Ration Distribution-ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್!

July 30, 2026 | Siddesh
Ration Distribution-ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್!
Share Now:

ಬೆಂಗಳೂರು: ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರಿಗೆ (Ration Card Holders) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ದಿನಗೂಲಿ ಕಾರ್ಮಿಕರು ಹಾಗೂ ಉದ್ಯೋಗಿಗಳ ಹಿತದೃಷ್ಟಿಯಿಂದ ಇನ್ಮುಂದೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಪ್ರತಿ ದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿಟ್ಟು ಪಡಿತರ ಧಾನ್ಯ ವಿತರಿಸುವಂತೆ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಜುಲೈ ಮಾಹೆಯ 'ಅನ್ನಭಾಗ್ಯ' ಹಾಗೂ NFSA -ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯ ಉಚಿತ ಅಕ್ಕಿ ವಿತರಣೆಯನ್ನು(Annabhagya Yojane) ತಕ್ಷಣವೇ ಪ್ರಾರಂಭಿಸಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಿತರಿಸಲು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: Scholarship Application-ಕಾರ್ಮಿಕರ ಮಕ್ಕಳಿಗೆ 25,000/- ವಿದ್ಯಾರ್ಥಿವೇತನ! ಆನ್‍ಲೈನ್ ಅರ್ಜಿ ಆಹ್ವಾನ!

ಇಂದಿನ ಲೇಖನದಲ್ಲಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ರೇಶನ್(Ration) ವಿತರಣೆ ಕುರಿತು ಆಹಾರ ಇಲಾಖೆಯು ಹೊರಡಿಸಿರುವ ನೂತನ ಕ್ರಮದ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಈ ಉಪಯುಕ್ತ ಮಾಹಿತಿಯನ್ನು ಓದುಗ ಮಿತ್ರರು ತಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಮಾಹಿತಿ ಅಗತ್ಯವಿರುವ ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಸಹಕರಿಸಿ.

Ration Card-ದಿನಕ್ಕೆ 16 ಗಂಟೆ ರೇಷನ್ ಸೇವೆ ಲಭ್ಯ!

ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಂಜೆ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ರೇಷನ್ ಪಡೆಯಲು ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಬ್ರೇಕ್ ಹಾಕಲು ಆಹಾರ ಇಲಾಖೆ ಈಗ ಹೊಸ ವೇಳಾಪಟ್ಟಿಯನ್ನು ಜಾರಿಗೆ ತಂದಿದೆ.

ಹೊಸ ಸಮಯ: ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ (ದಿನಕ್ಕೆ ಸತತ 16 ಗಂಟೆಗಳ ಕಾಲ ಸೇವೆ ಲಭ್ಯ).

ತಕ್ಷಣದ ವಿತರಣೆ: ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗೆ ದಾಸ್ತಾನು ತಲುಪಿದ ತಕ್ಷಣವೇ ವಿತರಣೆ ಆರಂಭಿಸುವುದು ಕಡ್ಡಾಯ.

ಇದನ್ನೂ ಓದಿ: Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!

BPL Card-ವಿಳಂಬ ಮಾಡಿದರೆ ರೇಷನ್ ಡೀಲರ್‌ಗಳಿಗೆ ಶಿಸ್ತು ಕ್ರಮದ ಬಿಸಿ!

ಭಾರತೀಯ ಆಹಾರ ನಿಗಮ (FCI) ಹಾಗೂ ರಾಜ್ಯ ಸಂಗ್ರಹಣಾ ಕೇಂದ್ರಗಳಿಂದ ಜುಲೈ ಮಾಹೆಯ ಅಕ್ಕಿ ಈಗಾಗಲೇ ಹಂಚಿಕೆಯಾಗಿದೆ. ಆದಾಗ್ಯೂ, ಕೆಲವು ಜಿಲ್ಲೆಗಳಲ್ಲಿ ದಾಸ್ತಾನು ಲಭ್ಯವಿದ್ದರೂ ಸಹ ವಿತರಣೆ ಪ್ರಾರಂಭಿಸದೆ ವಿಳಂಬ ಮಾಡುತ್ತಿರುವುದು ಮತ್ತು ಸಾರ್ವಜನಿಕರನ್ನು ಕಾಯಿಸುತ್ತಿರುವ ದೂರುಗಳು ಇಲಾಖೆಗೆ ಬಂದಿದ್ದವು.

ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಇಲಾಖೆ, ಯಾವುದೇ ನೆಪ ಹೇಳದೆ ತಕ್ಷಣವೇ ಅಕ್ಕಿ ವಿತರಣೆ ಆರಂಭಿಸುವಂತೆ ಖಡಕ್ ಸೂಚನೆ ನೀಡಿದೆ.

ಇದನ್ನೂ ಓದಿ: Kotak Kanya Scholarship-ಪದವೀದರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿವೇತನ!ಇಲ್ಲಿದೆ ಸಂಪೂರ್ಣ ಮಾಹಿತಿ!

Karnataka Food Department-ಅಧಿಕಾರಿಗಳಿಂದ ದಿಢೀರ್ ತಪಾಸಣೆ:

ಜಿಲ್ಲಾ ಜಂಟಿ/ಉಪ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು (Food Inspectors) ನ್ಯಾಯಬೆಲೆ ಅಂಗಡಿಗಳಿಗೆ ಸರ್ಪ್ರೈಸ್ ಭೇಟಿ ನೀಡಿ ಸಮಯ ಪಾಲನೆಯನ್ನು ತಪಾಸಣೆ ಮಾಡಲಿದ್ದಾರೆ.

ಬೆಳಿಗ್ಗೆ 6.00 ರಿಂದ ರಾತ್ರಿ 10.00 ರವರೆಗೆ ಅಂಗಡಿ ತೆರೆಯದಿದ್ದರೆ ಅಥವಾ ಸಾರ್ವಜನಿಕರಿಗೆ ಅಕ್ಕಿ ನೀಡಲು ವಿಳಂಬ ಧೋರಣೆ ತೋರಿದರೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ವಿತರಕರ (Ration Dealers) ವಿರುದ್ಧ ನಿಯಮಾನುಸಾರ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.

ಅರ್ಹ ಪಡಿತರ ಚೀಟಿದಾರರು ಈ ವಿಸ್ತರಿತ ಸಮಯದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಯಾವುದೇ ತೊಂದರೆಯಿಲ್ಲದೆ ತಮ್ಮ ಪಡಿತರವನ್ನು ಪಡೆದುಕೊಳ್ಳಬಹುದು ಎಂದು ಆಹಾರ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ಪಡಿತರದಾರರಿಂದ ದೂರುಗಳು ಬಾರದಂತೆ ಪಾರದರ್ಶಕವಾಗಿ ಆಹಾರಧಾನ್ಯ ಹಂಚಿಕೆ ಮಾಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅರ್ಹ ಪಡಿತರ ಚೀಟಿದಾರರು ಈ ವಿಸ್ತರಿತ ಸಮಯದ ಸೌಲಭ್ಯವನ್ನು ಬಳಸಿಕೊಂಡು ಯಾವುದೇ ತೊಂದರೆಯಿಲ್ಲದೆ ತಮ್ಮ ಮಾಹೆಯ ಪಡಿತರವನ್ನು ಪಡೆದುಕೊಳ್ಳಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: