Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!

July 28, 2026 | Siddesh
Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!
Share Now:

ರಾಜ್ಯದ ತೆಂಗು ಬೆಳೆಗಾರರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಕ್ಷೇತ್ರದ ಪ್ರಗತಿಗಾಗಿ ತೆಂಗು ಅಭಿವೃದ್ದಿ ಮಂಡಳಿಯಿಂದ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೊಸ ತೆಂಗಿನ ತೋಟ ಸ್ಥಾಪಿಸಲು ಬಯಸುವ ರೈತರಿಗೆ ಆಸರೆಯಾಗುವ ಉದ್ದೇಶದಿಂದ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹56,000 ವರೆಗೆ ಧನಸಹಾಯ ಪಡೆಯಲು ಅರ್ಜಿಯನ್ನು ಆಹ್ವಾನಿಸಿದೆ.

ತೆಂಗು ಅಭಿವೃದ್ದಿ ಮಂಡಳಿಯ ಯೋಜನೆ ಅಡಿಯಲ್ಲಿ ನೀಡಲಾಗುವ ಈ ಆರ್ಥಿಕ ನೆರವು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಸ್ವಂತ ಜಮೀನು ಹೊಂದಿದ್ದು, ಹೊಸದಾಗಿ ತೆಂಗಿನ ಸಸಿಗಳನ್ನು ನೆಟ್ಟು ತೋಟ ನಿರ್ಮಿಸಲು ಆಸಕ್ತಿ ಹೊಂದಿರುವ ಅರ್ಹ ರೈತರು ಸರ್ಕಾರದ ಮಾರ್ಗದರ್ಶನದಂತೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಲ್ಲಿಕೆಯಾದ ಅರ್ಜಿಗಳು ಮತ್ತು ಅಗತ್ಯ ದಾಖಲೆಗಳನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ ನಂತರ ಅರ್ಹ ಫಲಾನುಭವಿಗಳಿಗೆ ಸಹಾಯಧನ ಮಂಜೂರಾಗಲಿದೆ.

ಇದನ್ನೂ ಓದಿ: Kotak Kanya Scholarship-ಪದವೀದರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿವೇತನ!ಇಲ್ಲಿದೆ ಸಂಪೂರ್ಣ ಮಾಹಿತಿ!

ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವ ಈ ಯೋಜನೆಯು, ಕೇವಲ ಧನಸಹಾಯಕ್ಕಷ್ಟೇ ಸೀಮಿತವಾಗಿರದೆ ಉತ್ತಮ ಗುಣಮಟ್ಟದ ಸಸಿಗಳ ನೆಡುವಿಕೆಗೆ ಹೆಚ್ಚಿನ ಒತ್ತು ನೀಡುತ್ತದೆ. ಹೊಸ ತೋಟಗಳ ಸ್ಥಾಪನೆಯಿಂದ ರೈತರಿಗೆ ದೀರ್ಘಕಾಲಿಕ ಆದಾಯ ದೊರೆಯುವುದಲ್ಲದೆ, ರಾಜ್ಯದಲ್ಲಿ ತೆಂಗಿನ ಒಟ್ಟು ಉತ್ಪಾದನೆ ಮತ್ತು ಬೆಳೆಯ ವಿಸ್ತೀರ್ಣ ಹೆಚ್ಚಾಗಲಿದೆ. ಆಸಕ್ತ ರೈತರು ತಮ್ಮ ತಾಲೂಕು ಅಥವಾ ಜಿಲ್ಲಾ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

Coconut Farm Subsidy Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಹೊಸ ತೆಂಗಿನ ತೋಟ ಸ್ಥಾಪನೆಗಾಗಿ ತೆಂಗು ಅಭಿವೃದ್ದಿ ಮಂಡಳಿಯಿಂದ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹56,000 ವರೆಗೆ ಆರ್ಥಿಕ ಸಹಾಯಧನ ಪಡೆಯಬಹುದು.

Horticulture Crop Schemes-ಯೋಜನೆಯ ಉದ್ದೇಶ:

ರಾಜ್ಯದಲ್ಲಿ ತೆಂಗು ಬೆಳೆಯುವ ವಿಸ್ತೀರ್ಣವನ್ನು ಹೆಚ್ಚಿಸುವುದು.
ಉತ್ತಮ ಗುಣಮಟ್ಟದ ಸಸಿಗಳ ನೆಡುವಿಕೆ ಉತ್ತೇಜನ ನೀಡುವುದು.
ತೆಂಗಿನ ಉತ್ಪಾದಕತೆ ಹೆಚ್ಚಳ ಹಾಗೂ ರೈತರ ಆದಾಯವನ್ನು ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಇದನ್ನೂ ಓದಿ: Brahmana Nigama Scheme-ಬ್ರಾಹ್ಮಣ ನಿಗಮದಿಂದ ನೇರ ಸಾಲ ಯೋಜನೆಯಡಿ ರೂ. 40,000 ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ತೆಂಗು ಅಭಿವೃದ್ದಿ ಮಂಡಳಿಯಿಂದ ಹೊಸ ತೆಂಗಿನ ತೋಟಕ್ಕೆ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು ಎನ್ನುವ ಪಟ್ಟಿಯನ್ನು ಈ ಕೆಳಗೆ ತಿಳಿಸಲಾಗಿದೆ:

ಸ್ವಂತ ಜಮೀನಿನಲ್ಲಿ ಹೊಸದಾಗಿ ತೆಂಗಿನ ತೋಟ ಸ್ಥಾಪಿಸಲು ಇಚ್ಛಿಸುವ ರೈತರು ಅರ್ಹರಾಗಿರುತ್ತಾರೆ.
ಈಗಾಗಲೇ ಈ ವರ್ಷ ತೆಂಗಿನ ಸಸಿಯನ್ನು ಹಾಕಿರುವವರು ಸಹ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!

Coconut Farm Subsidy Amount

ಇದನ್ನೂ ಓದಿ: FID Update-ರೈತ ಬಾಂಧವರ ಗಮನಕ್ಕೆ: FID ಅನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಲು ಸೂಚನೆ!

Documents- ಅಗತ್ಯ ದಾಖಲೆಗಳು:

ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿ ಒದಗಿಸಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

ರೈತರ ಆಧಾರ್ ಕಾರ್ಡ್
ಪಹಣಿ (RTC)
ಬ್ಯಾಂಕ್ ಖಾತೆ ವಿವರ,
ಜಮೀನಿನ ದಾಖಲೆಗಳು ಹಾಗೂ ಇಲಾಖೆ ಸೂಚಿಸುವ ಇತರ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

How To Apply-ಅರ್ಜಿ ಸಲ್ಲಿಸುವ ವಿಧಾನ:

ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಮತ್ತು ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Navodaya Admission-2027: ನವೋದಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

Application Form-ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಲಿಂಕ್-Download Now
Coconut Board Website-ತೆಂಗು ಮಂಡಳಿಯ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: