳಿ ಸರಿಯಾದ ಮಾಹಿತಿಯನ್ನು ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: