Bele Vime-2026: ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ! ಇಲ್ಲಿದೆ ಅಗತ್ಯ ಮಾಹಿತಿ!

June 16, 2026 | Siddesh
Bele Vime-2026: ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ! ಇಲ್ಲಿದೆ ಅಗತ್ಯ ಮಾಹಿತಿ!
Share Now:

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಪ್ರತಿ ವರ್ಷವು ಸಹ ಬೆಳೆ ವಿಮಾ(Bele Vime Yojane Application) ಸೌಲಭ್ಯವನ್ನು ಒದಗಿಸಲಾಗುತ್ತದೆ ಇದೇ ಮಾದರಿಯಲ್ಲಿ 2026-27ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಪಡೆಯಲು ರೈತರಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆ ದೊಡ್ಡ ಮಟ್ಟದಲ್ಲಿದ್ದು ಈಗಾಗಲೇ ಬಿತ್ತನೆಯನ್ನು ಮಾಡಿಸುರು ರೈತರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್(Grama One) ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಪ್ರಧಾನ ಮಂತ್ರಿ ಫಸಲ್ ಬಿಮಾ(Fasal Bhima Yojana) ಯೋಜನೆಯಡಿ ಬೆಳೆ ವಿಮೆಯನ್ನು ಪಡೆಯಲು ಅಗತ್ಯ ಪ್ರೀಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮೆಗೆ ನೋಂದಣಿಯನ್ನು ಮಾಡಿಕೊಳ್ಳಿ.

ಇದನ್ನೂ ಓದಿ: Mobile Repair Training-ಬ್ಯಾಂಕ್ ಆಫ್ ಬರೋಡಾ RSETI ವತಿಯಿಂದ ಉಚಿತ ಮೊಬೈಲ್ ರಿಪೇರಿ ತರಬೇತಿ!

ಇಂದಿನ ಈ ಲೇಖನದಲ್ಲಿ ರೈತರಿಗೆ ಬೆಳೆ ವಿಮೆ(Crop Insurance) ಯೋಜನೆಯ ಕುರಿತು ಸಂಪೂರ್ಣವಾದ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ರೈತರು ಬೆಳೆ ವಿಮೆಯನ್ನು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಬೆಳೆ ವಿಮೆಯನ್ನು ಪಡೆಯಲು ರೈತರು ಅನುಸರಿಸಬೇಕಾದ ಅತೀ ಮುಖ್ಯ ಕ್ರಮಗಳನ್ನು ಯಾವುವು? ನಿಮ್ಮ ಜಿಲ್ಲೆಯಲ್ಲಿ ಬೆಳೆವಾರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು? ಎನ್ನುವ ಮಾಹಿತಿ ಸೇರಿ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Crop Insurance-2026: ಈ ವರ್ಷ ತಪ್ಪದೇ ಬೆಳೆ ವಿಮೆ ಮಾಡಿಸಿ:

ಎಲ್ಲಾ ರೈತರು ತಪ್ಪದೇ ಈ ವರ್ಷ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಮ್ಮ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು ಏಕೆಂದರೆ ಪ್ರದೇಶವಾರು ಬೀಳುವ ಮಳೆ ಮತ್ತು ಬೆಳೆ ಅಂದಾಜು ಸಮೀಕ್ಷೆಯಲ್ಲಿ ಬರುವ ಇಳುವರಿಯ ಆಧಾರದ ಮೇಲೆಯೇ ಬೆಳೆ ವಿಮಾ ಪರಿಹಾರವನ್ನು ಒದಗಿಸಲಾಗುತ್ತದೆ ಈ ಬಾರಿ ಮುಂಗಾರು ಮಳೆಯ ಕೊರತೆಯಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ನಷ್ಟದಿಂದಾಗುವ ಅರ್ಥಿಕ ಒತ್ತಡವನ್ನು ತಗ್ಗಿಸಲು ತಪ್ಪದೇ ಬೆಳೆ ವಿಮೆಯನ್ನು ಮಾಡಿಸುವುದು ಸೂಕ್ತವಾಗಿದೆ.

ಇದನ್ನೂ ಓದಿ: Education Loan-ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಅರ್ಜಿ ಆಹ್ವಾನ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Crop Insurance Application Last Date-ಜಿಲ್ಲಾವರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ತಿಳಿಯುವುದು ಹೇಗೆ?

ಕೃಷಿಕರು ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರಾಜ್ಯದ ಸರ್ಕಾರದ ಅಧಿಕೃತ www.samrakshane.karnataka.gov.in ಬೆಳೆ ವಿಮಾ ಜಾಲತಾಣವನ್ನು ಭೇಟಿ ಮಾಡಿ 2026-27ನೇ ಸಾಲಿನಲ್ಲಿ ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮಾ ನೊಂದಣಿಯನ್ನು ಮಾಡಿಸಬವುದು ಮತ್ತು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಯಾವುದು? ಎನ್ನುವ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು.

Step-1: ಕೃಷಿಕರು ಮೊದಲಿಗೆ ಈ Crop Insurance Website ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮಾ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ವರ್ಷದ ಆಯ್ಕೆ /Insurance Year : 2026-27" ಮತ್ತು "ಋತು/Insurance Season : Kharif/ಮುಂಗಾರು" ಎಂದು ಆಯ್ಕೆ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ಈ ಪೇಜ್ ನಲ್ಲಿ ಕೆಳಗೆ ಕಾಣಿಸುವ "Farmers" ವಿಭಾಗದಲ್ಲಿ "View Cut Off Dates" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಬೆಳೆವಾರು ಬೆಳೆ ವಿಮಾಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: PMEGP ಯೋಜನೆಯಡಿ ಸ್ವಂತ ಉದ್ಯೋಗಕ್ಕೆ ಸಿಗಲಿದೆ ಭರ್ಜರಿ ಸಬ್ಸಿಡಿ ಸಾಲ: ಯಾರೆಲ್ಲ ಅರ್ಜಿ ಸಲ್ಲಿಸಬಹುದು?

How To Register For Crop Insurance-ಬೆಳೆ ವಿಮೆಗೆ ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ?

ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಬೆಳೆ ವಿಮಾ ಪರಿಹಾರವನ್ನು ಪಡೆಯಲು ಬೆಳೆ ವಿಮೆ ನೋಂದಣಿಯನ್ನು ಮಾಡಿಸಲು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹಳ್ಳಿಗೆ ಹತ್ತಿರದಲ್ಲಿರುವ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

Documents-ಬೆಳೆ ವಿಮಾ ನೋಂದಣಿಗೆ ಅವಶ್ಯವಿರುವ ದಾಖಲೆಗಳು:

ಬೆಳೆ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಲು ನಿಗದಿತ ಪ್ರಿಮೀಯಂ ಅನ್ನು ಪಾವತಿ ಮಾಡಿ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಲು ನೋಂದಣಿ ಸಮಯದಲ್ಲಿ ರೈತರು ಒದಗಿಸಬೇಕಾದ ಅಗತ್ಯ ದಾಖಲೆಗಳ ಮಾಹಿತಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ
  • ಕೃಷಿ ಇಲಾಖೆಯ FID ಸಂಖ್ಯೆಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗಿರಬೇಕು.
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಜಮೀನಿನ ಸರ್ವೆ ನಂಬರ್ ಅಥವಾ ಪಹಣಿ/RTC
  • ರೈತರ ಮೊಬೈಲ್ ನಂಬರ್

ಇದನ್ನೂ ಓದಿ: Farmer Award-ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

FID ನಂಬರ್ ರಚನೆ ಮತ್ತು ಸರಿಪಡಿಸುವುದು ಹೇಗೆ?

ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಹೋದಾಗ ಗ್ರಾಮ ಒನ್ ಕೇಂದ್ರದಲ್ಲಿ ನಿಮ್ಮ FID ನಂಬರ್ ರಚನೆ ಅಗಿಲ್ಲ ಅಥವಾ ನಿಮ್ಮ ಹೆಸರಿನಲ್ಲಿರುವ ಜಮೀನಿನ ಎಲ್ಲಾ ಸರ್ವ ನಂಬರ್ ಗಳು FID ಸಂಖ್ಯೆಯಲ್ಲಿ ಸೇರ್ಪಡೆ ಅಗಿಲ್ಲ ಎಂದು ತಿಳಿಸಿದ್ದರೆ ಇಂತಹ ಸಮಯದಲ್ಲಿ ರೈತರು ಕೂಡಲೇ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಆಧಾರ್ ಕಾರ್ಡ,ಎಲ್ಲಾ ಜಮೀನಿನ ಪಹಣಿ/RTC ಅನ್ನು ತೆಗೆದುಕೊಂಡು ಹೋಗಿ FID ನಂಬರ್ ಎಲ್ಲಾ ಸರ್ವ ನಂಬರ್ ಅನ್ನು ಸೇರ್ಪಡೆ ಮಾಡಿಸಬೇಕು.

Follow These Steps To Get Crop Insurance-ಬೆಳೆ ವಿಮೆ ಪರಿಹಾರವನ್ನು ಪಡೆಯಲು ತಪ್ಪದೇ ಈ ಕ್ರಮ ಅನುಸರಿಸಿ:

ಒಮ್ಮೆ ರೈತರು ಸರಕಾರದಿಂದ ನಿಗದಿಪಡಿಸಿರುವ ಪ್ರೀಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮಾಗೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಬೆಳೆ ವಿಮಾ ಯೋಜನೆಯಡಿ ಪರಿಹಾರವನ್ನು ಪಡೆಯಲು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳ ಪಟ್ಟಿ ಹೀಗಿದೆ:

ಬೆಳೆ ಸಮೀಕ್ಷೆಯಲ್ಲಿ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕು:

ಈ ಮಾಹಿತಿ ತಪ್ಪಾದರೆ ನಿಮಗೆ ಬೆಳೆ ವಿಮೆ ಬರುವುದಿಲ್ಲ ಹೌದು ರೈತ ಮಿತ್ರರೇ ಅನೇಕ ರೈತರು ದೂರುತ್ತಾರೆ ನಾವು ಪ್ರತಿ ವರ್ಷ ಬೆಳೆ ವಿಮೆ ಮಾಡಿಸುತ್ತೆವೆ ನಮಗೆ ಪರಿಹಾರ ಬರುವುದೇ ಇಲ್ಲ ಎಂದು ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ಮಾಹಿತಿ ಮತ್ತು ಬೆಳೆ ವಿಮೆ ಅರ್ಜಿಯಲ್ಲಿ ದಾಖಲಿಸಲಾದ ಬೆಳೆ ಮಾಹಿತಿ ಎರಡು ಒಂದೇ ಇರಬೇಕು ಈ ಮಾಹಿತಿ ಹೊಂದಾಣಿಕೆ ಆದರೆ ಮಾತ್ರ ಬೆಳೆ ಪರಿಹಾರ ಪಡೆಯಲು ಸಾಧ್ಯ. ಆದ್ದರಿಂದ ಪ್ರತಿ ವರ್ಷ ಕೃಷಿ ಇಲಾಕೆಯಿಂದ PR ಗಳ ಮೂಲಕ ನಡೆಸುವ ಬೆಳೆ ಸಮೀಕ್ಷೆಯಲ್ಲಿ ಸರಿಯಾದ ಬೆಳೆ ಮಾಹಿತಿಯನ್ನು ರೈತರು ದಾಖಲಿಸಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

ಇದನ್ನೂ ಓದಿ: PC Job Notification-3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇರಬೇಕು:

ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ಬಳಿಕ ತಮ್ಮ ಬ್ಯಾಂಕ್ ಖಾತೆಗ ಆಧಾರ್ ಲಿಂಕ್ ಇದಿಯಾ ಎಂದು ಖಚಿತಪಡಿಸಿಕೊಳ್ಳಿ.

ವಿಮಾ ಕಂಪನಿಯ ಪ್ರತಿನಿಧಿಯ ನಂಬರ್ ಇಟ್ಟುಕೊಳ್ಳಿ:

ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಜಮೀನಿನಲ್ಲಿರುವ ಬೆಳೆಯು ಹಾನಿ ಅದರೆ ಕೂಡಲೇ ಬೆಳೆ ವಿಮಾ ಕಂಪನಿಯ ಪ್ರತಿನಿಧಿಗೆ ದೂರವಾಣಿ ಕರೆ ಮಾಡಿ ಜೊತೆಗೆ ಕೃಷಿ ಇಲಾಕೆಯ ಅಧಿಕಾರಿಗಳಿಗೆ ತಿಳಿಸಿ ನಿಮ್ಮ ಜಮೀನನ್ನು ಭೇಟಿ ಮಾಡಿಸಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯನ್ನು ಸಲ್ಲಿಸಲು ಅರ್ಜಿ ಸಲ್ಲಿಸಿ. ವೈಯಕ್ತಿಕವಾಗಿ ಬೆಳೆ ವಿಮಾ ಪರಿಹಾರವನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ.

Bele Vime Helpline-ಹೆಚ್ಚಿನ ಮಾಹಿತಿಗಾಗಿ:

  • ಬೆಳೆ ವಿಮೆ ಯೋಜನೆಯ ಅಧಿಕೃತ ಜಾಲತಾಣ- Click Here
  • ಸಹಾಯವಾಣಿ ಸಂಖ್ಯೆ- 1800-425-3553

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: