KSOU Admission-2026-ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ!

July 9, 2026 | Siddesh
KSOU Admission-2026-ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು(KSOU) 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ ಹಾಗೂ ನ್ಯಾಕ್ (NAAC) ಎ+ ಮಾನ್ಯತೆ ಪಡೆದಿರುವ ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಾದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ ಹಾಗೂ ವಿವಿಧ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಪ್ರೊಗ್ರಾಮ್‍ಗಳ ಪ್ರವೇಶಾತಿಯು(KSOU Admission 2026) ಈಗಾಗಲೇ ದಿನಾಂಕ: 22.06.2026 ರಿಂದ ಪ್ರಾರಂಭವಾಗಿದೆ.

ಆಸಕ್ತ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‍ಸೈಟ್ www.ksoumysuru.ac.in ನ Online Admission Portal ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಕರಾಮುವಿ ಪ್ರಾದೇಶಿಕ ಕೇಂದ್ರ, ಹಜ್ ಭವನ, ತಿರುಮೇನಹಳ್ಳಿ ಕ್ರಾಸ್, ಹೆಗಡೆ ನಗರ ಮುಖ್ಯ ರಸ್ತೆ, ಬೆಂಗಳೂರು ಇಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

ಇದನ್ನೂ ಓದಿ: Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ‘ಸಸ್ಯ ಸಂತೆ’

KSOU Courses List-ಲಭ್ಯವಿರುವ ಪ್ರಮುಖ ಕೋರ್ಸ್‌ಗಳು:

ಸ್ನಾತಕ ಪದವಿಗಳು (UG): ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ (BSW).

ಡಿಪ್ಲೊಮಾ & ಸರ್ಟಿಫಿಕೇಟ್ ಕೋರ್ಸ್‌ಗಳು: ವಿವಿಧ ವಿಷಯಗಳಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳು.

KSOU Admission Online Application-ಅರ್ಜಿ ಸಲ್ಲಿಕೆ ಮತ್ತು ಪ್ರವೇಶಾತಿ ವಿಧಾನ:

ಆಸಕ್ತ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in ಗೆ ಭೇಟಿ ನೀಡಿ, Online Admission Portal ಮೂಲಕ ಅರ್ಜಿ ಸಲ್ಲಿಸಬೇಕು. ತದನಂತರ ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ (ಹಜ್ ಭವನ, ತಿರುಮೇನಹಳ್ಳಿ ಕ್ರಾಸ್, ಹೆಗಡೆ ನಗರ ಮುಖ್ಯ ರಸ್ತೆ) ಭೇಟಿ ನೀಡಿ ಪ್ರವೇಶಾತಿಯನ್ನು ಖಚಿತಪಡಿಸಿಕೊಳ್ಳಬಹುದು.

Application Link-ಅರ್ಜಿ ಸಲ್ಲಿಸಲು ಲಿಂಕ್-Apply Now

ಇದನ್ನೂ ಓದಿ: Karnataka Dam Level-ರಾಜ್ಯದ ಡ್ಯಾಂ ಗಳಿಗೆ ಹೆಚ್ಚಿದ ಒಳ ಹರಿವು!ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟದ ವಿವರ!

Admission Fee-ವಿಶೇಷ ಶುಲ್ಕ ವಿನಾಯಿತಿಗಳು ಮತ್ತು ರಿಯಾಯಿತಿ ವಿವರ:

ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ವಿಶ್ವವಿದ್ಯಾನಿಲಯವು ಈ ಬಾರಿ ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಬೃಹತ್ ಶುಲ್ಕ ವಿನಾಯಿತಿಗಳನ್ನು ಪ್ರಕಟಿಸಿದೆ:

1) ಶೇಕಡಾ 10% ರಷ್ಟು ಬೋಧನಾ ಶುಲ್ಕ ರಿಯಾಯಿತಿ (UG & PG ಕೋರ್ಸ್‌ಗಳಿಗೆ ಮಾತ್ರ):

  • ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ.
  • ದೇಶ ಕಾಯುವ ಯೋಧರು (Defense) ಹಾಗೂ ಮಾಜಿ ಸೈನಿಕರ (Ex-Servicemen) ಮಕ್ಕಳಿಗೆ/ವಿದ್ಯಾರ್ಥಿಗಳಿಗೆ.
  • ಆಟೋ ಮತ್ತು ಕ್ಯಾಬ್ ಚಾಲಕರು, ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ.
  • ರಾಜ್ಯ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ನೌಕರರು ಹಾಗೂ ಅವರ ಮಕ್ಕಳಿಗೆ.

ಇದನ್ನೂ ಓದಿ: PM-Kisan Amount-ರಾಜ್ಯದಲ್ಲಿ 6 ಲಕ್ಷ ರೈತರಿಗೆ ಬಂದಿಲ್ಲ ಪಿಎಂ ಕಿಸಾನ್ ಹಣ!ತಪ್ಪದೇ ಈ ಮಾಹಿತಿ ತಿಳಿಯಿರಿ!

2) 100% ಪೂರ್ಣ ಶುಲ್ಕ ವಿನಾಯಿತಿ (ಬಿ.ಎಡ್ ಮತ್ತು ಎಂ.ಬಿ.ಎ. ಹೊರತುಪಡಿಸಿ):

  • ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪೋಷಕರನ್ನು (ತಂದೆ/ತಾಯಿ) ಕಳೆದುಕೊಂಡ ಅರ್ಹ ವಿದ್ಯಾರ್ಥಿಗಳಿಗೆ.
  • ಶೇ. 50 ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ.
  • ತೃತೀಯ ಲಿಂಗಿ (Transgender) ವಿದ್ಯಾರ್ಥಿಗಳಿಗೆ.

3) SC/ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ, ಸರ್ಕಾರದ SSP (State Scholarship Portal) ಮುಖಾಂತರ ವಿದ್ಯಾರ್ಥಿ ವೇತನ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Adike Bele Vime-ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ವಿದ್ಯಾರ್ಥಿಗಳ ಗಮನಕ್ಕೆ ಮುಖ್ಯ ಸೂಚನೆ:

ವಿಶ್ವವಿದ್ಯಾನಿಲಯವು ನಿಗದಿಪಡಿಸಿರುವ ಕೋರ್ಸ್‌ವಾರು ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಹೆಚ್ಚುವರಿ ಶುಲ್ಕ ಪಾವತಿಸಬಾರದು. ಒಂದು ವೇಳೆ ಮಧ್ಯವರ್ತಿಗಳಿಗಾಗಲಿ ಅಥವಾ ಇತರೆಡೆ ಹೆಚ್ಚುವರಿ ಹಣ ಪಾವತಿಸಿದರೆ ವಿಶ್ವವಿದ್ಯಾನಿಲಯವು ಜವಾಬ್ದಾರರಾಗಿರುವುದಿಲ್ಲ ಎಂದು ಪ್ರಕಟಣೆ ಎಚ್ಚರಿಸಿದೆ.

KSOU Admission Contact Details-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಬೆಂಗಳೂರು ಪ್ರಾದೇಶಿಕ ಕೇಂದ್ರ, ಹಜ್ ಭವನ, ತಿರುಮೇನಹಳ್ಳಿ ಕ್ರಾಸ್, ಹೆಗಡೆನಗರ್‌ ಮುಖ್ಯ ರಸ್ತೆ, ಬೆಂಗಳೂರು-560064.
ದೂರವಾಣಿ ಸಂಖ್ಯೆ: 9448668880(ಮಾಹಿತಿ ನೀಡಿದವರು: ಡಾ. ಗಿರೀಶ ಹೆಚ್.ಎನ್, ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: