Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ಸಸ್ಯ ಸಂತೆ!

July 9, 2026 | Siddesh
Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ಸಸ್ಯ ಸಂತೆ!
Share Now:

ಬೆಂಗಳೂರು: ಪ್ರಕೃತಿ ಪ್ರೇಮಿಗಳು ಮತ್ತು ಗಿಡ-ಮರಗಳ ಹವ್ಯಾಸಿಗಳಿಗಾಗಿ ರಾಜಧಾನಿಯಲ್ಲಿ ಮತ್ತೊಂದು ಹಸಿರು ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ(Horticulture University)ಅಧೀನದಲ್ಲಿರುವ ಬೆಂಗಳೂರಿನ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜುಲೈ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಭವ್ಯ ‘ಸಸ್ಯ ಸಂತೆ’ಯನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಜಿಕೆವಿಕೆಯ(GKVK) ಯು.ಎಚ್.ಎಸ್ ಆವರಣ ಈ ಅಪೂರ್ವ ಸಂತೆಗೆ ಸಾಕ್ಷಿಯಾಗಲಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರೂ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ. ಎನ್. ಮಂಜುನಾಥ್ ರವರು ಈ ಸಸ್ಯ ಸಂತೆಯನ್ನು(Sasya Santhe) ಉದ್ಘಾಟಿಸಲಿದ್ದಾರೆ. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಆರ್. ವಿಶ್ವನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: Karnataka Dam Level-ರಾಜ್ಯದ ಡ್ಯಾಂ ಗಳಿಗೆ ಹೆಚ್ಚಿದ ಒಳ ಹರಿವು!ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟದ ವಿವರ!

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ. ಫಕ್ರುದೀನ್, ವಿಸ್ತರಣಾ ನಿರ್ದೇಶಕರಾದ ಡಾ. ವೆಂಕಟೇಶಲು, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಡಾ. ಜಿ.ಎಸ್.ಕೆ. ಸ್ವಾಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕರಾದ ಡಾ. ಕೆ. ಆರ್. ವಾಸುದೇವ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Bangalore Sasya Santhe-ಸಂತೆಯ ವಿಶೇಷ ಆಕರ್ಷಣೆಗಳು ಮತ್ತು ಲಭ್ಯವಿರುವ ಸಾಮಗ್ರಿಗಳು:

ಗ್ರಾಹಕರಿಗೆ ತೋಟಗಾರಿಕಾ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ 150ಕ್ಕೂ ಅಧಿಕ ಮಳಿಗೆಗಳ ಬೃಹತ್ ವ್ಯವಸ್ಥೆ ಮಾಡಲಾಗಿದೆ. ಈ ಸಂತೆಯಲ್ಲಿ ಕೇವಲ ಸಸಿಗಳ ಪ್ರದರ್ಶನ ಮಾತ್ರವಲ್ಲದೆ, ಸಾಂಸ್ಕೃತಿಕ ಕಲೆಯ ಸೊಗಡಿಗೂ ಸಹ ಅವಕಾಶ ಕಲ್ಪಿಸಲಾಗಿದೆ..

ಸಾಂಸ್ಕೃತಿಕ ವೈಭವ:

ಜಾನಪದ ನೃತ್ಯ, ಸಾಂಪ್ರದಾಯಿಕ ಮೆರವಣಿಗೆ, ಜಾನಪದ ಗಾಯನ ಹಾಗೂ ಭರತನಾಟ್ಯ ಪ್ರದರ್ಶನಗಳು ಸಂತೆಯ ಪ್ರಮುಖ ಆಕರ್ಷಣೆಯಾಗಿರಲಿವೆ.

ಇದನ್ನೂ ಓದಿ: PM-Kisan Amount-ರಾಜ್ಯದಲ್ಲಿ 6 ಲಕ್ಷ ರೈತರಿಗೆ ಬಂದಿಲ್ಲ ಪಿಎಂ ಕಿಸಾನ್ ಹಣ!ತಪ್ಪದೇ ಈ ಮಾಹಿತಿ ತಿಳಿಯಿರಿ!

ಗಿಡ-ಸಸಿಗಳ ವೈವಿಧ್ಯ:

ವಿವಿಧ ತಳಿಯ ಹಣ್ಣಿನ ಗಿಡಗಳು, ಮನಮೋಹಕ ಹೂವು ಮತ್ತು ಅಲಂಕಾರಿಕ ಸಸಿಗಳು, ಪ್ಲಾಂಟೇಶನ್ ಬೆಳೆಗಳು, ಅಪರೂಪದ ಔಷಧೀಯ ಹಾಗೂ ಸುಗಂಧಿ ಸಸಿಗಳು ಇಲ್ಲಿ ಮಾರಾಟಕ್ಕಿರುತ್ತವೆ.

ಗಾರ್ಡನಿಂಗ್ ಪರಿಕರಗಳು:

ಎರೆಹುಳು ಗೊಬ್ಬರ, ಹೂಕುಂಡದ ಅತ್ಯುತ್ತಮ ಮಣ್ಣು ಮಿಶ್ರಣ, ಜೈವಿಕ ಪೀಡೆನಾಶಕಗಳು, ಗಾರ್ಡನ್ ಉಪಕರಣಗಳು ಹಾಗೂ ಗುಣಮಟ್ಟದ ಬೀಜಗಳು ಲಭ್ಯವಿರಲಿವೆ.

ಆರೋಗ್ಯಕರ ಆಹಾರ:

ಸಿರಿಧಾನ್ಯಗಳು, ವಿವಿಧ ಮೌಲ್ಯವರ್ಧಿತ ನೈಸರ್ಗಿಕ ಪದಾರ್ಥಗಳು ಮತ್ತು ತರಕಾರಿ-ಹೂವಿನ ಬೀಜಗಳ ಖರೀದಿಗೆ ಇಲ್ಲಿ ಅವಕಾಶವಿದೆ.

ಇದನ್ನೂ ಓದಿ: Adike Bele Vime-ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ವಿದ್ಯಾರ್ಥಿಗಳಿಗೆ ವಿಶೇಷ ಒತ್ತು:

ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ಕೃಷಿ ಆಸಕ್ತರಲ್ಲಿ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಲು 'ಕೃಷಿ ಶಿಕ್ಷಣ' ಮತ್ತು 'ಬೆಳೆ ಸಂಗ್ರಹಾಲಯ' ವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರಿಗೆ ಮುಕ್ತ ಆಹ್ವಾನ:

ರಾಜಧಾನಿಯ ಸಾರ್ವಜನಿಕರು, ಕೈದೋಟದ ಹವ್ಯಾಸಿಗಳು ಹಾಗೂ ರೈತ ಬಾಂಧವರು ಈ ಹಸಿರು ಸಂತೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು ಹಾಗೂ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

  • ದಿನಾಂಕ: ಜುಲೈ 10 ರಿಂದ ಜುಲೈ 12
  • ಸ್ಥಳ: ಯು.ಎಚ್.ಎಸ್ ಆವರಣ, ಜಿಕೆವಿಕೆ, ಬೆಂಗಳೂರು.
  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900585242, 9844188834 ಅಥವಾ 9945159924.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: